ಹೆಚ್​3ಎನ್2 ಸೋಂಕಿ​ನಿಂದಲೇ ಮೆಡಿಕಲ್ ವಿದ್ಯಾರ್ಥಿ ಸಾವು – ಡೆಡ್ಲಿ ವೈರಸ್​ ಲಕ್ಷಣ ಹೇಗಿತ್ತು ಗೊತ್ತಾ..?

ಹೆಚ್​3ಎನ್2 ಸೋಂಕಿ​ನಿಂದಲೇ ಮೆಡಿಕಲ್ ವಿದ್ಯಾರ್ಥಿ ಸಾವು – ಡೆಡ್ಲಿ ವೈರಸ್​ ಲಕ್ಷಣ ಹೇಗಿತ್ತು ಗೊತ್ತಾ..?

ಬಿಸಿಲಿನ ತಾಪಮಾನ ಒಂದ್ಕಡೆ. ವಿಪರೀತ ವಾಯುಮಾಲಿನ್ಯ ಮತ್ತೊಂದೆಡೆ. ಇವುಗಳ ನಡುವೆ ದೇಶದಲ್ಲಿ ಈಗ ಹೆಚ್​3ಎನ್2 ಎಂಬ ಡೆಡ್ಲಿ ವೈರಸ್ ಸದ್ದಿಲ್ಲದೆ ಜೀವಗಳನ್ನ ತೆಗೆಯುತ್ತಿದೆ. ಮಹಾರಾಷ್ಟ್ರದಲ್ಲಿ ತೀವ್ರ ಜ್ವರದಿಂದ ಸಾವನ್ನಪ್ಪಿದ್ದ 23 ವರ್ಷದ ಮೆಡಿಕಲ್ ವಿದ್ಯಾರ್ಥಿಗೆ ಹೆಚ್3ಎನ್2 ವೈರಸ್ ದೃಢಪಟ್ಟಿದೆ.

ಮಾರ್ಚ್ 6ರಿಂದ ಮಾರ್ಚ್ 10ರವರೆಗೆ ಗೆಳೆಯರ ಜೊತೆ ನಾಲ್ಕು ದಿನ ಅಲಿಬಾಗ್​ಗೆ ಪಿಕ್ನಿಕ್​ಗೆ ತೆರಳಿದ್ದ ವಿದ್ಯಾರ್ಥಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಜ್ವರ, ಶೀತ ಹಾಗೂ ತಲೆನೋವಿನಿಂದ ಬಳಲುತ್ತಿದ್ದ ಯುವಕನನ್ನ  ಮಾರ್ಚ್ 13 ರಂದು ಅಹ್ಮದ್ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದ್ರೆ ಮಾರ್ಚ್ 14ರಂದು ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದ. ಯುವಕನ ಗಂಟಲು ದ್ರವ ಪರೀಕ್ಷೆ ವೇಳೆ ಯುವಕನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹಾಗೇ ಹೆಚ್3ಎನ್2 ಪರೀಕ್ಷೆಗೆ ಒಳಪಡಿಸಲಾಗಿದ್ದು ಹೆಚ್3ಎನ್2 ವೈರಸ್ ದೃಢಪಟ್ಟಿದೆ. ಕೊರೊನಾ ಹಾಗೂ ಹೆಚ್3ಎನ್2 ವೈರಸ್​ನಿಂದ ಯುವಕ ನ್ಯುಮೋನಿಯಾಗೆ ತುತ್ತಾಗಿ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ : ಮಾರ್ಚ್‌ ನಲ್ಲಿ H3N2 ಸೋಂಕು ಕಡಿಮೆಯಾಗುತ್ತಾ? – ಆರೋಗ್ಯ ಸಚಿವಾಲಯ ಹೇಳಿದ್ದೇನು?

ಅಹ್ಮದ್ ನಗರದ ಸಿವಿಲ್ ಸರ್ಜನ್ ಡಾಕ್ಟರ್ ಸಂಜಯ್ ಗೋಘರೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗೇ ನಾಗ್ಪುರದಲ್ಲಿ 74 ವರ್ಷದ ವೃದ್ಧ ಕೂಡ ಹೆಚ್3ಎನ್ ವೈರಸ್​ನಿಂದಲೇ ಮೃತಪಟ್ಟಿರುವ ಶಂಕೆ ಇದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ಡಾಕ್ಟರ್ ತಾನಾಜಿ ಸಾವಂತ್ ಹೇಳಿದ್ದಾರೆ. ಜನವರಿಯಿಂದ ಈವರೆಗೂ 2.6 ಲಕ್ಷ ಜನರನ್ನ ಪರೀಕ್ಷೆಗೆ ಒಳಪಡಿಸಲಾಗಿದ್ದು ಅದ್ರಲ್ಲಿ 303 ಜನರಿಗೆ ಪಾಸಿಟಿವ್ ಬಂದಿದೆ.

suddiyaana