ಬೆಂಗಳೂರಿಗರೇ ಎಚ್ಚರ.. – ಇನ್ನುಮುಂದೆ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ದಂಡ!

ಬೆಂಗಳೂರಿಗರೇ ಎಚ್ಚರ.. – ಇನ್ನುಮುಂದೆ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ದಂಡ!

ಸಿಲಿಕಾನ್‌ ಬೆಂಗಳೂರಿನ ಪಕ್ಷಿ ಪ್ರೇಮಿಗಳಿಗೆ ಮಹತ್ವದ ಸುದ್ದಿಯೊಂದಿದೆ. ಇನ್ನುಮುಂದೆ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ದಂಡ ಬೀಳಲಿದೆ.

ಸದ್ಯ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ದಿನದಿಂದ‌ ದಿನಕ್ಕೆ ಪಾರಿವಾಳಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.‌ ಪಾರಿವಾಳಗಳು ಕಂಡಾಗ ಆಹಾರ ಹಾಕುವವರ ಸಂಖ್ಯೆ ಕೂಡ ಹೆಚ್ಚಿದೆ. ಇದೀಗ ಪಾರಿವಾಳಗಳಿಗೆ ಆಹಾರ ಹಾಕಿದರೆ ರೂ 200 ದಂಡ ವಿಧಿಸುವ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಹೀಗಾಗಿ ಪಾರಿವಾಳಗಳ ಹಾಟ್ ಸ್ಪಾಟ್​ಗಳಾದ ರೇಸ್ ಕೋರ್ಸ್ ರೋಡ್, ಕಬ್ಬನ್ ಪಾರ್ಕ್, ಸ್ಯಾಂಕಿ ಟ್ಯಾಂಕಿ ರಸ್ತೆಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕಿದ್ರೆ ದಂಡ ವಿಧಿಸಲಾಗುವುದು ಎಂದು ಬೋರ್ಡ್‌ಗಳನ್ನು ಹಾಕಲಾಗಿದೆ.

ಇದನ್ನೂ ಓದಿ: ಅಜ್ಜಿ – ಮೊಮ್ಮಗಳಿಗೆ ಫ್ರೀ ಬಸ್‌ ಪ್ರಯಾಣ – ನಾಲ್ಕು ಲವ್ ಬರ್ಡ್ಸ್​​ಗೆ ಬರೋಬ್ಬರಿ 444ರೂ. ಟಿಕೆಟ್!

ಇನ್ನು ಈ 200 ರೂ ದಂಡ ಹಾಕೋದಿಕ್ಕೆ ಕಾರಣ ಸಧ್ಯ ಪರಿವಾಳ‌ಗಳ‌ ಸಂಖ್ಯೆ ಹೆಚ್ಚಾಗಿರುವುದು. ಪರಿವಾಳಗಳ ರೆಕ್ಕೆಗಳಿಂದ‌ ಅಸ್ತಮ ಕೇಸ್​ಗಳು ಹೆಚ್ಚಾಗ್ತಿವೆ.‌ ಈ ಬೇಸಿಗೆಯ ಸಮಯದಲ್ಲಿ ಪರಿವಾಳಗಳು ಹೆಚ್ಚಾದ್ರೆ ಆರೋಗ್ಯದ ಮೇಲೆ‌ ಪರಿಣಾಮ ಬೀರಲಿದೆ.‌ ಅಲ್ಲದೇ ರೇಸ್ ಕೋರ್ಸ್ ಸರ್ಕಲ್ ನಲ್ಲಿ ಅಭಿವೃದ್ಧಿ ಕೆಲಸ ಶುರು ಆಗಿದೆ. ರೇಸ್ ಕೋರ್ಸ್ ರಸ್ತೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪರಿವಾಳಗಳಿವೆ. ದಿನನಿತ್ಯ ಇಲ್ಲಿಗೆ ಪಕ್ಷಿ ಪ್ರಿಯರು ಬಂದು ಅವುಗಳಿಗೆ ನೀರು, ಆಹಾರ ನೀಡ್ತಾರೆ. ಇದ್ರಿಂದ ರೇಸ್ ಕೋರ್ಸ್ ರಸ್ತೆ ಸರ್ಕಲ್ ಸಂಪೂರ್ಣವಾಗಿ ಪಾರಿವಾಳ ಪಿಕ್ಕೆಯಿಂದ ಹಾಳಾಗ್ತಿದೆ. ಇದನ್ನ ತಪ್ಪಿಸಲು ಪಾಲಿಕೆ‌ ಈ ರೀತಿಯಾಗಿ ದಂಡ ಪ್ರಯೋಗಕ್ಕೆ‌ ಮುಂದಾಗಿದೆ.

Shwetha M