ಆನೆಗಳಿಗೂ ಇನ್ಶುರೆನ್ಸ್..! – ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ಹೆಣ್ಣು ಆನೆಗಳಿಗೆ 4.5 ಲಕ್ಷ ರೂ ವಿಮೆ!

ಆನೆಗಳಿಗೂ ಇನ್ಶುರೆನ್ಸ್..! – ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ಹೆಣ್ಣು ಆನೆಗಳಿಗೆ 4.5 ಲಕ್ಷ ರೂ ವಿಮೆ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023ಕ್ಕೆ ದಿನಗಣನೆ ಆರಂಭವಾಗಿದೆ. ಈಗಾಗಲೆ ಅರಮನೆ ನಗರಿಯಲ್ಲಿ ಭರದಿಂದ ಸಿದ್ದತೆ ಮಾಡಿಕೊಳ್ಳಲಿದೆ. ದಸರಾದ  ಕೇಂದ್ರಬಿಂದುವಾದ ಗಜಪಡೆ ಮೈಸೂರಿಗೆ ಆಗಮಿಸಿದ್ದು, ಭರ್ಜರಿ ಸ್ವಾಗತ ದೊರೆತಿದೆ. ಈಗಾಗಲೇ ತಾಲೀಮು ಆರಂಭವಾಗಿದ್ದು, ಈ ಬಾರಿಯೂ ಅಂಬಾರಿಯನ್ನು ಅಭಿಮನ್ಯು ಹೊರಲಿದ್ದಾನೆ. ಈ ಜಂಬೂ ಸವಾರಿಯಲ್ಲಿ ಕ್ಯಾಪ್ಟನ್​​ ಅಭಿಮನ್ಯು ಸೇರಿದಂತೆ 14 ಆನೆಗಳು ಭಾಗಿಯಾಗಲಿವೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ. ಈ ಆನೆಗಳಿಗೆ ಅರಣ್ಯ ಇಲಾಖೆ ವಿಮೆ ಮಾಡಿಸಿದೆ.

ಇದನ್ನೂ ಓದಿ: ಪೋಲೀಸರ ಬಿಗಿ ಭದ್ರತೆಯಲ್ಲಿ ದಸರಾ ಗಜಪಡೆಯ ತೂಕ ಪರೀಕ್ಷೆ – ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುವೇ ಫಸ್ಟ್!‌

ಅರಣ್ಯ ಇಲಾಖೆ ದಸರಾದ ಜಂಬೂ ಸವಾರಿಯಲ್ಲಿ ಭಾಗವಹಿಸುತ್ತಿರುವ ಆನೆಗಳಿಗೆ ವಿಮೆ ಮಾಡಿಸಿದೆ. ಗಂಡು ಆನೆಗಳಿಗೆ ತಲಾ 5 ಲಕ್ಷ ರೂ. ವಿಮೆ ಮತ್ತು ಹೆಣ್ಣು ಆನೆಗಳಿಗೆ ತಲಾ 4.5 ಲಕ್ಷ ರೂ. ವಿಮೆ ಮಾಡಿಸಲಾಗಿದೆ. ಇನ್ನು ಮಾವುತ ಕಾವಾಡಿ ಉಸ್ತುವಾರಿ ಸಿಬ್ಬಂದಿಗೆ ತಲಾ 2 ಲಕ್ಷ ರೂ., ಜೀವಹಾನಿಗೆ 50 ಲಕ್ಷ ವಿಮೆ ನೀಡಲಾಗುತ್ತದೆ. ಆನೆಗಳು ಮೈಸೂರು ಅರಮನೆಯಿಂದ ತಮ್ಮ ತಮ್ಮ ಶಿಬಿರಗಳಿಗೆ ತೆರಳುವವರೆಗೂ ಅಂದರೆ ಈ ವಿಮೆ ಸೆಪ್ಟೆಂಬರ್​​ 1 ರಿಂದ ಅಕ್ಟೋಬರ್ ಅಂತ್ಯದವರೆಗೂ ಚಾಲ್ತಿಯಲ್ಲಿರುತ್ತದೆ. ಒಟ್ಟು 10 ಗಂಡು ಆನೆ 04 ಹೆಣ್ಣು ಆನೆಗಳಿದ್ದು, ಮಾವುತ ಕಾವಾಡಿ ಸೇರಿ 42 ಸಿಬ್ಬಂದಿಗೆ ಒಟ್ಟು 2.02 ಕೋಟಿ ಮೊತ್ತದ ವಿಮೆ ಮಾಡಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಬಾರಿಯ ದಸರಾದ ಜಂಬೂಸವಾರಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಹೆಜ್ಜೆ ಹಾಕುತ್ತಿವೆ. ಮೈಸೂರು ಬಲರಾಮ ದ್ವಾರದಿಂದ ತಾಲೀಮು ಆರಂಭವಾಗಿದ್ದು, ಕೋಟೆ ಆಂಜನೇಯ ದೇಗುಲ ಅರಮನೆ ವೃತ್ತ, ನಗರ ಬಸ್ ನಿಲ್ದಾಣ ಕೆ ಆರ್ ವೃತ್ತದ ಮೂಲಕ ಆನೆಗಳು ಸಾಗಿವೆ. ಅಭಿಮನ್ಯು ನೇತೃತ್ವದಲ್ಲಿ ಗಜಪಡೆಗಳಾದ ಕಂಜನ್, ಮಹೇಂದ್ರ, ವಿಜಯ, ವರಲಕ್ಷ್ಮಿ, ಧನಂಜಯ, ಗೋಪಿ, ಭೀಮ ತಾಲೀಮಿನಲ್ಲಿ ಭಾಗಿಯಾಗಿವೆ.

suddiyaana