ಟ್ರಂಪ್‌ನಿಂದ ಭಾರತದ ಮೇಲೆ ಸುಂಕ ಸಮರ- ಆಗಸ್ಟ್‌ 7ರಿಂದ ಭಾರತ ವಸ್ತು ಮೇಲೆ ಶೇ.25ರಷ್ಟು ತೆರಿಗೆ

ಟ್ರಂಪ್‌ನಿಂದ ಭಾರತದ ಮೇಲೆ ಸುಂಕ ಸಮರ- ಆಗಸ್ಟ್‌ 7ರಿಂದ ಭಾರತ ವಸ್ತು ಮೇಲೆ ಶೇ.25ರಷ್ಟು ತೆರಿಗೆ

ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ಯಾಕ್ಸ್ ಸಮರ ಸಾರಿದ್ದು.  ಶೇ.25ರಷ್ಟು ತೆರಿಗೆ ಆ.7ರಿಂದ ಜಾರಿಯಾಗಲಿದೆ. ಇದರಿಂದ ಅಮೆರಿಕದವರು ಖರೀದಿ ಮಾಡೋ ಭಾರತದ ವಸ್ತುಗಳು ಬೆಲೆ ಹೆಚ್ಚಳವಾಗಲಿದೆ.. ಇದು ಭಾರತಕ್ಕೆ ಸಾಕಷ್ಟು ಎಫೆಕ್ಟ್ ಆಗಲಿದೆ.  ರಷ್ಯಾ ದಿಂದ ಶಸ್ತ್ರಾಸ್ತ್ರ ಮತ್ತು ತೈಲವನ್ನು ತರಿಸಿಕೊಳ್ಳುತ್ತಿರುವುದಕ್ಕೆ ಭಾರತಕ್ಕೆ ಈ ಶಿಕ್ಷೆ ಅಂತ ಟ್ರಂಪ್ ಹೇಳಿದ್ರು.. ದಂಡದ ಮೊತ್ತವನ್ನ ಟ್ರಂಪ್ ಘೋಷಿಸಿಲ್ಲ.. ಇದ್ರಿಂದ ಅಮೆರಿಕದಲ್ಲಿ ಭಾರತದ ವಸ್ತುಗಳಿಗೆ ಬೇಡಿಕೆ ಕಡಿಮೆಯಾಗಿ ಭಾರತಕ್ಕೆ ಸಾಕಷ್ಟು ಎಫೆಕ್ಟ್ ಆಗಲಿದೆ.

ಆಗಸ್ಟ್ 7ರಿಂದ ಹೊಸ ಸುಂಕ ಜಾರಿಗೆ ಬರಲಿದ್ದು, 70 ದೇಶಗಳು ಹಾಗೂ ಯೂರೋಪಿಯನ್ ಒಕ್ಕೂಟದ 27 ಸದಸ್ಯ ದೇಶಗಳಿಗೆ ಇದು ಅನ್ವಯವಾಗಲಿದೆ. ಈ ಆದೇಶದಲ್ಲಿ ಹೆಸರಿಸದ ದೇಶಗಳು ನಿಗದಿತ ಶೇಕಡ 10ರ ಸುಂಕ ಎದುರಿಸಲಿವೆ ಎಂದು ಶ್ವೇತಭವನ ಪ್ರಕಟಿಸಿ ಆದೇಶದಲ್ಲಿ ಸ್ಪಷ್ಟಪಡಿಲಾಗಿದೆ. ಯುರೋಪಿಯನ್ ಒಕ್ಕೂಟಕ್ಕೆ ಶೇ.15 ಕ್ಕಿಂತ ಹೆಚ್ಚಿನ ಅಮೆರಿಕಾ ಸುಂಕ ದರಗಳನ್ನು ಹೊಂದಿರುವ ಸರಕುಗಳಿಗೆ ಹೊಸ ಸುಂಕಗಳಿಂದ ವಿನಾಯಿತಿ ನೀಡಲಾಗುತ್ತದೆ. ಆದರೆ, ಶೇ.15ಕ್ಕಿಂತ ಕಡಿಮೆ ಸುಂಕ ದರಗಳನ್ನು ಹೊಂದಿರುವ ಸರಕುಗಳ ತೆರಿಗೆಗಳನ್ನು ಪ್ರಸ್ತುತ ಸುಂಕ ದರದಿಂದ ಶೇ.15ರಷ್ಟು ಕಡಿಮೆ ಮಾಡಲು ಹೊಂದಿಸಲಾಗುತ್ತದೆ ಎಂದು ತಿಳಿಸಿದೆ. ಆಗಸ್ಟ್ 7 ರೊಳಗೆ ಹಡಗುಗಳಿಗೆ ಲೋಡ್ ಮಾಡಲಾದ ಮತ್ತು ಅಕ್ಟೋಬರ್ 5 ರೊಳಗೆ ಅಮೆರಿಕವನ್ನು ತಲುಪುವ ಸರಕುಗಳು ಹೊಸ ದರಗಳಿಗೆ ಒಳಪಡುವುದಿಲ್ಲ ಎಂದು ತಿಳಿಸಲಾಗಿದೆ.

ಕೆನಡಾ ಜೊತೆಗೆ ಇತರ ಹಲವಾರು ದೇಶಗಳಿಗೆ ನವೀಕರಿಸಿದ ಸುಂಕ ದರಗಳನ್ನು ಅಮೆರಿಕ ಬಿಡುಗಡೆ ಮಾಡಿದೆ. ಕೆನಡಾ ಮೇಲೆ ಸದ್ಯ ಶೇ.25ರಷ್ಟು ಸುಂಕ ವಿಧಿಸಲಾಗುತ್ತಿದ್ದು, ಅದನ್ನು ಶೇ.35ಗೆ ಹೆಚ್ಚಿಸಲಾಗುತ್ತದೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. ಈ ಆದೇಶದ ಅಡಿಯಲ್ಲಿ, ಪಾಕಿಸ್ತಾನದ ಮೇಲೆ ಶೇ.19, ಬಾಂಗ್ಲಾದೇಶ ಮತ್ತು ವಿಯೆಟ್ನಾಂ ಮೇಲೆ ಶೇ.20, ಸಿರಿಯಾ ಶೇ.41, ಬ್ರೆಜಿಲ್ ಶೇ. 10, ಜಪಾನ್ ಶೇ.15, ಲಾವೋಸ್ ಮತ್ತು ಮ್ಯಾನ್ಮಾರ್ ತಲಾ ಶೇ.40, ಶ್ರೀಲಂಕಾ ಶೇ.20 ಮತ್ತು ಯುನೈಟೆಡ್ ಕಿಂಗ್‌ಡಮ್ ಶೇ. 10, ದಕ್ಷಿಣ ಆಫ್ರಿಕಾದ ಮೇಲೆ ಶೇ.30 ಮತ್ತು ಸ್ವಿಟ್ಜರ್ಲೆಂಡ್‌ನ ಮೇಲೆ ಶೇ.39 ರಷ್ಟು ಅತ್ಯಧಿಕ ಸುಂಕ ವಿಧಿಸಲಾಗಿದೆ.

Kishor KV