ಬೆಂಗಳೂರಿನಿಂದ 2 ದಿನಗಳ ಪ್ರವಾಸ ಮಾಡೋ ಪ್ಲ್ಯಾನ್ ಇದ್ಯಾ?- ನಿಮ್ಮ ಮುಂದೆ ಇದೆ ಈ 5 ಸ್ಥಳ

ವೀಕ್‌ಎಂಡ್‌ನಲ್ಲಿ ಬೆಂಗಳೂರಿನಲ್ಲಿ ಇದ್ದು ಇದ್ದು ಬೋರ್ ಆಗಿದೆ. ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಬೇಕು ಅಂತ ಟ್ರಿಪ್ ಹೋಗೋಕೆ ಪ್ಲ್ಯಾನ್ ಮಾಡಿದ್ರೆ ನಾವು ಹೇಳುವ ಈ ಸ್ಥಳಕ್ಕೆ ಹೋಗಬಹುದು. ಜಲಪಾತ, ಗಿರಿಧಾಮ, ಕಡಲತೀರಗಳಂತಹ ಸುಂದರ ಸ್ಥಳಗಳಲ್ಲಿ ಒಂದೆರಡು ದಿನ ಹಾಯಾಗಿ ಕಾಲ ಕಳೆಯಬಹುದು. 5 ತಾಣಗಳು ಯಾವುವು ಎಂಬುದರ ಬಗ್ಗೆ ಇದೆ ಸಂಪೂರ್ಣ ಮಾಹಿತಿ.
ನಾಗರಹೊಳೆ

ನೀವು ಬೆಂಗಳೂರಿನಿಂದ ಎರಡು ದಿನಗಳ ಪ್ರವಾಸ ಮಾಡಲು ಬಯಸಿದರೆ ನಾಗರಹೊಳೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಬೆಂಗಳೂರಿನಿಂದ ಸುಮಾರು 220 ಕಿ.ಮೀ ದೂರದಲ್ಲಿದ್ದು. ಮೈಸೂರು ಮತ್ತು ಕೊಡಗುಗಳಲ್ಲಿ ಹರಡಿಕೊಂಡಿದೆ. ಇದು ವನ್ಯಜೀವಿ ಪ್ರೇಮಿಗಳಿಗೆ ಹಾಗು ಪ್ರಕೃತಿ ಪ್ರೇಮಿಗಳಿಗೆ ಬಹಳ ಇಷ್ಟವಾಗುವ ಸ್ಥಳವಾಗಿದೆ. ಈ ಅಭಯಾರಣ್ಯದಲ್ಲಿ ನೀವು ಹುಲಿಗಳು, ನಾಲ್ಕು ಕೊಂಬಿನ ಹುಲ್ಲೆ, ಕಾಡು ಬೆಕ್ಕು, ಸಿವೆಟ್, ಸೋಮಾರಿ ಕರಡಿ, ಚುಕ್ಕೆ ಜಿಂಕೆ, ಚಿರತೆ, ಸಾಂಬಾರ್, ಕಪ್ಪು-ನೇಪ್ಡ್ ಮೊಲ ಸೇರಿದಂತೆ ಸಾಕಷ್ಟು ವನ್ಯಜೀವಿಗಳನ್ನು ನೋಡಬಹುದು. ನಾಗರಹೊಳೆಯ ಆಸುಪಾಸಿನಲ್ಲಿ ಜಲಪಾತಗಳು, ಅರಣ್ಯ ಪ್ರದೇಶಗಳು ಮತ್ತು ದೇವಾಲಯಗಳಿವೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನವನ್ನು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ಎಂದೂ ಸಹ ಕರೆಯುತ್ತಾರೆ.
ಗೋಕರ್ಣ

ಗೋಕರ್ಣವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಸುಂದರ ಪಟ್ಟಣವಾಗಿದೆ. ಗೋಕರ್ಣ ಪ್ರವಾಸ ಎಂದರೆ ಪ್ರವಾಸಿಗರಿಗೆ ಬಲು ಇಷ್ಟ ಎಂದೇ ಹೇಳಬಹುದು. ಅವರಿಗೆ ಸಮಯ ಸಿಕ್ಕಾಗೆಲ್ಲಾ ಅಥವಾ ವಾರಾಂತ್ಯದ ಸಮಯದಲ್ಲಿ ಇಲ್ಲಿಗೆ ಹೋಗಲು ಬಯಸುತ್ತಾರೆ. ಬೆಂಗಳೂರಿನಿಂದ 2 ದಿನಗಳ ಪ್ರವಾಸ ಮಾಡಲು ಇದು ಯೋಗ್ಯವಾದ ಸ್ಥಳ ಎಂದೇ ಹೇಳಬಹುದು. ಪಟ್ಟಣವು ಅನಾದಿ ಕಾಲದಿಂದಲೂ ಮಹಾಬಲೇಶ್ವರ ಎಂದು ಕರೆಯಲ್ಪಡುವ ಅತ್ಯಂತ ಹಳೆಯ ದೇವಾಲಯಕ್ಕೆ ನೆಲೆಯಾಗಿದೆ. ಅಲ್ಲದೆ, ಇಲ್ಲಿನ ಕಡಲತೀರಗಳಲ್ಲಿ ಅಡ್ಡಾಡಲು ಜನರು ಹೆಚ್ಚು ಉತ್ಸಾಹ ತೋರಿಸುತ್ತಾರೆ.
ದಾಂಡೇಲಿ

ದಕ್ಷಿಣ ಭಾರತದ ಸಾಹಸ ರಾಜಧಾನಿ ಎಂದೇ ಕರೆಯಲಾಗುವ ದಾಂಡೇಲಿ ಅತ್ಯಂತ ಸೊಗಸಾದ ಪಟ್ಟಣವಾಗಿದೆ. ಜನರು ಇಲ್ಲಿ ಅನೇಕ ಸಾಹಸ ಚಟುವಟಿಕೆಗಳನ್ನು ಪ್ರಯತ್ನಿಸಲು ಬರುತ್ತಾರೆ. ಮುಖ್ಯವಾಗಿ ವೈಟ್ ರಿವರ್ ರಾಫ್ಟಿಂಗ್ ಇಲ್ಲಿ ತುಂಬಾನೇ ಫೇಮಸ್ ಆಗಿದೆ. ಶಾಂತಿ ಮತ್ತು ಸಾಹಸ ಹುಡುಕುವವರಿಗೆ ದಾಂಡೇಲಿ ಅತ್ಯಂತ ಪರಿಪೂರ್ಣವಾದ ಆಯ್ಕೆಯಾಗಿದೆ. ಈ ಸ್ಥಳವು ಸಮುದ್ರ ಮಟ್ಟದಿಂದ 1551 ಅಡಿ ಎತ್ತರದಲ್ಲಿದ್ದು, ಸ್ಪರ್ಶಿಸದ ಹಸಿರು ಭೂದೃಶ್ಯಗಳು ಅದ್ಭುತವಾದ ಸಸ್ಯ ಮತ್ತು ಪ್ರಾಣಿಗಳನ್ನು ಹೊಂದಿವೆ. ಇಲ್ಲಿ ಸಂದರ್ಶಕರು ಪರಿಶೀಲಿಸಲು ಉಳವಿ ದೇವಾಲಯ, ಕಾವ್ಲಾದ ಪ್ರಾಚೀನ ಗುಹೆಗಳು ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ಹಲವಾರು ಐತಿಹಾಸಿಕ ಸ್ಥಳಗಳಿವೆ.
ವಯನಾಡ್

2 ದಿನಗಳ ವಾರಾಂತ್ಯವನ್ನು ಕಳೆಯಲು ವಯನಾಡ್ ಒಂದೊಳ್ಳೆ ಗಿರಿಧಾಮವಾಗಿದೆ. ಇದು ವರ್ಷಪೂರ್ತಿ ತನ್ನ ಹಿತವಾದ ತಾಪಮಾನಕ್ಕೆ ಹೆಸರುವಾಸಿಯಾಗಿದೆ. ವಯನಾಡ್, ಅಸ್ಪೃಶ್ಯ ಕಾಡುಗಳು, ಮಂಜಿನ ಪರ್ವತಗಳು ಮತ್ತು ಉದ್ದವಾದ ತೋಟಗಳನ್ನು ಹೊಂದಿದೆ. ಸಾಮಾನ್ಯವಾಗಿ ಭಾರತದ ಮಸಾಲೆ ಉದ್ಯಾನ ಎಂದು ಕರೆಯಲ್ಪಡುವ ವಯನಾಡ್ ಅನೇಕ ಮಸಾಲೆ ತೋಟಗಳಿಂದ ಕೂಡಿದೆ. ಈ ಗಿರಿಧಾಮವು ಬೃಹತ್ ಪರ್ವತಗಳು, ದಟ್ಟವಾದ ಕಾಡುಗಳು ಮತ್ತು ಭೋರ್ಗರೆದು ಹರಿಯುವ ನದಿಗಳನ್ನು ಹೊಂದಿದೆ. ಟ್ರೆಕ್ಕಿಂಗ್, ಪರ್ವತಾರೋಹಣ, ರಾಕ್ ಕ್ಲೈಂಬಿಂಗ್, ರ‍್ಯಾಪೆಲ್ಲಿಂಗ್, ಕ್ಯಾಂಪಿಂಗ್ ಮತ್ತು ಇನ್ನೂ ಅನೇಕ ಸಾಹಸಮಯ ಚಟುವಟಿಕೆಗಳಿಗೆ ಕೇಂದ್ರವಾಗಿದೆ.
ಸಕಲೇಶಪುರ

ಕರ್ನಾಟಕದ ಅತ್ಯಂತ ಸಣ್ಣ ಗಿರಿಧಾಮಗಳಲ್ಲಿ ಸಕಲೇಶಪುರವು ಒಂದು. ಇಲ್ಲಿ ತಂಪಾದ ಹಾಗು ಶಾಂತವಾದ ವಾತಾವರಣವು ಜನರನ್ನು ಹೆಚ್ಚು ಆಕರ್ಷಿಸಲ್ಪಡುತ್ತದೆ. ಇಲ್ಲಿ ನೀವು ಕಾಫಿ, ಚಹಾ ಮತ್ತು ಮಸಾಲೆಗಳ ಅಚ್ಚರಿಯ ಸಂಖ್ಯೆಯ ತೋಟಗಳನ್ನು ನೋಡಬಹುದು. ನಕ್ಷತ್ರದ ರೂಪದಲ್ಲಿ ನಿರ್ಮಿಸಲಾದ ಮಂಜರಾಬಾದ್ ಕೋಟೆ, ಸಕಲೇಶಪುರ ದೇವಾಲಯ, ವ್ಯೂ ಪಾಯಿಂಟ್ ಸೇರಿದಂತೆ ಸಾಕಷ್ಟು ಆಕರ್ಷಣೆಗಳು ಜನರನ್ನು ಸೆಳೆಯುತ್ತದೆ. ಇದು ಸಕಲೇಶಪುರದ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.

ನೋಡಿರಿ

