ಪಿಂಚಣಿ ಹಣಕ್ಕಾಗಿ 91 ವರ್ಷದ ದೊಡ್ಡಮ್ಮಳನ್ನೇ ಮದುವೆಯಾದ 23ರ ಯುವಕ!
ಇತ್ತೀಚಿನ ದಿನಗಳಲ್ಲಿ ತಮಗಿಂತ ದುಪ್ಪಟ್ಟು ಅಥವಾ ಮೂರು ಪಟ್ಟು ವಯಸ್ಸಿನ ಅಂತರವಿರುವರನ್ನು ಕೆಲವರು ಮದುವೆಯಾಗುತ್ತಿದ್ದಾರೆ. ಸಂಗಾತಿಗಳ ನಡುವೆ ದುಪ್ಪಟ್ಟು ಅಥವಾ ಮೂರು ಪಟ್ಟು ಅಂತರವಿರುವ ಜೋಡಿಗಳನ್ನು ಕೇಳಿ ನೋಡಿ ಅವರದು ಒಂದೇ ಉತ್ತರ. ತಮ್ಮದು ನಿಜವಾದ ಪ್ರೀತಿ. ನಿಜವಾದ ಪ್ರೀತಿಯಲ್ಲಿ ಸಂಗಾತಿಯ ವಯಸ್ಸು ಅನ್ನೋದು ಎಂದಿಗೂ ಮುಖ್ಯವಾಗೋದಿಲ್ಲ ಎಂದೇ ಹೇಳುತ್ತಾರೆ. ಇದೀಗ ಇಲ್ಲೊಬ್ಬ ವ್ಯಕ್ತಿ ಕೂಡ ತನಗಿಂತ ಮೂರು ಪಟ್ಟು ವಯಸ್ಸಿನ ಅಂತರವಿರುವ ವೃದ್ಧೆಯನ್ನು ಮದುವೆಯಾಗಿದ್ದಾನೆ. ಆತ ವೃದ್ದೆಯನ್ನು ಮದುವೆಯಾದ ಕಾರಣ ಕೇಳಿ ಎಲ್ಲರೂ ಶಾಕ್ ಆಗುವಂತೆ ಆಗಿದೆ.
ಇತ್ತೀಚೆಗೆ ನಡೆಯುವ ಮದುವೆಗಳಲ್ಲಿ ಏಜ್ ಗ್ಯಾಪ್ ಎಷ್ಟಿದೆ ಅಂತಾ ಯಾರೂ ನೋಡೋದಿಲ್ಲ. ತಮಗಿಂತ ತುಂಬಾ ದೊಡ್ಡವರಾದ್ರೆ ಏನು.. ಅವರು ಒಳ್ಳೆಯವರು. ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತಾ ತಮ್ಮ ಜೀವನದ ಸಂಗಾತಿ ಬಗ್ಗೆ ಹೇಳಿಕೊಳ್ಳುತ್ತಾರೆ. ಆದ್ರೆ ಕೆಲವೊಮ್ಮೆ ಇಂಥ ಮದುವೆಗಳು ಸತ್ಯಗಳು ಬೇರೆಯದೇ ಆಗಿರುತ್ತದೆ. ಇದೇ ರೀತಿಯ ಅನುಮಾನಾಸ್ಪದ ವಿವಾಹದ ಪ್ರಕರಣ ಅರ್ಜೆಂಟೀನಾದಿಂದ ಬೆಳಕಿಗೆ ಬಂದಿದೆ.
ಹಣಕ್ಕಾಗಿ ದೊಡ್ಡಮ್ಮನನ್ನೇ ಮದುವೆಯಾದ ಭೂಪ!
ಹಣ ಕಂಡ್ರೆ ಹೆಣನೂ ಬಾಯಿ ಬಿಡುತ್ತೆ ಅನ್ನೋ ಗಾದೆ ಮಾತನ್ನು ನಾವು ಕೇಳಿದ್ದೇವೆ. ಕೆಲವರು ಬಿಡಿಗಾಸಿಗಾಗಿ ಏನು ಮಾಡಲು ರೆಡಿ ಇದ್ದಾರೆ. ಇಲ್ಲೊಬ್ಬ ವ್ಯಕ್ತಿ ದುಡ್ಡಿನ ಆಸೆಗಾಗಿ ತನ್ನ ದೊಡ್ಡಮ್ಮನನ್ನೇ ಮದುವೆಯಾಗಿದ್ದಾನೆ!
ಇದನ್ನೂ ಓದಿ: ಹೆಂಡತಿ ಐಬ್ರೋ ಮಾಡಿಸಿದ್ಳು! – ವಿಡಿಯೋ ಕಾಲ್‌ನಲ್ಲೇ ತಲಾಕ್ ನೀಡಿದ ಪತಿ!
ಮದುವೆಯಾಗಲು ಏನು ಕಾರಣ?
ಅರ್ಜೆಂಟೀನಾದ ಸಾಲ್ಟಾ ನಗರದ ನಿವಾಸಿ ಮೌರಿಸಿಯೊ ಎಂಬಾತ ತನ್ನ ದೊಡ್ಡಮ್ಮಳನ್ನು ಮದುವೆಯಾದ ಯುವಕ. ಈತನಿಗೆ ಈಗ 23 ವರ್ಷ. ಈತ 91 ವರ್ಷದ ತನ್ನ ದೊಡ್ಡಮ್ಮಳನ್ನು ಮದುವೆಯಾಗಿದ್ದೇನೆ ಅಂತಾ ಹೇಳಿಕೊಂಡಿದ್ದಾರೆ. ಅಸಲಿಗೆ ಇವರು ಮದುವೆಯಾಗಿದ್ದು ಪ್ರೀತಿಸಿ ಅಲ್ಲ. ಬದಲಾಗಿ ಪಿಂಚಣಿ ಹಣ ಪಡೆಯುವುದಕ್ಕಾಗಿ. ಹೌದು, ಈತನ ದೊಡ್ಡಮ್ಮ ಯೋಲಾಂಡಾ ಟೋರಿಸ್ ಈಗಾಗಲೇ ಮೃತಪಟ್ಟಿದ್ದಾಳೆ. ಆಕೆಯ ಪಿಂಚಣಿ ಹಣ ಪಡೆಯುವುದಕ್ಕಾಗಿ ಈತ ಸಾಕಿದ ಅಮ್ಮನನ್ನೇ ಮದುವೆಯಾಗಿದ್ದೇನೆ ಅಂತಾ ಹೇಳಿಕೊಂಡಿದ್ದಾನೆ. ಹೀಗಾಗಿ ಈತ ಪಿಂಚಣಿ ಹಣ ಪಡೆಯಲು ಕಾನೂನು ಹೋರಾಟ ಆರಂಭಿಸಿದ್ದಾರೆ.
ಮೌರಿಸಿಯೊ ಹಣಕ್ಕಾಗಿ ಕತೆ ಕಟ್ಟಿದ್ನಾ?
ಮೌರಿಸಿಯೊ ಹೇಳುವ ಪ್ರಕಾರ, ತಾನು ತನ್ನ 91 ವರ್ಷದ ದೊಡ್ಡಮ್ಮ ಯೋಲಾಂಡಾ ಟೋರಿಸ್ ಅವರ ಪತಿ ಅದಕ್ಕಾಗಿ ಪಿಂಚಣಿಗೆ ಅರ್ಹನಾಗಿದ್ದೇನೆ ಎಂದು ವಾದ ಮಂಡಿಸಿದ್ದಾರೆ. 2015ರಲ್ಲಿ ಸಂಬಂಧದಲ್ಲಿ ತಮ್ಮ ಹಿರಿಯ ದೊಡ್ಡಮ್ಮನಾಗಿರುವ ಯೋಲಾಂಡಾ ಅವರನ್ನು ವಿವಾಹವಾಗಿದ್ದೇನೆ. 2016ರ ಏಪ್ರಿಲ್‌ನಲ್ಲಿ ನನ್ನ ಪತ್ನಿಯೂ ಆಗಿದ್ದ ಇವರು ನಿಧನರಾದರು. ಇಂಥ ಸ್ಥಿತಿಯಲ್ಲಿ ಇವರ ಪಿಂಚಣಿ ಹಣಕ್ಕೆ ನಾನು ಅರ್ಹನಾಗಿದ್ದೇನೆ ಎಂದು ಮೌರಿಸಿಯೊ ಹೇಳಿದ್ದಾರೆ. ಆದರೆ, ಸಾಕಷ್ಟು ತನಿಖೆಯ ಬಳಿಕ ಈತನ ಮನೆಯ ನೆರೆಹೊರೆಯವರು ಈ ಮದುವೆಯನ್ನು ನಕಲಿ ಎಂದು ಘೋಷಣೆ ಮಾಡಿದಾಗ ಮೌರಿಸಿಯೊ ಅವರ ಅರ್ಜಿ ತಿರಸ್ಕೃತವಾಗಿದೆ.
ಪೋಷಕರಿಂದ ದೂರವಾಗಿದ್ದ ಮೌರಿಸಿಯೊ!
ವಾಯುವ್ಯ ಅರ್ಜೆಂಟೀನಾದ ಸಾಲ್ಟಾ ನಗರದ ಮೌರಿಸಿಯೊ, 2009 ರಲ್ಲಿ ಅವರ ಪೋಷಕರು ಬೇರ್ಪಟ್ಟ ನಂತರ ಅವರ ತಾಯಿ, ಸಹೋದರಿ, ಅಜ್ಜಿ ಮತ್ತು ಹಿರಿಯ ದೊಡ್ಡಮ್ಮನೊಂದಿಗೆ ವಾಸಿಸುತ್ತಿದ್ದರು. 2016 ರಲ್ಲಿ ಯೋಲಾಂಡಾ ಅವರ ಮರಣದ ನಂತರ, ಅವರು ತಮ್ಮ ದೊಡ್ಡಮ್ಮನ ಪಿಂಚಣಿಗಾಗಿ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಮಾರಿಸಿಯೊ ಅವರ ಹೇಳಿಕೆಯ ಮೇಲೆ ಅರ್ಜೆಂಟೀನಾ ಸರ್ಕಾತ ತನಿಖೆಯನ್ನು ಪ್ರಾರಂಭಿಸಲಾಯಿತು, ಇದರಲ್ಲಿ ಕುಟುಂಬದವರು ಮತ್ತು ನೆರೆಹೊರೆಯವರು ಭಾಗಿಯಾಗಿದ್ದಾರೆಂದು ತಿಳಿದಿರುವ ಜನರೊಂದಿಗೆ ಅಧಿಕಾರಿಗಳು ಮಾತನಾಡಿದರು. ನೆರೆಹೊರೆಯವರು ಮದುವೆಯ ಬಗ್ಗೆ ನಮಗೆ ಏನೂ ತಿಳಿದಿಲ್ಲ ಎಂದು ಹೇಳಿದರು. ಇದರ ಪರಿಣಾಮವಾಗಿ ಮಾರಿಸಿಯೊ ಅವರ ಹಕ್ಕು ತಿರಸ್ಕರಿಸಲ್ಪಟ್ಟಿತು. ಆದರೆ ಈಗ ಇದನ್ನು ಸಾಬೀತುಪಡಿಸಲು ದೇಶದ ಸುಪ್ರೀಂ ಕೋರ್ಟ್‌ಗೆ ಹೋಗುತ್ತೇನೆ ಮತ್ತು ಪಿಂಚಣಿಯನ್ನು ಖಂಡಿತವಾಗಿ ಪಡೆಯುತ್ತೇನೆ ಎಂದ ಮೌರಿಸಿಯೊ ಹೇಳಿದ್ದಾರೆ.
ಈ ಬಗ್ಗೆ ಸ್ಥಳೀಯ ಪತ್ರಿಕೆ ಎಲ್ ಟ್ರಿಬುನೊ ಡಿ ಸಾಲ್ಟಾಗೆ ಮಾತನಾಡಿರುವ ಮೌರಿಸಿಯೊ, ‘ನನ್ನ ಜೀವನಕ್ಕೆ ಯೋಲಾಂಡಾ ದೊಡ್ಡ ಬೆಂಬಲ ನೀಡಿದ್ದರು. ನನ್ನ ಮದುವೆಯಾಗುವುದು ಆಕೆಯ ಕೊನೆಯ ಆಸೆಯಾಗಿತ್ತು. ನಾನು ಯೋಲಾಂಡಾರನ್ನು ನನ್ನ ಹೃದಯದಿಂದ ಪ್ರೀತಿಸಿದೆ. ಅವರ ಸಾವಿನಿಂದ ನನ್ನ ಜೀವನದುದ್ದಕ್ಕೂ ದುಃಖಿಸುತ್ತೇನೆ’ ಎಂದು ಹೇಳಿದ್ದಾರೆ.
ನಾನು ಪಿಂಚಣಿಗಾಗಿ ಅರ್ಜಿ ಸಲ್ಲಿಸಲು ಪ್ರಾರಂಭಿಸಿದಾಗ, ನಾನು ಎಲ್ಲಾ ಅಗತ್ಯ ದಾಖಲೆಗಳನ್ನು ತೋರಿಸಿದ್ದೇನೆ, ಆದರೆ, ಇನ್ನೂ ಪಿಂಚಣಿ ಪಡೆಯುವಲ್ಲಿ ಸಮಸ್ಯೆ ಆಗುತ್ತಿದೆ. ಯೋಲಾಂಡಾ 90 ವರ್ಷಕ್ಕಿಂತ ಮೇಲ್ಪಟ್ಟಿರಬಹುದು ಆದರೆ ಆಕೆ ಹೃದಯದಲ್ಲಿ ಚಿಕ್ಕವಳಾಗಿದ್ದಳು. ನಮ್ಮ ಮದುವೆಯಲ್ಲಿ ಯಾವುದೇ ಕಾನೂನು ಸಮಸ್ಯೆ ಬರಬಾರದು ಎಂದು ಬಯಸಿದ್ದಳು. ನನ್ನ ಕಾನೂನು ಅಧ್ಯಯನಕ್ಕೆ ಹಣ ಪಾವತಿಸಲು ಸಹಾಯ ಮಾಡಲು ಕೇಳಿದಾಗ ನಾನು ಹಾಗೂ ಯೊಲಾಂಡಾ ಮದುವೆಯಾಗಲು ನಿರ್ಧರಿಸಿದೆವು ಎಂದು ಮಾರಿಸಿಯೊ ಹೇಳಿದ್ದರು. ನನ್ನ ಪಾಲಕರು ಬೇರ್ಪಟ್ಟ ಬಳಿಕ, ನಾನು ಅಧ್ಯಯನವನ್ನು ಬಿಡಲು ಬಯಸಿದ್ದೆ. ಈ ವೇಳೆ ಯೋಲಾಂಡಾ ಸಹಾಯ ಮಾಡಿದ್ದರು ಎಂದಿದ್ದಾರೆ.