ಅಂಕಲ್ಸ್ ಟೀಂ ಅಲ್ಲ.. 2K ಕಿಡ್ಸ್ ಆರ್ಮಿ – CSKಯಲ್ಲಿ 20ರ ಹುಡುಗರದ್ದೇ ಹವಾ
ಧೋನಿ ಪಡೆಯಲ್ಲಿ 35+ ಯಾರು?

ಐಪಿಎಲ್ ನಲ್ಲಿ ಅಂಕಲ್ಸ್ ಟೀಂ ಅಂತಾ ಯಾರನ್ನ ಕರೀತಾರೆ ಅಂದ್ರೆ ಸಿಎಸ್ಕೆ ಅಂತಾ ಥಟ್ ಅಂತಾ ಹೇಳಿಬಿಡ್ತೀರಿ. ಐಪಿಎಲ್ ಟೈಮಲ್ಲಂತೂ ಅಂಕಲ್ನ ಹೊಡಿತೀವಿ ಸುಬ್ಬಿ ಅನ್ನೋ ಪೋಸ್ಟರ್ಗಳನ್ನ ನೋಡೇ ಇರ್ತೀರಿ. ಬಟ್ ಇನ್ಮುಂದೆ ಅವ್ರನ್ನ ಹಾಗೆ ಕರೆಯೋಕ್ ಆಗಲ್ಲ. ಯಾಕಂದ್ರೆ ಯೆಲ್ಲೋ ಆರ್ಮಿಯಲ್ಲೀಗ ಜೆನ್ಜಿ ಕಿಡ್ಗಳ ಹವಾ ಶುರುವಾಗಿದೆ. ಮಿನಿ ಆಕ್ಷನ್ನಲ್ಲಿ ಯಂಗ್ ವೆಪನ್ಸ್ ಮೇಲೆ ಕೋಟಿ ಕೋಟಿ ಇನ್ವೆಸ್ಟ್ ಮಾಡಿದ್ದಾರೆ. ಅನ್‌ಕ್ಯಾಪ್ಡ್ ಪ್ಲೇಯರ್ಸ್ ಮೇಲೆ ಹೈಯೆಸ್ಟ್ ಬಿಡ್ ಮಾಡಿದ್ದಾರೆ.
ಇದನ್ನೂ ಓದಿ : ಬುಮ್ರಾ ಸಿಟ್ಟಿಗೆ ಫ್ಯಾನ್ಸ್ ಫೋನ್ ಪುಡಿ – ಏರ್‌ಪೋರ್ಟ್‌ನಲ್ಲಿ ಆಗಿದ್ದೇನು ಗೊತ್ತಾ?
ಐಪಿಎಲ್ನ ಐದು ಬಾರಿ ಚಾಂಪಿಯನ್ ಟೀಂ ಆಗಿರೋ ಸಿಎಸ್ಕೆ ಮಿನಿ ಆಕ್ಷನ್ನಲ್ಲಿ 9 ಪ್ಲೇಯರ್ಗಳನ್ನ ಖರೀದಿ ಮಾಡಿದೆ. ಅದ್ರಲ್ಲೂ ಅನ್‌ಕ್ಯಾಪ್ಡ್ ಪ್ಲೇಯರ್ಗಳಾದ ಪ್ರಶಾಂತ್ ವೀರ್ ಮತ್ತು ಕಾರ್ತಿಕ್ ಶರ್ಮಾಗೆ ತಲಾ ₹14.20 ಕೋಟಿ ಕೊಟ್ಟಿರೋದೇ ಹಲ್ಚಲ್ ಎಬ್ಬಿಸಿದೆ. ಲಾಸ್ಟ್ ಸೀಸನಲ್ಲಿ ಇಂಜುರಿ, ಕಳಪೆ ಫಾರ್ಮ್ ಅಂತಾ ಹೊಡೆತ ತಿಂದ್ರೂ ಈ ಸಲ ಅದನ್ನೆಲ್ಲಾ ಮೆಟ್ಟಿ ಗೆಲುವಿನ ಟ್ರ್ಯಾಕ್ಗೆ ಬರೋ ಪ್ಲ್ಯಾನ್ನಲ್ಲಿದೆ. ಈ ಸಲ ಇಂಟ್ರೆಸ್ಟಿಂಗ್ ಅನ್ಸಿದ್ದು ಯಂಗ್ಸ್ಟರ್ಸ್ ಮೇಲೆ ಜಾಸ್ತಿ ಕಾನ್ಸಂಟ್ರೇಟ್ ಮಾಡ್ತಿರೋದು.
2K ಕಿಡ್ಸ್ ಮೇಲೆ ಹೆಚ್ಚಿನ ಬಿಡ್ ಮಾಡಿದ ಸಿಎಸ್ ಕೆ!
ಸಿಎಸ್ಕೆ ತಂಡದಲ್ಲಿ ಸದ್ಯ ಯಂಗ್ಸ್ಟರ್ಸ್ ಮೇಲೆ ಜಾಸ್ತಿ ಬಿಡ್ಡಿಂಗ್ ನಡೆದಿದೆ. ಕಳೆದ ವರ್ಷವೇ 18 ವರ್ಷದ ಆಯುಷ್ ಮಾತ್ರೆ ಸೌಂಡ್ ಮಾಡಿದ್ರು. ಮುಂದಿನ ಸೀಸನ್ನಲ್ಲೂ ಆಯುಷ್ ಇನ್ನಿಂಗ್ಸ್ ಆರಂಭಿಸೋ ಚಾನ್ಸ್ ಇದೆ. ಹಾಗೇ 20 ವರ್ಷದ ನೂರ್ ಅಹ್ಮದ್, 25 ವರ್ಷದ ಅನ್ಶುಲ್ ಕಾಂಜೋಜ್, 22 ವರ್ಷದ ಡೆವಾಲ್ಡ್ ಬ್ರೆವಿಸ್ ಇದ್ರು. ಈಗ 20 ವರ್ಷದ ಪ್ರಶಾಂತ್ ವೀರ್ ಹಾಗೇ 19 ವರ್ಷದ ಕಾರ್ತಿಕ್ ಶರ್ಮಾಗೆ ತಲಾ 14.20 ಕೋಟಿ ನೀಡಿ ಖರೀದಿ ಮಾಡಿದ್ದಾರೆ. ಹಾಗೇ 23 ವರ್ಷದ ಜಾಕ್ ಫೋಕ್ಸ್ಗೂ ಬಿಡ್ ಮಾಡಿದ್ದಾರೆ. ಹೀಗಾಗಿ ಸಿಎಸ್ಕೆ ಯುವಕರ ದಂಡೇ ಇದೆ. ಅದ್ರಲ್ಲೂ ಪ್ರಶಾಂತ್ ಮತ್ತು ಕಾರ್ತಿಕ್ ಅಂತೂ ಸೆಂಟ್ರ್ ಆಫ್ ಅಟ್ರ್ಯಾಕ್ಷನ್ ಆಗಿದ್ದಾರೆ. ಯಾಕಂದ್ರೆ 43 ಕೋಟಿ ಬಜೆಟ್ನಲ್ಲಿ ಮಿನಿ ಆಕ್ಷನ್ಗೆ ಬಂದ ಯೆಲ್ಲೋ ಆರ್ಮಿ ಈ ಇಬ್ಬರಿಗೆ 28.4 ಕೋಟಿ ಕೊಟ್ಟಿದೆ.
ಜಡ್ಡು ಸ್ಥಾನಕ್ಕೆ ಪ್ರಶಾಂತ್ ವೀರ್ ಪಿಕ್ ಮಾಡಿದ್ರಾ?
ಯೆಸ್. ಸಿಎಸ್ಕೆ ಮಿನಿ ಆಕ್ಷನ್ನೂ ಮುನ್ನ ಸ್ಟಾರ್ ಆಕ್ರೌಂಡರ್ ರವೀಂದ್ರ ಜಡೇಜಾರನ್ನ ಆರ್ಆರ್ಗೆ ಟ್ರೇಡ್ ಮಾಡಿಕೊಟ್ಟಿತ್ತು. ಹೀಗಾಗಿ ಜಡ್ಡು ಜಾಗಕ್ಕೆ ಬೆಸ್ಟ್ ಪಿಕ್ ಮಾಡ್ಲೇಬೇಕಿತ್ತು. ಹೀಗಾಗಿ ಯುವ ಆಲ್ರೌಂಡರ್ ಉತ್ತರ ಪ್ರದೇಶದ ಎಡಗೈ ಸ್ಪಿನ್ ಆಲ್-ರೌಂಡರ್ ಪ್ರಶಾಂತ್ ವೀರ್ಗೆ 14.2 ಕೋಟಿ ಬಿಡ್ ಮಾಡಿ ಖರೀದಿಸಿದ. ನಂಬರ್ 7ನೇ ಸ್ಥಾನಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಮಾಡುವ ಆಟಗಾರ ಬೇಕಿತ್ತು. ಅದಕ್ಕಾಗಿ ಪ್ರಶಾಂತ್ರನ್ನ ಖರೀದಿ ಮಾಡಿದ್ದಾಗಿ ಸಿಎಸ್ಕೆ ಸಿಇಒ ತಿಳಿಸಿದ್ದಾರೆ. ಪ್ರಶಾಂತ್ ವೀರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 112 ರನ್ (ಸ್ಟ್ರೈಕ್ ರೇಟ್ 170) ಮತ್ತು 9 ವಿಕೆಟ್ (ಎಕಾನಮಿ 6.76) ಪಡೆದಿದ್ದಾರೆ. ಇನ್ನು UP T20 ಲೀಗ್‌ನಲ್ಲಿ 320 ರನ್ (ಸ್ಟ್ರೈಕ್ ರೇಟ್ 155) ಗಳಿಸಿ ಸದ್ದು ಮಾಡಿದ್ರು.
ತಾತನ ಪೆನ್ಷನ್ ದುಡ್ಡಿನಲ್ಲಿ ಕ್ರಿಕೆಟ್ ಟ್ರೈನಿಂಗ್!
ಅಷ್ಟಕ್ಕೂ ಪ್ರಶಾಂತ್ ವೀರ್ ಹಿನ್ನೆಲೆ ಕೂಡ ಇಂಟ್ರೆಸ್ಟಿಂಗ್ ಆಗಿದೆ. ಶಿಕ್ಷಕನ ಮಗನಾಗಿರೋ ಈತ ಮಿಡಲ್ ಕ್ಲಾಸ್ ಹುಡುಗ ತನ್ನ ಕ್ರಿಕೆಟ್ ಪ್ರತಿಭೆಯಿಂದಲೇ ಕೋಟ್ಯಾಧಿತಿಯಾಗಿ ಹೊರಹೊಮ್ಮಿದ್ದಾರೆ. ಪ್ರಶಾಂತ್ ವೀರ್ ತಂದೆ ಪಾರ್ಟ್‌ಟೈಮ್ ಶಿಕ್ಷಕ ವೃತ್ತಿಯಲ್ಲಿದ್ದಾರೆ. ತಾತನ ಪೆನ್ಷನ್ ದುಡ್ಡಿನಲ್ಲಿ ಕ್ರಿಕೆಟ್ ಟ್ರೈನಿಂಗ್ ಪಡೆಯುತ್ತಾರೆ. ತಾತ ತೀರಿಹೋದ ಮೇಲೆ ಕ್ರಿಕೆಟ್ ತರಭೇತಿಗೆ ದುಡ್ಡು ಕಟ್ಟಲಾಗದೇ ಕಷ್ಟ ಪಟ್ಟಿದ್ರು.ಈ ವೇಳೆ ಜೀವದ ಗೆಳೆಯನಿಂದ ಹಣದ ಸಹಾಯ ಸಿಗುತ್ತದೆ. ಕೊನೆಗೂ ಪ್ರಶಾಂತ್ ವೀರ್, ದೇಶಿ ಟೂರ್ನಿಗಳಲ್ಲಿ ಒಂದೊಂದೇ ಸಾಧನೆಯ ಹೆಜ್ಜೆ ಇಡುತ್ತಾ ಈಗ ಸಿಎಸ್ಕೆಗೆ ದುಬಾರಿ ಮೊತ್ತಕ್ಕೆ ಸೇರಿದ್ದಾರೆ.
ಧೋನಿ ಜಾಗಕ್ಕಾಗಿ ಕಾರ್ತಿಕ್ ಶರ್ಮಾ ಆಯ್ಕೆ!
ಇನ್ನು ಸಿಎಸ್ಕೆ ಫ್ರಾಂಚೈಸಿ 19 ವರ್ಷದ ರಾಜಸ್ಥಾನದ ವಿಕೆಟ್‌ಕೀಪರ್-ಬ್ಯಾಟರ್ ಕಾರ್ತಿಕ್ ಶರ್ಮಾರನ್ನ ಆಯ್ಕೆ ಮಾಡಿದೆ. ಕಾರ್ತಿಕ್ ಕೆಳ ಕ್ರಮಾಂಕದ ಸ್ಫೋಟಕ ಬ್ಯಾಟರ್ ಜೊತೆಗೆ ವಿಕೆಟ್ ಕೀಪರ್ ಆಗಿದ್ದಾರೆ. ಧೋನಿ ನಿವೃತ್ತಿಯ ನಂತರ ತಂಡಕ್ಕೆ ವಿಕೆಟ್ ಕೀಪರ್ ಹಾಗೂ ಕೆಳ ಕ್ರಮಾಂಕದಲ್ಲಿ ಫಿನಿಷರ್ ಅಗತ್ಯವಿದೆ. ಹಾಗಾಗಿ ಕಾರ್ತಿಕ್ರನ್ನ ನಾವು ಭವಿಷ್ಯದ ದೃಷ್ಟಿಯಿಂದ ಖರೀದಿಸಿದ್ದೇವೆ. ಮುಷ್ತಾಕ್ ಅಲಿ ಟ್ರೋಫಿಯಲ್ಲಿ 133 ರನ್ (ಸ್ಟ್ರೈಕ್ ರೇಟ್ 160)ಸೇರಿ ಒಟ್ಟಾರೆ ಟಿ20ಯಲ್ಲಿ 334 ರನ್ (ಸ್ಟ್ರೈಕ್ ರೇಟ್ 164, 28 ಸಿಕ್ಸರ್‌ಗಳು) ಸಿಡಿಸಿದ್ದಾರೆ. ತಂಡದ ಸೆಟ್‌ಅಪ್‌ನಲ್ಲಿ ಹಲವು ಯುವಕರು ಬರುತ್ತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಬಂದ ಬದಲಾವಣೆಗಳನ್ನು ಗಮನಿಸಿ ನಾವು ಅದಕ್ಕೆ ಹೊಂದಿಕೊಳ್ಳುತ್ತಿದ್ದೇವೆ ಎಂದು ವಿಶ್ವನಾಥನ್ ತಿಳಿಸಿದ್ದಾರೆ.
ಸಿಎಸ್ಕೆಯಲ್ಲಿ ಇನ್ನೇನು ಧೋನಿ ಯುಗಾಂತ್ಯ ಹತ್ತಿರದಲ್ಲಿದೆ. ಹೀಗಾಗಿ ಭವಿಷ್ಯದ ದೃಷ್ಟಿಯಿಂದ ಯುವಪಡೆ ಸಾಮ್ರಾಜ್ಯವನ್ನೇ ಕಟ್ಟುತ್ತಿದ್ದಾರೆ. ಇದೀಗ ಹೈಯೆಸ್ಟ್ ಬೆಲೆಗೆ ಇಬ್ಬರು ಆಟಗಾರರೂ ಬಂದಿದ್ದಾರೆ. ಇನ್ನು ಸಿಎಸ್ಕೆಯಲ್ಲಿ 35 ಪ್ಲಸ್ ಇರೋದೇ ಒಬ್ಬ ಆಟಗಾರ ಅದೂ ಕೂಡ ಎಂಎಸ್ ಧೋನಿ. 44 ವರ್ಷದ ಧೋನಿ ಮಾತ್ರವೇ ಇದ್ದು ಉಳಿದವ್ರೆಲ್ಲಾ ಆಲ್ಮೋಸ್ಟ್ ಬಿಲೋ 30 ಇದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಟುಕೆ ಕಿಡ್ಸ್ ಜೊತೆ ಹೇಗೆ ಪರ್ಫಾಮೆನ್ಸ್ ಕೊಡ್ತಾರೆ ಅನ್ನೋ ಕ್ಯೂರಿಯಾಸಿಟಿಯೂ ಇದೆ.

ನೋಡಿರಿ

