ಅರಮನೆ ನಗರಿಯಲ್ಲಿ ಡಬಲ್‌ ಸಂಭ್ರಮ – ಯದುವೀರ್, ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ

ಅರಮನೆ ನಗರಿಯಲ್ಲಿ ಡಬಲ್‌ ಸಂಭ್ರಮ – ಯದುವೀರ್, ತ್ರಿಷಿಕಾ​ ದಂಪತಿಗೆ 2ನೇ ಮಗು ಜನನ

ನಾಡಿನಾದ್ಯಂತ ದಸರಾ ಸಂಭ್ರಮ ಮನೆ ಮಾಡಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಜೋರಾಗಿದೆ. ಇವತ್ತು ಶರನ್ನವರಾತ್ರಿಯ ಒಂಬತ್ತನೇ ದಿನ. ಅಂಬಾವಿಲಾಸ ಅರಮನೆಯಲ್ಲಿ ಸಂಭ್ರಮ ಕಳೆಗಟ್ಟಿದ್ದು, ಆಯುಧ ಪೂಜೆಯ ಸಡಗರ ಜೋರಾಗಿದೆ. ಇದೀಗ ಅರಮನೆಯಲ್ಲಿ ಡಬಲ್‌ ಖುಷಿ.  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್,  ಪತ್ನಿ ತ್ರಿಷಿಕಾ ಎರಡನೇ ಗಂಡು ಮಗು ಜನ್ಮ ನೀಡಿದ್ದಾರೆ.

ಇದನ್ನೂ ಓದಿ: ಉಪ್ಪು, ಕಾರು, ಬಟ್ಟೆ.. ಟಾಟಾಮಯ! – ಸಿರಿವಂತಿಕೆಯಲ್ಲೂ ಸಂತನಂತಿದ್ರು ರತನ್

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ದೇವಿಗೆ ಮೊದಲೇ ಗಂಡು ಮಗು ಜನಿಸಿತ್ತು. ಇದೀಗ 2ನೇ ಮಗು ಜನನವಾಗಿದ್ದು ಆಯುಧ ಪೂಜೆ ದಿನದಂದು ರಾಜರ ಕುಟುಂಬದಲ್ಲಿ ಸಂತಸ ಮತ್ತಷ್ಟು ಹೆಚ್ಚಾದಂತೆ ಆಗಿದೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಕುಮಾರಿ ದೇವಿ ಅವರು 2ನೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಲ್ಲಿ ತಾಯಿ, ಮಗು ಇಬ್ಬರು ಆರೋಗ್ಯವಾಗಿದ್ದಾರೆ.

ವಿಜಯದಶಮಿ ಸಡಗರದಲ್ಲಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಶುಭಸುದ್ದಿ ಸಿಕ್ಕಿದೆ. ಅಲ್ಲದೇ ದಸರಾ ಹಿನ್ನೆಲೆಯಲ್ಲಿ ಕಳೆದ ವಾರದಿಂದ ಅರಮನೆಯಲ್ಲಿ ಸಂಭ್ರಮ ಹೆಚ್ಚಿದೆ. ಬೆನ್ನಲ್ಲೇ ಇದೀಗ 2ನೇ ಮಗು ಜನನ ಆಗಿರುವುದು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್​ಗೆ ಡಬಲ್ ಖುಷಿ ಸಿಕ್ಕಂತೆ ಆಗಿದೆ. ಇದೇ ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಿಂದ ಗೆದ್ದು ಸಂಸದರಾಗಿದ್ದರು. ಒಟ್ಟಿನಲ್ಲಿ 2024 ರಾಜರಿಗೆ ಒಲಿದು ಬಂದಂತೆ ಇದೆ.

Shwetha M

Leave a Reply

Your email address will not be published. Required fields are marked *