ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು! – 76 ರನ್‌ಗಳಿಂದ ಗೆದ್ದ ಸೌತ್‌ ಆಫ್ರಿಕಾ!

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾಗೆ ಹೀನಾಯ ಸೋಲು! – 76 ರನ್‌ಗಳಿಂದ ಗೆದ್ದ ಸೌತ್‌ ಆಫ್ರಿಕಾ!

ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ದ ಹೀನಾಯವಾಗಿ ಸೋತಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನವನ್ನು ತೋರಿದ ದಕ್ಷಿಣ ಆಫ್ರಿಕಾ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೂಪರ್‌-8ರ ಪಂದ್ಯದಲ್ಲಿ ಭಾರತ ತಂಡವನ್ನು 76 ರನ್‌ಗಳಿಂದ ಮಣಿಸಿತು. ಆ ಮೂಲಕ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಟೀಮ್‌ ಇಂಡಿಯಾ ಈ ಟೂರ್ನಿಯಲ್ಲಿ ಮೊದಲ ಸೋಲಿನ ಕಹಿ ಅನುಭವಿಸಿತು.

ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಮಹತ್ವದ ಸುದ್ದಿ! – ಇನ್ಮುಂದೆ ಟಿಕೆಟ್‌ ಬುಕ್ಕಿಂಗ್‌ಗೆ ಈ ದಾಖಲೆ ನೀಡಲೇಬೇಕು!

ಅಹಮದಾಬಾದ್‌ನಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ, 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 187 ರನ್‌ ಗಳಿಸಿತ್ತು. 188 ರನ್‌ಗಳ ಬೃಹತ್‌ ಮೊತ್ತದ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲೇ 111 ರನ್‌ಗಳಿಗೆ ಸರ್ವಪತನ ಕಂಡಿತು.

ಗೆಲ್ಲುವ ವಿಶ್ವಾಸದಲ್ಲಿ ಚೇಸಿಂಗ್‌ ಆರಂಭಿಸಿದ ಭಾರತ ಮೊದಲ ಓವರ್‌ನಿಂದಲೇ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತಾ ಪೆವಿಲಿಯನ್‌ ಪರೇಡ್‌ ನಡೆಸಿತು. ಮೊದಲ ಓವರ್‌ನ 4ನೇ ಎಸೆತದಲ್ಲೇ ಇಶಾನ್‌ ಕಿಶನ್‌ ಏಡನ್‌ ಮಾರ್ಕ್ರಂ ಬೌಲಿಂಗ್‌ಗೆ ವಿಕೆಟ್‌ ಒಪ್ಪಿಸಿದರು. ಪವರ್‌ ಪ್ಲೇ ಮುಗಿಯುವ ಹೊತ್ತಿಗೆ 31 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡಿತ್ತು. ಪವರ್‌ ಪ್ಲೇ ಮುಗಿದ ಬಳಿಕವೂ ಬ್ಯಾಟರ್‌ಗಳು ರನ್‌ ವೇಗ ಹೆಚ್ಚಿಸುವ ಬಗ್ಗೆ ಆಸಕ್ತಿ ತೋರದ ಕಾರಣ ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಆಲೌಟ್‌ ಆಯಿತು.

ಭಾರತದ ಪರ ಆಲ್‌ರೌಂಡರ್‌ ಶಿವಂ ದುಬೆ ಹೊರತುಪಡಿಸಿದ್ರೆ, ಉಳಿದ ಯಾವೊಬ್ಬ ಬ್ಯಾಟರ್‌ ಕೂಡ 20 ರನ್‌ಗಳ ಗಡಿ ದಾಟಲಿಲ್ಲ. ದುಬೆ 37 ಎಸೆತಗಳಲ್ಲಿ 42 ರನ್‌ (3 ಸಿಕ್ಸರ್, 1 ಬೌಂಡರಿ) ಚಚ್ಚಿದ್ರೆ, ಉಳಿದವರು ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿದ್ರು.

ಇನ್ನು ಟೀಂ ಇಂಡಿಯಾ ವಿರುದ್ಧ ಬಿಗಿ ಹಿಡಿತ ಸಾಧಿಸಿದ ದಕ್ಷಿಣ ಆಫ್ರಿಕಾ ಪರ ಮಾರ್ಕೋ ಯಾನ್ಸನ್‌ 3.5 ಓವರ್‌ಗಳಲ್ಲಿ 22 ರನ್‌ ಬಿಟ್ಟುಕೊಟ್ಟು 4 ವಿಕೆಟ್‌ ಕಿತ್ತರೆ, ಕೇಶವ್‌ ಮಹಾರಾಜ್‌ 3 ವಿಕೆಟ್‌, ಕಾರ್ಬಿನ್‌ ಬೋಷ್‌ 2 ವಿಕೆಟ್‌ ಹಾಗೂ ಏಡನ್‌ ಮಾರ್ಕ್ರಂ 1 ವಿಕೆಟ್‌ ಪಡೆದು ಮಿಂಚಿದರು.

ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ದಕ್ಷಿಣ ಆಫ್ರಿಕಾ ತಂಡ ನೊದಲ 4 ಓವರ್‌ಗಳಲ್ಲೇ ಕೇವಲ 20 ರನ್‌ಗಳಿಗೆ ಪ್ರಮುಖ 3 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಜೊತೆಗೂಡಿದ ಡೇವಿಡ್‌ ಮಿಲ್ಲರ್‌ ಹಾಗೂ ಡೇವಾಲ್ಡ್‌ ಬ್ರೇವಿಸ್‌ ಭರ್ಜರಿ ಜೊತೆಯಾಟದ ಮೂಲಕ ಉತ್ತಮ ಇನ್ನಿಂಗ್ಸ್‌ ಕಟ್ಟಿದರು. ಭಾರತೀಯ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚಚ್ಚಿದ ಈ ಜೋಡಿ 51 ಎಸೆತಗಳಲ್ಲಿ 97 ರನ್‌ಗಳ ಭರ್ಜರಿ ಜೊತೆಯಾಟ ನೀಡಿತು. ಸ್ಫೋಟಕ ಅರ್ಧಶತಕ ಗಳಿಸಿದ ಡೇವಿಡ್‌ ಮಿಲ್ಲರ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ದಕ್ಷಿಣ ಆಫ್ರಿಕಾ ಪರ ಡೇವಿಡ್‌ ಮಿಲ್ಲರ್‌ 63 ರನ್‌ (35 ಎಸೆತ, 3 ಸಿಕ್ಸರ್‌, 7 ಬೌಂಡರಿ), ಡೇವಾಲ್ಡ್‌ ಬ್ರೇವಿಸ್‌ 45 ರನ್‌ (29 ಎಸೆತ, 3 ಸಿಕ್ಸರ್‌, 3 ಬೌಂಡರಿ) ಚಚ್ಚಿದರು. ಕೊನೆಯಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ 24 ಎಸೆತಗಳಲ್ಲಿ ಸ್ಫೋಟಕ 44 ರನ್‌ ಚಚ್ಚಿ ತಂಡದ ಮೊತ್ತವನ್ನ 184 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಭಾರತದ ಪರ ಬೆಂಕಿ ಬೌಲಿಂಗ್‌ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 4 ಓವರ್‌ಗಳಲ್ಲಿ ಕೇವಲ 15 ರನ್‌ ಬಿಟ್ಟುಕೊಟ್ಟು 3 ವಿಕೆಟ್‌ ಕಿತ್ತರೆ, ಅರ್ಷ್‌ದೀಪ್‌ ಸಿಂಗ್‌ 2 ವಿಕೆಟ್‌ ಹಾಗೂ ವರುಣ್‌ ಚಕ್ರವರ್ತಿ, ಶಿವಂ ದುಬೆ ತಲಾ ಒಂದೊಂದು ವಿಕೆಟ್‌ ಪಡೆದರು.

Shwetha M