ಕ್ರೀಡಾಪಟುಗಳಿಗೆ BIG ಗುಡ್‌ನ್ಯೂಸ್! ಸರ್ಕಾರಿ -ಉದ್ಯೋಗದಲ್ಲಿ 2% ಮೀಸಲಾತಿ!

ಕ್ರೀಡಾಪಟುಗಳಿಗೆ BIG ಗುಡ್‌ನ್ಯೂಸ್! ಸರ್ಕಾರಿ -ಉದ್ಯೋಗದಲ್ಲಿ 2% ಮೀಸಲಾತಿ!

ಕರ್ನಾಟಕದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಸರ್ಕಾರದಿಂದ ಗುಡ್‌ನ್ಯೂಸ್ ಸಿಕ್ಕಿದೆ. ಕ್ರೀಡಾಪಟುಗಳಿಗೆ ರಾಜ್ಯ ಸಿವಿಲ್ ಹುದ್ದೆಗಳ ಸೇವೆಗಳಲ್ಲಿನ ನೇಮಕಾತಿಯಲ್ಲಿ ಶೇಕಡಾ 2ರಷ್ಟು ಮೀಸಲಾತಿ ನೀಡುವ ಮಹತ್ವದ ಆದೇಶವನ್ನು ಸರ್ಕಾರ ಇದೀಗ ಪ್ರಕಟಿಸಿದೆ.

ಈ ಹಿಂದೆ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ) ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರುವ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಇದೀಗ ಆ ತಿದ್ದುಪಡಿ ನಿಯಮಗಳು ಜಾರಿಗೆ ಬರುವಂತೆ ಸರ್ಕಾರ ಮೀಸಲಾತಿ ಆದೇಶ ಹೊರಡಿಸಿದೆ.

ಇದರ ಮೂಲಕ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ಅರ್ಹ ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಪಡೆಯಲು ಹೊಸ ಅವಕಾಶ ಸಿಗಲಿದೆ. ಕ್ರೀಡೆಯಲ್ಲಿ ಸಾಧನೆ ಮಾಡುವ ಯುವಕರಿಗೆ ಉದ್ಯೋಗದ ಭದ್ರತೆ ನೀಡುವ ಜೊತೆಗೆ, ಮತ್ತಷ್ಟು ಜನರು ಕ್ರೀಡೆಯತ್ತ ಆಕರ್ಷಿತರಾಗಲು ಈ ನಿರ್ಧಾರ ಸಹಕಾರಿಯಾಗಲಿದೆ.

ಇದನ್ನೂ ಓದಿ: ಅಭಿಮನ್ಯುಗೆ ರಾಜಮರ್ಯಾದೆ! ಮೈಸೂರು ಪೇಟ ಹಾಕಿ ಅದ್ಧೂರಿ ಸ್ವಾಗತ!

ಇದುವರೆಗೆ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದರೂ ಉದ್ಯೋಗದ ಅವಕಾಶಗಳ ಬಗ್ಗೆ ಆತಂಕ ಹೊಂದಿದ್ದ ಅನೇಕ ಕ್ರೀಡಾಪಟುಗಳಿಗೆ ಈ ಮೀಸಲಾತಿ ದೊಡ್ಡ ಉತ್ತೇಜನ ನೀಡುವ ನಿರೀಕ್ಷೆಯಿದೆ.

ಕ್ರೀಡೆಯಲ್ಲಿ ಪದಕ ಗೆಲ್ಲುವ ಕನಸು ಕಾಣುತ್ತಿರುವ ಯುವಕರಿಗೆ ಸರ್ಕಾರದ ಈ ನಿರ್ಧಾರ ಹೊಸ ಭರವಸೆ ನೀಡಿದೆ. ಇನ್ನು ಮುಂದೆ ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಗೌರವದ ಜೊತೆಗೆ ಸರ್ಕಾರಿ ಸೇವೆಯಲ್ಲೂ ಅವಕಾಶ ದೊರೆಯಲಿದೆ.

Kishor KV

Leave a Reply

Your email address will not be published. Required fields are marked *