ಭಾರತದಲ್ಲಿ 2 ದಿನ ಜಿ20 ಶೃಂಗಸಭೆ – ಯುವಕರಿಗೆ ಕೋತಿಯಂತೆ ವರ್ತಿಸಲು ಟ್ರೈನಿಂಗ್‌.. ರಸ್ತೆಗಳಲ್ಲಿ ಮುಸಿಯಾಗಳ ಕಟೌಟ್!

ಭಾರತದಲ್ಲಿ 2 ದಿನ ಜಿ20 ಶೃಂಗಸಭೆ – ಯುವಕರಿಗೆ ಕೋತಿಯಂತೆ ವರ್ತಿಸಲು ಟ್ರೈನಿಂಗ್‌.. ರಸ್ತೆಗಳಲ್ಲಿ ಮುಸಿಯಾಗಳ ಕಟೌಟ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆ. 9, 10 ರಂದು ಎರಡು ದಿನಗಳ ಕಾಲ ಜಿ 20 ಶೃಂಗಸಭೆ ನಡೆಯಲಿದೆ. ಈಗಿನಿಂದಲೇ ಭರದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ವಿದೇಶಗಳಿಂದ ಆಗಮಿಸುವ ಗಣ್ಯರಿಗೆ ರೂಮ್‌ ಬುಕ್‌ ಮಾಡಲಾಗಿದೆ. ವಿದೇಶಗಳಿಂದ ಆಗಮಿಸುವ ಗಣ್ಯರಿಗೆ ಒಂಚೂರು ತೊಂದರೆಯಾಗದಂತೆ ಸಕಲ ಸಿದ್ದತೆಗಳನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋತಿಗಳ ಉಪಟಳ ಜೋರಾಗಿದೆ. ಜನರನ್ನು ಅಟ್ಟಾಡಿಸಿಕೊಂಡು ಬರುವುದು, ವಾಹನಗಳ ಮೇಲೆ ದಾಳಿ ಮಾಡುತ್ತಿವೆ. ಶೃಂಗಸಭೆಗೆ ಆಗಮಿಸುತ್ತಿರುವ ಗಣ್ಯರ ಮೇಲೂ ಕೋತಿಗಳು ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಅಲ್ಲಿನ ಪಾಲಿಕೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಭಾರತ – ಚೀನಾ ನಡುವೆ ಗಡಿ ಖ್ಯಾತೆ – ದೆಹಲಿಯಲ್ಲಿ ನಡೆಯುವ ಜಿ–20 ಶೃಂಗಸಭೆಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್ ಗೈರು ಸಾಧ್ಯತೆ

ಜನರ ಮೇಲೆ ಕೋತಿಗಳು ದಾಳಿ ಮಾಡುತ್ತಿರುವ ಹಿನ್ನೆಲೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಕೋತಿಗಳ ನಿಯಂತ್ರಣಕ್ಕೆ ಹೊಸದೊಂದು ತಂತ್ರವನ್ನು ಕಂಡುಕೊಂಡಿದ್ದಾರೆ. ಅದೇನೆಂದರೆ ಕೋತಿಗಳು ಹೆಚ್ಚು ಇರುವ ಪ್ರದೇಶಗಳಲ್ಲಿ ದೊಡ್ಡ ದೊಡ್ಡ ಮುಸಿಯಾಗಳ ಕಟೌಟ್ ಗಳನ್ನು ಅಳವಡಿಸಲಾಗುತ್ತಿದೆ. ಅಲ್ಲದೆ ಇದಕ್ಕಾಗಿಯೇ ಕೆಲ ಯುವಕರಿಗೆ ಕೋತಿಗಳಂತೆ ಅನುಕರಣೆ ಮಾಡುವ ತರಬೇತಿಯನ್ನೂ ನೀಡಲಾಗುತ್ತಿದೆ (ಮಂಕಿ ಮ್ಯಾನ್) ಎಂದು ಪಾಲಿಕೆ ಅಧಿಕಾರಿಗಳು ಹೇಳಿದ್ದಾರೆ.

ಶೃಂಗಸಭೆಗೆ ವಿವಿಧ ದೇಶದ ಗಣ್ಯರು ಹಾಜರಾಗುತ್ತಿದ್ದು ಹೀಗಾಗಿ ಕಾರ್ಯಕ್ರಮ ನಡೆದು ಮುಗಿಯುವವರೆಗೂ ಬಂದಿರುವ ಗಣ್ಯರಿಗೆ ಕಿಂಚಿತ್ತೂ ತೊಂದರೆಯಾಗದ ರೀತಿಯಲ್ಲಿ ನಡೆದುಕೊಳ್ಳುವುದು ದೇಶದ ಕರ್ತವ್ಯ. ಹೀಗಾಗಿ ಗಣ್ಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ.

suddiyaana