25000 PAK ಸೈನಿಕರು ಸೇಲ್ – ಪಾಕಿಸ್ತಾನ , ಸೌದಿ ಸೀಕ್ರೆಟ್ ಡೀಲ್
10 ಬಿಲಿಯನ್ ಡಾಲರ್ ವಹಿವಾಟು

ದಿವಾಳಿ ಆಗಿರೋ ಪಾಕಿಸ್ತಾನ ಈಗ ತನ್ನನ್ನ ತಾನು ಉಳಿಸಿಕೊಳ್ಳೋಕೆ ಸಾಕಷ್ಟು ಸರ್ಕಸ್ ಮಾಡ್ತಿದೆ. ತನ್ನ ದೇಶವನ್ನ ಉಳಿಸಿಕೊಳ್ಳುವುದ್ದಕ್ಕೆ ತನ್ನ ಸೈನಿಕರನ್ನ ಪಾಕ್ ಮಾರೋಕೆ ಹೊರಟಿದೆ.. ಈಗಾಗಲೇ ಸಾಲ ಮಾಡಿ, ತನ್ನಲ್ಲಿರೋ ಜಾಗವನ್ನ ಅಡವಿಟ್ಟು ಜೀವನ ಮಾಡ್ತಿರೋ ಪಾಕಿಸ್ತಾನ ಈಗ ಮತ್ತೊಂದು ದೊಡ್ಡ ಸಾಹಸಕ್ಕೆ ಕೈ ಹಾಕಿದೆ.. ಈಗಾಗಲೇ ತನ್ನ ಅರ್ಧಕ್ಕೆ ಅರ್ಧ ಜಾಗವನ್ನ ಚೀನಾದ ಬಳಿ ಗಿರಿವಿ ಇಟ್ಟಿದೆ. ಚೀನಾ ಕೂಡ ಪಾಕ್ ಮೇಲೆ ಸಾಕಷ್ಟು ಹೂಡಿಕೆ ಮಾಡಿದೆ.. ಹಾಗೇ ಸಾಲದ ಜೊತೆ ರಕ್ಷಣಾ ಸಾಮಾಗ್ರಿಗಳನ್ನ ಪಾಕ್‌ಗೆ ಚೀನಾ ನೀಡುತ್ತಿದೆ. ಹೀಗಿರುವಾಗ ಪಾಕಿಸ್ತಾನ ಈಗ ಸೌದಿ ಅರೇಬಿಯಾ ಜೊತೆ ಒಂದು ದೊಡ್ಡ ರಕ್ಷಣಾ ಒಪ್ಪಂದವನ್ನ ಮಾಡಿಕೊಳ್ಳುವುದ್ದಕ್ಕೆ ಹೊರಟಿದೆ. ಸೌದಿ ಅರೇಬಿಯಾ ಪಾಕಿಸ್ತಾನದ ಮೂಲ ಸೌಕರ್ಯ, ಆರ್ಥಿಕತೆ, ಗಣಿಗಾರಿಕೆ, ಇಂಧನ ಮತ್ತು ಭದ್ರತಾ ಕ್ಷೇತ್ರದಲ್ಲಿ 10 ಬಿಲಿಯನ್ ಯುಸ್ ಡಾಲರ್ ಹೂಡಿಕೆ ಮಾಡಲಿದೆ. ಇದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಸೌದಿ ಭದ್ರತೆಗೆ ಸಹಾಯ ಮಾಡಲಿದೆ. ಪಾಕಿಸ್ತಾನದ ಸೇನೆಯನ್ನ ಸೌದಿ ಅರೇಬಿಯಾದಲ್ಲಿ ನಿಯೋಜನೆ ಮಾಡಲಿದ್ದು ಈ ವಿಷಯ ಈಗ ಬಹಿರಂಗವಾಗಿದೆ.
ಪಾಕಿಸ್ತಾನವು ಸೌದಿ ಅರೇಬಿಯಾಕ್ಕೆ ಮಿಲಿಟರಿ ಉಪಕರಣಗಳು, ಮದ್ದುಗುಂಡುಗಳು, ಮೋರ್ಟಾರ್‌ಗಳು, ಟ್ಯಾಂಕ್‌ಗಳು ಮತ್ತು ಅಲ್ಪ-ಶ್ರೇಣಿಯ ಕ್ಷಿಪಣಿಗಳನ್ನು ಸಹ ಪೂರೈಸುತ್ತದೆ. ಆರಂಭದಲ್ಲಿ, ಪಾಕಿಸ್ತಾನವು ವಿವಿಧ ಸೌದಿ ಮಿಲಿಟರಿ ನೆಲೆಗಳು ಮತ್ತು ನಗರಗಳಲ್ಲಿ 25,000 ಸೈನಿಕರನ್ನು ನಿಯೋಜಿಸುತ್ತದೆ. ಪ್ರತಿಯೊಬ್ಬ ಪಾಕಿಸ್ತಾನಿ ಸೈನಿಕನು ಕನಿಷ್ಠ 6,000 ಸೌದಿ ರಿಯಾಲ್ ಅಂದ್ರೆ ಭಾರತದ ರೂಪಾಯಿಗಳಲ್ಲಿ ಒಂದು ಲಕ್ಷದ 40 ಸಾವಿರ ಸಂಬಳವನ್ನ ಪಡೆಯುತ್ತಾನೆ. ಇನ್ನೂ ಒಂದು ಪಾಕಿಸ್ತಾನಿ ಮಿಲಿಟರಿ ಬ್ರಿಗೇಡ್ ಎಂಟು ಘಟಕಗಳಿಂದ ಕೂಡಿದ್ದು, ಪ್ರತಿ ಘಟಕವು 850 ಸೈನಿಕರನ್ನು ಒಳಗೊಂಡಿದೆ. ಇದ್ರಲ್ಲಿ ನಾಲ್ಕು ಬ್ರಿಗೇಡ್‌ಗಳು ಶಸ್ತ್ರಸಜ್ಜಿತ, ಫಿರಂಗಿ, ಪದಾತಿ ದಳ ಮತ್ತು ರಾಕೆಟ್ ಪಡೆಗಳ ಘಟಕಗಳನ್ನು ಒಳಗೊಂಡಿರುತ್ತವೆ. ಈ ಬ್ರಿಗೇಡ್‌ಗಳನ್ನ ಕೂಡ ಪಾಕಿಸ್ತಾನ ಸೌದಿಯಲ್ಲಿ ನೇಮಿಸುತ್ತೆ. ಹಾಗೇ ಸೌದಿ ಅರೇಬಿಯಾದಲ್ಲಿ ಕಮಾಂಡ್ ಕಾರ್ಯಾಚರಣೆಗಳಿಗಾಗಿ, ಪಾಕಿಸ್ತಾನವು ಮೂರು-ಸ್ಟಾರ್ ಲೆಫ್ಟಿನೆಂಟ್ ಜನರಲ್, ಇಬ್ಬರು ಮೇಜರ್ ಜನರಲ್‌ಗಳು ಮತ್ತು ಎಂಟು ಬ್ರಿಗೇಡಿಯರ್‌ಗಳನ್ನು ನೇಮಿಸುತ್ತದೆ.
ಪಾಕಿಸ್ತಾನದಂತೆಯೇ ಚೀನೀ ತಂತ್ರಜ್ಞಾನವನ್ನು ಸ್ವಾಧೀನಪಡಿಸಿಕೊಳ್ಳಲು ಸೌದಿ ಅರೇಬಿಯಾ ಆಸಕ್ತಿ ಹೊಂದಿದೆ. ಯಾವುದೇ ಬೆದರಿಕೆಗಳ ವಿರುದ್ಧ ಸಮಾನಾಂತರ ರಕ್ಷಣೆಗಾಗಿ ಚೀನೀ ಮಿಲಿಟರಿ ಉಪಕರಣಗಳನ್ನು ಖರೀದಿಸಲು ರಿಯಾಧ್ ಇಸ್ಲಾಮಾಬಾದ್‌ನೊಂದಿಗೆ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕಲು ಪ್ರೇರೇಪಿಸಿದೆ. ಸೌದಿ ಅರೇಬಿಯಾ ಪಾಕಿಸ್ತಾನದಿಂದ JF-17 ಥಂಡರ್‌ಗಳನ್ನು ಮತ್ತು ಚೀನಾದಿಂದ J-10C ಗಳನ್ನು ಖರೀದಿಸಲು ಉತ್ಸುಕವಾಗಿದೆ ಮತ್ತು ಇಸ್ರೇಲ್‌ನಿಂದ ಯಾವುದೇ ಸಂಭಾವ್ಯ ಬೆದರಿಕೆಗಳನ್ನು ಎದುರಿಸಲು 5 ನೇ ತಲೆಮಾರಿನ ಜೆಟ್‌ಗಳ ಕುರಿತು ಬೀಜಿಂಗ್‌ನೊಂದಿಗೆ ಚರ್ಚೆಗಳನ್ನು ಕೂಡ ನಡೆಸಲಾಗುತ್ತೆ. ಸೌದಿ ಪಾಕಿಸ್ತಾನದ ಜೊತೆ ಸೇರಿ ತನ್ನ ಸೇನೆಯನ್ನ ಸ್ಟ್ರಾಂಗ್ ಮಾಡಿಕೊಳ್ಳುವುದ್ದಕ್ಕೆ ಹೊರಟಿದೆ. ಈಗಾಗಲೇ ಹೇಳಿದಂತೆ ಪಾಕಿಸ್ತಾನ ಸೌದಿಯಲ್ಲಿ ಸೇನೆ ಸಾಥ್ ನೀಡಿದ್ರೆ, ಸೌದಿ ಅರೇಬಿಯಾ ಪಾಕಿಸ್ತಾನದ ಮೂಲಸೌಕರ್ಯ, ಆರ್ಥಿಕ, ಗಣಿಗಾರಿಕೆ, ಇಂಧನ ಮತ್ತು ಭದ್ರತಾ ವಲಯಗಳಲ್ಲಿ 10 ಬಿಲಿಯನ್ USD ಹೂಡಿಕೆ ಮಾಡುತ್ತದೆ. ಈ ಹೂಡಿಕೆಯು ಪಾಕಿಸ್ತಾನವನ್ನು ಭವಿಷ್ಯದ ಆರ್ಥಿಕಯನ್ನ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೇ ಪಾಕಿಸ್ತಾನದ ಬೆಳವಣಿಗೆಗೆ ಇದು ಸಾಕಷ್ಟು ಸಹಕಾರಿ ಆಗಲಿದೆ. ಇದಲ್ಲದೆ, ಸೌದಿ ಅರೇಬಿಯಾ ಪಾಕಿಸ್ತಾನದೊಂದಿಗಿನ ತನ್ನ ದ್ವಿಪಕ್ಷೀಯ ವ್ಯಾಪಾರವನ್ನು ಎಲ್ಲಾ ವಲಯಗಳಲ್ಲಿ ವಾರ್ಷಿಕವಾಗಿ 5 ಬಿಲಿಯನ್ USD ನಿಂದ 15 ಬಿಲಿಯನ್ USD ಗೆ ಹೆಚ್ಚಿಸುತ್ತದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಸಮತೋಲಿತ ಮತ್ತು ಆರೋಗ್ಯಕರ ವಾತಾವರಣವನ್ನು ಕಾಪಾಡಿಕೊಳ್ಳಲು ಶ್ರಮಿಸುತ್ತಾ, ವಿಶೇಷವಾಗಿ ನವದೆಹಲಿ ಮತ್ತು ಕಾಬೂಲ್‌ನೊಂದಿಗೆ ಇಸ್ಲಾಮಾಬಾದ್‌ನ ಸಂಬಂಧಗಳನ್ನು ಸರಿ ಮಾಡೋಕೆ ರಿಯಾದ್ ತನ್ನ ರಾಜತಾಂತ್ರಿಕ ಮಾರ್ಗಗಳನ್ನು ಬಳಸುತ್ತದೆ. ಸೌದಿ ಅರೇಬಿಯಾದ ಉನ್ನತ ರಕ್ಷಣಾ ನಿಯೋಗವು ಈ ತಿಂಗಳಲ್ಲೇ ಭದ್ರತಾ ಮಾತುಕತೆಗಾಗಿ ಪಾಕಿಸ್ತಾನಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಮತ್ತು ಪಾಕಿಸ್ತಾನದ ಪ್ರಧಾನಿ ಫೀಲ್ಡ್ ಮಾರ್ಷಲ್ ಕೂಡ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿ ಈ ಒಪ್ಪಂದಕ್ಕೆ ಅಧಿಕೃತ ಮುದ್ರೆ ಹಾಕಲಿದ್ದಾರೆ.

ನೋಡಿರಿ

