ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನದಂತಹ ಲೋಹದ ಪುಡಿ ಪತ್ತೆ – ಇಬ್ಬರು ಪ್ರಯಾಣಿಕರು ಏರ್‌ಪೋರ್ಟ್ ಪೊಲೀಸ್ ವಶಕ್ಕೆ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನದಂತಹ ಲೋಹದ ಪುಡಿ ಪತ್ತೆ – ಇಬ್ಬರು ಪ್ರಯಾಣಿಕರು ಏರ್‌ಪೋರ್ಟ್ ಪೊಲೀಸ್ ವಶಕ್ಕೆ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಿನ್ನದಂತಹ ಲೋಹದ ಪುಡಿ ವಶಕ್ಕೆ ಪಡೆಯಲಾಗಿದೆ.  ಬೆಂಗಳೂರಿನಿಂದ ಅಹಮದಾಬಾದ್‌ಗೆ ತೆರಳುತ್ತಿದ್ದ ಇಬ್ಬರು ಪ್ರಯಾಣಿಕರಿಂದ 260 ಗ್ರಾಂ ತೂಕದ ಈ ಪುಡಿಯನ್ನು ಸಿಐಎಸ್‌ಎಫ್ ಸಿಬ್ಬಂದಿ ಪತ್ತೆಹಚ್ಚಿದ್ದಾರೆ.

ಪ್ರಯಾಣಿಕರು ತಮ್ಮ ಪ್ಯಾಂಟ್‌ನ ಸೊಂಟದ ಭಾಗದಲ್ಲಿ ಎರಡು ಪ್ಯಾಕೆಟ್‌ಗಳಲ್ಲಿ ಚಿನ್ನದ ಪುಡಿಯನ್ನು ಮರೆಮಾಡಿ ಇಟ್ಟುಕೊಂಡಿದ್ದರು. ಸಿಐಎಸ್‌ಎಫ್ ಸಿಬ್ಬಂದಿ ಸೂಕ್ಷ್ಮ ತಪಾಸಣೆ ನಡೆಸಿದಾಗ ಈ ಪ್ಯಾಕೆಟ್‌ಗಳು ಪತ್ತೆಯಾದವು. ಒಟ್ಟು 260 ಗ್ರಾಂ ತೂಕದ ಪುಡಿಯನ್ನು ವಶಪಡಿಸಿಕೊಂಡ ನಂತರ ಸಿಬ್ಬಂದಿ ಇಬ್ಬರು ಪ್ರಯಾಣಿಕರನ್ನು ತಕ್ಷಣ ವಶಕ್ಕೆ ಪಡೆದು ಏರ್‌ಪೋರ್ಟ್ ಪೊಲೀಸರ ವಶಕ್ಕೆ ಹಸ್ತಾಂತರಿಸಿದರು.
ಏರ್‌ಪೋರ್ಟ್ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪುಡಿ ನಿಜವಾದ ಚಿನ್ನವೇ ಅಥವಾ ಬೇರೆ ಯಾವುದೇ ಲೋಹವೇ ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಪ್ರಯಾಣಿಕರು ಎಲ್ಲಿಂದ ಈ ಪುಡಿಯನ್ನು ಪಡೆದಿದ್ದಾರೆ, ಯಾರಿಗೆ ತಲುಪಿಸಬೇಕಿತ್ತು ಹಾಗೂ ಇದರ ಹಿಂದೆ ಯಾವುದೇ ಸಂಘಟಿತ ಜಾಲವಿದೆಯೇ ಎಂಬುದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪ್ರಸ್ತುತ ಹಂತದಲ್ಲಿ ಯಾವುದೇ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

Kishor KV

One thought on “ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನದಂತಹ ಲೋಹದ ಪುಡಿ ಪತ್ತೆ – ಇಬ್ಬರು ಪ್ರಯಾಣಿಕರು ಏರ್‌ಪೋರ್ಟ್ ಪೊಲೀಸ್ ವಶಕ್ಕೆ

Leave a Reply

Your email address will not be published. Required fields are marked *