ದೇಶಾದ್ಯಂತ ಭಾರಿ ಮಳೆ ಬೆನ್ನಲ್ಲೇ ಅಪ್ಪಳಿಸಲಿದೆ 3 ಸೈಕ್ಲೋನ್! – ಹೈ ಅಲರ್ಟ್ ಘೋಷಿಸಿದ ಐಎಂಡಿ!

ದೇಶಾದ್ಯಂತ ಭಾರಿ ಮಳೆ ಬೆನ್ನಲ್ಲೇ ಅಪ್ಪಳಿಸಲಿದೆ 3 ಸೈಕ್ಲೋನ್! – ಹೈ ಅಲರ್ಟ್ ಘೋಷಿಸಿದ ಐಎಂಡಿ!

ದೇಶದಾದ್ಯಂತ ಭಾರಿ ಮಳೆಯಾಗುತ್ತಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ಗುಜರಾತ್ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಭೀಕರ ಪ್ರವಾಹಕ್ಕೆ ಸಾವು ನೋವು ಉಂಟಾಗಿದೆ. ನೂರಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ. ಕರ್ನಾಟಕದಲ್ಲೂ ಮಳೆಯ ಅಬ್ಬರ ಮುಂದುವರಿದ್ದು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಳೆ ಆರ್ಭಟದ ಬೆನ್ನಲ್ಲೇ  ಮುಂದಿನ 48 ಗಂಟೆಗಳಲ್ಲಿ ವಾತಾವರಣದಲ್ಲಿ ಭಾರಿ ವೈಪರೀತ್ಯ ಉಂಟಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ವರುಣನ ಆರ್ಭಟ – ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ದೇಶಾದ್ಯಂತ ಮತ್ತೆ ಹವಾಮಾನ ವೈಪರೀತ್ಯವಾಗುವ ಸಾಧ್ಯತೆ ಇದ್ದು, ಬಂಗಾಳ ಕೊಲ್ಲಿಯಲ್ಲಿ ಒಟ್ಟು 3 ಚಂಡಮಾರುತಗಳು ಪರಿಚಲನೆ ಉಂಟು ಮಾಡುವ ಸಾಧ್ಯತೆ ಇದೆ. ಈಗಾಗಲೇ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪರಿಚಲನೆ ಉಂಟಾಗಿದ್ದು, ಅದರ ಬೆನ್ನಲ್ಲೇ ಮತ್ತೊಂದು ಸುಳಿ ಸೃಷ್ಟಿಯಾಗಿದೆ. ಇದು ಪಶ್ಚಿಮ ಮಧ್ಯ ಮತ್ತು ವಾಯುವ್ಯ ಬಂಗಾಳ ಕೊಲ್ಲಿಯ ಮೇಲೆ ನೆಲೆಗೊಂಡಿದೆ. ಸಮುದ್ರ ಮಟ್ಟದಿಂದ 5.8 ಕಿಮೀ ಮತ್ತು 7.6 ಕಿಮೀ ನಡುವೆ ಹರಡಿದೆ ಎಂದು ಹವಾಮಾನು ಇಲಾಖೆ ತಿಳಿಸಿದೆ.

ಮುಂದಿನ 48 ಗಂಟೆಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಕಡಿಮೆ ಒತ್ತಡದಲ್ಲಿ ಚಂಡಮಾರುತ ರೂಪುಗೊಳ್ಳುವ ಸಾಧ್ಯತೆ ಇದ್ದು, ಹವಾಮಾನದಲ್ಲಿ ವೈಪರೀತ್ಯ ಉಂಟಾಗಲಿದೆ. ಮಧ್ಯಪ್ರದೇಶದಲ್ಲಿ ಚಂಡಮಾರುತದ ಎಫೆಕ್ಟ್ ಈಗಾಗಲೇ ಉಂಟಾಗಿದ್ದು, ಇದರ ಪರಿಣಾಮ ಜೋರಾಗಿ ಇರುವುದಿಲ್ಲ. ಮತ್ತೊಂದು ಕಡಿಮೆ ಒತ್ತಡದ ಚಂಡಮಾರುತವು ದಕ್ಷಿಣ ಒಡಿಶಾ ಮತ್ತು ಪಕ್ಕದ ಪ್ರದೇಶಗಳಲ್ಲಿ ವಿಸ್ತರಿಸಲಿದೆ ಜನರು ಆದಷ್ಟು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಹೇಳಿದೆ.

ಅಕ್ಯುವೆದರ್‌ನ ಹವಾಮಾನ ವರದಿಯ ಪ್ರಕಾರ, ಕೋಲ್ಕತ್ತಾದಲ್ಲಿ ಸೋಮವಾರ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ಕಾಣಬಹುದು. ಗರಿಷ್ಠ ಸಾಪೇಕ್ಷ ಆರ್ದ್ರತೆಯು 88 ಪ್ರತಿಶತ ಆಗಿರಬಹುದು. ಇದು ಹೆಚ್ಚುವರಿ ತೇವಾಂಶದ ಸೂಚಕವಾಗಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ಆಗಿರಬಹುದು ಏತನ್ಮಧ್ಯೆ, ದಿನದ ವಿವಿಧ ಸಮಯಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಸೋಮವಾರ ಮತ್ತು ಮಂಗಳವಾರ, ದಕ್ಷಿಣ ಬಂಗಾಳದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ, ಆದರೆ ಬುಧವಾರದಿಂದ ಮತ್ತೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.

suddiyaana