ಕಾಡ್ಗಿಚ್ಚು ತಡೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 2000ಕಿಮೀ ಫೈರ್‌ಲೈನ್!
ಬೇಸಿಗೆಗಾಲ ಸಮೀಪಿಸುತ್ತಿದ್ದಂತೆ ಬೆಂಕಿ ಅವಘಡ ಪ್ರಕರಣಗಳು ಹೆಚ್ಚಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿಯೂ ಕಾಡ್ಗಿಚ್ಚು ಹೆಚ್ಚಾಗುತ್ತಿದೆ. ಇದೀಗ ಮುನ್ನೆಚ್ಚರಿಕಾ ಕ್ರಮವಾಗಿ ನಾಗರಹೊಳೆ ಅಭಯಾರಣ್ಯದಲ್ಲಿ ಫೈರ್‌ಲೈನ್ ಎಳೆಯಲು ಮುಂದಾಗಿದೆ.
ಕಾಡ್ಗಿಚ್ಚು ನಿಯಂತ್ರಿಸಲು ಅರಣ್ಯ ಇಲಾಖೆ ಮುಂದಾಗಿದ್ದು, 2000 ಕಿಲೋಮೀಟರ್‌ಗೂ ಹೆಚ್ಚು ಫೈರ್‌ಲೈನ್ ಎಳೆಯಲು ಯೋಜನೆ ರೂಪಿಸಿದೆ. ಇದರ ಭಾಗವಾಗಿ ನಾಗರಹೊಳೆ ಅಭಯಾರಣ್ಯದ 840 ಚದರ ಕಿಲೋಮೀಟರ್ ಪ್ರದೇಶದಲ್ಲಿ ಅಗ್ನಿಶಾಮಕ ರೇಖೆಗಳನ್ನು ಎಳೆಯಲು ಮುಂದಾಗಿದೆ. ಈ ಕಾರ್ಯಕ್ಕೆ ಹೆಚ್ಚುವರಿಯಾಗಿ 400 ಅರಣ್ಯ ವೀಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಜಾಕಿಶ್ರಾಫ್ ಜೀವನ ಗ್ರಾಫ್ ಬದಲಾಗಿದ್ದೆಲ್ಲಿ? – ಅಪ್ಪ ಜ್ಯೋತಿಷಿ.. ಮಗ ಏನೇನ್ ಕೆಲಸ ಮಾಡಿದ್ದ?
ಜೀಪ್‌ಗಳಲ್ಲಿ ಅಳವಡಿಸಲಾಗಿರುವ ಟ್ಯಾಂಕರ್‌ಗಳು, ಸ್ಪ್ರೇಯರ್‌ಗಳು ಮತ್ತು ಇತರ ಅಗತ್ಯ ಯಂತ್ರೋಪಕರಣಗಳನ್ನು ಒಳಗೊಂಡಂತೆ ಇಲಾಖೆಯು ಕಾಡ್ಗಿಚ್ಚನ್ನು ತಡೆಗಟ್ಟಲು ಸಕಲ ಸಿದ್ಧತೆ ಮಾಡಿಕೊಂಡಿದೆ.
ನಾಗರಹೊಳೆ ಬೆಲ್ಟ್‌ನ ಎಂಟು ಶ್ರೇಣಿಗಳಲ್ಲಿ, 2500 ಕಿ.ಮೀ ವರೆಗೆ ಫೈರ್ ಲೈನ್ ಗಳನ್ನು ಎಳೆಯಲಾಗಿದೆ. ಸೂಕ್ಷ್ಮ ವಲಯಗಳಲ್ಲಿ ವಾಚ್ ಟವರ್‌ಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ ಕಾಡ್ಗಿಚ್ಚು ತಡೆಯಲು ಆಗಾಗ್ಗೆ ಮೇಲ್ವಿಚಾರಣೆ ಮಾಡಲು ಡ್ರೋನ್‌ಗಳನ್ನು ಬಳಸಲಾಗುತ್ತದೆ. ವನ್ಯಜೀವಿಗಳಿಗೆ ಆಸರೆಯಾಗಲು ಅರಣ್ಯ ಪ್ರದೇಶದೊಳಗಿನ ಕೆರೆಗಳಿಗೆ ಟ್ರ್ಯಾಕ್ಟರ್‌ಗಳ ಮೂಲಕ ನೀರು ತುಂಬಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿರಾಜಪೇಟೆ ವಿಭಾಗದಲ್ಲಿ ಮಾಕುಟ್ಟ ಅರಣ್ಯ ವ್ಯಾಪ್ತಿಯ ಪ್ರದೇಶಗಳು ಸೇರಿ ಒಟ್ಟು 1012 ಕಿ.ಮೀ ಉದ್ದದ ಫೈರ್‌ಲೈನ್ ಎಳೆಯಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ನಿಗಾ ಇಡಲು ಐದು ತಂಡಗಳನ್ನು ನಿಯೋಜಿಸಲಾಗಿದೆ. ಫೈರ್‌ಲೈನ್‌ಗಳ ಕಾಮಗಾರಿ ಡಿಸೆಂಬರ್‌ನಲ್ಲಿ ಆರಂಭವಾಯಿತು ಎಂದು ತಿಳಿಸಿದ್ದಾರೆ.