2 ಪಂದ್ಯಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ – ಯಂಗ್ ಸ್ಟರ್ ಗೆ ಮಣೆ ಹಾಕಿದ ಕಾಂಗರೂ ಪಡೆ

2 ಪಂದ್ಯಗಳಿಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ – ಯಂಗ್ ಸ್ಟರ್ ಗೆ ಮಣೆ ಹಾಕಿದ ಕಾಂಗರೂ ಪಡೆ

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಉಳಿದ ಎರಡು ಪಂದ್ಯಗಳಿಗೆ ಆಸ್ಟ್ರೇಲಿಯಾ ಬಲಿಷ್ಠ ತಂಡ ಪ್ರಕಟಿಸಿದೆ. ಅಲ್ಲದೆ, ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಮೊದಲ 3 ಟೆಸ್ಟ್​ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ ನಾಥನ್ ಮೆಕ್​ಸ್ವೀನಿ ಅವರನ್ನು ಡ್ರಾಪ್ ಮಾಡಲಾಗಿದೆ. ಆರು ಇನ್ನಿಂಗ್ಸ್‌ಗಳ ಪೈಕಿ ಐದರಲ್ಲಿ 10 ರನ್ ದಾಟಲು ಆಗದ ಮೆಕ್​ಸ್ವೀನಿ ಜಸ್ಪ್ರೀತ್ ಬುಮ್ರಾ ಬೌಲಿಂಗ್​​ನಲ್ಲಿ ಪದೇಪದೇ ವಿಕೆಟ್ ಒಪ್ಪಿಸುತ್ತಿದ್ದರು. ಇದು ತಂಡಕ್ಕೆ ಭಾರೀ ಹಿನ್ನಡೆಯಾಗುತ್ತಿತ್ತು. ಹೀಗಾಗಿ 19 ವರ್ಷದ ನ್ಯೂ ಸೌತ್ ವೇಲ್ಸ್ ತಂಡದ ಬ್ಯಾಟರ್ ಸ್ಯಾಮ್ ಕೊನ್‌ಸ್ಟಾಸ್​​ಗೆ ಮಣೆ ಹಾಕಲಾಗಿದ್ದು, ಪ್ಲೇಯಿಂಗ್ 11ನಲ್ಲಿ ಅವಕಾಶ ಪಡೆಯೋದು ಗ್ಯಾರಂಟಿ ಆಗಿದೆ. ಡಬ್ಲ್ಯುಟಿಸಿ ಫೈನಲ್ ಸ್ಥಾನಕ್ಕೆ ಪೈಪೋಟಿ ನಡೆಸುತ್ತಿರುವ ಆಸ್ಟ್ರೇಲಿಯಾಗೂ ಉಳಿದ 2 ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ : ಭಾರತಕ್ಕೆ WTC ಫೈನಲ್ ಚಾಲೆಂಜ್ – 2 ಮ್ಯಾಚ್.. 3 ಟೀಂ.. ಯಾರಿಗೆ ಟಿಕೆಟ್?

ಟೀಂ ಆಯ್ಕೆ ವೇಳೆ ಆಸ್ಟ್ರೇಲಿಯಾ ತಂಡದಲ್ಲಿ ಇಬ್ಬರು ಬ್ಯಾಕಪ್ ವೇಗಿಗಳಿಗೂ ಚಾನ್ಸ್ ನೀಡಲಾಗಿದೆ.  ಜೆ ರಿಚರ್ಡ್ಸನ್ ಮೂರು ವರ್ಷಗಳ ನಂತರ ರೆಡ್-ಬಾಲ್ ತಂಡಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಹಾಗೇ ಇಂಜುರಿಗೆ ತುತ್ತಾಗಿದ್ದ ಜೋಶ್ ಹ್ಯಾಜಲ್‌ವುಡ್ ಬದಲಿಗೆ ಮೈಕೆಲ್ ನೆಸರ್‌ಗಿಂತ ಸೀನ್ ಅಬಾಟ್‌ಗೆ ಆದ್ಯತೆ ನೀಡಲಾಗಿದೆ. ರಿಚರ್ಡ್ಸನ್ ಕೊನೆಯದಾಗಿ 2021ರಲ್ಲಿ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಆಡಿದ್ದರು. ನಿರಂತರ ಗಾಯಗಳಿಂದಾಗಿ ಆಯ್ಕೆಯಾಗಿರಲಿಲ್ಲ.

ಬಾರ್ಡರ್ -ಗವಾಸ್ಕರ್ ಟ್ರೋಫಿಯ ಒಂದೊಂದು ಪಂದ್ಯಗಳೂ ಬಾರೀ ರೋಚಕತೆಯಿಂದ ಕೂಡಿವೆ. ಪರ್ತ್‌ನಲ್ಲಿ ನಡೆದ ಆರಂಭಿಕ ಪಂದ್ಯದಲ್ಲಿ ಭಾರತ ಅಬ್ಬರದ ಜಯದೊಂದಿಗೆ ಸರಣಿಯನ್ನು ಆರಂಭಿಸಿತು, ಆಸ್ಟ್ರೇಲಿಯಾವನ್ನು 295 ರನ್‌ಗಳಿಂದ ಸೋಲಿಸಿತು. ಆದರೆ, ಎರಡನೇ ಟೆಸ್ಟ್​ನಲ್ಲಿ ಕಮ್​ಬ್ಯಾಕ್ ಮಾಡಿದಂಥ ಆಸ್ಟ್ರೇಲಿಯ ಅಡಿಲೇಡ್‌ನಲ್ಲಿ 10 ವಿಕೆಟ್‌ಗಳ ಭರ್ಜರಿ ಗೆಲುವಿನೊಂದಿಗೆ ಸರಣಿಯಲ್ಲಿ ಸಮಬಲ ಸಾಧಿಸಿತು. ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಮಳೆಯಿಂದಾಗಿ ಪಂದ್ಯ ಡ್ರಾ ಆಯಿತು. ಸದ್ಯ 1-1ರಲ್ಲಿ ಸಮಬಲ ಸಾಧಿಸಿರುವ ತಂಡಗಳು 4ನೇ ಟೆಸ್ಟ್‌ಗಾಗಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನಕ್ಕೆ ತೆರಳಲಿವೆ. ಬಾಕ್ಸಿಂಗ್ ಡೇ ಫೈಟ್​ನಲ್ಲಿ ಮೇಲುಗೈ ಸಾಧಿಸೋ ಲೆಕ್ಕಾಚಾರದಲ್ಲಿವೆ.

Shantha Kumari

Leave a Reply

Your email address will not be published. Required fields are marked *