3 ಪಂದ್ಯ.. 1,052 -ರನ್ಸ್ – ಬುಮ್ರಾ SLOT ಮಾತ್ರನೇ ಕನ್ಫರ್ಮ್ – ಹೊಸಬರನ್ನ ನಂಬಿದ್ದೇ ಕಗ್ಗಂಟಾಯ್ತಾ?

ಟೀಂ ಇಂಡಿಯಾ ಬೌಲಿಂಗ್ನಲ್ಲಿ ಗೌತಮ್ ಗಂಭೀರ್ ಎಷ್ಟೇ ಪ್ರಯೋಗ ಮಾಡಿದ್ರೂ ಕ್ಲೈಮ್ಯಾಕ್ಸ್ ರಿಸಲ್ಟ್ ಮಾತ್ರ ಬದಲಾಗ್ತಿಲ್ಲ. 2027ರ ಏಕದಿನ ವಿಶ್ವಕಪ್ಗೆ ಇನ್ನೊಂದು ವರ್ಷ ಕೂಡ ಉಳಿದಿಲ್ಲ. ಸೋ ಇಂಥಾ ಟೈಮಲ್ಲಿ ಭಾರತದ ಬೌಲಿಂಗ್ ಯುನಿಟ್ ಬಗ್ಗೆಯೇ ದೊಡ್ಡ ಚಿಂತೆ ಆಗೋಗಿದೆ. ಸಾಕಷ್ಟು ಬೌಲಿಂಗ್ ಆಪ್ಶನ್ಸ್ ಇದ್ರೂ ಗೇಮ್ ಚೇಂಜರ್ಸ್ ರೀತಿಯಲ್ಲಿ ಇಂಪ್ಯಾಕ್ಟ್ ಮಾಡಿಲ್ಲ.
ಭಾರತದ ಬ್ಯಾಟಿಂಗ್ ಬಗ್ಗೆ ಮ್ಯಾನೇಜ್ಮೆಂಟ್ ಆಲ್ಮೋಸ್ಟ್ ಫೈನಲ್ ಮಾಡಿದೆ. ಆದರೆ ಆಲ್ರೌಂಡರ್ಸ್ ಮತ್ತು ಬೌಲರ್ಸ್ ವಿಚಾರದಲ್ಲಿ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ಸದ್ಯಕ್ಕೆ ಜಸ್ಪ್ರೀತ್ ಬುಮ್ರಾ ಹೆಸ್ರನ್ನ ಮಾತ್ರ ಲಿಸ್ಟ್ನಲ್ಲಿ ಇಟ್ಟಿರುವಂಥದ್ದು. ಭುವನೇಶ್ವರ್ ಕೂಡ ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡಿದ್ರೂ ವಿಶ್ವಕಪ್ನಲ್ಲಿ ಆಡ್ತಾರಾ ಅನ್ನೋ ಬಗ್ಗೆ ಡೌಟ್ ಇದೆ. ಉಳಿದ ಯಾವುದೇ ಪ್ಲೇಯರ್ಸ್ ಕೂಡ ಕನ್ಫರ್ಮ್ ಆಗಿಲ್ಲ. ಈವನ್ ಐಸಿಸಿ ರ್ಯಾಂಕಿಂಗ್ ಪಟ್ಟಿಯನ್ನ ತೆಗೆದ್ರೂ ಭಾರತದ ಬ್ಯಾಟರ್ಸ್ ಟಾಪ್ನಲ್ಲೇ ಇದ್ದಾರೆ. ಆದ್ರೆ ಬೌಲಿಂಗ್ ಅಂತಾ ಬಂದಾಗ ಆ ಡಾಮಿನೇಷನ್ ಕಾಣ್ತಿಲ್ಲ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಪ್ರದರ್ಶನವೇ ಬೆಸ್ಟ್ ಎಕ್ಸಾಂಪಲ್. ಭಾರತ 2-1 ಅಂತರದಲ್ಲಿ ಸರಣಿ ಗೆದ್ದಿದ್ದರೂ 3 ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು ಬರೋಬ್ಬರಿ 1,052 ರನ್ ಬಿಟ್ಟುಕೊಟ್ಟಿದ್ದಾರೆ. ಸೋ ತಂಡದ ಬೌಲಿಂಗ್ ಎಷ್ಟು ದುರ್ಬಲವಾಗಿದೆ ಅನ್ನೋದು ಇಲ್ಲೇ ಗೊತ್ತಾಗುತ್ತೆ. ಪವರ್ ಪ್ಲೇ ಮತ್ತು ಡೆತ್ ಓವರ್ಗಳಲ್ಲಿ ದಾರಾಳವಾಗಿ ರನ್ಸ್ ಬಿಟ್ಟುಕೊಡ್ತಿದ್ದಾರೆ. ವಿಕೆಟ್ಸ್ ತೆಗೀತಿಲ್ಲ. ಇದೇ ಕಾರಣಕ್ಕೆ ಮಾಜಿ ಕ್ರಿಕೆಟಿಗ ಕೃಷ್ಣಮಾಚಾರಿ ಶ್ರೀಕಾಂತ್ ಅವರು, ಈ ರೀತಿಯ ಸಾಧಾರಣ ಬೌಲಿಂಗ್ ಇಟ್ಟುಕೊಂಡು ಭಾರತ 2027ರ ವಿಶ್ವಕಪ್ ಗೆಲ್ಲುವ ಯಾವುದೇ ಅವಕಾಶವಿಲ್ಲ. ಬೌಲಿಂಗ್ ಬೆಂಚ್ ಸ್ಟ್ರೆಂತ್ ಸುಧಾರಿಸದಿದ್ದರೆ 2007ರ ವಿಶ್ವಕಪ್‌ನಂತೆ 2027ಕ್ಕೂ ಲೀಗ್ ಹಂತದಲ್ಲೇ ಭಾರತ ಹೊರಬೀಳುವ ಭೀತಿ ಎದುರಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾದ್ರೆ ಭಾರತದ ಮುಂದಿರೋ ಬೌಲಿಂಗ್ ಆಪ್ಶನ್ಸ್ ಯಾರೆಲ್ಲಾ? ಯಾಕೆ ಅವ್ರನ್ನ ಫೈನಲ್ ಮಾಡೋದು ಕಷ್ಟ ಆಗ್ತಿದೆ ಅನ್ನೋದನ್ನ ನೋಡೋಣ.
ಬೌಲರ್ಸ್ ಇದ್ರೂ ಭರವಸೆ ಇಲ್ಲ!
ಮೊಹಮ್ಮದ್ ಸಿರಾಜ್ ಏಕದಿನ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಕಡಿಮೆ
ಬೆಸ್ಟ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯಗೆ ಪದೇಪದೆ ಇಂಜುರಿ
ಅರ್ಶದೀಪ್ ಸಿಂಗ್ ಸೆಲೆಕ್ಟ್ ಮಾಡಿದ್ರೂ ಕೆಲವೊಮ್ಮೆ ಬೌಲಿಂಗ್ ದುಬಾರಿ
ಹರ್ಷಿತ್ ರಾಣಾಗೂ ಇಂಜುರಿ, ಹೆಚ್ಚಿನ ಪಂದ್ಯಗಳ ಎಕ್ಸ್ ಫಿರಿಯನ್ಸ್ ಇಲ್ಲ
ಗುರ್ನೂರ್ ಬ್ರಾರ್, ಆಕಿಬ್ ನಬಿ, ನಮನ್ ಧೀರ್ ಗೆ ಪ್ರೆಶರ್ ನಲ್ಲಿ ಕಷ್ಟ
ಮೊಹಮ್ಮದ್ ಶಮಿ, ಭುವನೇಶ್ವರ್ ರಂಥ ಅನುಭವಿಗಳನ್ನ ಸೆಲೆಕ್ಟ್ ಮಾಡಲ್ಲ
ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್ ನಡುವೆ ಗೊಂದಲ
ಜಡ್ಡುಗೆ ವಯಸ್ಸು, ಅಕ್ಷರ್ ಪಟೇಲ್, ಸುಂದರ್, ರೆಡ್ಡಿ, ದುಬೆ ಕನ್ಸಿಸ್ಟೆನ್ಸಿ ಬಗ್ಗೆ ಡೌಟ್
ಭುವನೇಶ್ವರ್ ಕುಮಾರ್ ತಂಡಕ್ಕೆ ಕಂ ಬ್ಯಾಕ್ ಮಾಡಿದ್ರೂ ವಿಶ್ವಕಪ್ ಬಗ್ಗೆ ಗೊಂದಲ
ಸೋ ಇಲ್ಲಿ ಮಿಡಲ್ ಆರ್ಡರ್ ಮತ್ತು ಲೋವರ್ ಆರ್ಡರ್ ನಲ್ಲಿ ಭಾರತದ ಪರ ಆಡೋಕೆ ಸಾಕಷ್ಟು ಪ್ಲೇಯರ್ಗಳ ದಂಡೇ ಇದೆ. ಆದ್ರೆ ವಿಶ್ವಕಪ್ನಂತ ಟೂರ್ನಮೆಂಟ್ನಲ್ಲಿ ಬಿಗ್ ಇಂಪ್ಯಾಕ್ಟ್ ಮಾಡಬಲ್ಲ ಪ್ಲೇಯರ್ಸ್ ಕೊರತೆ ಎದ್ದು ಕಾಣ್ತಿದೆ. ಮೇನ್ಲಿ ಜಸ್ಪ್ರೀತ್ ಬುಮ್ರಾಗೆ ಇಂಜುರಿ ಆದ್ರೂ ಅಥವಾ ರೆಸ್ಟ್ ನೀಡಿದ್ರೋ ಅವ್ರ ಆಬ್ಸೆನ್ಸ್ನಲ್ಲಿ ಬೌಲಿಂಗ್ ಯುನಿಟ್ ಲೀಡ್ ಮಾಡಿ ಗೆಲ್ಲಿಸ್ತಾರೆ ಎನ್ನುವಂಥ ಇಂಪ್ಯಾಕ್ಟ್ ಕ್ರಿಯೇಟ್ ಮಾಡಿರೋ ಯಾವೊಬ್ಬ ಬೌಲರ್ ಕೂಡ ಇಲ್ಲ. ಇದೇ ಈಗ ಬಿಸಿಸಿಐಗೆ ಅತಿದೊಡ್ಡ ಪ್ರಶ್ನೆಯಾಗಿದೆ. ಬ್ಯಾಟಿಂಗ್ ಕ್ಲಾರಿಟಿ ಸಿಕ್ರೂ ಇನ್ನುಳಿದ ಸ್ಲಾಟ್ಗಳದ್ದೇ ತಲೆಬಿಸಿ ಹೆಚ್ಚಿಸಿದೆ.

ನೋಡಿರಿ

