ಲಾಲ್‌ಬಾಗ್‌ನಲ್ಲಿ ಗಂಗರ ವೈಭವ ಶುರು – 12 ದಿನಗಳವರೆಗೆ ನಡೆಯಲಿದೆ ಹೂಗಳ ಹಬ್ಬ

ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಕ್ಕಿದೆ. ಗಂಗರ ಸಾಮ್ರಾಜ್ಯದ ವೈಭವವನ್ನು ಸಸ್ಯಕಾಶಿಯಲ್ಲಿ ಅನಾವರಣ ಮಾಡಲಾಗಿದೆ. ತೋಟಗಾರಿಕೆ ಇಲಾಖೆ ಆಯೋಜಿಸಿರುವ ಈ ಫಲಪುಷ್ಪ ಪ್ರದರ್ಶನಕ್ಕೆ 12 ದಿನಗಳವರೆಗೆ ನಡೆಯಲಿದೆ.
ಇದನ್ನೂ ಓದಿ:ಬೆಂಗಳೂರಲ್ಲಿ ಸೈಟ್ ಪಡೆದು ಮನೆ ಕಟ್ಟದವರಿಗೆ ಡಿಕೆಶಿ ಶಾಕ್ – ನಿವೇಶನ ವಶ, ನಿಮ್ಮ ಹಣ ಬಡ್ಡಿ ಸಮೇತ ವಾಪಸ್
ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ‘ಗಂಗರ ಸಾಮ್ರಾಜ್ಯದ 1,000 ವರ್ಷಗಳ ವೈಭವ ಅನಾವರಣಗೊಳ್ಳಲಿದೆ. ಲಾಲ್‌ಬಾಗ್‌ನ ಪ್ರಸಿದ್ಧ ಗ್ಲಾಸ್ ಹೌಸ್‌ನಲ್ಲಿ ಶ್ರವಣಬೆಳಗೊಳದ ಭಗವಾನ್ ಬಾಹುಬಲಿ ಸ್ವಾಮಿಯ ಬೃಹತ್ ವಿಗ್ರಹ ಹಾಗೂ ತಲಕಾಡಿನ ಐತಿಹಾಸಿಕ ದೇವಾಲಯಗಳ ಆಕರ್ಷಕ ಹೂವಿನ ಪ್ರತಿಕೃತಿಗಳನ್ನು ನಿರ್ಮಿಸಲಾಗಿದೆ. 2.75 ಕೋಟಿ ರೂ. ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಪ್ರದರ್ಶನದಲ್ಲಿ ದೇಶ-ವಿದೇಶಗಳ 130ಕ್ಕೂ ಹೆಚ್ಚು ಅಪರೂಪದ ಹೂವಿನ ತಳಿಗಳನ್ನು ಬಳಸಲಾಗಿದೆ.
ಗಂಗರ ಕಾಲದ ಬೆಂಗಳೂರಿನ ಬೇಗೂರು ದೇವಾಲಯದ ಪುಷ್ಪಮಾದರಿ ಈ ಬಾರಿ ಗಾಜಿನ ಮನೆಯ ವಿಶೇಷ ಆಕರ್ಷಣೆಯಾಗಿದೆ. ಗಜಸೇನೆ ಮತ್ತು ಯುದ್ಧದ ಕಥಾನಕಗಳು ಹೂವಿನಲ್ಲಿ ಅನಾವರಣಗೊಂಡಿದೆ. ಗಂಗರ ಶಾಸನಗಳೂ ಸೇರಿದಂತೆ ಹತ್ತು ಹಲವು ಆಕರ್ಷಣೆಗಳು ನೋಡುಗರ ಮನ ಸೆಳೆಯಲಿವೆ. ಲಾಲ್‌ಬಾಗ್ ಕೆರೆಯ ಬಳಿ ನಯನಮನೋಹರ ಕೃತಕ ಜಲಪಾತ ಮತ್ತು ಪ್ರವಾಸಿಗರನ್ನು ಸೆಳೆಯಲು ಆಕರ್ಷಕ ಸೆಲ್ಫಿ ಪಾಯಿಂಟ್‌ಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಆನ್‌ಲೈನ್ ಟಿಕೆಟ್‌ಗಳ ವ್ಯವಸ್ಥೆ ಮಾಡಲಾಗಿದೆ. ವಾಹನ ದಟ್ಟಣೆ ನಿಯಂತ್ರಿಸಲು ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಲಕ್ಷಾಂತರ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿರುವುದರಿಂದ 136 ಸಿಸಿಟಿವಿ ಕ್ಯಾಮೆರಾಗಳು ಮತ್ತು ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ.

ನೋಡಿರಿ

