ಅಕ್ಟೋಬರ್‌ನಲ್ಲಿ ರಜೆಯ ಸುಗ್ಗಿ – ಬ್ಯಾಂಕ್, ಸರ್ಕಾರಿ ಕಚೇರಿಗೆ ಯಾವಾಗೆಲ್ಲಾ ರಜೆ ಗೊತ್ತಾ?

ಅಕ್ಟೋಬರ್ ತಿಂಗಳಲ್ಲಿ ಕರ್ನಾಟಕದಲ್ಲಿ ಹಬ್ಬಗಳಿಗೆಂದು 5 ದಿನಗಳು ಸರ್ಕಾರಿ ರಜೆ ಇರಲಿದೆ. ಬ್ಯಾಂಕ್‌ಗಳು 11 ದಿನ ರಜೆ ಇರಲಿದ್ದು, ಐಟಿ ಬಿಟಿ, ಖಾಸಗಿ ಕಂಪನಿ ಉದ್ಯೋಗಿಗಳಿಗೆ ವಾರಾಂತ್ಯ ವಿರಾಮ ಸೇರಿ, 13 ದಿನ ಬಿಡುವ ಸಿಗಲಿದೆ. ಇನ್ನು ಶಾಲಾ ಕಾಲೇಜು ಮಕ್ಕಳಿಗೆ ದಸರಾ ರಜೆ ಸೇರಿ ಒಟ್ಟು 12 ದಿನ ರಜೆ ಸಿಕ್ಕಂತಾಗಿದೆ. ಹಾಗಿದ್ರೆ ಯಾವಾಗೆಲ್ಲಾ ರಡೆ ಇರಲಿದೆ ನೋಡೋಣ.
2025 ಅಕ್ಟೋಬರ್‌ನಲ್ಲಿ ಸರ್ಕಾರಿ ರಜೆ ದಿನಗಳು
- ಅಕ್ಟೋಬರ್ 1 ಬುಧವಾರ – ಆಯುಧ ಪೂಜೆ
- ಅಕ್ಟೋಬರ್ 2 ಗುರುವಾರ – ಗಾಂಧಿ ಜಯಂತಿ / ದಸರಾ ವಿಜಯ ದಶಮಿ
- ಅಕ್ಟೋಬರ್ 7 ಮಂಗಳವಾರ – ಮಹರ್ಷಿ ವಾಲ್ಮೀಕಿ ಜಯಂತಿ
- ಅಕ್ಟೋಬರ್ 20 ಸೋಮವಾರ – ನರಕ ಚತುರ್ದಶಿ.
- ಅಕ್ಟೋಬರ್ 22 ಬುಧವಾರ – ಬಲಿಪಾಡ್ಯ/ ದೀಪಾವಳಿ
2025 ಅಕ್ಟೋಬರ್‌ನಲ್ಲಿ ಬ್ಯಾಂಕ್ 11 ರಜೆ ದಿನಗಳು
| ಅಕ್ಟೋಬರ್ 1 | ಆಯುಧ ಪೂಜೆ |
| ಅಕ್ಟೋಬರ್ 2 | ಗಾಂಧಿ ಜಯಂತಿ / ದಸರಾ ವಿಜಯ ದಶಮಿ |
| ಅಕ್ಟೋಬರ್ 5 | ಭಾನುವಾರ |
| ಅಕ್ಟೋಬರ್ 7 | ಮಹರ್ಷಿ ವಾಲ್ಮೀಕಿ ಜಯಂತಿ (ಕರ್ನಾಟಕ ವ್ಯಾಪ್ತಿ ಬ್ಯಾಂಕ್‌ಗಳು) |
| ಅಕ್ಟೋಬರ್ 11 | 2 ನೇ ಶನಿವಾರ |
| ಅಕ್ಟೋಬರ್ 12 | ಭಾನುವಾರ |
| ಅಕ್ಟೋಬರ್ 19 | ಭಾನುವಾರ |
| ಅಕ್ಟೋಬರ್ 20 | ನರಕ ಚತುರ್ದಶಿ |
| ಅಕ್ಟೋಬರ್ 22 | ಬಲಿಪಾಡ್ಯ/ ದೀಪಾವಳಿ |
| ಅಕ್ಟೋಬರ್ 25 | 4 ನೇ ಶನಿವಾರ |
| ಅಕ್ಟೋಬರ್ 26 | ಭಾನುವಾರ |
ಶಾಲಾ ಮಕ್ಕಳಿಗೆ ಅಕ್ಟೋಬರ್ 7 ವರೆಗೂ ದಸರಾ ರಜೆ ಇರಲಿದೆ. ಅ ನಂತರ ದೀಪಾವಳಿಗೆ 2 ದಿನ, 3 ಭಾನುವಾರಗಳು ಸೇರಿ 12 ದಿನ ರಜೆ ಸಿಕ್ಕಂತಾಗಲಿದೆ. ದೀಪಾವಳಿ ರಜೆ ಸೋಮವಾರ – ಬುಧವಾರ ಬಂದಿವುದರಿಂದ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮಂಗಳವಾರವೂ ರಜೆ ನೀಡುವ ಸಾಧ್ಯತೆ ಇದೆ. ಈ ಮೂಲಕ ಮಕ್ಕಳಿಗೆ ಮುಂದಿನ ತಿಂಗಳು 13 ದಿನ ರಜೆ ಸಿಕ್ಕಂತಾಗಲಿದೆ. ದೀಪಾವಳಿಗೆ ಐಟಿ ವಲಯ ಸೇರಿ ಹಲವು ಖಾಸಗಿ ಕಂಪನಿಗಳು ಅಕ್ಟೋಬರ್ 20, 21, 23 (ಸೋಮವಾರದಿಂದ ಬುಧವಾರ) ರಜೆ ನೀಡಿವೆ. ಆ ಹಿಂದಿನ ವಾರಾಂತ್ಯ ಸೇರಿ ಸತಂತ್ರಾಂಶ 5 ದಿನ ರಜೆ ಸಿಗಲಿದೆ. ಇನ್ನು ರಜೆ ಉಳಿಸಿಕೊಂಡು ಉದ್ಯೋಗಿ ಅಕ್ಟೋಬರ್ 24,25 ಕ್ಕೆ ವಯಕ್ತಿಕ ರಜೆ ಪಡೆದುಕೊಂಡೆ 2 ವಾರಾಂತ್ಯಗಳ ರಜೆ ಸೇರಿ ಸತತ 9 ದಿನ ರಜೆಯಲ್ಲಿ ಮಾಜಾ ಮಾಡಬಹುದು.

ನೋಡಿರಿ

