ಮಹಾರಾಜ ಬಾಯ್ಸ್ ಮೇಲೆ RCB ಕಣ್ಣು – ಬೆಸ್ಟ್ ಬೌಲರ್ಸ್ & ಬ್ಯಾಟರ್ಸ್ ಯಾರೆಲ್ಲಾ?
2026ರ ಸೀಸನ್ ಗೆ ಲೋಕಲ್ ಬಾಯ್ಸ್!

2026ರ ಐಪಿಎಲ್ಗೂ ಮುನ್ನ ಈಗಾಗ್ಲೇ ಫ್ರಾಂಚೈಸಿಗಳಲ್ಲಿ ಮೇಜರ್ ಡವಲಪ್ಮೆಂಟ್ಗಳೇ ಆಗ್ತಿದೆ. ತಂಡದ ಕೋಚಿಂಗ್ ಸ್ಟಾಫ್ಸ್ ಆಲ್ರೆಡಿ ಬದಲಾವಣೆ ಆಗ್ತಿದ್ದಾರೆ. ಇನ್ನೇನು ಆಟಗಾರರ ಟ್ರೇಡಿಂಗ್ ಕೂಡ ಶುರುವಾಗುತ್ತೆ. ಮಿನಿ ಹರಾಜಿನಲ್ಲಿ ಬೇರೆ ಬೇರೆ ಆಟಗಾರರ ಮೇಲೆ ಮಾಲೀಕರು ಕಣ್ಣಿಟ್ಟಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯೂ ಇದಕ್ಕೆ ಹೊರತಾಗಿಲ್ಲ. ಇಂಟ್ರೆಸ್ಟಿಂಗ್ ಅಂದ್ರೆ ಆರ್‌ಸಿಬಿಗೆ ನಮ್ಮ ಲೋಕಲ್ ಕ್ರಿಕೆಟರ್ಗಳಲ್ಲೇ ಬೆಸ್ಟ್ ಆಪ್ಶನ್ಸ್ ಇದೆ. ಮಹಾರಾಜ ಟ್ರೋಫಿಯಲ್ಲಿ ಮಿಂಚಿರೋ ಈ ಆಟಗಾರರನ್ನ ಟಾರ್ಗೆಟ್ ಮಾಡಬಹುದು.
ಇದನ್ನೂ ಓದಿ : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 50% ಟ್ರಾಫಿಕ್ ಫೈನ್ ಡಿಸ್ಕೌಂಟ್! – 13 ದಿನಗಳಲ್ಲಿ 35.72 ಕೋಟಿ ರೂ. ಸಂಗ್ರಹ!
ಐಪಿಎಲ್ನಲ್ಲಿ ಲೋಕಲ್ ಬಾಯ್ಸ್ಗೆ ಚಾನ್ಸ್ ಸಿಗಲ್ಲ ಅನ್ನೋ ಆರೋಪ ಮೊದ್ಲಿಂದಲೂ ಇದೆ. ಅದ್ರಲ್ಲೂ ಆರ್ಸಿಬಿಯಲ್ಲಿ ಕನ್ನಡಿಗರಿಗೆ ಅವಕಾಶ ಕೊಡಲ್ಲ ಅನ್ನೋದು ದೊಡ್ಡಮಟ್ಟದಲ್ಲೇ ಸದ್ದು ಮಾಡುತ್ತೆ. ಬಟ್ 2025ರ ಮಹಾರಾಜ ಟ್ರೋಫಿಯಲ್ಲಿ ಕರ್ನಾಟಕದ ಪ್ರತಿಭಾವಂತ ಆಟಗಾರರು ತಮ್ಮ ಸಾಮರ್ಥ್ಯವನ್ನ ಪ್ರೂವ್ ಮಾಡಿದ್ದಾರೆ. ಮಂಗಳೂರು ಡ್ರಾಗನ್ಸ್ ತಂಡ ಫೈನಲ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ತಂಡವನ್ನು ಸೋಲಿಸುವ ಮೂಲಕ ತಮ್ಮ ಮೊದಲ ಚಾಂಪಿಯನ್‌ಶಿಪ್ ಗೆಲ್ಲುವಲ್ಲಿ ಯಶಸ್ವಿಯಾಯಿತು. ಈ ಪಂದ್ಯಾವಳಿಯಲ್ಲಿ ಹಲವು ಆಟಗಾರರು ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಅದ್ರಲ್ಲೂ ಬ್ಯಾಟಿಂಗ್ನಲ್ಲಿ ಈ ನಾಲ್ವರ ಪರ್ಫಾಮೆನ್ಸ್ ಬೆಸ್ಟ್ ಎನ್ನುವಂತಿದೆ. ಜೊತೆಗೆ ಬೌಲಿಂಗ್ನಲ್ಲೂ ಸದ್ದು ಮಾಡಿದವ್ರಿದ್ದಾರೆ. ಇವ್ರೆಲ್ಲಾ ಐಪಿಎಲ್ನ ಹಾಲಿ ಚಾಂಪಿಯನ್ ಆರ್‌ಸಿಬಿಗೆ 2026ರ ಸೀಸನ್ಗೆ ವ್ಯಾಲ್ಯೂ ಎಡಿಷನ್ ಆಗ್ಬಹುದು.
ಮೊಹಮ್ಮದ್ ತಹಾ ( ಹುಬ್ಬಳ್ಳಿ ಟೈಗರ್ಸ್ )
ಇನ್ನಿಂಗ್ಸ್ ರನ್ ಸ್ಟ್ರೈಕ್ ರೇಟ್ 50/100
12 342 146 2 ಶತಕ
ಮಹಾರಾಜ ಟ್ರೋಫಿಯಲ್ಲಿ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಮಿಂಚಿರುವ ಮೊಹಮ್ಮದ್ ತಹಾ ಈ ಲಿಸ್ಟ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಟೂರ್ನಮೆಂಟ್‌ನಲ್ಲಿ ಹುಬ್ಬಳ್ಳಿ ಟೈಗರ್ಸ್ ಪ್ರತಿನಿಧಿಸುತ್ತಿರುವ ತಹಾ ರನ್ಗಳ ಮಳೆಯನ್ನೇ ಸುರಿಸಿದ್ದಾರೆ. ಸತತ ಎರಡು ಪಂದ್ಯಗಳಲ್ಲಿ ಶತಕ ಗಳಿಸಿ ಐಪಿಎಲ್ ಫ್ರಾಚೈಸಿಗಳ ಗಮನ ಸೆಳೆದಿದ್ದಾರೆ. ಟೂರ್ನಿಯಲ್ಲಿ ಒಟ್ಟಾರೆಯಾಗಿ 12 ಇನ್ನಿಂಗ್ಸ್ ಗಳಿಂದ 342 ರನ್ಗಳನ್ನ ಕಲೆ ಹಾಕಿದ್ದಾರೆ. 146ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದು 2 ಶತಕಗಳೂ ಸೇರಿವೆ.
ಲೋಚನ್ ಗೌಡ (ಮಂಗಳೂರು ಡ್ರಾಗನ್ಸ್)
ಇನ್ನಿಂಗ್ಸ್ ರನ್ ಸ್ಟ್ರೈಕ್ ರೇಟ್ 50/100
12 ಇನ್ನಿಂಗ್ಸ್ 360 ರನ್ 138 3 ಅರ್ಧಶತಕ
ಮಂಗಳೂರು ಡ್ರಾಗನ್ಸ್ ಪರ ಕಣಕ್ಕಿಳಿದಿದ್ದ ಬ್ಯಾಟರ್ ಲೋಚನ್ ಗೌಡಗೆ 23 ವರ್ಷ ವಯಸ್ಸು. ಲೋಚನ್ ಇದೇ ಮೊದಲ ಬಾರಿಗೆ ಕಂಪ್ಲೀಟ್ ಸೀಸನ್ ಆಡಿದ್ರು. 12 ಇನ್ನಿಂಗ್ಸ್ಗಳಿಂದ 138ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಹಾಗೇ 3 ಅರ್ಧಶತಕಗಳೊಂದಿಗೆ 360 ರನ್ಗಳನ್ನ ಕಲೆ ಹಾಕಿದ್ರು. ಈ ಆವೃತ್ತಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿ ಟೂರ್ನಿ ಮುಗಿಸಿದ್ರು. ಅದ್ರಲ್ಲೂ ತಮ್ಮ ಆರಂಭಿಕ ಪಾರ್ಟ್ನರ್ ಶರತ್ ಬಿಆರ್ ಜೊತೆಗೂಡಿ 535 ರನ್ ಗಳಿಸಿ ಡ್ರಾಗನ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. ಪವರ್‌ಪ್ಲೇನಲ್ಲಿ ಸ್ಥಿರ ಬ್ಯಾಟಿಂಗ್ ಪ್ರದರ್ಶಿಸಿದರು. ಒಟ್ಟಾರೆಯಾಗಿ 30 ಬೌಂಡರಿ, 19 ಸಿಕ್ಸರ್ ಸಿಡಿಸಿದ್ರು. ಪೇಸ್ ಮತ್ತು ಸ್ಪಿನ್ ಎರಡರ ವಿರುದ್ಧವೂ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ರು.
ರೋಹನ್ ಪಾಟೀಲ್ (ಬೆಂಗಳೂರು ಬ್ಲಾಸ್ಟರ್ಸ್)
ಇನ್ನಿಂಗ್ಸ್ ರನ್ ಸ್ಟ್ರೈಕ್ ರೇಟ್ 50/100
12 316 148 3 ಅರ್ಧಶತಕ
ಇನ್ನು ಮಹಾರಾಜ ಟ್ರೋಫಿಯಲ್ಲಿ ಮಿಂಚಿದ ಮತ್ತೊಬ್ಬ ಆಟಗಾರ ರೋಹಲ್ ಪಾಟೀಲ್. ಬೆಂಗಳೂರು ಬ್ಲಾಸ್ಟರ್ಸ್ ಪರ ಕಣಕ್ಕಿಳಿದಿದ್ದ ರೋಹನ್ ಈ ಆವೃತ್ತಿಯಲ್ಲಿ ಫುಲ್ ಶೈನ್ ಆಗಿದ್ರು. ಕಳೆದ ಎರಡು ಸೀಸನ್ಗಳಲ್ಲಿ ಹೇಳಿಕೊಳ್ಳುವಂತ ಪ್ರದರ್ಶನ ಬಂದಿರಲಿಲ್ಲ. ಆದ್ರೆ ಈ ಬಾರಿ ಉತ್ತಮ ಕಮ್ ಬ್ಯಾಟಿಂಗ್ ಮಾಡುವಲ್ಲಿ ಯಶಸ್ವಿಯಾದರು. ಬೆಂಗಳೂರು ಬ್ಲಾಸ್ಟರ್ಸ್ ಪರ ಅಗ್ರ ಕ್ರಮಾಂಕದ ಎಡಗೈ ಬ್ಯಾಟ್ಸ್‌ಮನ್ 12 ಇನ್ನಿಂಗ್ಸ್ಗಳಲ್ಲಿ ಬ್ಯಾಟ್ ಬೀಸಿದ್ರು. 148ರ ಸ್ಟ್ರೈಕ್ರೇಟ್ನಲ್ಲಿ 316 ರನ್ಗಳನ್ನ ಕಲೆ ಹಾಕಿದ್ರು. ಮಿಡಲ್ ಆರ್ಡರ್ನಲ್ಲಿ 153+ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ರು. ಟೂರ್ನಿಯಲ್ಲಿ 3 ಅರ್ಧಶತಕ, 29 ಬೌಂಡರಿ, 17 ಸಿಕ್ಸರ್ ಸೇರಿದ್ವು. ಸೋ ಆರ್ಸಿಬಿಯಲ್ಲಿ ದೇವದತ್ ಪಡಿಕ್ಕಲ್‌ಗೆ ಉತ್ತಮ ಬ್ಯಾಕಪ್ ಆಗಬಹುದು.
ಕಾರ್ತಿಕ್ ಎಸ್.ಯು (ಮೈಸೂರು ವಾರಿಯರ್ಸ್)
ಇನ್ನಿಂಗ್ಸ್ ರನ್ ಸ್ಟ್ರೈಕ್ ರೇಟ್ 50/100
9 280 153 3
ಮೈಸೂರು ವಾರಿಯರ್ಸ್ ಪರ ಕಣಕ್ಕಿಳಿದಿದ್ದ ಕಾರ್ತಿಕ್ ಎಸ್.ಯು ಕೂಡ ಉತ್ತಮ ಪ್ರದರ್ಶನ ನೀಡಿದ್ರು. 21 ವರ್ಷದ ಕಾರ್ತಿಕ್ 9 ಇನ್ನಿಂಗ್ಸ್ ಗಳಲ್ಲಿ ಬ್ಯಾಟ್ ಬೀಸಿದ್ರು. ಹಾಗೇ 153ರ ಸ್ಟ್ರೈಕ್ ರೇಟ್ನಲ್ಲಿ ಮೂರು ಅರ್ಧಶತಕಗಳೊಂದಿಗೆ 280 ರನ್ ಗಳಿಸಿದರು. ಟೂರ್ನಿಯಲ್ಲಿ 20 ಬೌಂಡರಿ, 20 ಸಿಕ್ಸರ್ ಸಿಡಿಸಿದ್ರು.
ಇಷ್ಟೇ ಅಲ್ದೇ ಮಹಾರಾಜ ಟ್ರೋಫಿ ಟೂರ್ನಿಯಲ್ಲಿ ಸ್ಮರಣ್ ಆರ್, ಬಿಆರ್ ಶರತ್ ಕೂಡ ಬ್ಯಾಟಿಂಗ್ನಲ್ಲಿ ಮಿಂಚಿದ್ದಾರೆ. ಹಾಗೇ ಬೌಲಿಂಗ್ನಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿರುವ ಕ್ರಾಂತಿ ಕುಮಾರ್ ಮೇಲೂ ಕಣ್ಣಿಡಬಹುದು. ಕ್ರಾಂತಿ ಕುಮಾರ್ 26 ವಿಕೆಟ್ ತೆಗೆದಿದ್ದಾರೆ. ಸೋ ಆರ್ ಸಿಬಿಗೆ ವ್ಯಾಲ್ಯೂಯೇಬಲ್ ಬೌಲಿಂಗ್ ಆಪ್ಶನ್ ಆಗಬಹುದು. ಇನ್ನು ಯಶ್ ಪೂಂಜಾ 23 ವಿಕೆಟ್ ತೆಗೆದಿದ್ದು ಆರ್ಸಿಬಿ ಅಟ್ಯಾಕ್ನ ಡೆಪ್ತ್ ಹೆಚ್ಚಿಸಬಹುದು. ಹೀಗೆ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟಿ-20 ಟ್ರೋಫಿ ಅದೆಷ್ಟೋ ಪ್ರತಿಭಾವಂತ ಆಟಗಾರರಿಗೆ ದಾರಿ ದೀಪವಾಗಿದೆ. ಯಂಗ್ ಸ್ಟರ್ಸ್ ಆಗಿರೋದ್ರಿಂದ ಐಪಿಎಲ್ ಫ್ರಾಂಚೈಸಿಗಳು ಚಾನ್ಸ್ ಕೊಟ್ಟು ಒಳ್ಳೆ ತರಬೇತಿ ನೀಡಿದ್ರೆ ಭವಿಷ್ಯದಲ್ಲಿ ಸ್ಟಾರ್ಸ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ನೋಡಿರಿ

