91 ಬಾಲ್.. 25 ಸಿಕ್ಸರ್.. 233 ರನ್ – ಏಕದಿನದಲ್ಲಿ ಅಭಿಷೇಕ್ ಶರ್ಮಾ ಚರಿತ್ರೆ
T-20I ಡಲ್.. ODIನಲ್ಲಿ ಚಾನ್ಸ್ ಬೇಕಾ?

91 ಬಾಲ್.. 25 ಸಿಕ್ಸರ್.. 233 ರನ್ – ಏಕದಿನದಲ್ಲಿ ಅಭಿಷೇಕ್ ಶರ್ಮಾ ಚರಿತ್ರೆT-20I ಡಲ್.. ODIನಲ್ಲಿ ಚಾನ್ಸ್ ಬೇಕಾ?

ಪವರ್​ ಪ್ಲೇನಲ್ಲೇ ಪಂದ್ಯದ ದಿಕ್ಕನ್ನೇ ಬದಲಿಸೋ ಪವರ್ ಹಿಟ್ಟರ್ ಬ್ಯಾಟರ್ ಅಭಿಷೇಕ್ ಶರ್ಮಾ. ಫಸ್ಟ್ ಬಾಲ್​ನಿಂದಲೇ ಬೌಲರ್​ಗಳನ್ನ ಬೆಂಡೆತ್ತೋ ಮಹಾನ್ ಚತುರ. ಆದ್ರೆ ಭಾರತದ ಪರ ಕಳೆದ ಕೆಲ ಪಂದ್ಯಗಳಿಂದ ಕಂಪ್ಲೀಟ್ ಡಲ್ ಆಗಿದ್ದಾರೆ. ರನ್ಸ್ ಬರ್ತಿಲ್ಲ. ಇದೇ ಕಾರಣಕ್ಕೆ ಅಭಿಷೇಕ್​ರನ್ನ ತಂಡದಿಂದಲೇ ಕೈಬಿಡಿ ಅಂತಾ ಮಾಜಿ ಕ್ರಿಕೆಟರ್ ಕೆ.ಶ್ರೀಕಾಂತ್ ಒತ್ತಾಯ ಮಾಡಿದ್ರು. ಆದ್ರೆ ಇದೇ ಅಭಿಷೇಕ್ ಈಗ ದೇಶೀ ಕ್ರಿಕೆಟ್​​ನಲ್ಲಿ  ಸುನಾಮಿ ಎಬ್ಬಿಸಿದ್ದಾರೆ. ರನ್​ ಮಳೆ ಸುರಿಸಿದ್ದಾರೆ. ಅಭಿಷೇಕ್ ಅಬ್ಬರ ನೋಡಿದ ಕೆಲವ್ರು ಭಾರತ ಏಕದಿನ ತಂಡಕ್ಕೂ ಸೆಲೆಕ್ಟ್ ಮಾಡಿ ಅಂತಿದ್ದಾರೆ.

ಇದನ್ನೂ ಓದಿ : ವೈಭವ್ ಸೂರ್ಯವಂಶಿ ಔಟ್.. ಭುವನೇಶ್ವರ್ ಎಂಟ್ರಿ – ODI ವಿಶ್ವಕಪ್ ಗಿಲ್ಲ ಅಭಿಷೇಕ್

ಟೀಂ ಇಂಡಿಯಾದ ಮಾಜಿ ದಿಗ್ಗಜ ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿರುವ ಅಭಿಷೇಕ್ ಶರ್ಮಾ ಟಿ-20ಐ ಫಾರ್ಮೆಟ್​ನ ಒನ್ ಆಫ್ ದಿ ಮೋಸ್ಟ್ ಡೇಂಜರಸ್ ಬ್ಯಾಟರ್. ಬಟ್ ಭಾರತದ ಪರ ಇತ್ತೀಚೆಗೆ ಸ್ವಲ್ಪ ಸೈಲೆಂಟ್ ಆಗಿದ್ರು. ಅದ್ರಲ್ಲೂ ಜಿಂಬಾಬ್ವೆ ವಿರುದ್ಧದ ಸಿರೀಸ್​ನಲ್ಲಂತೂ ಅಟ್ಟರ್​ಫ್ಲ್ಯಾಪ್ ಆಗಿದ್ರು. ಹೀಗಾಗಿ ಮುಂದಿನ ಕೆಲ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ರೆ ಆಗ ಫಾರ್ಮ್​ಗೆ ಬರ್ತಾರೆ ಅಂತೆಲ್ಲಾ ಕೆಲವ್ರು ಸಜೇಷನ್ ಕೊಟ್ಟಿದ್ರು. ಆದ್ರೀಗ ಅಭಿಷೇಕ್ ಶರ್ಮಾ ಡಬಲ್ ಸೆಂಚುರಿ ಬಾರಿಸಿದ್ದಾರೆ.

91 ಬಾಲಲ್ಲೇ ಡಬಲ್ ಸೆಂಚುರಿ ಸಿಡಿಸಿದ ಅಭಿಷೇಕ್ ಶರ್ಮಾ!

ಟಿ-20ಐ ಮಾದರಿಯಲ್ಲಿ ಕಳಪೆ ಫಾರ್ಮ್​ನಿಂದ ಒದ್ದಾಡ್ತಿರೋ ಅಭಿಷೇಕ್ ಶರ್ಮಾ ಈಗ ಏಕದಿನ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಹಾಗಂತ ಇದು ಇಂಟರ್​ನ್ಯಾಷನಲ್ ಪಂದ್ಯ ಅಲ್ಲ. ಪಂಜಾಬ್ ಅಂತರ-ಜಿಲ್ಲಾ ಹಿರಿಯರ ವಿಭಾಗದ ಏಕದಿನ ಮಾದರಿಯ ಪಂದ್ಯ. ಅಮೃತಸರ ಪುರುಷರ ಸೀನಿಯರ್ ಟೀಂ ಪರ ಆಡ್ತಿರುವ ಅಭಿಷೇಕ್ ಶರ್ಮಾ ಭಾನುವಾರ ಅಮೃತಸರದ ಗಾಂಧಿ ಮೈದಾನದಲ್ಲಿ ತರಣ್​ ತರಣ್​ ತಂಡದ ವಿರುದ್ಧ ರನ್ ಸುನಾಮಿ ಎಬ್ಬಿಸಿದ್ದಾರೆ. ಕೇವಲ 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸುವ ಮೂಲಕ ತಮ್ಮ ಹಳೇ ಖದರ್ ತೋರಿಸಿದ್ದಾರೆ. ಇವ್ರ ಈ ಇನ್ನಿಂಗ್ಸ್​ನಲ್ಲಿ 25 ಸಿಕ್ಸರ್‌ಗಳು ಮತ್ತು 15 ಬೌಂಡರಿಗಳು ಸೇರಿದ್ದವು. ಕೇವಲ ಬೌಂಡರಿ ಮತ್ತು ಸಿಕ್ಸರ್‌ಗಳಿಂದಲೆ 210 ರನ್ ಗಳಿಸಿದರು. ಇನ್ನುಳಿದ 23 ರನ್​ಗಳನ್ನ ಮಾತ್ರ ಸಿಂಗಲ್ಸ್, ಡಬಲ್ ರನ್ ಓಡುವ ಮೂಲಕ ಕಲೆ ಹಾಕಿದ್ರು. ಌಂಡ್ ಅವರ ಸ್ಟ್ರೈಕ್ ರೇಟ್ 256.04 ಆಗಿತ್ತು. ಫಸ್ಟ್ ಬಾಲ್​ನಿಂದಲೇ ಅಗ್ರೆಸ್ಸಿವ್ ಇಂಟೆಂಟ್ ತೋರಿಸಿದ ಅಭಿಷೇಕ್ ಎಲ್ಲಾ ಬೌಲರ್‌ಗಳನ್ನು ಚೆಂಡಾಡಿದ್ರು. ಅಭಿಷೇಕ್ ಅವ್ರ ಸ್ಫೋಟಕ ಇನ್ನಿಂಗ್ಸ್​ನಿಂದಾಗಿ ಅಮೃತಸರ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 533 ರನ್ ಗಳಿಸಿತು. ಚೇಸಿಂಗ್ ಆರಂಭಿಸಿದ ತರಣ್ ತರಣ್ ತಂಡವು 8 ವಿಕೆಟ್ ನಷ್ಟಕ್ಕೆ 313 ರನ್​ಗಳಿಸಷ್ಟೇ ಸಾಧ್ಯವಾಯ್ತು. ಅಮ್ರಿತ್​ಸರ್ ತಂಡ 220 ರನ್​ಗಳ ಅಂತರದಲ್ಲಿ ಗೆದ್ದು ಬೀಗಿತು. ಆದ್ರೆ ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಅವ್ರ ಇನ್ನಿಂಗ್ಸ್​ನಿಂದಾಗಿ ಅವ್ರಿಗೆ ಭಾರತ ಏಕದಿನ ತಂಡದಲ್ಲೂ ಅವಕಾಶ ಕೊಡ್ಬೇಕು ಅನ್ನೋ ಕೂಗು ಎದ್ದಿದೆ.

ಟಿ-20ಐನಲ್ಲಿ ಡಲ್.. ಒಡಿಐನಲ್ಲಿ ಅಭಿಷೇಕ್ ಗೆ ಅವಕಾಶ ಕೊಡ್ತಾರಾ?

ಯಾವಾಗ ಏಕದಿನ ಮಾದರಿಯ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಡಬಲ್ ಸೆಂಚುರಿ ಬಾರಿಸಿದ್ರೋ ಭಾರತದ ಪರ ಏಕದಿನ ಮಾದರಿಯಲ್ಲೂ ಅವಕಾಶ ಕೊಡಿ ಅಂತಾ ಕೆಲವ್ರು ಬ್ಯಾಟಿಂಗ್ ಶುರು ಮಾಡಿದ್ದಾರೆ. ಆದ್ರೆ ಅಭಿಷೇಕ್​ ಶರ್ಮಾ ಟಿ-20ಐನಲ್ಲೇ ಫಾರ್ಮ್ ಕಳ್ಕೊಂಡಿದ್ದಾರೆ. ಅಂಥಾದ್ರಲ್ಲಿ ಭಾರತದ ಪರ ಅವಕಾಶ ಕೊಡ್ಬೇಕಾ ಅನ್ನೋದು ಮತ್ತೆ ಕೆಲವರ ವಾದ..

ಸದ್ದು ಮಾಡದ ಅಭಿಷೇಕ್!

ವಿಶ್ವಕಪ್ ಮತ್ತು ಅದ್ರಿಂದ ಈಚೆಗೆ ಅಭಿಷೇಕ್ ಪ್ರದರ್ಶನ ಅಷ್ಟಕ್ಕಷ್ಟೇ

ವರ್ಷದ ಆರಂಭದಲ್ಲಿ ನಂಬರ್ 1 ಬ್ಯಾಟರ್, ಈಗ 3ನೇ ಸ್ಥಾನ

ಮೂರು ಇನಿಂಗ್ಸ್‌ 3.66ರ ಸರಾಸರಿಯೊಂದಿಗೆ ಒಟ್ಟು 11 ರನ್ ಮಾತ್ರ

ಇಂಗ್ಲೆಂಡ್ ವಿರುದ್ಧ 26.2ರ ಸರಾಸರಿಯಲ್ಲಿ 131 ರನ್ ಗಳಿಸಿದರು

ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ 24.5ರ ಸರಾಸರಿಯಲ್ಲಿ 49 ರನ್

ಕಳೆದ 10 ಟಿ20 ಇನಿಂಗ್ಸ್‌ಗಳಲ್ಲಿ ಅಭಿಷೇಕ್ ಕೇವಲ ಒಂದು ಸಲ ಮಾತ್ರ 50 ರನ್‌

ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳಲ್ಲಿಯೂ ಬ್ಲೆಸ್ಸಿಂಗ್ ಮುಜರಬಾನಿಗೆ ವಿಕೆಟ್

ಟಿ20 ವಿಶ್ವಕಪ್‌ಗೂ ಮೊದಲು ಸರಾಸರಿ 37.05 ಮತ್ತು ಸ್ಟ್ರೈಕ್ ರೇಟ್ 195

ಈಗ ಬ್ಯಾಟಿಂಗ್ ಸರಾಸರಿ 19.4ಕ್ಕೆ ಕುಸಿದಿದೆ ಮತ್ತು ಸ್ಟ್ರೈಕ್ ರೇಟ್ 165ಕ್ಕೆ ಇಳಿಕೆ

Shantha Kumari

Leave a Reply

Your email address will not be published. Required fields are marked *