3ನೇ ಸ್ಲಾಟ್.. 5 ಪಂದ್ಯಗಳಿಂದ 78 ರನ್ – RCBಗೆ ಭಾರವಾದ್ರಾ ದೇವದತ್ ಪಡಿಕ್ಕಲ್?

ಚಿನ್ನಸ್ವಾಮಿ ಮೈದಾನ ಕೆಎಲ್ ರಾಹುಲ್ ಮತ್ತು ಪಡಿಕ್ಕಲ್ ಇಬ್ಬರಿಗೂ ಹೋಂ ಪಿಚ್. ಬಟ್ ರಾಹುಲ್ 93 ರನ್ ಗಳಿಸಿ ಸೂಪರ್ ಮ್ಯಾನ್ ಆದ್ರೆ ಪಡಿಕ್ಕಲ್ ಜಸ್ಟ್ 1 ರನ್ಗೆ ಔಟ್ ಆಗಿ ಝೀರೋ ಆಗಿದ್ರು. ಈ ಪರ್ಫಾಮೆನ್ಸ್ ಬಳಿಕ ಕನ್ನಡಿಗರೇ ಪಡಿಕ್ಕಲ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕೊಟ್ಟಿರೋ ಅವಕಾಶವನ್ನ ಕೈಯಾರೆ ಕಳೆದುಕೊಳ್ತಿರೋ ಪಡಿಕ್ಕಲ್ ಇದೀಗ ಚಾನ್ಸ್ ಕಳೆದುಕೊಳ್ಳೋ ಆತಂಕದಲ್ಲಿದ್ದಾರೆ.
ಇದನ್ನೂ ಓದಿ : ಮುಂಬೈ ದಾಳಿಯ ಮಾಸ್ಟರ್ಮೈಂಡ್ ರಾಣಾಗೆ ಭಾರಿ ಭದ್ರತೆ – ಕೋಟೆಯಾಗಿ ಬದಲಾದ NIA ಕಚೇರಿ
ಸದ್ಯ ಪಡಿಕ್ಕಲ್ ರನ್ನು ಬ್ಯಾಟಿಂಗ್ ಆರ್ಡರ್ ನಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಸಲಾಗ್ತಿದೆ. ಮುೂರು ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರುಬಳಗ ಸೇರಿರುವ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಳಸಿಕೊಳ್ಳಲಾಗುತ್ತಿದೆ. ಆದ್ರೆ ಪಡಿಕ್ಕಲ್ ಬಿಗ್ ಇನ್ನಿಂಗ್ಸ್ ಕಲೆ ಹಾಕೋಕೆ ಸಾಧ್ಯವಾಗ್ತಿಲ್ಲ. ಕಳೆದ ಐದು ಪಂದ್ಯಗಳಿಂದ 78 ರನ್ ಅಷ್ಟೇ ಕಲೆ ಹಾಕಿದ್ದಾರೆ. ಕೆಕೆಆರ್ ವಿರುದ್ಧದ ಮೊದಲ ಪಂದ್ಯದಲ್ಲಿ 10 ಬಾಲ್ ಗೆ 10 ರನ್ ಗಳಿಸಿದ್ರೆ ಸಿಎಸ್ ಕೆ ವಿರುದ್ಧ 14 ಬಾಲ್ ಗಳಲ್ಲಿ 27 ರನ್ ಬಾರಿಸಿದ್ರು. ಬಟ್ ಗುಜರಾತ್ ವಿರುದ್ಧದ ಪಂದ್ಯದಲ್ಲಿ ಚಿನ್ನಸ್ವಾಮಿಯಲ್ಲೇ 3 ರನ್ ಅಷ್ಟೇ ಬಾರಿಸಿದ್ರು. ಮುಂಬೈನಲ್ಲಿ 37 ರನ್ ಸಿಡಿಸಿ ಬೆಟರ್ ಪರ್ಫಾಮೆನ್ಸ್ ಕೊಟ್ರೂ ಡಿಸಿ ವಿರುದ್ಧ ಹೋಂ ಗ್ರೌಂಡ್ ನಲ್ಲಿ ಮತ್ತೆ ಫ್ಲ್ಯಾಪ್ ಆಗಿದ್ದಾರೆ. 8 ಬಾಲ್ಗಳನ್ನ ಫೇಸ್ ಮಾಡಿ ಜಸ್ಟ್ 1 ರನ್ಗೆ ಆಟ ಮುಗಿಸಿದ್ರು. ತಂಡಕ್ಕೆ ಮಾತ್ರವಲ್ಲ ಕನ್ನಡಿಗರಿಗೂ ನಿರಾಸೆ ಮೂಡಿಸಿದ್ರು.
ದೇವದತ್ ಪಡಿಕ್ಕಲ್ ಮೂಲತಃ ಕೇರಳದವರು. ಆದ್ರೆ ಚಿಕ್ಕವಯಸ್ಸಿನಿಂದ ಬೆಂಗಳೂರಿನಲ್ಲೇ ನೆಲೆಸಿ ಬೆಂಗಳೂರಿಗನೇ ಆಗಿ ಬೆಳೆದ ದೇವದತ್ ಪಡಿಕ್ಕಲ್ ಚಿಕ್ಕವಯಸ್ಸಿನಿಂದಲೂ ಆರ್‌ಸಿಬಿ ಫ್ಯಾನ್.. 2020ರ ಐಪಿಎಲ್‌ನಲ್ಲಿ RCB ಪರ ಸ್ಫೋಟಕ ಬ್ಯಾಟಿಂಗ್ ಮಾಡಿ ದೇಶದ ಮನೆ ಮಾತಾಗಿದ್ದರು.. ಬಟ್ ಆ ನಂತ್ರ ಬೇರೆ ಟೀಂ ಸೇರಬೇಕಾಯ್ತು. ಈ ಮಧ್ಯೆ 2022ರಲ್ಲಿ ಪಡಿಕ್ಕಲ್‌ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ವೈದ್ಯರ ಬಳಿ ಪರೀಕ್ಷಿಸಿದಾಗ ಅವರಿಗೆ ಅಲ್ಸೈಟಿಸಿ ಕೊಲೈಟಿಸ್ ಎಂಬ ಆರೋಗ್ಯ ಸಮಸ್ಯೆ ಇರುವುದು ತಿಳಿದು ಬರುತ್ತದೆ. ಅಂದರೆ ಕರುಳಿನ ಮೇಲೆ ಅಲ್ಸರ್ ಆಗೋದು. ಇದ್ರಿಂದ ಯಾವಾಗಲೂ ಆಯಾಸ ಕಾಡುತ್ತಿತ್ತು. ಕೇವಲ ಎರಡೇ ತಿಂಗಳಲ್ಲಿ 10-12 ಕೆಜಿ ತೂಕ ಇಳಿಕೆಯಾಗಿ ಹೋಗಿತ್ತು. ಹೀಗಾಗಿ ಮೂರ್ನಾಲ್ಕು ತಿಂಗಳು ಕ್ರಿಕೆಟ್ನಿಂದಲೇ ದೂರ ಉಳೀಬೇಕಾಗಿತ್ತು. ಅದೃಷ್ಟವಶಾತ್ ಎಲ್ಲಾ ಸಮಸ್ಯೆಗಳಿಂದ ಗುಣಮುಖವಾಗಿ ದೇವದತ್ ಪಡಿಕ್ಕಲ್ ಮತ್ತೆ ಆರ್‌ಸಿಬಿಯಲ್ಲಿ ಆಡ್ತಿದ್ದಾರೆ. ಫಾರ್ಮ್‌ನಲ್ಲಿ ಇಲ್ಲ ಎನ್ನುವ ಟೀಕೆಗಳಿದ್ದರೂ ಸಾಕಷ್ಟು ಏರಿಳಿತಗಳನ್ನ ನೋಡ್ತಿದ್ದಾರೆ. ಆದ್ರೆ ಈಗಾಗ್ಳೇ 2 ಸೋಲುಗಳನ್ನ ಕಂಡಿರೋ ಆರ್‌ಸಿಬಿ ಮುಂದಿನ ದಿನಗಳಲ್ಲಿ ಪಡಿಕ್ಕಲ್‌ಗೆ ಅವಕಾಶ ಕೊಡುತ್ತಾ ಅಥವಾ ಕೊಟ್ರೂ ಪಡಿಕ್ಕಲ್ ಅದನ್ನ ಹೇಗೆ ಬಳಸಿಕೊಳ್ತಾರೆ ಅನ್ನೊದೇ ಈಗಿರೋ ಪ್ರಶ್ನೆ.