ಟಾಪ್‌ 10 ಸೇನೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?
ಅಯ್ಯೋ.. ಪಾಕ್‌ಗೆ ಇದೆಂಥಾ ಸ್ಥಿತಿ?  

   ಟಾಪ್‌ 10 ಸೇನೆಯಲ್ಲಿ ಭಾರತಕ್ಕೆ ಎಷ್ಟನೇ ಸ್ಥಾನ?ಅಯ್ಯೋ.. ಪಾಕ್‌ಗೆ ಇದೆಂಥಾ ಸ್ಥಿತಿ?  

ಗ್ಲೋಬಲ್ ಫೈರ್ ಪವರ್ ಎಂಬ ಸಂಸ್ಥೆ ಮಿಲಿಟರಿ ಶಕ್ತಿಯ ಆಧಾರದ ಮೇಲೆ ವಿಶ್ವದ ದೇಶಗಳಿಗೆ ಟಾಪ್ ಱಂಕಿಂಗ್ ಪಟ್ಟಿ ನೀಡಿದೆ.  ಗ್ಲೋಬಲ್ ಫೈರ್ ಪವರ್​ ಇಂಡೆಕ್ಸ್ ಪ್ರಕಾರ ಭಾರತ ವಿಶ್ವದ ಟಾಪ್-5 ಶಕ್ತಿಶಾಲಿ ಮಿಲಿಟರಿ ಶಕ್ತಿಗಳಲ್ಲಿ ಒಂದಾಗಿದೆ. ಗ್ಲೋಬಲ್ ಫೈರ್ ಪವರ್ ಸೂಚ್ಯಂಕವು, ಮಿಲಿಟರಿ ಘಟಕಗಳು, ಆರ್ಥಿಕ ಸ್ಥಿತಿ, ಲಾಜಿಸ್ಟಿಕ್ಸ್​ ಸಾಮರ್ಥ್ಯ ಸೇರಿ 60ಕ್ಕೂ ಹೆಚ್ಚು ಅಂಶಗಳನ್ನು ಪರಿಗಣಿಸಿ ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಿದೆ. ಈ ಪಟ್ಟಿಯಲ್ಲಿ ಭಾರತ ವಿಶ್ವದ ಬಲಿಷ್ಠ ಸೇನೆಗಳ ಪೈಕಿ 4ನೇ ಸ್ಥಾನದಲ್ಲಿದೆ. ಬಲಿಷ್ಠ ಸೇನೆಗಳ ಪಟ್ಟಿಯಲ್ಲಿ ಅಮೆರಿಕ ನಂ.1 ಸ್ಥಾನದಲ್ಲಿದ್ದರೆ ರಷ್ಯಾ ಎರಡನೇ ಸ್ಥಾನದಲ್ಲಿದೆ. ಚೀನಾ ಮೂರನೇ ಸ್ಥಾನದಲ್ಲಿದ್ದು ಪಾಕಿಸ್ತಾನ 12ನೇ ಸ್ಥಾನಕ್ಕೆ ಕುಸಿದಿದೆ. ಹಾಗಿದ್ರೆ ಬನ್ನಿ ಯಾವ್ಯಾವ ದೇಶಗಳು ಎಷ್ಟನೇ ಸ್ಥಾನದಲ್ಲಿವೆ ಅನ್ನೋದನ್ನ ನೋಡೋಣ..

ಗ್ಲೋಬಲ್ ಫೈರ್ ಪವರ್ ಇಂಡೆಕ್ಸ್​ ಱಂಕಿಂಗ್​ ಪ್ರಕಾರ ಅಮೆರಿಕ ಮಿಲಿಟರಿ 0.0744 ಸ್ಕೋರ್​ನೊಂದಿಗೆ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಎನಿಸಿದೆ. ರಷ್ಯಾ ಸೇನೆಯು 0.0788 ಮತ್ತು ಚೀನಾ ಮಿಲಿಟರಿಗೆ 0.0788 ಸ್ಕೋರ್ ನೀಡಲಾಗಿದೆ. ಭಾರತವು 0.1184 ಸ್ಕೋರ್​ನೊಂದಿಗೆ ವಿಶ್ವದ 4ನೇ ಅತ್ಯಂತ ಶಕ್ತಿಶಾಲಿ ಮಿಲಿಟರಿ ಶಕ್ತಿಯಾಗಿ ಸ್ಥಾನ ಪಡೆದಿದೆ. ದಕ್ಷಿಣ ಕೊರಿಯಾ ಸೇನೆ ಟಾಪ್ -5 ರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.  ಯುಕೆ 0.1785  ಸ್ಕೋರ್‌ನೊಂದಿದೆ 6 ನೇಸ ಸ್ಥಾನದಲ್ಲಿದೆ. ಫ್ರಾನ್ಸ್ 0.1878 ಸ್ಕೋರ್‌ನೊಂದಿಗೆ 7 ನೇ ಸ್ಥಾನದಲ್ಲಿದ್ರೆ, ಜಪಾನ್ 0.1839 ಸ್ಕೂರ್‌ನೊಂದಿಗೆ 8 ನೇ ಸ್ಥಾನದಲ್ಲಿದೆ. ಟರ್ಕಿ 0.1902 ಸ್ಕೋರ್‌ನೊಂದಿಗೇ 9 ನೇ ಸ್ಥಾನದಲ್ಲಿ ಮತ್ತು ಇಟಲಿ 10ನೇ ಸ್ಥಾನವನ್ನ ಪಡೆದಿದೆ.

 ಪಾಕಿಸ್ತಾನಕ್ಕೆ 12ನೇ ಸ್ಥಾನ 

ಭಾರತದ ಜೊತೆ ಯಾವಗಲು ಕಿರಿಕ್ ಮಾಡೋ ಪಾಕಿಸ್ತಾನ  ಟಾಪ್-10ರ ಪಟ್ಟಿಯಲ್ಲೂ ಸ್ಥಾನ ಪಡೆದಿಲ್ಲ. ಇನ್ನೂ ವಿಶ್ವದಲ್ಲಿ 12ನೇ ಸ್ಥಾನ ಪಡೆದಿರುವ ಪಾಕಿಸ್ತಾನ ಸೇನೆ ಒಟ್ಟು 17.04 ಲಕ್ಷ ಸೇನಾ ಬಲ ಹೊಂದಿದೆ.   ಪಾಕಿಸ್ತಾನವು ಪರಮಾಣು ಶಸ್ತ್ರಾಸ್ತ್ರ ಹೊಂದಿದ್ದರೂ ಸಹ ಗ್ಲೋಬಲ್ ಫೈರ್ ಪವರ್ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ಕುಸಿದಿದೆ. ವಾಯುಪಡೆ, ನೌಕಾಪಡೆ ವಿಷಯದಲ್ಲೂ ಪಾಕಿಸ್ತಾನದ ಸ್ಥಾನ ಭಾರತದ ಹತ್ತಿರಕ್ಕೂ ಇಲ್ಲ.

ಭಾರತದ ವಾಯುಪಡೆಯು ವಿಶ್ವದಲ್ಲೇ 4ನೇ ಸ್ಥಾನದಲ್ಲಿದ್ರೆ,  ನೌಕಾಪಡೆ ವಿಶ್ವದಲ್ಲೇ 6ನೇ ಸ್ಥಾನದಲ್ಲಿದೆ. ಆದರೆ ಪಾಕಿಸ್ತಾನ ವಾಯುಪಡೆ 7ನೇ ಸ್ಥಾನದಲ್ಲಿದ್ದರೆ, ಪಾಕ್​ನ ನೌಕಾಪಡೆ 27ನೇ ಸ್ಥಾನದಲ್ಲಿದೆ. ಭಾರತವು ರಕ್ಷಣಾ ಉತ್ಪಾದನೆ ಮತ್ತು ಸ್ವಾವಲಂಬನೆಗೆ ಒತ್ತು ನೀಡಿದ್ದು ತನ್ನ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ಭಾರತವು ಒಟ್ಟು 51.37 ಲಕ್ಷ ಮಿಲಿಟರಿ ಬಲವನ್ನು ಹೊಂದಿದೆ.ಇದರಲ್ಲಿ 14.55 ಲಕ್ಷ ಸಕ್ರಿಯ ಸೈನಿಕರು ಮತ್ತು 11.55 ಲಕ್ಷ ಮೀಸಲು ಸೈನಿಕರಿದ್ದಾರೆ. 25 ಲಕ್ಷಕ್ಕೂ ಹೆಚ್ಚು ಅರೆಸೇನಾ ಪಡೆಗಳ ಬಲವಿದೆ. ಭಾರತೀಯ ವಾಯುಪಡೆಯಲ್ಲಿ 3,10,575 ಮತ್ತು ನೌಕಾಪಡೆಯಲ್ಲಿ 1,42,251 ಸೈನಿಕರಿದ್ದಾರೆ.ಇನ್ನೂ ಭಾರತವು ಟಿ-90 ಭೀಷ್ಮ ಮತ್ತು ಅರ್ಜುನ ಟ್ಯಾಂಕರ್​ಗಳು, ಬ್ರಹ್ಮೋಸ್​ ಮತ್ತು ಪಿನಾಕಾ ರಾಕೆಟ್ ವ್ಯವಸ್ಥೆಯಂತಹ ಸುಧಾರಿತ ಶಸ್ತ್ರಾಸ್ತ್ರ ಹೊಂದಿದೆ.

ವಿಶ್ವದಲ್ಲಿ 4ನೇ ಸ್ಥಾನದಲ್ಲಿರುವ ಭಾರತೀಯ ವಾಯುಪಡೆಯು 2,229 ವಿಮಾನಗಳನ್ನು ಹೊಂದಿದೆ. ಇದರಲ್ಲಿ 600 ಫೈಟರ್ ಜೆಟ್​​ಗಳು, 899 ಹೆಲಿಕಾಪ್ಟರ್​ಗಳು, 831 ಸಪೋರ್ಟೆಟ್ ವಿಮಾನಗಳಿವೆ.   150 ಯುದ್ಧನೌಕೆಗಳು, ಜಲಾಂತರ್ಗಾಮಿ ನೌಕೆಗಳೊಂದಿಗೆ 6ನೇ ಸ್ಥಾನದಲ್ಲಿದೆ. ಭಾರತ ಯಾವ ದೇಶಕ್ಕೂ ಕಮ್ಮಿ ಇಲ್ಲದಂತೆ ಬೆಳೆಯುತ್ತಿದ್ದು, ಸೇನೆಯಲ್ಲಿ ಸಖತ್ ಸ್ಟ್ರಾಂಗ್ ಆಗುತ್ತಿದೆ.

 

 

Kishor KV

Leave a Reply

Your email address will not be published. Required fields are marked *