ಅಕ್ಟೋಬರ್ ತಿಂಗಳಲ್ಲಿ 2 ಗ್ರಹಣ! – ಶುಭ್ರ ಆಗಸದಲ್ಲಿ ಉರಿಯುವ ರಿಂಗ್ ನಂತೆ ಕಾಣಿಸಿಕೊಳ್ಳಲಿದ್ದಾನೆ ರವಿಮಾಮ!
ಈ ಬಾರಿಯ ಅಕ್ಟೋಬರ್ ತಿಂಗಳಿನಲ್ಲಿ ಸೂರ್ಯ ಗಹ್ರಣ ಹಾಗೂ ಚಂದ್ರಗ್ರಹಣ ಸಂಭವಿಸಲಿದೆ. ಸೂರ್ಯಗ್ರಹಣವು ಬಾಹ್ಯಾಕಾಶ ವಿಸ್ಮಯಗಳನ್ನು ನೋಡುವ ಆಕಾಂಕ್ಷೆಯುಳ್ಳವರಿಗೆ ಒಂದು ರೀತಿಯ ಸುಂದರ ಅನುಭವವನ್ನು ನೀಡಲಿದೆ ಎಂದು ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಹೇಳಿದೆ.
ಈ ವರ್ಷ, 4 ಗ್ರಹಣಗಳಲ್ಲಿ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಸಂಭವಿಸಿತು. ನಂತರ ಎರಡನೇ ಚಂದ್ರಗ್ರಹಣವು ಮೇ 5 ರಂದು ಸಂಭವಿಸಿತು. ಈಗ ಎರಡು ಗ್ರಹಣಗಳು ಅಕ್ಟೋಬರ್‌ನಲ್ಲಿ ಸಂಭವಿಸಲಿವೆ. ವರ್ಷದ ಮೂರನೇ ಗ್ರಹಣ ಅಕ್ಟೋಬರ್ 14 ರಂದು ಸಂಭವಿಸುತ್ತದೆ. ಇದು ವೃತ್ತಾಕಾರದ ಸೂರ್ಯಗ್ರಹಣವಾಗಿದೆ. ಈ ಸೂರ್ಯಗ್ರಹಣ ಶುಭ್ರ ಆಗಸದಲ್ಲಿ ಅದು ಉರಿಯುವ ರಿಂಗ್ ನಂತೆ ಕಾಣಲಿದೆ. ವೈಜ್ಞಾನಿಕ ಸಲಕರಣೆಗಳ ಮೂಲಕ ಸುಂದರ ಕಲಾಕೃತಿಯಂತೆ ಕಾಣುವ ಸೂರ್ಯಗ್ರಹಣವನ್ನು ನೋಡಬಹುದು ಅಂತಾ ನಾಸಾ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಬೇಸರದ ಸಂಗತಿಯೆಂದರೆ ಈ ಸೂರ್ಯಗ್ರಹಣ ಭಾರತಕ್ಕೆ ಗೋಚರವಾಗುವುದಿಲ್ಲ. ಅಮೆರಿಕ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಮಾತ್ರ ಗೋಚರವಾಗುತ್ತದೆ. ಸೂರ್ಯಗ್ರಹಣ ಟೆಕ್ಸಾಸ್, ಮೆಕ್ಸಿಕೊ, ಮಧ್ಯ ಅಮೆರಿಕ, ಕೊಲಂಬಿಯಾ, ಬ್ರೆಜಿಲ್‌ನ ಕೆಲವು ಭಾಗಗಳಲ್ಲಿ, ಅಲಾಸ್ಕಾ ಮತ್ತು ಅರ್ಜೆಂಟೀನಾದಲ್ಲಿ ಗ್ರಹಣ ಗೋಚರಿಸಲಿದೆ ಎಂದು ನಾಸಾ ಹೇಳಿದೆ.
ಇದನ್ನೂ ಓದಿ: ಸೂರ್ಯನ ದೊಡ್ಡ ಭಾಗ ಒಡೆದು ಸೃಷ್ಟಿಯಾಯ್ತು ಸುಳಿ – ಭಾಸ್ಕರನ ಕೋಪಕ್ಕೆ ವಿಜ್ಞಾನಲೋಕವೇ ದಿಗ್ಭ್ರಮೆ..!
ವರ್ಷದ ನಾಲ್ಕನೇ ಮತ್ತು ಕೊನೆಯ ಗ್ರಹಣ ಅಕ್ಟೋಬರ್ 28 ರಂದು ನಡೆಯಲಿದೆ. ಇದು ಚಂದ್ರಗ್ರಹಣ ಆಗಿರುತ್ತದೆ. ಈ ಗ್ರಹಣವು ಭಾರತದ ಕೆಲವು ಭಾಗಗಳಲ್ಲಿ ಶರದ್ ಪೂರ್ಣಿಮೆಯ ಸಮಯದಲ್ಲಿ ಗೋಚರಿಸುತ್ತದೆ. ಆದ್ದರಿಂದ ಅದರ ಅವಧಿಯು ಭಾರತಕ್ಕೆ ಮಾನ್ಯವಾಗಿರುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತವನ್ನು ಹೊರತುಪಡಿಸಿ, ಯುರೋಪ್, ಆಸ್ಟ್ರೇಲಿಯಾ, ಉತ್ತರ-ದಕ್ಷಿಣ ಆಫ್ರಿಕಾ, ಆರ್ಕ್ಟಿಕ್, ಅಂಟಾರ್ಟಿಕಾ, ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಏಷ್ಯಾ ಸೇರಿದಂತೆ ಹಿಂದೂ ಮಹಾಸಾಗರದ ಹಲವು ಭಾಗಗಳಲ್ಲಿ ಇದು ಗೋಚರಿಸುತ್ತದೆ. ಈ ಗ್ರಹಣವು ಶುಕ್ರವಾರ, ಅಕ್ಟೋಬರ್ 29 ರಂದು 1:06 ಕ್ಕೆ ಗೋಚರಿಸುತ್ತದೆ ಮತ್ತು 2:22 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣದಲ್ಲಿ ಚಂದ್ರನ ಬಣ್ಣ ಕಿತ್ತಳೆ ಬಣ್ಣದಂತೆ ಕಾಣುತ್ತದೆ. ವರ್ಷದ ಎರಡನೇ ಚಂದ್ರಗ್ರಹಣವನ್ನು ಭಾರತದಿಂದ ನೋಡಬಹುದಾಗಿದೆ, ಕ್ಟೋಬರ್ 29 ರಂದು ಬೆಳಗ್ಗೆ 01:44:05 ಕ್ಕೆ ಹೊಸದಿಲ್ಲಿಯಲ್ಲಿ ಗರಿಷ್ಠ ಗ್ರಹಣ ಗೋಚರಿಸಲಿದೆ.