ಬ್ಯಾಂಕ್ ಉದ್ಯೋಗಿಗಳಿಗೆ ವಾರದಲ್ಲಿ 2 ದಿನ ರಜೆ!
ನವದೆಹಲಿ: ಸಾಫ್ಟ್‌ವೇರ್ ಕಂಪನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಲ್ಲಿ ವಾರದ 5 ದಿನಗಳಲ್ಲಿ ಮಾತ್ರ ಉದ್ಯೋಗಿಗಳು ಕೆಲಸ ಮಾಡುತ್ತಾರೆ. ಶನಿವಾರ ಹಾಗೂ ಭಾನುವಾರ ಅವರಿಗೆ ವಾರದ ರಜೆ ನೀಡಲಾಗುತ್ತಿದೆ. ಇನ್ನೂ ಬ್ಯಾಂಕ್ ಗಳಲ್ಲಿ ತಿಂಗಳ 2 ಹಾಗೂ 4 ನೇ ಶನಿವಾರದಂದು ರಜೆ ನೀಡುತ್ತಾ ಬರಲಾಗಿದೆ. ಇದೀಗ ಬ್ಯಾಂಕ್ ಗಳ ವಾರದ ರಜೆ ಮತ್ತು ಕೆಲಸದ ಅವಧಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ.
ಬ್ಯಾಂಕ್ ಉದ್ಯೋಗಿಗಳಿಗೆ ಇನ್ನು ಮುಂದೆ ಪ್ರತಿ ಶನಿವಾರ ಹಾಗೂ ಭಾನುವಾರ ರಜೆ ನೀಡುವ ಬಗ್ಗೆ ಭಾರತೀಯ ಬ್ಯಾಂಕುಗಳ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಗುವುದಷ್ಟೇ ಬಾಕಿ ಉಳಿದಿದೆ.
ಇದನ್ನೂ ಓದಿ: ನಮ್ಮನ್ನ ಗೆಲ್ಲಿಸಿದರೆ ಯುವಕರಿಗೆ 100% ಮದುವೆ ಗ್ಯಾರಂಟಿ!
ಬ್ಯಾಂಕ್ ಉದ್ಯೂಗಿಗಳಿಗೆ ಶನಿವಾರವೂ ವೀಕ್ ಆಫ್ ನೀಡಿದರೆ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇಂಡಿಯನ್ ಬ್ಯಾಂಕ್ಸ್ ಅಸೋಷಿಯೇಶನ್ (ಐಬಿಎ) ಮತ್ತು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಎಂಪ್ಲಾಯೀಸ್ ಸಂಸ್ಥೆಗಳು ಚರ್ಚೆ ನಡೆಸಿ ಒಂದು ತೀರ್ಮಾನಕ್ಕೆ ಬಂದಿವೆ. ಅದೇನೆಂದರೆ ಶನಿವಾರವೂ ಕೂಡ ಉದ್ಯೋಗಿಗಳಿಗೆ ರಜೆ ಘೋಷಿಸಲು ಅನುಮತಿ ನೀಡುವುದಾದರೆ ಬ್ಯಾಂಕುಗಳ ದಿನದ ಅವಧಿ 40 ನಿಮಿಷ ಹೆಚ್ಚು ಕೆಲಸ ಸಿದ್ಧ ಎಂದು ಐಬಿಎ ಮತ್ತು ಯುಎಫ್ಬಿಇ ಇಂಥದ್ದೊಂದು ಪ್ರಸ್ತಾವವನ್ನು ಸರ್ಕಾರ ಮುಂದಿಟ್ಟಿದೆ.
ಬ್ಯಾಂಕುಗಳಿಗೆ ವಾರದಲ್ಲಿ ಎರಡು ದಿನ ರಜೆ ಬೇಕೆನ್ನುವ ಬೇಡಿಕೆ ಹಲವು ದಿನಗಳಿಂದಲೂ ಇದೆ. ಈ ಬೇಡಿಕೆ ಹಿನ್ನೆಲೆಯಲ್ಲಿ ಪ್ರತೀ ಎರಡು ಶನಿವಾರಕ್ಕೆ ರಜೆ ನೀಡಲಾಗಿದೆ. ಇದೀಗ ಪ್ರತಿ ಶನಿವಾರವೂ ರಜೆ ಬೇಕು ಎಂದು ನೀಡಿರುವ ಪ್ರಸ್ತಾವಕ್ಕೆ ಹಣಕಾಸು ಸಚಿವಾಲಯದಿಂದ ಅನುಮೋದನೆ ಸಿಗುವುದಷ್ಟೇ ಬಾಕಿ ಇದೆ.