ಒಂದೇ ರನ್‌ವೇಯಲ್ಲಿ ಏಕಕಾಲಕ್ಕೆ ಎರಡು ವಿಮಾನಗಳು ಟೇಕ್‌ಆಫ್ ! – ಮುಂದೇನಾಯ್ತು ಗೊತ್ತಾ?
ದೆಹಲಿ ವಿಮಾನ ನಿಲ್ದಾಣದಲ್ಲಿ ವಿಸ್ತಾರಾ ಏರ್‌ಲೈನ್ಸ್‌ನ ವಿಮಾನವೊಂದಕ್ಕೆ ಲ್ಯಾಂಡಿಂಗ್ಗೆ ಅನುಮತಿ ನೀಡಿರುವ ವೇಳೆಯೇ ಮತ್ತೊಂದು ವಿಸ್ತಾರ ವಿಮಾನಕ್ಕೆ ಟೇಕ್ ಆಫ್ ಕ್ಲಿಯರೆನ್ಸ್ ನೀಡಿದ ಘಟನೆ ನಡೆದಿದೆ. ಸಿಬ್ಬಂದಿಗಳ ಅಜಾಗರೂಕತೆ ಭಾರಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಬೆಳಗ್ಗೆ ಈ ಅವಘಡ ಸಂಭವಿಸಿದೆ. ದೆಹಲಿ-ಬಾಗ್ಡೋಗ್ರಾ ವಿಮಾನವು ಇತ್ತೀಚೆಗೆ ಉದ್ಘಾಟನೆಗೊಂಡ ರನ್‌ವೇಯಲ್ಲಿ ಟೇಕ್ ಆಫ್ ಪ್ರಕ್ರಿಯೆಯಲ್ಲಿತ್ತು. ಅದೇ ಸಮಯದಲ್ಲಿ, ಅಹಮದಾಬಾದ್‌ನಿಂದ ಬರುತ್ತಿದ್ದ ವಿಸ್ತಾರಾ ವಿಮಾನವು ಇದೇ ರನ್‌ವೇಯಲ್ಲಿ ಬಂದು ಇಳಿದಿದೆ. ತಕ್ಷಣ ರನ್‌ವೇಯನ್ನು ನಿಯಂತ್ರಣಕ್ಕೆ ತೆಗೆದುಕೊಂಡು, ಟೇಕ್ ಆಫ್ ಆಗುತ್ತಿದ್ದ ವಿಮಾನಕ್ಕೆ ವಾಯು ಸಂಚಾರ ನಿಯಂತ್ರಣಾಲಯ (ATC) ಸೂಚನೆ ನೀಡಿದೆ.
ಇದನ್ನೂ ಓದಿ: ಭಾರತದ ಅತ್ಯಂತ ಕೆಟ್ಟ ಸ್ಟ್ರೀಟ್‌ಫುಡ್ ಲಿಸ್ಟ್ ಬಿಡುಗಡೆ! – ಕಳಪೆ ದರ್ಜೆಯ ಆಹಾರ ಎಂಬ ಕುಖ್ಯಾತಿ ಪಡೆದ ದಹಿಪುರಿ!
ಇನ್ನು ಎರಡೂ ವಿಮಾನಗಳಿಗೆ ಏಕಕಾಲದಲ್ಲಿ ಒಂದೇ ರನ್‌ವೇಯಲ್ಲಿ ಟೇಕ್-ಆಫ್ ಮತ್ತು ಲ್ಯಾಂಡಿಂಗ್ಗೆ ಅನುಮತಿ ನೀಡಲಾಗಿತ್ತು. ಆದರೆ ತಕ್ಷಣ ATC (ವಾಯು ಸಂಚಾರ ನಿಯಂತ್ರಣಾಲಯ) ನಿಯಂತ್ರಣ ತೆಗೆದುಕೊಂಡು ಭಾರೀ ಅನಾಹುತವನ್ನು ತಪ್ಪಿಸಿದೆ. ಈ ಸಮಯದಲ್ಲಿ ಕರ್ತವ್ಯದಲ್ಲಿದ್ದ ಎಟಿಸಿ ಅಧಿಕಾರಿಯು ಟೇಕ್-ಆಫ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ವಿಸ್ತಾರಾ ವಿಮಾನದ ಲ್ಯಾಂಡಿಂಗ್ಗೆ ನಿರ್ದೇಶಿಸಲಾಗಿತ್ತು.
ಇನ್ನು ವಿಮಾನಯಾನ ಅಧಿಕಾರಿಗಳು ದೆಹಲಿಯಿಂದ ಬಾಗ್ಡೋಗ್ರಾ ಹೋರಾಟ ವಿಮಾನದ ಇಂಧನ ಮೀಸಲು ಪರೀಕ್ಷೆ ಮತ್ತು ಬಾಗ್ಡೋಗ್ರಾ ಗಮ್ಯಸ್ಥಾನದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳ ಬಗ್ಗೆ ನೋಡಿಕೊಂಡು ಟೇಕ್ ಆಪ್ ಮಾಡಲಾಗುವುದು ಎಂದು ಹೇಳಿದ್ದರು. ಒಂದು ವೇಳೆ ಟೇಕ್ ಆಪ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸದಿದ್ದರೆ ಖಂಡಿತ ದೊಡ್ಡ ಅನಾಹುತವಾಗುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳು ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಕಾರ್ಯವಿಧಾನಗಳ ಸಮಯದ ಬಗ್ಗೆ ಎಚ್ಚರಿಕೆ ವಹಿಸಬೇಕಿತ್ತು ಎಂದು ಹೇಳಿದ್ದಾರೆ. ಇನ್ನು ATC ಯಿಂದ ಬಂದ ಸೂಚನೆಯಂತೆ ಟೇಕ್-ಆಫ್ ಪ್ರಕ್ರಿಯೆಯನ್ನು ಮುಂದೂಡಲಾಗುವುದು ಎಂದು ಪೈಲೆಟ್ ಹೇಳಿದಾಗ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಆಂತಕ ಉಂಟಾಗಿದೆ ಎಂದು ಹೇಳಿದ್ದಾರೆ. ನಂತರ ಎಲ್ಲವನ್ನು ನೋಡಿಕೊಂಡು ದೆಹಲಿಯಿಂದ ಬಾಗ್ಡೋಗ್ರಾಗೆ ಹೊರಟಕ್ಕೆ ಟೇಕ್ ಆಫ್ ಆದೇಶವನ್ನು ನೀಡಲಾಗಿದೆ.