ಪಂಜಾಬ್ Or RCBಗೆ ಕಪ್ ಫಿಕ್ಸ್ – ಪಾಯಿಂಟ್ಸ್ ಟೇಬಲ್ ಟಾಪರ್ಸ್‌ಗೆ ಟ್ರೋಫಿ
14 ವರ್ಷದಂತೆ ಈ ವರ್ಷವೂ ಆಗುತ್ತಾ?

ಪಂಜಾಬ್ Or RCBಗೆ ಕಪ್ ಫಿಕ್ಸ್ – ಪಾಯಿಂಟ್ಸ್ ಟೇಬಲ್ ಟಾಪರ್ಸ್‌ಗೆ  ಟ್ರೋಫಿ14 ವರ್ಷದಂತೆ ಈ ವರ್ಷವೂ ಆಗುತ್ತಾ?

ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್ಸ್   14 ಪಂದ್ಯಗಳಿಂದ ತಲಾ 19 ಅಂಕಗಳನ್ನು ಗಳಿಸಿವೆ. ಆದರೆ ಪಂಜಾಬ್ ತಂಡಕ್ಕೆ ಒಳ್ಳೆಯ ರನ್ ರೇಟ್ ಇದ್ದಿದ್ರಿಂದ   ಪಾಯಿಂಟ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ.  ಬೆಂಗಳೂರು  +0.301 ರನ್ ರೇಟ್ ಹೊಂದಿದ್ದು  ಎರಡನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಟೈಟಾನ್ಸ್   ಮೂರನೇ ಸ್ಥಾನ ಪಡೆದರೆ, ಮುಂಬೈ ಇಂಡಿಯನ್ಸ್ 16 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದುಕೊಂಡಿವೆ. ಈ ನಾಲ್ಕು ತಂಡ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟಿದ್ರು ಕೂಡ. ಇಲ್ಲಿ ಇಂಟ್ರೆಸ್ಟಿಂಗ್ ಏನಂದ್ರೆ ಟಾಪ್‌ 2 ನಲ್ಲಿರೋ ತಂಡವೇ ಕಪ್ ಗೆಲ್ಲೋದು ಅನ್ನೋದು..

18ನೇ ಐಪಿಎಲ್ ಸೀಸನ್‌ನಲ್ಲಿ ಟ್ರೋಫಿ ಗೆಲ್ಲುವವರು ಯಾರು? ಈ ಪ್ರಶ್ನೆ ಅಭಿಮಾನಿಗಳ ಮನಸ್ಸಿನಲ್ಲಿ  ಓಡುತ್ತಲೇ ಇದೆ. ಆದರೆ ಕಳೆದ 14 ವರ್ಷಗಳ ಐಪಿಎಲ್​​ ಫಲಿತಾಂಶಗಳನ್ನ ಗಮನಿಸಿದರೆ ಯಾವ ತಂಡ ಚಾಂಪಿಯನ್ ಆಗಬಹುದು ಅನ್ನೋದು ಗೊತ್ತಾಗುತ್ತೆ.  ಹಿಂದಿನ 14 ವರ್ಷಗಳ ಫಲಿತಾಂಶಗಳಂತೆ ಈ ಬಾರಿಯೂ ನಿಜವಾದರೆ, ಆರ್‌ಸಿಬಿ ಅಥವಾ ಪಂಜಾಬ್ ಚಾಂಪಿಯನ್ ಆಗುವುದು ಪಕ್ಕಾ.  ಪ್ಲೇ ಆಫ್ ಅನ್ನೋ ಕಾನ್ಸೆಪ್ಟ್ ಬಂದಿದ್ದು 2011 ರಲ್ಲಿ  ಅಂದ್ರೆ ಕಳೆದ 14 ವರ್ಷಗಳ ಹಿಂದೆ. ಅವಾಗಿಂದ ಟಾಪ್‌ 2 ನಲ್ಲಿರೋ ತಂಡಗಳೇ 13 ಬಾರಿ ಗೆದ್ದಿವೇ. ಒಂದು ಸಲ ಮಾತ್ರ ಟಾಪ್ 3ಯಲ್ಲಿ ಇರೋ ತಂಡ ಗೆದ್ದಿದೆ.. ಹೀಗಾಗಿ ಈ ಸಲ ಟಾಪ್‌ 2ನಲ್ಲಿರೋ ತಂಡಗಳು ಅಂದ್ರೆ ಪಂಜಾಬ್ ಮತ್ತು ಆರ್‌ಸಿಬಿ. ಹೀಗಾಗಿ ಈ ಸಲ ಈ ಎರಡು ಟೀಂನಲ್ಲಿ ಒಂದು ಟೀಂಗೆ ಕಪ್ ಪಕ್ಕಾ ಅಂತಾನೇ ಹೇಳಬಹುದು. 18 ವರ್ಷದ ಇತಿಹಾಸದಲ್ಲಿ ಈ ಎರಡು ಟೀಂಗಳು ಒಂದೇ ಒಂದು ಕಪ್ ಗೆದ್ದಿಲ್ಲ. ಈ ಸಲ ಗೆದ್ದರೆ ಅದು ಇತಿಹಾಸ.

  ಟಾಪ್‌- 2 ನಲ್ಲಿರೋರಿಗೆ ಕಪ್     

ವರ್ಷ                  ತಂಡ                           ಪ್ಲೇ ಆಫ್ ಸ್ಥಾನ 

2011           ಚೆನ್ನೈ ಸೂಪರ್ ಕಿಂಗ್ಸ್                  1ನೇ ಸ್ಥಾನ

2012           ಕೋಲ್ಕತ್ತಾ ನೈಟ್ ರೈಡರ್ಸ್             2ನೇ ಸ್ಥಾನ

2013         ಮುಂಬೈ ಇಂಡಿಯನ್ಸ್                   2ನೇ ಸ್ಥಾನ

2014          ಕೋಲ್ಕತ್ತಾ ನೈಟ್ ರೈಡರ್ಸ್              2ನೇ  ಸ್ಥಾನ    

2015           ಮುಂಬೈ ಇಂಡಿಯನ್ಸ್                  2ನೇ  ಸ್ಥಾನ

2016          ಸನ್‌ರೈಸರ್ಸ್ ಹೈದರಾಬಾದ್           3ನೇ ಸ್ಥಾನ

2017          ಮುಂಬೈ ಇಂಡಿಯನ್ಸ್                   1ನೇ ಸ್ಥಾನ

2018          ಚೆನ್ನೈ ಸೂಪರ್ ಕಿಂಗ್ಸ್                   2ನೇ  ಸ್ಥಾನ

2019          ಮುಂಬೈ ಇಂಡಿಯನ್ಸ್                   1ನೇ ಸ್ಥಾನ

2020          ಮುಂಬೈ ಇಂಡಿಯನ್ಸ್                   1ನೇ ಸ್ಥಾನ

2021           ಚೆನ್ನೈ ಸೂಪರ್ ಕಿಂಗ್ಸ್                  2ನೇ  ಸ್ಥಾನ

2022          ಗುಜರಾತ್ ಟೈಟಾನ್ಸ್                    1ನೇ ಸ್ಥಾನ

2023          ಚೆನ್ನೈ ಸೂಪರ್ ಕಿಂಗ್ಸ್                   2ನೇ  ಸ್ಥಾನ

2024         ಕೋಲ್ಕತ್ತಾ ನೈಟ್ ರೈಡರ್ಸ್               1ನೇ ಸ್ಥಾನ

2025        PBKS ಅಥವಾ ಆರ್‌ಸಿಬಿ?                1 ಮತ್ತು 2 ನೇ ಸ್ಥಾನ 

2011 ಪಾಯಿಂಟ್ಸ್ ಟೇಬಲ್‌ನಲ್ಲಿ  ಮೊದಲ ಸ್ಥಾನದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ಟ್ರೋಫಿ ಗೆದ್ದಿತ್ತು.  2012 ರಲ್ಲಿ 2ನೇ ಸ್ಥಾನದಲ್ಲಿದ್ದ ಕೋಲ್ಕತ್ತಾ ನೈಟ್ ರೈಡರ್ಸ್ ಕಪ್ ಗೆದ್ದಿತ್ತು.  2013 ರಲ್ಲಿ ಮುಂಬೈ ಇಂಡಿಯನ್ಸ್, 2014 ರಲ್ಲಿ ಕೆಕೆಆರ್ ಮತ್ತು 2015 ರಲ್ಲಿ ಮುಂಬೈ ತಂಡಗಳು ಎರಡನೇ ಸ್ಥಾನ ಗಳಿಸಿದ ನಂತರ ಪ್ರಶಸ್ತಿಯನ್ನು ಗೆದ್ದವು. ಆದರೆ ಸನ್‌ರೈಸರ್ಸ್ ಹೈದರಾಬಾದ್  2016ರಲ್ಲಿ ಮೂರನೇ ಸ್ಥಾನ ಪಡೆದೂ ಟ್ರೋಫಿಯನ್ನು ಗೆದ್ದುಕೊಂಡಿತು. ಆದರೆ ಆ ನಂತರ ಮತ್ತೆ ಬೇರೆ ಯಾವ ತಂಡಗಳಿಗೂ ಹೈದರಾಬಾದ್ ಸಾಧನೆಯನ್ನ ಪುನಾವರ್ತಿಸಲು ಸಾಧ್ಯವಾಗಲಿಲ್ಲ. ಮುಂಬೈ ತಂಡ 2017 ರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಯಿತು. ಚೆನ್ನೈ 2018 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ಆಯಿತು. 2019 ಮತ್ತು 2020 ರಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಮುಂಬೈ ಸತತ 2 ಹಾಗೂ ಒಟ್ಟಾರೆ 5ನೇ ಟ್ರೋಫಿಯನ್ನು ಎತ್ತಿ ಹಿಡಿದಿತು. 2021 ರಲ್ಲಿ ಎರಡನೇ ಸ್ಥಾನ ಪಡೆಯುವ ಮೂಲಕ ಸಿಎಸ್‌ಕೆ 4ನೇ ಟ್ರೋಫಿಯನ್ನು ಗೆದ್ದರೆ 2022 ರಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಸ್ಥಾನ ಪಡೆಯುವ ಮೂಲಕ ಟ್ರೋಫಿಯನ್ನು ಗೆದ್ದಿತ್ತು. 2023 ರಲ್ಲಿ CSK ಎರಡನೇ ಸ್ಥಾನ ಮತ್ತು 2024 ರಲ್ಲಿ KKR ಮೊದಲ ಸ್ಥಾನ ಪಡೆದು ಚಾಂಪಿಯನ್ ಆದವು. ಈ ಸಲ ಆರ್‌ಸಿಬಿ ಮತ್ತು ಪಂಜಾಬ್ ಮೊದಲ ಎರಡು ಸ್ಥಾನದಲ್ಲಿದ್ದು, ಯಾರಿಗೆ ಕಪ್ ಅನ್ನೋ ಕುತೂಹಲ ಹೆಚ್ಚಾಗಿದೆ.  ಒಟ್ನಲ್ಲಿ ಕಳೆದ 14 ವರ್ಷದ ಇತಿಹಾಸ ನೋಡಿದ್ರೆ ಈ ಸಲ ಕಪ್ ಆರ್‌ಸಿಬಿಗೇ ತಪ್ಪಿದ್ರೆ ಪಂಜಾಬ್‌ಗೆ ಅನ್ನೋದು ಪಕ್ಕಾ..

Kishor KV