2026ರ ಬಾಬಾ ವಂಗಾರ ಭವಿಷ್ಯ! – ಸುಳ್ಳೆ ಆಗಿಲ್ಲ ಈ ನಿಗೂಢ ಮಹಿಳೆ ಹೇಳಿದ್ದು!
ಈ 5 ರಾಶಿಗಳಿಗೆ ಹಣದ ಸುರಿಮಳೆ

ಇವತ್ ಏನ್ ಆಗುತ್ತೆ ಅನ್ನೋದ್ದಕ್ಕಿಂತ ನಾಳೆ ಏನ್ ಆಗುತ್ತೆ ಅನ್ನೋದೆ ನಮ್ಮ ಜನಕ್ಕೆ ಚಿಂತೆ.. ಭವಿಷ್ಯದಲ್ಲಿ ಏನಾಗುತ್ತದೆ ಎಂಬುದರ ಬಗ್ಗೆ ಬಹುತೇಕ ಜನರಿಗೆ ಯೋಚನೆ ಆಗಿರುತ್ತೆ.. ಸಾಕಷ್ಟು ಜನ ಮುಂದಾಗುವ ಘಟನೆಗಳನ್ನ ಮೊದಲ ಹೇಳಿ ಜನ ಮನ್ನಣೆಯನ್ನ ಪಡೆದ ಸಾಕಷ್ಟು ಭವಿಷ್ಯಗಾರರಿದ್ದಾರೆ. ಈ ಪೈಕಿ ಮೊದಲ ಹೆಸರು ಬರುವುದು ಬಲ್ಗೇರಿಯನ್ ಭವಿಷ್ಯಗಾರ್ತಿ ಬಾಬಾ ವಂಗಾ. ವಿಶ್ವದ ಪ್ರಮುಖ ಘಟನೆಗಳ ಬಗ್ಗೆ ಅವರ ದೂರದೃಷ್ಟಿಯು ಆಸಕ್ತಿ ಮತ್ತು ವಿವಾದವನ್ನು ಹುಟ್ಟುಹಾಕುತ್ತಲೇ ಇದೆ.
2025ರಲ್ಲಿ ಬಾಬಾ ವಂಗಾ ವಿನಾಶಕಾರಿ ವಿಪತ್ತುಗಳು ಮತ್ತು ಜೀವಹಾನಿಯ ಬಗ್ಗೆ ಎಚ್ಚರಿಸಿದ್ದರು. ವಂಗಾರ ಭಯಾನಕ ಭವಿಷ್ಯವಾಣಿಗಳ ಪೈಕಿ ಅನೇಕ ಪ್ರಮುಖ ಘಟನೆಗಳು ನಿಜವಾಗಿವೆ. ಅವರು ಹೇಳಿದಂತೆಯೇ ಯಾವ ವರ್ಷದಲ್ಲಿ ಏನು ನಡಯಬೇಕೋ ಅದು ನಡೆಯುತ್ತದೆ ಎಂದು ನಂಬುವವರು ಇದ್ದಾರೆ. ಹೊಸ ವರ್ಷದ ಬಗ್ಗೆ ವಂಗಾ ನುಡಿದಿರುವ ಭವಿಷ್ಯಗಳು ಇನ್ನಷ್ಟು ಆತಂಕಕಾರಿಯಾಗಿವೆ. ಆದ್ರೆ ಇವರು ನುಡಿದ 2026ರ ಭವಿಷ್ಯ ದೊಡ್ಡ ಮಟ್ಟದಲ್ಲಿ ಈಗ ಚರ್ಚೆ ಆಗುತ್ತಿದೆ.. ಹಾಗಿದ್ರೆ ಬಾಬಾ ವಾಂಗ ಹೇಳಿದ್ದೇನು ಬನ್ನಿ ನೋಡೋಣ..
ಬಾಬಾ ವಂಗಾ ಮುಂದಿನ ವರ್ಷ, ಯುದ್ಧ, ನೈಸರ್ಗಿಕ ವಿಕೋಪಗಳು, ಕೃತಕ ಬುದ್ಧಿಮತ್ತೆಯ ಪ್ರಾಬಲ್ಯ ಮತ್ತು ಅನ್ಯಲೋಕದ ಸಂಪರ್ಕದ ಮುನ್ಸೂಚನೆಗಳನ್ನು ನೀಡಿದೆ. ಈ ವರ್ಷಕ್ಕಿಂತ ಭೀಕರ ಘಟನೆಗಳು ಮುಂದಿನ ವರ್ಷ ನಡೆಯಲಿದೆ ಅನ್ನೋ ಭವಿಷ್ಯ ನುಡಿದಿದ್ದಾರೆ.
ಮಹಾಯುದ್ಧದ ಆರಂಭ
ವರದಿಗಳ ಪ್ರಕಾರ, 2026 ಮೂರನೇ ಮಹಾಯುದ್ಧದ ಆರಂಭವನ್ನು ತರುತ್ತದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ವಸಂತಕಾಲದ ಪೂರ್ವದಲ್ಲಿ ಪ್ರಾರಂಭವಾಗಿ ಪಶ್ಚಿಮಕ್ಕೆ ಹರಡುವ ಸಂಘರ್ಷ ಎಂದು ಅವರು ಇದನ್ನು ವಿವರಿಸಿದ್ದಾರೆ. ಯುದ್ಧವು ಪಾಶ್ಚಿಮಾತ್ಯ
ಪುಟಿನ್ ಜಗತ್ತಿನ ಅಧಿಪತಿ
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರಬಲ ವ್ಯಕ್ತಿಯಾಗಿ ಹೊರಹೊಮ್ಮುತ್ತಾರೆ. ಅವರನ್ನು ಜಗತ್ತಿನ ಅಧಿಪತಿ ಎಂದು ಸಹ ವಿವರಿಸುತ್ತಾರೆ ಎಂದು ಅವರ ಭವಿಷ್ಯವಾಣಿ ಸೂಚಿಸಿದೆ. ಬಾಬಾ ವಂಗಾ ಅವರ ಅನುಯಾಯಿಗಳು ಇದನ್ನು ಸಂಘರ್ಷದ ಸಮಯದಲ್ಲಿ ರಷ್ಯಾ ಕೇಂದ್ರ ಪಾತ್ರವನ್ನು ವಹಿಸುತ್ತದೆ ಎಂಬ ಭವಿಷ್ಯವಾಣಿ ಎಂದು ವ್ಯಾಖ್ಯಾನಿಸುತ್ತಾರೆ.
ನೈಸರ್ಗಿಕ ವಿಕೋಪ
ನೈಸರ್ಗಿಕ ವಿಕೋಪಗಳು ಬಾಬಾ ವಂಗಾ ಅವರ 2026 ರ ಭವಿಷ್ಯವಾಣಿಗಳಲ್ಲಿ ಗಮನಾರ್ಹ ಭಾಗವಾಗಿದೆ. ಭೂಕಂಪಗಳು, ಜ್ವಾಲಾಮುಖಿ ಸ್ಫೋಟಗಳು ಮತ್ತು ತೀವ್ರ ಹವಾಮಾನ ಬದಲಾವಣೆಗಳು ಗ್ರಹದ ಮೇಲೆ ಪರಿಣಾಮ ಬೀರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ. ಭೂಮಿಯ ಭೂಪ್ರದೇಶದ 7–8% ರಷ್ಟು ನಾಶವಾಗಬಹುದು ಎಂದು ಅವರು ಹೇಳಿಕೊಂಡಿದ್ದಾರೆ.
ತಂತ್ರಜ್ಞಾನ
ತಂತ್ರಜ್ಞಾನವು ಬಾಬಾ ವಂಗಾ 2026ರ ಅತ್ಯಂತ ಆಘಾತಕಾರಿ ಭವಿಷ್ಯವಾಣಿಗಳಲ್ಲಿಯೂ ಕಾಣಿಸಿಕೊಂಡಿದೆ. AI ಮಾನವ ಜೀವನವನ್ನು ನಿಯಂತ್ರಿಸುವ ಹಂತಕ್ಕೆ ಮುಂದುವರಿಯುತ್ತದೆ ಎಂದು ಅವರು ಸೂಚಿಸಿದ್ದಾರೆ. ಅವರ ಅನುಯಾಯಿಗಳು ಇದನ್ನು 2026 ರಲ್ಲಿ ಮಾನವೀಯತೆಯು ತಾಂತ್ರಿಕ ವ್ಯವಸ್ಥೆಗಳ ಮೇಲೆ ನಿಯಂತ್ರಣ ಕಳೆದುಕೊಳ್ಳಲು ಪ್ರಾರಂಭಿಸಬಹುದು ಎಂಬ ಮುನ್ಸೂಚನೆ ಎಂದು ವ್ಯಾಖ್ಯಾನಿಸುತ್ತಾರೆ.
ಏಲಿಯನ್ಸ್ ಆಗಮನ
ಅತ್ಯಂತ ಗಮನಾರ್ಹ ಭವಿಷ್ಯವಾಣಿ ಅಂದ್ರೆ ನವೆಂಬರ್ 2026ರಲ್ಲಿ ದೈತ್ಯ ಎಲಿಯನ್ಸ್ ಭೂಮಿಯ ಮೇಲೆ ಇಳಿಯುವುದು. ಇದು ಮಾನವರ ಮೊದಲ ಅಧಿಕೃತ ಅನ್ಯಗ್ರಹ ಜೀವಿಗಳೊಂದಿಗಿನ ಸಂಪರ್ಕವಾಗಿರುತ್ತದೆ ಎಂದು ಬಾಬಾ ವಂಗಾ ಹೇಳಿದ್ದಾರೆ.
ರಾಶಿ ಭವಿಷ್ಯವಾಣಿ
ಬಾಬಾ ವಂಗಾ ಅವರ ಭವಿಷ್ಯವಾಣಿಗಳ ಪ್ರಕಾರ, 2026 ಕೆಲವು ರಾಶಿಗಳಿಗೆ ಅದ್ಭುತ ವರ್ಷವೆಂದು ಸಾಬೀತುಪಡಿಸುತ್ತದೆ. ಮೇಷ, ವೃಷಭ, ಮಿಥುನ, ಸಿಂಹ, ಕುಂಭ ರಾಶಿಯವರು ಅದೃಷ್ಟದವಂತರಾಗುತ್ತಾರೆ. ಇವರಿಗೆ ಹಣದ ನೀರಿನಂತೆ ಹರಿದು ಬರುತ್ತೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಒಟ್ನಲ್ಲಿ ಬಾಬಾ ವಂಗಾರ ಸಾಕಷ್ಟು ಭವಿಷ್ಯ ನಿಜವಾಗಿದ್ದು, 2026ರ ಮೇಲೆ ಕುತೂಹಲ ಹೆಚ್ಚಾಗಿದೆ.

ನೋಡಿರಿ

