ಕೆಂಪು ಕೋಟೆ ಸ್ಫೋ*ಟದ ಶಂಕಿತ ಡಾ. ಉಮರ್ ಮೊಹಮ್ಮದ್ ಫೋಟೋ ಬಿಡುಗಡೆ – ತಾಯಿ, ಸಹೋದರ ಖಾಕಿ ವಶಕ್ಕೆ

ದೆಹಲಿ ಸ್ಫೋ*ಟ ಪ್ರಕರಣದ ಆತ್ಮಹತ್ಯಾ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್ ಎಂಬಾತನ ಮೊದಲ ಚಿತ್ರ ಇದೀಗ ಬಹಿರಂಗಗೊಂಡಿದೆ. ಉಮರ್ ಇನ್ನೂ ಇಬ್ಬರು ಸಹಚರರೊಂದಿಗೆ ದಾಳಿಯನ್ನು ಯೋಜಿಸಿದ್ದಲ್ಲದೆ ಕಾರಿನಲ್ಲಿ ಡಿಟೋನೇಟರ್ ಅಳವಡಿಸಿದ್ದ ಎಂದು ತಿಳಿದು ಬಂದಿದೆ.
ಇದೀಗ ಡಾ. ಉಮರ್ ಮೊಹಮ್ಮದ್ ಸ್ಫೋ*ಟದ ವೇಳೆಯಲ್ಲಿ ಕಾರಿನಲ್ಲಿ ಇದ್ನಾ ಅನ್ನೋದನ್ನ ಖಚಿತಪಡಿಸಿಕೊಳ್ಳಲು ಪೊಲೀಸರು ಮೃತರ ಡಿಎನ್ಎ ಪರೀಕ್ಷೆಯನ್ನು ನಡೆಸಲು ಮುಂದಾಗಿದ್ದಾರೆ ಸ್ಫೋ*ಟಗೊಂಡ ಹುಂಡೈ i20 ಕಾರನ್ನು ಶಂಕಿತ ಭಯೋತ್ಪಾದಕ ಡಾ. ಮೊಹಮ್ಮೊದ್ ಉಮರ್ ಚಲಾಯಿಸುತ್ತಿದ್ದ ಎಂದು ತಿಳಿದು ಬಂದಿತ್ತು. ತನಿಖೆ ಬೆನ್ನಲ್ಲೇ ಈಗ ಕಾರಿನಲ್ಲಿದ್ದ ಉಮರ್ನ ತಾಯಿ ಹಾಗೂ ಸಹೋದರನನ್ನು ಪುಲ್ವಾಮಾದಲ್ಲಿ ಅರೆಸ್ಟ್ ಮಾಡಲಾಗಿದೆ. ಸ್ಫೋಟಗೊಂಡ ಕಾರು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ವ್ಯಕ್ತಿಯದ್ದು ಎಂದು ತನಿಖಾಧಿಕಾರಿಗಳು ತಿಳಿಸಿದ್ದು ಮಾಲೀಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ದೆಹಲಿ ಸ್ಫೋ*ಟ ನಂತ್ರ ಫುಲ್ ಅಲರ್ಟ್ – ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದ ಅಮಿತ್ ಶಾ
ಈ ಕಾರು ಮೂಲತಃ ಗುರುಗ್ರಾಮ್ನಲ್ಲಿ HR26 ಸಂಖ್ಯೆಯಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ಮೊದಲು ಮೊಹಮ್ಮದ್ ಸಲ್ಮಾನ್ ಎಂಬಾತನ ಬಳಿ ಇತ್ತು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಕ್ಕೂ ಅಧಿಕ ಜನರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ತಾರಿಕ್ ಮತ್ತು ಆತನ ಸಹಚರರ ಕುರಿತು ಮಾಹಿತಿ ಕಲೆ ಹಾಕಲು ಶ್ರೀನಗರಕ್ಕೆ ವಿಶೇಷ ತಂಡವನ್ನು ಕಳುಹಿಸಲಾಗಿದೆ. ಸ್ಫೋ*ಟ ಸಂಭವಿಸಿದ ಸ್ಥಳದಿಂದ ವಿಧಿವಿಜ್ಞಾನ ತಂಡಗಳು ಅಮೋನಿಯಂ ನೈಟ್ರೇಟ್ನ ಕುರುಹುಗಳನ್ನು ವಶಪಡಿಸಿಕೊಂಡಿದ್ದು, ಸ್ಫೋಟಕ ಸಾಧನದಲ್ಲಿ ಅದರ ಬಳಕೆಯನ್ನು ಸೂಚಿಸಿವೆ. ಸ್ಫೋ*ಟಕ್ಕೆ ಕಾರಣವೇನು ಮತ್ತು ದಾಳಿಯಲ್ಲಿ ತಾರಿಕ್ನ ನಿಖರವಾದ ಪಾತ್ರವನ್ನು ನಿರ್ಧರಿಸಲು ತನಿಖೆ ಮುಂದುವರೆದಿದೆ. ಪ್ರಾಥಮಿಕ ತನಿಖೆಯಲ್ಲಿ ಕೆಂಪು ಕೋಟೆ ಕಾರು ಸ್ಫೋ*ಟದಲ್ಲಿ ಆರ್ಡಿಎಕ್ಸ್ ಬಳಕೆ ಆಗಿರಬಹುದು ಎನ್ನಲಾಗಿದೆ.
3 ದಿನ ಮೆಟ್ರೋ ಬಂದ್
ಕೆಂಪು ಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸ್ಫೋಟ ಸಂಭವಿಸಿದ್ದರಿಂದ ಸದ್ಯ ಕೆಂಪು ಕೋಟೆ ಮೆಟ್ರೋ ನಿಲ್ದಾಣವನ್ನು ಮೂರು ದಿನಗಳ ಕಾಲ ಬಂದ್ ಮಾಡಲಾಗಿದೆ. ಇತರ ಮೆಟ್ರೋ ನಿಲ್ದಾಣಗಳು ಕಾರ್ಯನಿರ್ವಹಿಸುತ್ತಿವೆ. ದೆಹಲಿ ವಿಮಾನ ನಿಲ್ದಾಣ ಹಾಗೂ ರೈಲು ನಿಲ್ದಾಣಕ್ಕೆ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಭದ್ರತಾ ತಪಾಸಣೆ, ಕಣ್ಗಾವಲು ಮತ್ತು ಗಸ್ತುಗಳನ್ನು ತೀವ್ರಗೊಳಿಸಲಾಗಿದ್ದು, ಬಾಂಬ್ ನಿಷ್ಕ್ರಿಯ ದಳಗಳು ಮತ್ತು ಸ್ನಿಫರ್ ನಾಯಿಗಳನ್ನು ನಿಯೋಜಿಸಲಾಗಿದೆ.

ನೋಡಿರಿ

