IPL 18ನೇ ಸೀಸನ್​ಗೆ 3 ಟ್ವಿಸ್ಟ್! – ಸ್ಟಾರ್ ಪ್ಲೇಯರ್ಸ್​ಗೂ ಕಡಿಮೆ ಬೆಲೆ?
1 ತಂಡದಲ್ಲಿ 8 ಜನ ಉಳಿಯಬಹುದಾ?

IPL 18ನೇ ಸೀಸನ್​ಗೆ 3 ಟ್ವಿಸ್ಟ್! – ಸ್ಟಾರ್ ಪ್ಲೇಯರ್ಸ್​ಗೂ ಕಡಿಮೆ ಬೆಲೆ?1 ತಂಡದಲ್ಲಿ 8 ಜನ ಉಳಿಯಬಹುದಾ?

2025ರ ಐಪಿಎಲ್​ಗೆ ಈಗಿನಿಂದಲೇ ತಯಾರಿ ನಡೆಯುತ್ತಿದ್ದು, ಬಿಸಿಸಿಐ ಮತ್ತು ಐಪಿಎಲ್ ಫ್ರಾಂಚೈಸಿಗಳು ಅದಕ್ಕಾಗಿ ಸಾಕಷ್ಟು ಚರ್ಚೆಯನ್ನೂ ನಡೆಸಿವೆ. ಅಲ್ದೇ ಒಂದಷ್ಟು ಬದಲಾವಣೆ ತರೋಕೂ ಪ್ಲ್ಯಾನ್ ನಡೆದಿದೆ.  ಇತ್ತೀಚಿಗೆ ಮುಂಬೈನಲ್ಲಿ ನಡೆದ ಬಿಸಿಸಿಐ ಮತ್ತು ಪ್ರಾಂಚೈಸಿಗಳ ನಡುವಿನ ಸಭೆಯಲ್ಲಿ, ಆಟಗಾರರ ಉಳಿಸಿಕೊಳ್ಳುವಿಕೆಯಿಂದ ಹಿಡಿದು ಮೆಗಾ ಹರಾಜಿನ ನಿಯಮಗಳವರೆಗೆ ಚರ್ಚೆಯಾಗಿದೆ. ಅದ್ರಲ್ಲೂ ಇಂಪ್ಯಾಕ್ಟ್​ ಪ್ಲೇಯರ್ ನಿಯಮದ ಬಗ್ಗೆಯೂ ಅಭಿಪ್ರಾಯಗಳನ್ನ ಕಲೆ ಹಾಕಲಾಗಿದೆ. ಯುವ ಆಟಗಾರರಿಗೆ ಐಪಿಎಲ್‌ನಲ್ಲಿ ಆಡಲು ಅವಕಾಶ ನೀಡುತ್ತದೆ ಎಂದು ಕೆಲವರು ಹೇಳಿದ್ರೆ ಇನ್ನೂ ಕೆಲವರು ಆಲ್ ರೌಂಡರ್‌ಗಳ ಬೆಳವಣಿಗೆಯ ದೃಷ್ಟಿಯಿಂದ ಇದು ಭಾರತೀಯ ಕ್ರಿಕೆಟ್‌ಗೆ ಹಾನಿಕಾರಕ ಎಂದಿದ್ದಾರೆ. ಅಲ್ದೇ ರೀಟೇನ್​ನಲ್ಲಿ ಹೆಚ್ಚಿನ ಜನ್ರನ್ನ ಉಳಿಸಿಕೊಳ್ಬೇಕು ಅಂತಾ ಕೆಲವರು ಹೇಳಿದ್ದಾರೆ. ಬಟ್ ಈಗ ಮುಂದಿನ ಐಪಿಎಲ್​ಗೆ ಮೂರು ನಿಯಮಗಳು ಬರುವ ನಿರೀಕ್ಷೆ ಇದೆ. ಯಾವುವು ಆ ನಿಯಮ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮಿಶ್ರ ಡಬಲ್ಸ್‌ನಲ್ಲಿ Love.. ಒಲಿಂಪಿಕ್ಸ್‌ನಲ್ಲಿ ಪ್ರಪೋಸ್ – ಚಿನ್ನ ಕೊರಳಿಗೆ.. ಉಂಗುರ ಬೆರಳಿಗೆ..!

2025ಕ್ಕೆ ಮೂರು ನಿಯಮ!

ಸಭೆಯಲ್ಲಿ ಮೊದಲು ಕೇಳಿ ಬಂದಿರೋ ವಿಚಾರವೇ ಅನ್ ಕ್ಯಾಪ್ಡ್ ಆಟಗಾರರ ವರ್ಗೀಕರಣ. ಚೆನ್ನೈ ಸೂಪರ್ ಕಿಂಗ್ಸ್  ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್, 2021ರಲ್ಲಿ ತಿರಸ್ಕರಿಸಿದ ನಿಯಮವನ್ನು ಮರುಪರಿಶೀಲಿಸಲು ಪ್ರಸ್ತಾಪಿಸಿದ್ದಾರೆ. ಐದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಆಟಗಾರರನ್ನು ಅನ್‌ಕ್ಯಾಪ್ಡ್ ಆಟಗಾರರಾಗಿ ಮರುವರ್ಗೀಕರಣ ಮಾಡುವಂತೆ ಒತ್ತಾಯಿಸಿದ್ದಾರೆ. ಇದ್ರಿಂದ ಸಿಎಸ್‌ಕೆ ತಂಡದ ಅನುಭವಿ ಆಟಗಾರ ಎಂಎಸ್ ಧೋನಿಯನ್ನು ನಿಯಮಗಳ ಅಡಿಯಲ್ಲಿ ಉಳಿಸಿಕೊಳ್ಳುವ ತಂತ್ರವೆಂದು ಹೇಳಲಾಗಿದೆ. ಆದ್ರೆ ಇದಕ್ಕೆ ಐಪಿಎಲ್ ಫ್ರಾಂಚೈಸಿಗಳು ವಿರೋಧ ವ್ಯಕ್ತಪಡಿಸಿವೆ. ಇನ್ನು ಎರಡನೇ ನಿಯಮ ಅಂದ್ರೆ ಮೂಲ ಬೆಲೆಯನ್ನ ಕಡಿಮೆಗೊಳಿಸುವುದು. ಸ್ಟಾರ್ ಆಟಗಾರರು ಹೆಚ್ಚಿನ ಮೂಲ ಬೆಲೆಗಳಿಂದ ಹರಾಜಿನಲ್ಲಿ ಮಾರಾಟವಾಗದೆ ಉಳಿಯಬಹುದು ಎಂಬ ಉದ್ದೇಶದಿಂದ, ಐಪಿಎಲ್ ಸಿಇಒ ಹೇಮಂಗ್ ಅಮೀನ್ ಅವರು ಕ್ಯಾಪ್ಡ್ ಆಟಗಾರರ ಮೂಲ ಬೆಲೆಯನ್ನು ಕಡಿಮೆ ಮಾಡಲು ಅವಕಾಶ ನೀಡಲು ಸಲಹೆ ನೀಡಿದ್ದಾರೆ. ಇನ್ನು ಮೂರನೇ ನಿಯಮ ಅಂದ್ರೆ ಉಳಿಸಿಕೊಳ್ಳುವ ಆಟಗಾರರ ಹೆಚ್ಚಳ ಮಾಡೋದು. ಐಪಿಎಲ್‌ನಲ್ಲಿ ರೀಟೆನ್ ನಿಯಮವು ತಂಡಗಳ ಕಾರ್ಯತಂತ್ರದ ಯೋಜನೆಗಳ ಭಾಗವಾಗಿದೆ. ಪ್ರಸ್ತುತ ನೀತಿಯು ಮೂರು ಭಾರತೀಯ ಮತ್ತು ಇಬ್ಬರು ವಿದೇಶಿ ಆಟಗಾರರನ್ನು ಉಳಿಸಿಕೊಳ್ಳಲು ತಂಡಗಳಿಗೆ ಅವಕಾಶ ನೀಡುತ್ತದೆ. ಆದರೆ, ಕೆಲವು ಐಪಿಎಲ್ ಫ್ರಾಂಚೈಸಿಗಳು ಉಳಿಸಿಕೊಳ್ಳುವ ಆಟಗಾರರ ಸಂಖ್ಯೆಯನ್ನು 7 ಅಥವಾ 8ಕ್ಕೆ ಹೆಚ್ಚಿಸುವಂತೆ ಧ್ವನಿ ಎತ್ತಿದ್ದಾರೆ.  ಎಲ್ಲಾ ಫ್ರಾಂಚೈಸಿಗಳು ಈ ಮೂರು ನಿಯಮಗಳ ಬಗ್ಗೆ ಹೆಚ್ಚು ಮನವಿ ಮಾಡಿರೋದ್ರಿಂದ ಮುಂದಿನ ಐಪಿಎಲ್​ಗೆ ಈ ನಿಮಯಗಳಲ್ಲಿ ಬದಲಾವಣೆ ತರೋ ನಿರೀಕ್ಷೆಗಳಿವೆ.

ಒಟ್ನಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-18ರ ಮೆಗಾ ಹರಾಜಿನ ರೂಪುರೇಷೆಗಳ ಬಗ್ಗೆ ಹಲವು ಪರವಿರೋಧಗಳು ಶುರುವಾಗಿವೆ. ಸಭೆಯಲ್ಲಿ ಮೆಗಾ ಹರಾಜು ಬೇಡವೆಂಬ ಕೂಗೂ ಕೇಳಿ ಬಂದಿದೆ. ಬಹುತೇಕ ಫ್ರಾಂಚೈಸಿಗಳು ಮಿನಿ ಹರಾಜಿಗೆ ಆಸಕ್ತಿ ತೋರಿಸಿದ್ದಾರೆ. ಆಟಗಾರರ ರಿಟೈನ್, ಆರ್​ಟಿಎಂ ಆಯ್ಕೆಗಳ ಸಮಸ್ಯೆ ಎದುರಾಗುವುದು ಮೆಗಾ ಹರಾಜು ನಡೆಸುವುದರಿಂದ. ಹೀಗಾಗಿ ಪ್ರತಿ ಸೀಸನ್​ನಲ್ಲೂ ಮಿನಿ ಹರಾಜು ನಡೆಸುವುದು ಸೂಕ್ತ ಎಂಬ ವಾದವನ್ನು ಮುಂದಿಟ್ಟಿದ್ದಾರೆ. ಆದ್ರೆ ಅಂತಿಮವಾಗಿ ಯಾವ ನಿಯಮಗಳು ಜಾರಿಗೆ ಬರುತ್ತೆ ಅನ್ನೋದೇ ಈಗಿರುವ ಪ್ರಶ್ನೆ.

Shwetha M

Leave a Reply

Your email address will not be published. Required fields are marked *