ODIನಲ್ಲೂ ಸಿಡಿಗುಂಡು ವೈಭವ್ ಸೂರ್ಯವಂಶಿ ಸೂರ್ಯವಂಶಿ – 200+ ಸ್ಟ್ರೈಕ್ ರೇಟ್ TRADE MARK
ಬಾಸ್ ಬೇಬಿಗಿದ್ಯಾ BOUNCER ಭೀತಿ?

ODIನಲ್ಲೂ ಸಿಡಿಗುಂಡು ವೈಭವ್ ಸೂರ್ಯವಂಶಿ ಸೂರ್ಯವಂಶಿ – 200+ ಸ್ಟ್ರೈಕ್ ರೇಟ್ TRADE MARKಬಾಸ್ ಬೇಬಿಗಿದ್ಯಾ BOUNCER ಭೀತಿ?

ವೈಭವ್ ಸೂರ್ಯವಂಶಿಗೆ ಫಾರ್ಮೆಟ್ ಚೇಂಜ್ ಆದ್ರೂ ಬ್ಯಾಟಿಂಗ್ ಇಂಟೆಂಟ್ ಮಾತ್ರ ಚೇಂಜ್ ಆಗಲ್ಲ. ಟಿ-20 ಆದ್ರೂ ಅಷ್ಟೇ ಏಕದಿನ ಮಾದರಿ ಆದ್ರೂ ಅಷ್ಟೇ. ನಾನು ಆಡೋದೇ ಹಿಂಗೆ ಅಂತಾ ಬಿಗ್ ಹಿಟ್​​ಗಳಲ್ಲೇ ಡೀಲ್ ಮಾಡೋದು. 200 ಅಥವಾ ಅದಕ್ಕಿಂತ ಹೆಚ್ಚಿನ ಸ್ಕ್ರೈಕ್​ನಲ್ಲಿ ಬ್ಯಾಟ್ ಬೀಸೋದನ್ನ ತಮ್ಮ ಟ್ರೇಡ್ ಮಾರ್ಕ್ ಮಾಡ್ಕೊಂಡ್ ಬಿಟ್ಟಿದ್ದಾರೆ. ಈಗ ಅಫ್ಘಾನಿಸ್ತಾನ ಎ ಟೀಂ ವಿರುದ್ಧ ಭಾರತದ ಪರ ಅಗ್ರೆಸ್ಸಿವ್ ಆಗೇ ಬ್ಯಾಟಿಂಗ್ ಮಾಡಿರೋ ಸೂರ್ಯವಂಶಿ ಹೊಸ ಮೆಸೇಜ್ ಪಾಸ್ ಮಾಡಿದ್ದಾರೆ. ಅಟ್ ದಿ ಸೇಮ್ ಟೈಂ ಬಾಸ್ ಬೇಬಿಗೆ ಬೌನ್ಸರ್ ವೀಕ್​ನೆಸ್ ಇದ್ಯಾ ಅನ್ನೋ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ : ಬೆನ್ ಸ್ಟೋಕ್ಸ್ SHAPE OUT – ಕ್ಯಾಪ್ಟನ್ಸಿ ಜೊತೆ ಕರಿಯರ್ ಖತಂ?

ಟೀಂ ಇಂಡಿಯಾದ ಫ್ಯೂಚರ್ ಸ್ಟಾರ್ ಅಂತಾನೇ ಕರೆಸಿಕೊಳ್ತಿರೋ ವಂಡರ್ ಕಿಡ್ ವೈಭವ್ ಸೂರ್ಯವಂಶಿ ಈಗ ಟೀಂ ಇಂಡಿಯಾಗೂ ಸೆಲೆಕ್ಟ್ ಆಗಿ ಆಯ್ತು. ಶ್ರೇಯಸ್ ಅಯ್ಯರ್ ಕ್ಯಾಪ್ಟನ್ಸಿಯಲ್ಲಿ ಡೆಬ್ಯೂ ಮಾಡೋದಷ್ಟೇ ಬಾಕಿ. ಆಲ್ರೆಡಿ ಭಾರತ ಎ ತಂಡದ ಪರ ಏಕದಿನ ಮಾದರಿಯಲ್ಲೂ ಸದ್ದು ಮಾಡೋಕೆ ಸ್ಟಾರ್ಟ್ ಮಾಡಿದ್ದಾರೆ. ಶ್ರೀಲಂಕಾದಲ್ಲಿ ನಡೆಯುತ್ತಿರೋ ತ್ರಿಕೋನ ಸರಣಿಯ ಮೊದಲ ಮ್ಯಾಚಲ್ಲಿ ಲಂಕಾ ವಿರುದ್ಧ 14 ರನ್​ಗಳಿಗೆ ಔಟ್ ಆಗಿದ್ದ ಸೂರ್ಯವಂಶಿ ಈಗ ಅಫ್ಘಾನಿಸ್ತಾನ ವಿರುದ್ಧ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ.

ಒಂದೂ ಸಿಕ್ಸ್ ಬಾರಿಸದೇ 200ರ ಸ್ಟ್ರೈಕ್ ರೇಟ್ ನಲ್ಲಿ ವೈಭವ್ ಬ್ಯಾಟಿಂಗ್!

ಭಾರತ ಎ ಹಾಗೂ ಆಫ್ಘಾನಿಸ್ತಾನ ಎ ನಡುವಿನ ತ್ರಿಕೋನ ಏಕದಿನ ಸರಣಿಯ ಎರಡನೇ ಪಂದ್ಯ ಗುರುವಾರ ನಡೀತಿದೆ. ಈ ಮ್ಯಾಚಲ್ಲಿ ಸೂರ್ಯವಂಶಿ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಪ್ರಭ್ ಸಿಮ್ರಾನ್ ಸಿಂಗ್ ಜೊತೆ ಓಪನರ್ ಆಗಿ ಕಣಕ್ಕಿಳಿದ ಸೂರ್ಯವಂಶಿ ಫಸ್ಟ್ ಬಾಲ್​ನಿಂದಲೇ ಅಟ್ಯಾಕಿಂಗ್ ಮೋಡ್​ನಲ್ಲಿ ಬ್ಯಾಟ್ ಬೀಸಿದ್ರು. ಬೌಂಡರಿಗಳ ಸುರಿಮಳೆಗೆ ಅಫ್ಘಾನ್ ಬೌಲರ್ಸ್ ಅಕ್ಷರಶಃ ಥಂಡಾ ಹೊಡೆದ್ರು. ಕೇವಲ 22 ಬಾಲ್​ಗಳನ್ನ ಫೇಸ್ ಮಾಡಿದ ವೈಭವ್ 9 ಫೋರ್​ಗಳೊಂದಿಗೆ 200ರ ಸ್ಟ್ರೈಕ್‌ರೇಟ್‌ನಲ್ಲಿ 44 ರನ್ ಸಿಡಿಸಿದ್ರು. ಆದ್ರೆ 8ನೇ ಓವರ್​ನಲ್ಲಿ ಬಿಗ್ ಹಿಟ್​ಗೆ ಕೈಹಾಕಿ ವಿಕೆಟ್‌ ಕೀಪರ್‌ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್ ಸೇರಿದ್ರು. 6 ರನ್​ಗಳಿಂದ ಅರ್ಧಶತಕ ಮಿಸ್ ಮಾಡಿಕೊಂಡ್ರು. ಪ್ರಭ್ ಸಿಮ್ರಾನ್ ಸಿಂಗ್​ 121ರ ಸ್ಟ್ರೈಕ್​ರೇಟ್ ಬಿಟ್ರೆ ಉಳಿದೆಲ್ಲಾ ಬ್ಯಾಟರ್ಸ್ ಬಿಲೋ  100 ಒಳಗೆ ಬ್ಯಾಟ್ ಬೀಸಿದ್ರೆ ಸೂರ್ಯವಂಶಿ ಮಾತ್ರ 200ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ರು. ಸೂರ್ಯವಂಶಿ ಆಡೋದೇ ಹಂಗೆ. ಅದೆಲ್ಲಾ ಓಕೆ. ಆದ್ರೆ ಈ ಮ್ಯಾಚಲ್ಲಿ ಸೂರ್ಯವಂಶಿ ಔಟ್ ಆದ ಮೇಲೆ ಹೊಸ ಚರ್ಚೆ ಶುರುವಾಗಿದೆ. ಅದೇನಂದ್ರೆ ಬೌನ್ಸರ್ ಅಂದ್ರೆ ಬಾಸ್ ಬೇಬಿ ಸ್ಟ್ರಗಲ್ ಮಾಡ್ತಾರಾ ಅನ್ನೋದು.

ವೇಗದ ಬೌಲರ್ ಗಳ ಬೌನ್ಸರ್ ಗೆ ವೈಭವ್ ಔಟ್ ಆಗ್ತಾರಾ?

ಬಾಸ್ ಬೇಬಿ, ವಂಡರ್ ಕಿಡ್, ಸಿಕ್ಸರ್ ಮಷಿನ್ ಅಂತೆಲ್ಲಾ ಲೆಜೆಂಡರಿ ಕ್ರಿಕೆಟರ್​ಗಳಿಂದ ಹೊಗಳಿಸಿಕೊಳ್ತಿರೋ ವೈಭವ್ ಸೂರ್ಯವಂಶಿ ವರ್ಲ್ಡ್ ಕ್ಲಾಸ್​ ಬೌಲರ್​ಗಳನ್ನೇ ಚೆಂಡಾಡಿರೋ ಬ್ಯಾಟರ್. ಹೀಗಿದ್ರೂ ಅವ್ರಲ್ಲಿ ವೇಗದ ಬೌಲರ್​ಗಳ ಬೌನ್ಸರ್​ಗಳಿಗೆ ಆನ್ಸರ್ ಇರಲ್ವಾ ಅನ್ನೋ ಚರ್ಚೆ ಹುಟ್ಟಿಕೊಂಡಿದೆ. ಅಫ್ಘಾನಿಸ್ತಾನ ಎ ತಂಡದ ವಿರುದ್ಧದ ಮ್ಯಾಚಲ್ಲೂ ಅಬ್ದುಲ್ಲಾ ಅಹ್ಮದ್​ಝೈ ಅವ್ರ ಬೌನ್ಸರ್​ಗೇ ವೈಭವ್ ಔಟ್ ಆಗಿರುವಂಥದ್ದು. ಇದಕ್ಕೂ ಮುನ್ನ ಐಪಿಎಲ್​ನಲ್ಲೂ ಸಾಕಷ್ಟು ಸಲ ವೈಭವ್ ಬೌನ್ಸರ್​ಗಳ ಮುಂದೆ ಸರೆಂಡೆರ್ ಆಗಿದ್ದಾರೆ.

ಬೌನ್ಸರ್ ಹಾಕಿ ಡಕ್ ಔಟ್ ಮಾಡಿದ್ದ ಪ್ರಫುಲ್ ಹಿಂಗೆ!

ಐಪಿಎಲ್ ನಲ್ಲೂ ಕೂಡ ಈ ಬೌನ್ಸರ್ ವಿಕೆಟ್ ಸಾಕಷ್ಟು ಸದ್ದು ಮಾಡಿತ್ತು. ಅದ್ರಲ್ಲೂ ಏಪ್ರಿಲ್ 13ರಂದು ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಮ್ಯಾಚಲ್ಲಿ ಹೈದರಾಬಾದ್ ತಂಡದ ವೇಗಿ ಪ್ರಫುಲ್ ಹಿಂಗೆ ವೈಭವ್ ಸೂರ್ಯವಂಶಿ ಅವರನ್ನು ಮೊದಲ ಬಾಲಲ್ಲೇ ಡಕ್ ಔಟ್ ಮಾಡೋ ಮೂಲಕ ಸಕ್ಸಸ್ ಆಗಿದ್ರು. ಪಂದ್ಯದ ಬಳಿಕ ಮಾತನಾಡಿದ್ದ ಹಿಂಗೆ ‘ನಾನು, ವೈಭವ್‌ ಸೂರ್ಯವಂಶಿಯನ್ನು ಬೌನ್ಸರ್ ಹಾಕಿ  ಔಟ್ ಮಾಡುತ್ತೇನೆ ಎಂದು ಮೊದಲೇ ಹೇಳಿದ್ದೆ, ಅದನ್ನು ಮಾಡಿ ತೋರಿಸಿದ್ದೇನೆ’ ಎಂದು ಬೀಗಿದ್ದರು. ಅಂದಿನ ಪಂದ್ಯದಲ್ಲಿ ಪ್ರಫುಲ್ ಹಿಂಗೆ ಮೇಲುಗೈ ಸಾಧಿಸಿದ್ದರು. ಆದ್ರೆ ರಿವೇಂಜ್ ಮ್ಯಾಚಲ್ಲಿ ವೈಭವ್ ಸೂರ್ಯವಂಶಿ ಸೇಡು ತೀರಿಸಿಕೊಂಡಿದ್ರು. ಪ್ರಫುಲ್ ಹಿಂಗೆ ಅವರ ಬೌಲಿಂಗ್​ನ ಮೊದಲ ಓವರ್‌ನ ಕೊನೆಯ ನಾಲ್ಕೂ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಮೂಲಕ ರಿವೇಂಜ್ ತಗೊಂಡಿದ್ರು. ಹಾಗೇ 37 ಎಸೆತಗಳಲ್ಲಿ 103 ರನ್ ಬಾರಿಸಿ ಎಸ್‌ಆರ್‌ಎಚ್ ವಿರುದ್ಧ ಮೇಲುಗೈ ಸಾಧಿಸಿದ್ರು. ಹೀಗಿದ್ರೂ ಆ ಪಂದ್ಯವನ್ನ ರಾಜಸ್ಥಾನ ಸೋತಿತ್ತು. ಇನ್ನು ಇದೇ ಹೈದ್ರಾಬಾದ್ ವಿರುದ್ಧ ಎಲಿಮಿನೇಟರ್ ಮ್ಯಾಚಲ್ಲಿ 29 ಬಾಲಲ್ಲೇ 97 ರನ್ಸ್ ಸಿಡಿಸಿ ಶಾರ್ಪ್ ಬೌನ್ಸರ್​ಗೆ ವಿಕೆಟ್ ಒಪ್ಪಿಸಿದ್ರು. ಇನ್ನು ಜಿಟಿ ವಿರುದ್ಧದ ಮ್ಯಾಚಲ್ಲೂ ಮೊಹಮ್ಮದ್ ಸಿರಾಜ್ ಅವ್ರ ಬೌಲಿಂಗ್​ನಲ್ಲಿ ಬೌನ್ಸರ್​ಗೆ ವಿಕೆಟ್ ಕಳ್ಕೊಂಡಿದ್ರು. ಸೋ ಇಲ್ಲಿ ಸೂರ್ಯವಂಶಿಯವ್ರ ಎಲ್ಲಾ ಇನ್ನಿಂಗ್ಸ್​​ ಚೆಕ್ ಮಾಡಿದ್ರೆ ಅತೀ ಹೆಚ್ಚು ಸಲ ಬೌನ್ಸರ್​ಗೆ ಔಟ್ ಆಗಿರೋದು ಗೊತ್ತಾಗ್ತಿದೆ. ಪರ್ಟಿಕ್ಯುಲರ್ ಆಗಿ ಔಟ್ ಸೈಡ್ ಆಫ್ ಸ್ಟಂಪ್​ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ.

ಒಟ್ನಲ್ಲಿ ವೈಭವ್ ಸೂರ್ಯವಂಶಿ ಅವ್ರ ಏಜ್​ಗೂ ಪರ್ಫಾಮೆನ್ಸ್​ಗೂ ನಡುವೆ ಮಿರಾಕಲ್ ಎನ್ನುವಂತೆ ಆಡ್ತಿದ್ದಾರೆ. ಗ್ರೌಂಡ್ ಯಾವುದೇ ಆಗಿರ್ಲಿ ಬೌಲರ್ ಯಾರೇ ಆಗಿದ್ರೂ ಕೇರ್ ಮಾಡದೆ ಫಿಯರ್​ಲೆಸ್ ಆಗಿ ಬ್ಯಾಟ್ ಬೀಸ್ತಿದ್ದಾರೆ. ಆದ್ರೆ ಬೌನ್ಸರ್ ಫೋಬಿಯಾದಿಂದ ಸ್ವಲ್ಪ ಹೊರಬರ್ಬೇಕಿದೆ. ಯಾಕಂದ್ರೆ ಒನ್ಸ್ ಇದು ಆಪೋಸಿಟ್​ ತಂಡಗಳಿಗೆ ಅಸ್ತ್ರವಾದ್ರೆ ಅದೇ ಕಂಟಿನ್ಯೂ ಆಗ್ತಿರುತ್ತೆ. ಹೀಗಾಗಿ ಸೂರ್ಯವಂಶಿ ಬೌನ್ಸರ್ ಅನ್ನೂ ವೀಕ್​ನೆಸ್​ನ ಮೆಟ್ಟಿ ನಿಂತ್ರೆ ಅವ್ರನ್ನ ತಡೆಯೋರೂ ಯಾರೂ ಇರಲ್ಲ.

Shantha Kumari

Leave a Reply

Your email address will not be published. Required fields are marked *