INDIAಗೆ ಸೂಪರ್-8 ಅಗ್ನಿಪರೀಕ್ಷೆ – ಆಫ್ಘನ್, ಬಾಂಗ್ಲಾ, ಆಸೀಸ್.. ಸವಾಲೇನು?
ರೋHITಗೆ ಕಾಡ್ತಿರೋ ಟೆನ್ಷನ್ ಏನು?

INDIAಗೆ ಸೂಪರ್-8 ಅಗ್ನಿಪರೀಕ್ಷೆ – ಆಫ್ಘನ್, ಬಾಂಗ್ಲಾ, ಆಸೀಸ್.. ಸವಾಲೇನು?ರೋHITಗೆ ಕಾಡ್ತಿರೋ ಟೆನ್ಷನ್ ಏನು?

2024ರ ಐಸಿಸಿ ಟಿ-20 ವಿಶ್ವಕಪ್ ಲೀಗ್ ನಿರ್ಣಾಯಕ ಹಂತ ತಲುಪಿದೆ. ಈ ಬಾರಿಯ ಸ್ಪೆಷಲಾಟಿ ಅಂದ್ರೆ  ಮೈದಾನದಲ್ಲಿ ಬ್ಯಾಟರ್​ಗಳ ಅಬ್ಬರಕ್ಕಿಂತ, ಬೌಲರ್​ಗಳೇ ಡಾಮಿನೇಟ್ ಮಾಡ್ತಿದ್ದಾರೆ. ಸದ್ಯ ಟೂರ್ನಿಯ ಸೂಪರ್​-8 ಸುತ್ತಿಗೆ ಕೌಂಟ್​ಡೌನ್ ಶುರುವಾಗಿದ್ದು, 8 ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಲು ಸನ್ನದ್ಧವಾಗಿವೆ. ಟೀಂ ಇಂಡಿಯಾ ಕೂಡ ಸತತ ಮೂರು ಪಂದ್ಯಗಳನ್ನ ಗೆದ್ದು ಸೂಪರ್ 8 ಸುತ್ತಿಗೆ ಪ್ರವೇಶ ಪಡೆದಿದೆ. ಆದ್ರೆ ರೋಹಿತ್ ಪಡೆಗೆ ಅಸಲಿ ಚಾಲೆಂಜ್ ಇಲ್ಲಿಂದಲೇ ಶುರುವಾಗಲಿದೆ. ವಿಂಡೀಸ್ ಪಿಚ್, ಎದುರಾಳಿ ತಂಡಗಳನ್ನ ಎದುರಿಸೋದು ಅಷ್ಟು ಸುಲಭದ ಮಾತಲ್ಲ. ಹಾಗಾದ್ರೆ ಸೂಪರ್ 8 ಹಂತಕ್ಕೆ ಸೆಲೆಕ್ಟ್ ಆಗಿರೋ  ತಂಡಗಳು ಯಾವುವು? ಭಾರತಕ್ಕೆ ಸವಾಲಾಗೋ ಟೀಂ ಯಾವ್ದು? ರೋಹಿತ್ ಶರ್ಮಾಗೆ ಕಾಡ್ತಿರೋ ಟೆನ್ಷನ್ ಏನು? ಈ ಎಲ್ಲವುದರ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ.

2024ರ ಐಸಿಸಿ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ 20 ತಂಡಗಳು ಭಾಗವಹಿಸಿವೆ. ಈಗಾಗಲೇ ಬಲಿಷ್ಠ ತಂಡವಾದ ನ್ಯೂಜಿಲೆಂಡ್, ಮಾಜಿ ಚಾಂಪಿಯನ್​ ಶ್ರೀಲಂಕಾ, ಕಳೆದ ಬಾರಿಯ ರನ್ನರ್​ಅಪ್ ಪಾಕಿಸ್ತಾನ ತಂಡಗಳು ಕಳಪೆ ಪ್ರದರ್ಶನದಿಂದ ಟೂರ್ನಿಯಿಂದ ಹೊರಬಿದ್ದಿವೆ. ಸೂಪರ್​-8ಕ್ಕೆ ಅಚ್ಚರಿಯ ಪ್ರವೇಶ ಮಾಡಿರುವ ಅಮೆರಿಕ, ಜೊತೆಗೆ ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳನ್ನೂ ಕೂಡ ಈ ಹಂತದಲ್ಲಿ ಲಘುವಾಗಿ ಪರಿಗಣಿಸುವಂತಿಲ್ಲ. ಇನ್ನು ಸೂಪರ್​-8 ಹಂತದ ಪಂದ್ಯಗಳನ್ನ ಹಣಾಹಣಿಗಳನ್ನು ಗುಂಪು ​1 ಹಾಗೂ ಗುಂಪು 2 ಎಂದು ವಿಂಗಡಣೆ ಮಾಡಲಾಗಿದೆ. ಗ್ರೂಪ್ 1ರಲ್ಲಿ ಭಾರತ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳಿವೆ. ಹಾಗೆಯೇ, ಗ್ರೂಪ್​ 2ರಲ್ಲಿ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್​, ವೆಸ್ಟ್​​ ಇಂಡೀಸ್ ಹಾಗೂ  ಅಮೆರಿಕ ತಂಡಗಳು ಸ್ಥಾನ ಪಡೆದಿವೆ. ಅಷ್ಟಕ್ಕೂ ಯಾವ್ಯಾವ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ..? ಟೀಂ ಇಂಡಿಯಾ ಫೈಟ್ ಮಾಡೋ ಟೀಂಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಕೈ ಮುಗಿತೀನಿ ಬಿಟ್ಬಿಡಿ.. – ಜಾಸ್ತಿ ಪ್ರಶ್ನೆ ಕೇಳಿದ್ದಕ್ಕೆ ಪೊಲೀಸರ ಕಾಲಿಗೆ ಬಿದ್ದ ದರ್ಶನ್!

2 ಗುಂಪು.. ತಲಾ ಮೂರು ಪಂದ್ಯ! 

ಜೂನ್​ 2 ರಿಂದ ಆರಂಭವಾಗಿದ್ದ ಟಿ-20 ವಿಶ್ವಕಪ್ ಟೂರ್ನಿಯಲ್ಲಿ 40 ಪಂದ್ಯಗಳ ನಂತರ ಸೂಪರ್​-8 ಫೈಟ್​ ಶುರುವಾಗಲಿದೆ. ಸೂಪರ್​-8 ಹಂತದಲ್ಲಿ 12 ಪಂದ್ಯಗಳು ನಡೆಯಲಿವೆ. ತಲಾ ಒಂದು ತಂಡವು ಮೂರು ಪಂದ್ಯಗಳನ್ನು ಆಡಲಿದೆ. ಇಲ್ಲಿ ಹೆಚ್ಚು ಗೆಲುವುಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ಮುಂದಿನ ಹಂತ ಅಂದರೆ ಸೆಮಿಫೈನಲ್​ಗೆ ಪ್ರವೇಶ ಪಡೆಯಲಿವೆ. ಈ ಹಂತದ ಮೊದಲ ಪಂದ್ಯದಲ್ಲಿ ಜೂನ್​ 19 ರಂದು ಅಮೆರಿಕ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎದುರಾಗಲಿವೆ. ರೋಹಿತ್​ ಶರ್ಮಾ ಪಡೆಯು ಜೂನ್​ 20ರಂದು ಅಫ್ಘಾನಿಸ್ತಾನದ ವಿರುದ್ಧ ಸೂಪರ್ 8 ಹಂತದ ಮೊದಲ ಪಂದ್ಯವನ್ನು ಆಡಲಿದೆ. ಬಳಿಕ ಜೂನ್​ 22ರಂದು ಬಾಂಗ್ಲಾದೇಶ ಹಾಗೂ ಜೂನ್​ 24ರಂದು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಭಾರತ ಕಣಕ್ಕಿಳಿಯಲಿದೆ. ಟೀಂ ಇಂಡಿಯಾದ ಎಲ್ಲ ಪಂದ್ಯಗಳೂ ಕೂಡ ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿವೆ. ಸೂಪರ್​-8 ಬಳಿಕ ಸೆಮಿಫೈನಲ್​ ಹಾಗೂ ಫೈನಲ್​ ಪಂದ್ಯಗಳು ನಡೆಯಲಿವೆ. ಜೂನ್​ 26ರಂದು ಟ್ರಿನಿಡಾಡ್​ನಲ್ಲಿ ಮೊದಲ ಸೆಮಿಫೈನಲ್​ ಹಾಗೂ ಜೂನ್​ 27ರಂದು ಗಯಾನಾದಲ್ಲಿ ಎರಡನೇ ಸೆಮಿಫೈನಲ್​ ಪಂದ್ಯವಿದೆ. ಜೂನ್​ 29ರಂದು ಟೂರ್ನಿಯ ಅಂತಿಮ ಪಂದ್ಯ ಬಾರ್ಬಡೋಸ್​​ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ.

ಸದ್ಯ ಸೂಪರ್ 8 ತಲುಪಿರೋ ಭಾರತಕ್ಕೆ ಅಸಲಿ ಚಾಲೆಂಜ್ ಇಲ್ಲಿಂದ ಶುರುವಾಗಲಿದೆ. ಸೆಮಿಫೈನಲ್​ ಹಾದಿ ಅಂದುಕೊಂಡಷ್ಟು ಸುಲಭವಿಲ್ಲ. ಭಾರತಕ್ಕೆ ರಿಯಲ್ ಚಾಲೆಂಜ್​ ಇರೋದೇ ಮುಂದಿನ ಹಂತದಲ್ಲಿ. ಜೂನ್​​​ 19 ರಿಂದ ಮುಂದಿನ ಹಂತದ ಪಂದ್ಯಗಳು ಆರಂಭಗೊಳ್ಳಲಿದ್ದು, ಭಾರತಕ್ಕೆ ರಿಯಲ್ ಟೆಸ್ಟ್​ ಶುರುವಾಗಲಿದೆ. ಭಾರತ ಎದುರಿಸಲಿರೋ ಮೂರೂ ತಂಡಗಳು ತುಂಬಾನೇ ಸ್ಟ್ರಾಂಗ್ ಇವೆ. ಅಲ್ದೇ ಗ್ರೂಪ್ ಹಂತದಲ್ಲಿ ಭಾರತ ಹೆಚ್ಚಾಗಿ ನ್ಯೂಯಾರ್ಕ್‌ನಲ್ಲಿ ಆಡಿತ್ತು. ಆದರೆ ಇನ್ನು ಮುಂದೆ ಸಂಪೂರ್ಣ ಟೂರ್ನಿ ಕೆರಿಬಿಯನ್ ದ್ವೀಪಗಳಲ್ಲಿ ನಡೆಯಲಿದೆ. ಕೆರಿಬಿಯನ್ ದ್ವೀಪಗಳಲ್ಲಿನ ಪಿಚ್‌ಗಳು ತುಂಬಾ ನಿಧಾನವಾಗಿರುತ್ತವೆ. ವಿಶೇಷವಾಗಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಈ ಬಾರಿಯ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರ ವಹಿಸಿದ್ದರು. ಅಲ್ದೇ ಸೂಪರ್ 8ರಲ್ಲಿ ಟೀಂ ಇಂಡಿಯಾ ಎದುರಾಳಿಗಳಾಗಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಕಣಕ್ಕಿಳಿಯುತ್ತಿದೆ. ಈ ಮೂರೂ ತಂಡಗಳನ್ನ ಈಸಿಯಾಗಿ ತೆಗೆದುಕೊಳ್ಳೋಕೆ ಸಾಧ್ಯನೇ ಇಲ್ಲ.

ಭಾರತಕ್ಕೆ 3 ಸವಾಲು!  

ಟೀಮ್ ಇಂಡಿಯಾ ಜೂನ್​ 20 ರಂದು ನಡೆಯುವ ಸೂಪರ್​​​-8 ಮೊದಲ ಪಂದ್ಯದಲ್ಲೆ ಡೇಂಜರಸ್​ ಅಪ್ಘಾನಿಸ್ತಾನ ತಂಡವನ್ನ ಎದುರಿಸಲಿದೆ. ಹೇಳಿ ಕೇಳಿ ಅಪ್ಘನ್​​​​​​ ತಂಡದಲ್ಲಿ ಟಾಪ್​​​​ ಕ್ಲಾಸ್ ಸ್ಪಿನ್ನರ್​ಗಳಿದ್ದಾರೆ. ರಶೀದ್ ಖಾನ್ ಹಾಗೂ ನೂರ್​ ಅಹ್ಮದ್​​​ ಮಾರಕ ದಾಳಿ ನಡೆಸೋದ್ರಲ್ಲಿ ಡೌಟೇ ಇಲ್ಲ. ಸಾಲದೆಂಬಂತೆ ಫರೂಕಿ ಅನ್ನೋ ಮ್ಯಾಚ್ ವಿನ್ನಿಂಗ್ ಬೌಲರ್ ಕೂಡ ಇದ್ದಾರೆ. ಬ್ಯಾಟಿಂಗ್​​​​​​​ ವಿಭಾಗ ಕೂಡ ಬಲಿಷ್ಠವಾಗಿದೆ. ಇಂತಹ ಸಮತೋಲನದ ತಂಡದೊಂದಿಗೆ ಸೆಣಸಾಡಲು ಭಾರತ ತಂಡ ಪಕ್ಕಾ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯುವ ಅಗತ್ಯವಿದೆ. ಭಾರತಕ್ಕೆ ಸೂಪರ್​​​​​-8ನ ಎರಡನೇ ಬಿಗ್ ಚಾಲೆಂಜ್ ಅಂದ್ರೆ ಬಾಂಗ್ಲಾದೇಶ. ಬಾಂಗ್ಲಾ ಭಾರತದ ವಿರುದ್ಧ ಸುಲಭವಾಗಿ ಮಣಿಯುವ ತಂಡವಲ್ಲ. ಚಾನ್ಸ್ ಸಿಕ್ರೆ ಸೋಲಿನ ರುಚಿ ತೋರಿಸೋಕೆ ತಯಾರಿರುತ್ತೆ. ಬಾಂಗ್ಲಾ ಟೀಮ್​ನಲ್ಲಿ ಕ್ವಾಲಿಟಿ ಸ್ಪಿನ್ನರ್​ಗಳ ದಂಡೇ ಇದೆ. ತಸ್ಕಿನ್ ಅಹ್ಮದ್​​​, ಮುಸ್ತಫಿಜುರ್​ ರೆಹಮಾನ್​ರಂತ ವಿಶ್ವದರ್ಜೆಯ ವೇಗಿಗಳ ಬಲವಿದೆ. ಪಂದ್ಯದ ಗತಿಯನ್ನೆ ಬದಲಿಸುವ ಟಿ20 ಸ್ಪೆಷಲಿಸ್ಟ್​​​ಗಳಿದ್ದಾರೆ. ಸೋ ಭಾರತಕ್ಕೆ ಬಾಂಗ್ಲಾ ಸಂಹಾರ ಕೂಡ ಸುಲಭವಿಲ್ಲ. ಇನ್ನು ಭಾರತ ತಂಡ ಸೂಪರ್​​​​​-8 ಕೊನೆ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನ ಎದುರಿಸಲಿದೆ. ಇಲ್ಲಂತೂ ದೊಡ್ಡ ಫೈಟೇ ನಡೆಸಬೇಕು. ಯಾಕಂದ್ರೆ ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ ಆಸಿಸ್​ ತಂಡದ್ದಲ್ಲ. ಆಸ್ಟ್ರೇಲಿಯಾ ತಂಡದಲ್ಲಿ ವಿಶ್ವದರ್ಜೆಯ ಆಟಗಾರರಿದ್ದಾರೆ. ಮಿಚೆಲ್​​​ ಮಾರ್ಷ್​, ಕ್ಯಾಮರೂನ್ ಗ್ರೀನ್​​, ಗ್ಲೆನ್​​ ಮ್ಯಾಕ್ಸ್​​​ವೆಲ್ ಹಾಗೂ ಮಾರ್ಕಸ್​ ಸ್ಟೋಯ್ನಿಸ್​ರಂತ ಸ್ಟಾರ್​ ಆಲ್​ರೌಂಡರ್​ಗಳಿದ್ದಾರೆ. ಇಂತಹ ಬಲಾಢ್ಯ ತಂಡದೆದುರು ಭಾರತ ಕೂಡ ಅಷ್ಟೇ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯಬೇಕು.

ಇಲ್ಲಿ ಭಾರತ ತಂಡಕ್ಕೆ ಅಸಲಿ ಚಾಲೆಂಜ್ ಇನ್ನೊಂದಿದೆ. ಭಾರತವನ್ನು ಹೊರತುಪಡಿಸಿ ಉಳಿದ ತಂಡಗಳು ಈಗಾಗಲೇ ವೆಸ್ಟ್ ಇಂಡೀಸ್ ಮೈದಾನದಲ್ಲಿ ಕೆಲವು ಪಂದ್ಯಗಳನ್ನು ಆಡಿವೆ. ಭಾರತಕ್ಕಿಂತ ಪಿಚ್‌ಗಳ ಬಗ್ಗೆ ಅವರಿಗೆ ಹೆಚ್ಚಿನ ಜ್ಞಾನವಿರುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ವೆಸ್ಟ್ ಇಂಡೀಸ್ ಪಿಚ್ ಗಳು ಟೀಂ ಇಂಡಿಯಾಗೆ ಸವಾಲೊಡ್ಡುವ ಸಾಧ್ಯತೆ ಇದೆ. ಅಲ್ದೇ ರನ್ ಮಷಿನ್ ವಿರಾಟ್ ಕೊಹ್ಲಿ ಇನ್ನೂ ಕೂಡ ಫಾರ್ಮ್​ಗೆ ಬಂದಿಲ್ಲದೇ ಇರೋದು ಟೀಂ ಇಂಡಿಯಾದ ಆತಂಕ ಹೆಚ್ಚಿಸಿದೆ. ಆಡಿದ ಮೂರು ಪಂದ್ಯಗಳಲ್ಲಿ ಜಸ್ಟ್ 5 ರನ್ ಕಲೆ ಹಾಕಿದ್ದಾರೆ. ಕೆನಡಾ ವಿರುದ್ಧದ ನಾಲ್ಕನೇ ಪಂದ್ಯ ರದ್ದಾಗಿತ್ತು. ಅಲ್ದೇ ರವೀಂದ್ರ ಜಡೇಜಾ ಟಿ20 ಮಾದರಿಯಲ್ಲಿ ಅಷ್ಟಾಗಿ ಮಿಂಚಿಲ್ಲ. ಹಾಗೇ ಪಂತ್​ರನ್ನ ಹೊರತು ಪಡಿಸಿದ್ರೆ ಉಳಿದ ಯಾವೊಬ್ಬ ಆಟಗಾರನೂ ಸ್ಥಿರ ಪ್ರದರ್ಶನ ನೀಡದೇ ಇರೋದು ಆತಂಕಕ್ಕೆ ಕಾರಣವಾಗಿದೆ. ಒಟ್ಟಿನಲ್ಲಿ ಟೀಮ್ ಇಂಡಿಯಾಗೆ ಸೂಪರ್​​​​​​-8 ನಲ್ಲಿ ಕಠಿಣ ಸವಾಲು ಇದೆ. ಈ ಮೂರು ಬಿಗ್​ ಚಾಲೆಂಜಸ್​ಗಳನ್ನ ಗೆಲ್ಲಲೇಬೇಕಿದೆ.

Shwetha M

Leave a Reply

Your email address will not be published. Required fields are marked *