ರಾತ್ರೋರಾತ್ರಿ ಮಾಯವಾಯ್ತು ರಸ್ತೆ – ಗ್ರಾಮಸ್ಥರಿಂದ ರೋಡ್ ಗಾಗಿ ಹುಡುಕಾಟ
ಬಂಕಾ: ಪ್ರತಿಯೊಂದು ಊರಿನಲ್ಲೂ ಆಗಾಗ ಕಳ್ಳತನ ನಡೆಯುತ್ತವೆ. ಕಳ್ಳರು ಬೆಳೆಬಾಳುವ ಚಿನ್ನಾಣರಣ, ಬೆಳ್ಳಿ, ಹಣ, ನಗದು ನಾಣ್ಯಗಳನ್ನು ಕಳ್ಳತನ ಮಾಡುತ್ತಾರೆ. ಆದರೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಂಕಾದಲ್ಲಿ ಸುಮಾರು 2 ಕಿಲೋ ಮೀಟರ್ ಉದ್ದದ ರಸ್ತೆಯನ್ನೇ ರಾತ್ರೋರಾತ್ರಿ ದರೋಡೆ ಮಾಡಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ಗ್ರಾಮದಲ್ಲಿ ನಿನ್ನೆ ರಾತ್ರಿವರೆಗೂ ಆ ರಸ್ತೆಯನ್ನು ಗ್ರಾಮಸ್ಥರು ನೋಡಿದ್ದರಂತೆ, ಅದರ ಮೇಲೆ ನಡೆದಾಡಿದ್ದರು, ವಾಹನ ಓಡಿಸಿದ್ದರಂತೆ. ಆದರೆ ಬೆಳಗ್ಗೆ ಎದ್ದು ನೋಡಿದರೆ ರಸ್ತೆಯೇ ಕಣ್ಮರೆಯಾಗಿದೆ ಎಂದು ದೂರಿದ್ದಾರೆ. ಈ ಘಟನೆ ಬಿಹಾರದ ಬಂಕಾ ಜಿಲ್ಲೆಯ ರಾಜೌನ್ ಬ್ಲಾಕ್ ಅಡಿಯಲ್ಲಿ ಖರೌನಿಯಿಂದ ಖದಂಪುರ್ ಗ್ರಾಮದಲ್ಲಿ ನಡೆದಿದೆ.
ಸುಮಾರು 2 ಕಿಲೋ ಮೀಟರ್ ಉದ್ದದ ರಸ್ತೆ ಇದಾಗಿದ್ದು, ಎರಡು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಈ ರಸ್ತೆ ಡಾಂಬರು ಕಂಡಿಲ್ಲ. 200 ಮೀಟರ್ ವರೆಗೆ ಮಾತ್ರ ಪಿಸಿಸಿ ಕಾಮಗಾರಿ ನಡೆದಿದೆ. ಖಾದಂಪುರ ಗ್ರಾಮದ ಜನರು ಈ ರಸ್ತೆಯನ್ನೇ ಸಂಚಾರಕ್ಕೆ ಅವಲಂಭಿಸುತ್ತಿದ್ದರು. ಆದರೆ ಗ್ರಾಮದಲ್ಲಿ ನಿನ್ನೆ ರಾತ್ರಿವರೆಗೂ ಗ್ರಾಮಸ್ಥರು ನೋಡಿದ್ದರಂತೆ, ಅದರ ಮೇಲೆ ನಡೆದಾಡಿದ್ದರು, ವಾಹನ ಓಡಿಸಿದ್ದರಂತೆ. ಆದರೆ ಬೆಳಗ್ಗೆ ಎದ್ದು ನೋಡಿದರೆ ರಸ್ತೆಯೇ ಮಂಗಮಾಯವಾಗಿದ್ದು, ಎಲ್ಲರೂ ರಸ್ತೆ ಎಲ್ಲಿ ಮಾಯವಾಯಿತು ಎಂದು ಹುಡುಕಾಡಿದ್ದಾರೆ.
ಇದನ್ನೂ ಓದಿ: ಕೊಕ್ಕೋ ಕೂಗಿಗೆ ಗರಂ ಆದ ಡಾಕ್ಟರ್ – ಕೋಳಿ ವಿರುದ್ದ ಪೊಲೀಸ್ ಕಂಪ್ಲೇಂಟ್!
ಈ ರಸ್ತೆಯಲ್ಲಿ ಖೈರಾನಿ ಗ್ರಾಮದ ಕೆಲ ಪುಂಡರು ರಾತ್ರೋರಾತ್ರಿ ಉಳುಮೆ ಮಾಡಿ ಗೋಧಿ ಬಿತ್ತಿದ್ದರು. ರಸ್ತೆಯನ್ನು ಕಿತ್ತು, ಭೂಮಿ ಸಮತಟ್ಟು ಮಾಡಿ, ಅಲ್ಲಿ ಉಳುಮೆ ಮಾಡಿ, ಗೋಧಿ ಹಾಕಿದ್ದರು. ಹೀಗಾಗಿ ರಸ್ತೆ ಇದ್ದ ಕಡೆ ಈಗ ಹೊಲಗಳೇ ಕಾಣುತ್ತಿವೆ. ಸುಮಾರು ಒಂದು ಕಿಲೋಮೀಟರ್ ರಸ್ತೆಯನ್ನು ಉಳುಮೆ ಮಾಡಿ ಗೋಧಿ ಬಿತ್ತನೆ ಮಾಡಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ರಸ್ತೆಯಲ್ಲಿ ಮುಳ್ಳಿನ ಪೊದೆಗಳನ್ನು ಹಾಕಲಾಗಿದೆ. ಇದರಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಪುನಃ ಆ ರಸ್ತೆ ನಿರ್ಮಿಸಿಕೊಡಿ ಊರಿನ ಮುಖಂಡರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಖರೌನಿ ಗ್ರಾಮದ ಕೆಲ ಜನರು ಇದು ತಮ್ಮ ರಸ್ತೆ, ಈ ಜಮೀನು ನಮಗೆ ಸೇರಿದೆ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಈ ಜಮೀನು ನಕ್ಷೆಯಲ್ಲಿಯೂ ಇದೆ. ಆದರೆ ಅವರು ಬಲವಂತವಾಗಿ ಖಾಸಗಿ ಭೂಮಿಯನ್ನು ರಸ್ತೆಯನ್ನಾಗಿ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲ್ಲಿನ ಸಿಒ ಮೊಯಿನುದ್ದೀನ್ ಮಾತನಾಡಿ, ರಸ್ತೆ ಒತ್ತುವರಿ ವಿಚಾರ ನನ್ನ ಗಮನಕ್ಕೆ ಬಂದಿದೆ. ಕಂದಾಯ ನೌಕರನನ್ನು ಕಳುಹಿಸಿ ತನಿಖೆ ನಡೆಸಲಾಗುವುದು. ತನಿಖೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.