ಅಮೆರಿಕದ ಅತೀ ಕೆಟ್ಟ ನಾಯಕ ಡೊನಾಲ್ಡ್ ಟ್ರಂಪ್! – ಯಾರಿಗೆ ಬೆಸ್ಟ್‌ ನಾಯಕನ ಪಟ್ಟ?

ಅಮೆರಿಕದ ಅತೀ ಕೆಟ್ಟ ನಾಯಕ ಡೊನಾಲ್ಡ್ ಟ್ರಂಪ್! – ಯಾರಿಗೆ ಬೆಸ್ಟ್‌ ನಾಯಕನ ಪಟ್ಟ?

ಅಮೆರಿಕದ ಅತೀ ಕೆಟ್ಟ ನಾಯಕ ಹಾಗೂ ಉತ್ತಮ ನಾಯಕ ಯಾರೆಂಬ ಪಟ್ಟಿ ಬಿಡುಗಡೆಯಾಗಿದೆ. ಅಮೆರಿಕದ ಅತೀ ಕೆಟ್ಟ ನಾಯಕ ಎಂಬ ಕುಖ್ಯಾತಿ ಡೊನಾಲ್ಡ್ ಟ್ರಂಪ್ ಗೆ ಸಿಕ್ಕಿದ್ದು, ಉತ್ತಮ ನಾಯಕನ ಪಟ್ಟ ಅಬ್ರಹಾಂ ಲಿಂಕನ್ ಲಭಿಸಿದೆ.

ಪ್ರೆಸಿಡೆಂಟ್ಸ್ ಡೇ ಮುನ್ನಾ ದಿನ ಈ ಸಮೀಕ್ಷೆ ಬಿಡುಗಡೆಯಾಗಿದೆ. 2024 ರ ಪ್ರೆಸಿಡೆನ್ಶಿಯಲ್ ಗ್ರೇಟ್‌ನೆಸ್ ಪ್ರಾಜೆಕ್ಟ್ ತಜ್ಞರ ಸಮೀಕ್ಷೆ ಪ್ರಕಾರ ಡೊನಾಲ್ಡ್ ಟ್ರಂಪ್ ಅಮೆರಿಕ ಕಂಡ ಅತೀ ಕೆಟ್ಟ ನಾಯಕರಾಗಿದ್ದಾರೆ. ಅಬ್ರಹಾಂ ಲಿಂಕನ್ ಅತ್ಯುತ್ತಮ ನಾಯಕರಾಗಿದ್ದಾರೆ. ಈ ಸಮೀಕ್ಷೆಯಲ್ಲಿ ಸಮೀಕ್ಷೆಯಲ್ಲಿ ಅಧ್ಯಕ್ಷ ಜೋ ಬೈಡನ್ 14ನೇ ಸ್ಥಾನದಲ್ಲಿದ್ದು ಮಾಜಿ ಅಧ್ಯಕ್ಷ ಬರಾಕ್ ಒಬಾಮ ಏಳನೇ ಸ್ಥಾನದಲ್ಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬಿಜೆಪಿ ಭದ್ರಕೋಟೆಯಲ್ಲಿ ಕಮಲ ಅರಳುತ್ತಾ ಅಥವಾ ಕೈ ಮೇಲಾಗುತ್ತಾ ? – ಕರಾವಳಿಯಲ್ಲಿ ಬಿಜೆಪಿಗೆ ಭಯ ಯಾಕೆ?

ಅಮೆರಿಕನ್ ಪ್ರೆಸಿಡೆನ್ಸಿಯಲ್ಲಿ ಪರಿಣತಿ ಹೊಂದಿರುವ ತಜ್ಞರ ಸಮಿತಿಯು ನಡೆಸಿದ ಸಮೀಕ್ಷೆಯು ಅಮೆರಿಕನ್ ಪೊಲಿಟಿಕಲ್ ಸೈನ್ಸ್ ಅಸೋಸಿಯೇಷನ್‌ನ ಅಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ರಾಜಕೀಯ ವಿಭಾಗದ ಪ್ರಸ್ತುತ ಮತ್ತು ಇತ್ತೀಚಿನ ಸದಸ್ಯರನ್ನು ಒಳಗೊಂಡಿತ್ತು. ಸಮೀಕ್ಷೆ ಬಿಡುಗಡೆಯಾದ ನಂತರ ಜೋ ಬೈಡನ್ ಗುಂಪು ಟ್ರಂಪ್​​ನ್ನು ಕೆಣಕಿದೆ.

ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಬೈಡನ್ ಟೀಂ, ನೀವು ಡೊನಾಲ್ಡ್ ಟ್ರಂಪ್ ಅಲ್ಲದೇ ಇದ್ದರೆ ಹ್ಯಾಪಿ ಪ್ರೆಸಿಡೆಂಟ್ಸ್ ಡೇ. “ನಿಮ್ಮ ದೇಶದ ಇತಿಹಾಸದಲ್ಲಿ ಈ ವೃತ್ತಿಯಲ್ಲಿ ತುಂಬಾ ಕಳಪೆ ಆಗುವುದರೆಂದರೆ ಸುಲಭವಲ್ಲ. ಆದರೆ ಡೊನಾಲ್ಡ್ ಟ್ರಂಪ್ ಅದನ್ನು ಮಾಡಲು ಯಶಸ್ವಿಯಾದರು ಮತ್ತು ಏಕೆ ಎಂಬುದು ಸ್ಪಷ್ಟವಾಗಿದೆ ಎಂದಿದೆ.

Shwetha M