ಬಿಲ್ಲುಗಾರಿಕೆಯಲ್ಲಿ ಭಾರತ ಮಹಿಳಾ ತಂಡ ಹೊಸ ಇತಿಹಾಸ – ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಚಿನ್ನ ಗೆದ್ದ ಇಂಡಿಯಾ

ಬಿಲ್ಲುಗಾರಿಕೆಯಲ್ಲಿ ಭಾರತ ಮಹಿಳಾ ತಂಡ ಹೊಸ ಇತಿಹಾಸ ಸೃಷ್ಟಿಸಿದೆ. ಹಲವು ವರ್ಷಗಳಿಂದ ವಿಶ್ವ ಬಿಲ್ಲುಗಾರಿಕೆಯಲ್ಲಿ ಪ್ರಾಬಲ್ಯ ಸಾಧಿಸಿರುವ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿರುವ ಭಾರತೀಯ ಮಹಿಳಾ ರಿಕರ್ವ್ ತಂಡ ಐತಿಹಾಸಿಕ ಚಿನ್ನದ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದೆ.
ಹೌದು, ಮಹಿಳಾ ರಿಕರ್ವ್ ವಿಭಾಗದ ಫೈನಲ್ನಲ್ಲಿ ಭಾರತ ತಂಡ ಬಲಿಷ್ಠ ದಕ್ಷಿಣ ಕೊರಿಯಾ ತಂಡವನ್ನು ಎದುರಿಸಿತು. ಈ ಪಂದ್ಯದಲ್ಲಿ ಕೊರಿಯಾ ತಂಡವೇ ಗೆಲ್ಲಬಹುದು ಎಂಬ ನಿರೀಕ್ಷೆಗಳಿದ್ದರೂ, ಭಾರತೀಯ ಬಿಲ್ಲುಗಾರ್ತಿಯರು ಅದ್ಭುತ ಪ್ರದರ್ಶನದ ಮೂಲಕ ಎದುರಾಳಿಗೆ ತೀವ್ರ ಪೈಪೋಟಿ ನೀಡಿದರು. ಗುರಿಯ ಮೇಲೆ ನಿಖರವಾಗಿ ಬಾಣ ಪ್ರಯೋಗಿಸಿದ ಭಾರತದ ಆಟಗಾರ್ತಿಯರು ಒತ್ತಡದ ಸಂದರ್ಭದಲ್ಲೂ ತಮ್ಮ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ.
ಇದನ್ನೂ ಓದಿ: ಸ್ವಿಂಗ್, ಸೀಮ್ ಇಲ್ಲ.. ವಿಕೆಟ್ಸ್ ಬೀಳಲ್ಲ – ಬ್ಯಾಟರ್ಸ್ ಬೆಂಕಿಗೆ ಬೌಲರ್ಸ್ ಬಲಿಪಶು
ವಿಶೇಷವೆಂದರೆ, ದಕ್ಷಿಣ ಕೊರಿಯಾ ತಂಡ ಈ ಹಿಂದೆ 10 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಬಲಿಷ್ಠ ತಂಡವಾಗಿದೆ. ಅಂತಹ ತಂಡವನ್ನೇ ಮಣಿಸಿ ಚಿನ್ನ ಗೆದ್ದಿರುವುದು ಭಾರತದ ಬಿಲ್ಲುಗಾರಿಕೆಯ ಇತಿಹಾಸದಲ್ಲಿ ಮಹತ್ವದ ಸಾಧನೆಯಾಗಿದೆ.
ಈ ಗೆಲುವು ಭಾರತೀಯ ಮಹಿಳಾ ಬಿಲ್ಲುಗಾರ್ತಿಯರ ಪರಿಶ್ರಮ, ಶಿಸ್ತು ಮತ್ತು ತಂಡದ ಒಗ್ಗಟ್ಟಿಗೆ ಸಾಕ್ಷಿಯಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡದ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಒಟ್ಟಿನಲ್ಲಿ, ಕೊರಿಯಾದ ಪ್ರಾಬಲ್ಯಕ್ಕೆ ಸವಾಲೆಸೆದು ಚಿನ್ನದ ಪದಕ ಗೆದ್ದಿರುವ ಭಾರತೀಯ ಮಹಿಳಾ ರಿಕರ್ವ್ ತಂಡದ ಸಾಧನೆ ದೇಶದ ಕ್ರೀಡಾಭಿಮಾನಿಗಳಿಗೆ ಸಂಭ್ರಮ ತಂದಿದೆ. ಈ ಐತಿಹಾಸಿಕ ಗೆಲುವು ಮುಂದಿನ ಪೀಳಿಗೆಯ ಬಿಲ್ಲುಗಾರರಿಗೆ ಹೊಸ ಸ್ಫೂರ್ತಿಯಾಗಲಿದೆ.

ನೋಡಿರಿ

