ಕಂಠಪೂರ್ತಿ ಕುಡಿದು ತೂರಾಡಿದ್ರು.. ಐಫೆಲ್ ಟವರ್ ಏರಿ ರಾತ್ರಿ ಇಡೀ ಮಲಗಿದ್ರು ಈ ಭೂಪರು..!

ಕಂಠಪೂರ್ತಿ ಕುಡಿದು ತೂರಾಡಿದ್ರು.. ಐಫೆಲ್ ಟವರ್ ಏರಿ ರಾತ್ರಿ ಇಡೀ ಮಲಗಿದ್ರು ಈ ಭೂಪರು..!

ಕಂಠ ಪೂರ್ತಿ ಕುಡಿದ್ರೆ ಅನೇಕರಿಗೆ ವಾಸ್ತವ ಪ್ರಪಂಚದ ಅರಿವೇ ಇರಲ್ಲ. ರಸ್ತೆಯಲ್ಲಿ ತೂರಾಡಿಕೊಂಡು ಹೋಗುತ್ತಾರೆ. ಸಿಕ್ಕ ಸಿಕ್ಕವರಲ್ಲಿ ಜಗಳವಾಡುತ್ತಾ ಹೋಗುತ್ತಾರೆ. ಮನೆಗೆ ಹೋಗಬೇಕಿದ್ದವರು, ಪಕ್ಕದ ಮನೆಗೆ ಹೋಗಿರುವ ಪ್ರಸಂಗಗಳೂ ನಡೆದಿದೆ. ಇಲ್ಲೊಂದು ಕಡೆ ಯುವಕರಿಬ್ಬರು ಕುಡಿದ ಮತ್ತಿನಲ್ಲಿ ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ.

ಕುಡಿದ ಮತ್ತಿನಲ್ಲಿ ಇಬ್ಬರು ಅಮೆರಿಕನ್ನರು ಐಫೆಲ್ ಟವರ್ ಏರಿ ಮಲಗಿರುವ ಘಟನೆ ಬೆಳಕಿಗೆ ಬಂದಿದೆ. ಐಫೆಲ್ ಟವರ್​ಗೆ ಅಷ್ಟೊಂದು ಭದ್ರತೆ ಇದ್ದರೂ ಆ ಭದ್ರತಾ ಸಿಬ್ಬಂದಿಗಳಿಂದ ತಪ್ಪಿಸಿಕೊಂಡು ಐಫೆಲ್ ಟವರ್ ಏರಿದ್ದಾರೆ. ಬೆಳಗ್ಗೆ 9 ಗಂಟೆ ಸುಮಾರಿಗೆ ಐಫೆಲ್ ಟವರ್ ಬಾಗಿಲು ತೆರೆಯುವ ಮುಂಚಿತವಾಗಿಯೇ ಇಬ್ಬರು ಟವರ್ ಮೇಲೆ ಓಡಾಡುತ್ತಿರುವುದು ಕಂಡುಬಂದಿದ್ದು, ಅವರು ಮದ್ಯಪಾನ ಮಾಡಿದ್ದರಿಂದ ಕೆಳಗೆ ಇಳಿಯಲಾಗದೆ ಅಲ್ಲೇ ಉಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಮಹಿಳೆಯರು ಕುಡಿಯದೇ ಇದ್ರೆ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ತಪ್ಪಿಸಬಹುದು! – ಇಟಲಿ ಪ್ರಧಾನಿ ಪತಿ​ ವಿವಾದಾತ್ಮಕ ಹೇಳಿಕೆ

ಕುಡಿದ ಅಮೆರಿಕನ್ನರು ಇಡೀ ರಾತ್ರಿ ಈ ಎರಡು ಗೋಪುರಗಳ ನಡುವೆ ನಕ್ಷತ್ರಗಳ ಕೆಳಗೆ ಕಳೆದಿದ್ದಾರೆ. ಆದರೆ ಯಾವುದೇ ರೀತಿ ಗಲಾಟೆಯನ್ನು ಅವರು ಮಾಡಲಿಲ್ಲ. ಹೀಗಾಗಿ ಯುವಕರು ಐಫೆಲ್ ಟವರ್‌ನಲ್ಲಿ ಉಳಿದುಕೊಂಡಿರುವುದು ಗೊತ್ತಾಗಿಲ್ಲ. ವರದಿಯ ಪ್ರಕಾರ, ಅಪಾಯಕಾರಿ ಎತ್ತರದಿಂದ ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿಯ ವಿಶೇಷ ತಂಡವನ್ನು ಕಳುಹಿಸಿ ಅವರಿಬ್ಬರನ್ನು ಕೆಳಗೆ ಇಳಿಸಲಾಗಿದೆ.

ಇವರಿಬ್ಬರನ್ನೂ ಪ್ಯಾರಿಸ್ ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆದೊಯ್ಯಲಾಗಿದ್ದು, ಮಿನಲ್ ದೂರು ದಾಖಲಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

suddiyaana