ಅಯೋಧ್ಯೆಯ ಹೋಟೆಲ್‌ಗಳಿಗೆ ಹಣದ ಹೊಳೆ! – 3 ದಿನದ ಆದಾಯ ಇಷ್ಟೊಂದಾ?
ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನೆ ಆಗಿದೆ. ಲಕ್ಷಾಂತರ ಭಕ್ತರು ಬಾಲರಾಮನನ್ನು ಕಣ್ತುಂಬಿಕೊಳ್ಳಲು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಪ್ರಾಣ ಪ್ರತಿಷ್ಠೆಯ ಬಳಿಕ ಅಯೋಧ್ಯೆಯು ಹೊಸ ಆಧ್ಯಾತ್ಮಿಕ ಹಬ್ ಆಗಿ ರೂಪುಗೊಳ್ಳುತ್ತಿದೆ. ದಿನೇ ದಿನೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಇದು ಅಲ್ಲಿನ ಆತಿಥ್ಯ ಕ್ಷೇತ್ರಕ್ಕೆ ವರವಾಗಿ ಪರಿಣಮಿಸಿದೆ.
ಇದನ್ನೂ ಓದಿ: 2030ರ ವೇಳೆಗೆ ಸುಮಾರು 30,000 ಭಾರತೀಯ ವಿದ್ಯಾರ್ಥಿಗಳನ್ನು ಫ್ರಾನ್ಸ್ ಸ್ವಾಗತಿಸಲಿದೆ – ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್
ಹೌದು, ಅಯೋಧ್ಯೆಗೆ ಲಕ್ಷಾಂತರ ಜನರು ಭೇಟಿ ನೀಡುತ್ತಿದ್ದಾರೆ. ಮರ್ಯಾದಾ ಪುರುಷೋತ್ತಮನ ದರ್ಶನಕ್ಕಾಗಿ ಬರುತ್ತಿದ್ದಾರೆ. ಜ.22ರಿಂದ 24ರವರೆಗೆ ಅಂದರೆ ಕೇವಲ 3 ದಿನಗಳಲ್ಲಿ ಹೋಟೆಲ್‌ಗಳಿಗೆ ಕಂಡು ಕೇಳರಿಯದಷ್ಟು ಆದಾಯ ಮಂದಿದೆ. ಮೂರು ದಿನಗಳಲ್ಲಿ ಅಯೋಧ್ಯೆಯ ಹೋಟೆಲ್‌ಗಳಿಗೆ ಸುಮಾರು 20 ಕೋಟಿ ರೂ.ಗಳಷ್ಟು ಆದಾಯ ಹರಿದುಬಂದಿದೆ ಎಂದು ಹೇಳಲಾಗುತ್ತಿದೆ.
ಬೇಡಿಕೆ ಹೆಚ್ಚಾದ ಕಾರಣ ಬಹುತೇಕ ಹೋಟೆಲ್‌ನವರು ರೂಂ ಬಾಡಿಗೆಯನ್ನು 4-5 ಪಟ್ಟು ಹೆಚ್ಚಳ ಮಾಡಿದ್ದಾರೆ. ಅಯೋಧ್ಯೆಯ ಒದು ಪ್ರತಿಷ್ಠಿತ ಹೋಟೆಲ್, ಸೂಟ್‌ಗೆ(ಐಷಾರಾಮಿ ಕೊಠಡಿ) ಸಾಮಾನ್ಯವಾಗಿ ಒಂದು ರಾತ್ರಿಗೆ 10,000 ರೂ. ಶುಲ್ಕ ವಿಧಿಸುತ್ತಿತ್ತು. ಈಗ ಈ ಮೊತ್ತವನ್ನು 1.5 ಲಕ್ಷ ರೂ.ಗಳಿಗೆ ಏರಿಸಲಾಗಿದೆ. ಏ.17ರ ರಾಮನವಮಿವರೆಗೂ ಇದೇ ಸ್ಥಿತಿ ಮುಂದುವರಿಯಬಹುದು. ನಂತರದಲ್ಲಿ ಶುಲ್ಕ ಸ್ವಲ್ಪ ಮಟ್ಟಿಗೆ ಇಳಿಕೆಯಾಗಬಹುದು ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಒಟ್ಟಾರೆಯಾಗಿ ಅಯೋಧ್ಯೆಯಲ್ಲಿ ಹೋಟೆಲ್ ಉದ್ಯಮಗಳಿಗೆ ಫುಲ್ ಡಿಮ್ಯಾಂಡ್ ಶುರುವಾಗಿದೆ. ಆದಾಯದ ಹೊಳೆ ಹರಿದುಬರುತ್ತಿದೆ.