ಒಂದು ನಿಂಬೆಹಣ್ಣು ₹1.4 ಲಕ್ಷಕ್ಕೆ ಹರಾಜು! – 17ನೇ ಶತಮಾನದ ಈ ಲೆಮನ್‌ನಲ್ಲಿರೋ ವಿಶೇಷತೆ ಏನು?

ಒಂದು ನಿಂಬೆಹಣ್ಣು ₹1.4 ಲಕ್ಷಕ್ಕೆ ಹರಾಜು! – 17ನೇ ಶತಮಾನದ ಈ ಲೆಮನ್‌ನಲ್ಲಿರೋ ವಿಶೇಷತೆ ಏನು?

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ನಿಂಬೆಹಣ್ಣು ಇದ್ದೇ ಇರ್ತಾವೆ. ಅಡುಗೆ, ಪೂಜೆ, ಕ್ಲೀನಿಂಗ್ ಹೀಗೆ ನಾನಾ  ಕೆಲಸಗಳಿಗೆ ಬಳಕೆ ಮಾಡ್ತಾರೆ. ಕೆಲವು ಸಲ 10 ರೂಪಾಯಿಗೆ ಮೂರು, ನಾಲ್ಕು ನಿಂಬೆಹಣ್ಣು ಮಾರಿದ್ರೆ ಸಮ್ಮರ್ ಟೈಮಲ್ಲಿ ಒಂದಕ್ಕೆ 10 ರಿಂದ 20 ರೂಪಾಯಿಗಳವರೆಗೂ ಸೇಲ್ ಆಗುತ್ತೆ. ಆದ್ರೆ ಇಲ್ಲೊಂದು ನಿಂಬೆಹಣ್ಣು 1.4 ಲಕ್ಷಕ್ಕೆ ಮಾರಾಟವಾಗಿದೆ.

ಇದನ್ನೂ ಓದಿ: ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ! –  ಕಾರ್ತಿಕ್‌ ತಾಯಿಯನ್ನು ಡೈಲಾಗ್‌ ಮೂಲಕ ಹೊಗಳಿದ ನಿರೂಪಕಿ ಸುಶ್ಮಾ!

ನಿಂಬೆಹಣ್ಣು ಖರೀದಿ ಮಾಡುವಾಗ ಸ್ವಲ್ಪ ರೇಟ್ ಜಾಸ್ತಿ ಅಂದ್ರೂ ಹಿಂದೆ ಮುಂದೆ ನೋಡ್ತಾರೆ. ಅಂಥಾದ್ರಲ್ಲಿ ಒಂದು ನಿಂಬೆಹಣ್ಣು ಲಕ್ಷಕ್ಕೆ ಸೇಲ್ ಆಗುತ್ತೆ ಅಂದ್ರೆ ಅಚ್ಚರಿ ಆಗೋದು ನಿಜ. ಇಂಗ್ಲೆಂಡಿನಲ್ಲಿ ಒಂದು ಲೆಮೆನ್ ಹರಾಜಿನಲ್ಲಿ 1.4 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಹಾಗಂತ ಈ ನಿಂಬೆಹಣ್ಣು ಏನು ಫ್ರೆಶ್ ಆಗಿಯೂ ಇಲ್ಲ. ಬರೋಬ್ಬರಿ 19 ನೇ ಶತಮಾನದಷ್ಟು ಹಳೆಯದು.

ಇಂಗ್ಲೆಂಡಿನ ಕುಟುಂಬವೊಂದು ಈ ನಿಂಬೆ ಹಣ್ಣನ್ನು ಪತ್ತೆ ಹಚ್ಚಿದೆ. ವರದಿಗಳ ಪ್ರಕಾರ ಇದು 1739ನೇ ಕಾಲದ್ದು. ನಿಂಬೆಹಣ್ಣಿನ ಮೇಲೆ ಸಂದೇಶಗಳನ್ನು ಬರೆಯಲಾಗಿದೆ. ಮಿಸ್ ಇ. ಬ್ಯಾಕ್ಸ್​ಟರ್​ಗೆ ಪಿ. ಲ್ಯೂ ಫ್ರಾಂಚಿನಿ ಅವರು ನವೆಂಬರ್ 3, 1739 ರಂದು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ. ಬ್ರೆಟೆಲ್ ಹರಾಜು ಹೌಸ್ ಮಾಲೀಕ ಡೇವಿಡ್ ಬ್ರೆಟೆಲ್ ಈ ನಿಂಬೆ ಹಣ್ಣನ್ನು ಹರಾಜಿಗೆ ಇಡುವುದಾಗಿ ಘೋಷಣೆ ಮಾಡುತ್ತಿದ್ದಂತೆ ಅದನ್ನು ಯಾರು ಖರೀದಿಸುತ್ತಾರೆ? ಎಂಬ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಆದರೆ ಶತಮಾನದಷ್ಟು ಹಳೆಯದಾದ ಈ ನಿಂಬೆಹಣ್ಣು ಭಾರತದ ಕರೆನ್ಸಿಯ ಪ್ರಕಾರ ಸುಮಾರು 1.4 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಬ್ರೆಟಲ್ಸ್ ಹರಾಜು ಹೌಸ್ ಇದನ್ನು ಸಾಮಾಜಿಕ ಮಾಧ್ಯಮದ ಮೂಲಕ ಬಹಿರಂಗಪಡಿಸಿದೆ. ಆದ್ರೆ ಈ ನಿಂಬೆಹಣ್ಣನ್ನ ಖರೀದಿ ಮಾಡಿದವ್ರಿಗೆ ಅದನ್ನ ಅಡುಗೆಗೆ ಬಳಸೋಕಂತೂ ಆಗಲ್ಲ. ಇಷ್ಟು ವರ್ಷಗಳಾದ್ರೂ ಉಳಿದಿರುವ ನಿಂಬೆಹಣ್ಣನ್ನ ಯಾವ್ದಾದ್ರೂ ಮ್ಯೂಜಿಯಂನಲ್ಲಿ ಇಡಬಹುದು ಅಷ್ಟೇ.

Shwetha M