ಗೆಳೆಯನ ಖಾತೆಗೆ ಕಳುಹಿಸಿದ್ದು 2000 ರೂ.. ಮರಳಿ ಖಾತೆಗೆ ಬಂದಿತ್ತು 753 ಕೋಟಿ! – ಕ್ಷಣಾರ್ಧದಲ್ಲೇ ಕುಬೇರನಾದ ಯುವಕ
ಹಣಕಾಸಿನ ತೊಂದರೆ ಉಂಟಾದಾಗ ಗೆಳೆಯರ ಬಳಿ ಕೇಳುವುದು ಸಾಮಾನ್ಯ. ಕೆಲವೊಂದು ಬಾರಿ ಫೋನ್ ಪೇ, ಗೂಗಲ್ ಪೇ ಮಾಡಲು ಹೇಳುತ್ತೇವೆ. ಇದೀಗ ಇಲ್ಲೊಬ್ಬ ವ್ಯಕ್ತಿ ತಮ್ಮ ಗೆಳೆಯನ ಖಾತೆಗೆ 2000 ರೂಪಾಯಿ ಹಣವನ್ನು ಗೆಳೆಯ ಖಾತೆಗೆ ವರ್ಗಾಯಿಸಿದ್ದಾರೆ. ಗೆಳೆಯ ಖಾತೆಗೆ ಹಣ ಹಾಕಿದಾತನಿಗೆ ದೊಡ್ಡ ಲಾಟರಿಯೇ ಹೊಡೆದಿದೆ. ಕೆಲವೇ ಹೊತ್ತಲ್ಲಿ ಕೋಟ್ಯಂತರ ರೂಪಾಯಿ ಒಡೆಯನಾಗಿದ್ದಾನೆ.
ಏನಿದು ಘಟನೆ?
ಚೆನ್ನೈ ಮೂಲದ ಮುಹಮ್ಮದ್ ಇದ್ರಿಸ್ ಎಂಬಾತನ ಬಳಿ ಆತನ ಗೆಳೆಯ 2000 ರೂಪಾಯಿ ಹಣವನ್ನು ಬ್ಯಾಂಕ್ ಖಾತೆಗೆ ಹಾಕುವಂತೆ ಹೇಳಿದ್ದ. ಹೀಗಾಗಿ ಆತನ ಕೋರಿಕೆಯಂತೆ ತಮ್ಮ ಕೊಟಕ್ ಮಹೀಂದ್ರ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದ್ದಾನೆ. ಇದಾದ ಕೆಲವೇ ಹೊತ್ತಲ್ಲಿ ಅವರ ಫೋನ್ಗೆ ಬ್ಯಾಂಕ್ ಮೆಸೆಜ್ ಒಂದು ಬಂದಿದೆ. ಇದನ್ನು ಕಂಡು ಆತ ಅಚ್ಚರಿಗೊಂಡಿದ್ದಾನೆ. ಖಾತೆಗೆ 753 ರೂಪಾಯಿ ಹಣ ಬಂದಿದೆ ಎಂದು ಈ ಮೆಸೆಜ್ ಅನ್ನು ಓದಿದ್ದಾನೆ.
ಇದನ್ನೂ ಓದಿ: ಟಾರ್ಗೆಟ್ ರೀಚ್ ಆಗಿಲ್ಲ ಎಂದು ಕೆಲಸದಿಂದ ವಜಾ! – ಸಿಟ್ಟಿಗೆದ್ದ ಉದ್ಯೋಗಿಗಳು ಮಾಡಿದ್ದೇನು ಗೊತ್ತಾ?
ಖಾತೆಗೆ ಬಂದಿದ್ದು 753 ರೂಪಾಯಿ ಅಲ್ಲ!
ಆರಂಭದಲ್ಲಿ ಮೆಸೆಜ್ ಅನ್ನು 753 ರೂಪಾಯಿ ಎಂದು ಆತ ಓದಿದ್ದಾನೆ. ಬಳಿಕ ಆತ ತನ್ನ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದ್ದಾನೆ. ಈ ವೇಳೆ ಆತನಿಗೆ ದೊಡ್ಡ ಅಚ್ಚರಿಯೊಂದು ಕಾದಿತ್ತು. ಆತನ ಅಕೌಂಟ್ನಲ್ಲಿದ್ದ ಹಣ ಎಷ್ಟು ಎಂದು ಆತನಿಗೆ ಲೆಕ್ಕ ಮಾಡಲು ಗೊತ್ತಾಗಿಲ್ಲ. ಅಷ್ಟು ಸೊನ್ನೆಗಳನ್ನು ನೋಡಿ ಅಚ್ಚರಿಗೊಂಡಿದ್ದಾನೆ. ಬಳಿಕ ಆತ ಬ್ಯಾಂಕ್ ಬ್ಯಾಲೆನ್ಸ್ ಲೆಕ್ಕ ಹಾಕಿದಾಗ ತನ್ನ ಅಕೌಂಟ್ಗೆ ಬಂದಿರುವುದು 753 ರೂಪಾಯಿ ಅಲ್ಲ ಎಂದು ಗೊತ್ತಾಗಿದೆ.
ಅಕೌಂಟ್ಗೆ ಹಣ ಬಂದಿದ್ದೆಷ್ಟು?
ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡಿದಾಗ ಆತನಿಗೆ ನಿಜಕ್ಕೂ ಅಚ್ಚರಿ ಕಾದಿತ್ತು. ಆತ ಊಹೆ ಮಾಡಿರದಷ್ಟು ಹಣ ಖಾತೆಗೆ ಜಮೆಯಾಗಿತ್ತು. ಅಕೌಂಟ್ ನಲ್ಲಿ ಬರೋಬ್ಬರಿ 753 ಕೋಟಿ ರೂಪಾಯಿ ಇತ್ತು. ಇದನ್ನು ಕಂಡ ಆತ ಕೂಡಲೇ ಬ್ಯಾಂಕ್ಗೆ ತೆರಳಿದ್ದಾನೆ. ಬಳಿಕ ಈ ವಿಚಾರವನ್ನು ಅವರು ಕೂಡಲೇ ಬ್ಯಾಂಕ್ನ ಸಿಬ್ಬಂದಿ ಗಮನಕ್ಕೆ ತಂದಿದ್ದಾನೆ.
ಈ ಯಡವಟ್ಟು ಆಗಿದ್ದು ಹೇಗೆ?
ಇದ್ರಿಸ್ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸುತ್ತಿದ್ದಂತೆ ಆತನ ಬ್ಯಾಂಕ್ ಖಾತೆಯನ್ನು ಸೀಜ್ ಮಾಡಿದ್ದಾರೆ. ಬಳಿಕ ಈ ಹಣ ಹೇಗೆ ಈತನ ಖಾತೆಗೆ ಬಂದಿದೆ ಎಂದು ಪರೀಕ್ಷಿಸಿದ್ದಾರೆ. ತಾಂತ್ರಿಕ ದೋಷದಿಂದ ಈ ಯಡವಟ್ಟು ಆಗಿದೆ ಎಂದು ಗೊತ್ತಾಗಿದೆ.
ಇದ್ರಿಸ್ ಹೇಳಿದ್ದೇನು?
ಸುಧೀರ್ಘ ಕೆಲಸದಿಂದ ಸ್ವಲ್ಪ ಕಾಲ ವಿಶ್ರಾಂತಿಗಾಗಿ ಮಧ್ಯಾಹ್ನ ಮಲಗಿದ್ದ ವೇಳೆ ನನಗೆ ಮೆಸೇಜ್ ಬಂದಿತ್ತು. ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ನಿಂದ ಬ್ಯಾಂಕ್ನಿಂದ ಬಂದ ಸಂದೇಶದಲ್ಲಿದ್ದ ಇಷ್ಟು ದೊಡ್ಡ ಮೊತ್ತ ನೋಡಿ ನಾನು ಅಚ್ಚರಿಗೊಂಡಿದೆ, ಅಷ್ಟೊಂದು ಸೊನ್ನೆಗಳನ್ನು ಹೊಂದಿರುವ ಕಾರಣ ನಾನು ಅದನ್ನು ಎಷ್ಟು ಮೊತ್ತ ಎಂದು ಓದಲು ಕೂಡ ಸಾಧ್ಯವಿರಲಿಲ್ಲ ಎಂದು ಇದ್ರಿಸ್ ಹೇಳಿದ್ದಾನೆ.
ಇತ್ತೀಚೆಗೆ ಇಂತಹ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿವೆ. ಯಾರದೋ ಖಾತೆಗೆ ಕೋಟ್ಯಂತರ ಹಣ ಬಂದು ಬಿದ್ದು ಅವರನ್ನು ಕೆಲಕಾಲ ಆತಂಕ ಅಚ್ಚರಿಗೆ ಒಳಗಾಗುವಂತೆ ಮಾಡುತ್ತಿದೆ. ಇದಕ್ಕೂ ಮೊದಲು ಚೆನ್ನೈನ ಟಾಕ್ಸಿ ಚಾಲಕರೊಬ್ಬರ ಖಾತೆಗೆ 9 ಸಾವಿರ ಕೋಟಿ ರೂಪಾಯಿ ಇದೇ ರೀತಿ ಕ್ರೆಡಿಟ್ ಆಗಿತ್ತು. ಈತ ತನ್ನ ಖಾತೆಯಲ್ಲಿದ್ದ 21 ಸಾವಿರ ರೂಪಾಯಿ ಹಣವನ್ನು ತನ್ನ ಸ್ನೇಹಿತನಿಗೆ ವರ್ಗಾವಣೆ ಮಾಡಿದ 30 ನಿಮಿಷದ ನಂತರ ಈ ಘಟನೆ ನಡೆದಿತ್ತು. ಬ್ಯಾಂಕ್ ತಮಿಳುನಾಡುವಿನ ಖಾತೆಯಲ್ಲಿ ಈ ಘಟನೆ ನಡೆದಿದ್ದು, ಕೂಡಲೇ ಬ್ಯಾಂಕ್ ತನ್ನ ತಪ್ಪನ್ನು ಅರಿತು ಅವರ ಖಾತೆಯಿಂದ ಹಣವನ್ನು ವಾಪಸ್ ಪಡೆದಿತ್ತು.