ಪ್ಲೇಯಿಂಗ್ 11ನಿಂದ ಕೊಹ್ಲಿ ಔಟ್ – ಇಂಜುರಿಯೋ.. ಡ್ರಾಪ್ ಮಾಡಿದ್ರೋ?
ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿ ಆರಂಭವಾಗಿದೆ. ಮೊದಲನೇ ಪಂದ್ಯ ನಾಗ್ಪುರದಲ್ಲಿ ನಡೆಯುತ್ತಿದೆ. ಸುಮಾರು 200 ದಿನಗಳ ನಂತರ ಭಾರತ ಏಕದಿನ ಪಂದ್ಯವನ್ನಾಡ್ತಿದೆ. ಮೊದಲನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ತು. ಟಾಸ್ ಸೋತ ರೋಹಿತ್ ಕೂಡ ಟಾಸ್ ಗೆದ್ದಿದ್ದರೆ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರೆ. ಇನ್ನೂ ಟೀಂ ಇಂಡಿಯಾ ಪರ ಇಬ್ಬರು ಯಂಗ್ಸ್ಟರ್ಸ್ ಈ ಪಂದ್ಯದ ಮೂಲಕ ODI ಗೆ ಪಾದಾಪರ್ಣೆ ಮಾಡಿದ್ದಾರೆ. ಯಶಸ್ವಿ ಜೈಸ್ವಾಲ್ ಹಾಗೂ ಬೌಲರ್ ಹರ್ಷಿತ್ ರಾಣಾ ಇಬ್ಬರು ತಮ್ಮ ಮೊದಲ ODI ಪಂದ್ಯವನ್ನು ಆಡುತ್ತಿದ್ದಾರೆ.
ಇದನ್ನೂ ಓದಿ : ಚಾಂಪಿಯನ್ಸ್ ಟ್ರೋಫಿಗೂ ಮುನ್ನವೇ ಕಂಗೆಟ್ಟ ಆಸ್ಟ್ರೇಲಿಯಾ – ಕ್ಯಾಪ್ಟನ್ ಸೇರಿ 5 ಪ್ಲೇಯರ್ಸ್ ಔಟ್!
ಪ್ಲೇಯಿಂಗ್ 11 ಅನೌನ್ಸ್ ಗೂ ಮುನ್ನ ಯಾರೊಬ್ರಿಗೂ ಕೊಹ್ಲಿ ಈ ಮ್ಯಾಚ್ ಆಡಲ್ಲ ಅಂತಾ ಅನ್ಕೊಂಡೇ ಇರಲಿಲ್ಲ. ಯಾಕಂದ್ರೆ ಕಳೆದ ಮೂರು ದಿನಗಳಿಂದ ವಿರಾಟ್ ನಾಗ್ಪುರದ ಸ್ಟೇಡಿಯಮ್ನಲ್ಲಿ ಪ್ರಾಕ್ಟೀಸ್ ಮಾಡಿದ್ರು. ಬಟ್ ಇವತ್ತಿನ ಪಂದ್ಯ ಆಡ್ತಿಲ್ಲ ಎಂದಾಗ ಫ್ಯಾನ್ಸ್ ನಿಜಕ್ಕೂ ಶಾಕ್ ಆಗಿದ್ದಾರೆ. ಯಾಕಂದ್ರೆ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಒಂದು ರೀತಿಯ ಅಭ್ಯಾಸದ ಸರಣಿ ಎನಿಸಿಕೊಂಡಿರುವ ಈ ಮೂರು ಪಂದ್ಯಗಳ ಸರಣಿಯು ಉಭಯ ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ್ದೆನಿಸಿದೆ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಇಂಗ್ಲೆಂಡ್ ಏಕದಿನ ಸರಣಿಯಲ್ಲಿ ದೊಡ್ಡ ಇನ್ನಿಂಗ್ಸ್ ಆಡುವ ಮೂಲಕ ಫಾರ್ಮ್‌ಗೆ ಮರಳುತ್ತಾರೆ ಎನ್ನಲಾಗಿತ್ತು. ಆದರೆ ಟಾಸ್ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮೊದಲ ಏಕದಿನ ಪಂದ್ಯಕ್ಕೆ ದುರಾದೃಷ್ಟವಶಾತ್ ವಿರಾಟ್ ಕೊಹ್ಲಿ ಅಲಭ್ಯರಾಗಿದ್ದಾರೆ ಎಂದು ತಿಳಿಸಿದ್ದಾರೆ. ಬಲಮೊಣಕಾಲಿನ ಗಾಯಕ್ಕೆ ಒಳಗಾಗಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್ ಎದುರಿನ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ಭಾರತ ಏಕದಿನ ತಂಡಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇನ್ನು ಇದೇ ವೇಳೆ ವೇಗದ ಬೌಲರ್ ಹರ್ಷಿತ್ ರಾಣಾ ಕೂಡಾ ಏಕದಿನ ಕ್ರಿಕೆಟ್ ಮಾದರಿಗೆ ಪಾದಾರ್ಪಣೆ ಮಾಡಿದ್ದಾರೆ.
ಪ್ರಾಕ್ಟೀಸ್ನಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದ ಕಿಂಗ್ ಕೊಹ್ಲಿ ಕೊನೇ ಗಳಿಗೆಯಲ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಅಭಿಮಾನಿಗಳಿಗೂ ಶಾಕಿಂಗ್ ವಿಚಾರವಾಗಿದೆ. ಆದ್ರೆ ಕೊಹ್ಲಿಯವರ ಗಾಯದ ಪ್ರಮಾಣದ ಬಗ್ಗೆ ತಂಡದ ಮ್ಯಾನೇಜ್ ಮೆಂಟ್ ಯಾವುದೇ ಮಾಹಿತಿ ನೀಡಿಲ್ಲ. ಅಲ್ದೇ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಪವರ್ ಫುಲ್ ಬ್ಯಾಟಿಂಗ್ ಮಾಡ್ತಾರೆ ಅನ್ನೋ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಹಿಂದಿನ ರೆಕಾರ್ಡ್ಸ್ ಕೂಡ ಅದನ್ನೇ ಹೇಳಿತ್ತು. ಇತ್ತೀಚೆಗೆ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಫಾರ್ಮ್ ಕಳ್ಕೊಂಡಿದ್ರೂ ಏಕದಿನ ಮಾದರಿಯಲ್ಲಿ ಅದ್ಭುತ ಇ್ನನಿಂಗ್ಸ್ ಆಗಿದ್ದಾರೆ. ಭಾರತದ ಪರ ಇದುವರೆಗೂ 295 ಏಕದಿನ ಪಂದ್ಯಗಳನ್ನ ಆಡಿರೋ ವಿರಾಟ್ ಕೊಹ್ಲಿ 13,906 ರನ್ ಕಲೆ ಹಾಕಿದ್ದಾರೆ. ಆವರೇಜ್ 58 ಇದೆ. ಸೋ ಮುಂದಿನ ಪಂದ್ಯದ ವೇಳೆಗೆ ಕಣಕ್ಕಿಳಿದ್ರೆ ಅದ್ಭುತವಾಗಿ ಕಮ್ ಬ್ಯಾಕ್ ಮಾಡಬಹುದು.
ಇನ್ನು ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ನಡುವೆ ಯಾರಿಗೆ ವಿಕೆಟ್ ಕೀಪರ್ ಬ್ಯಾಟರ್ ಚಾನ್ಸ್ ಸಿಗುತ್ತೆ ಅನ್ನೋದೇ ಬಾರೀ ಕುತೂಹಲ ಮೂಡಿಸಿತ್ತು. ಕೊನೆಗೂ ಕನ್ನಡಿಗ ಕೆಎಲ್ ರಾಹುಲ್ ಗೆ ಮಣೆ ಹಾಕಲಾಗಿದೆ. ಇದಕ್ಕೆ ಕಾರಣವೂ ಇದೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ಆಗಿರುವ ಕೆಎಲ್ ರಾಹುಲ್ ಕೂಡ ಚಾನ್ಸ್ ಪಡೆಯುವಲ್ಲಿ ಸಕ್ಸಸ್ ಆಗಿದ್ದಾರೆ. ಕೆಎಲ್ ರಾಹುಲ್ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿದ್ದು, ಮಿಡಲ್ ಆರ್ಡರ್ ಸ್ಟ್ರೆಂಥ್ ಹೆಚ್ಚಿಸಲು ನೆರವಾಗ್ತಾರೆ. ಈವರೆಗೂ 77 ಒಡಿಐ ಮ್ಯಾಚಸ್ ಆಡಿರೋ ಕೆಎಲ್ ರಾಹುಲ್ 2851 ರನ್ ಬಾರಿಸಿದ್ದಾರೆ. ಆವರೇಜ್ 49 ಇದೆ. ಹೀಗಾಗೇ ಇಂಗ್ಲೆಂಡ್ ವಿರುದ್ಧದ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಪಡೆದಿದ್ದಾರೆ. ಹಾಗೇ ಚಾಂಪಿಯನ್ಸ್ ಟ್ರೋಫಿಯಲ್ಲೂ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ವಿಕೆಟ್ ಕೀಪರ್ ಬ್ಯಾಟರ್ ಆಗಿರುವ ರಿಷಭ್ ಪಂತ್ ಬೆಂಚ್ ಕಾಯಿಸಿದ್ದಾರೆ. ಅದಕ್ಕೆ ಕಾರಣ ಅವ್ರ ಎಕ್ಸ್ಪೀರಿಯನ್ಸ್ ಮತ್ತು ಏಕದಿನ ಮಾದರಿಯ ಪರ್ಫಾಮೆನ್ಸ್. ಏಕದಿನ ಫಾರ್ಮೆಟ್ನಲ್ಲಿ ಪಂತ್ ಈವರೆಗೂ 31 ಪಂದ್ಯಗಳನ್ನಷ್ಟೇ ಪಂತ್ ಆಡಿದ್ದಾರೆ. ಇದ್ರಲ್ಲಿ 871 ರನ್ ಕಲೆ ಹಾಕಿದ್ದಾರೆ. ಆವರೇಜ್ 34 ಇದೆ. ಇದನ್ನ ಕಂಪೇರ್ ಮಾಡಿದ್ರೆ ಪಂತ್ ಗಿಂತ ರಾಹುಲ್ ನೂರು ಪಟ್ಟು ಬೆಟರ್ ಅನ್ನೋ ಕಾರಣಕ್ಕೆ ಬಿಸಿಸಿಐ ರಾಹುಲ್ರನ್ನೇ ಕಣಕ್ಕಿಳಿಸಿದೆ.
ಪಂದ್ಯದ ಆರಂಭಕ್ಕೂ ಮುನ್ನ ಬೌಲರ್ ಗಳಲ್ಲಿ ಅತ್ಯುತ್ತಮ ಫಾರ್ಮ್ ನಲ್ಲಿರುವ ಅರ್ಶದೀಪ್ ಸಿಂಗ್ ಅವರು ಮೊಹಮ್ಮದ್ ಶಮಿ ಅವರೊಂದಿಗೆ ಕಾಣಿಸಿಕೊಳ್ಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅರ್ಶದೀಪ್ ಅವರನ್ನು ಹೊರಗಿಟ್ಟು ಹರ್ಷಿತ್ ರಾಣಾ ಅವರನ್ನು ಆಯ್ಕೆ ಮಾಡಲಾಯ್ತು. ಹೀಗಾಗಿ ವೇಗದ ಬೌಲಿಂಗ್ ವಿಭಾಗದಲ್ಲಿ ಶಮಿ ಮತ್ತು ರಾಣಾ ಅವರಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಲಿದ್ದಾರೆ. ಸ್ಪಿನ್ ವಿಭಾಗದಲ್ಲಿ ಟಿ20 ಹೀರೋ ವರುಣ್ ಚಕ್ರವರ್ತಿ ಅವರು ತಂಡದಲ್ಲಿ ಸ್ಥಾನ ಪಡೆಯೋ ನಿರೀಕ್ಷೆ ಇತ್ತು. ಬಟ್ ಮ್ಯಾನೇಜ್ ಮೆಂಟ್ ಮೊದಲ ಪಂದ್ಯದಲ್ಲಿ ಅನುಭವಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಅವರನ್ನೇ ಕಣಕ್ಕಿಳಿಸಿದೆ.
ಇನ್ನು ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ವಿರುದ್ಧ ಡೆಬ್ಯೂ ಮಾಡಿದ ಹರ್ಷಿತ್ ರಾಣಾ ಆರಂಭದಲ್ಲಿ ಸಿಕ್ಕಾಪಟ್ಟೆ ರನ್ಗಳನ್ನ ಬಿಟ್ಟುಕೊಟ್ಟಿದ್ರು. ಆದ್ರೆ ಆ ನಂತರದಲ್ಲಿ ಒಂದೇ ಓವರ್ನಲ್ಲಿ ಇಬ್ಬರ ವಿಕೆಟ್ಗಳನ್ನ ಬೇಟೆಯಾಡಿದ್ರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಓಪನರ್ಸ್ 75 ರನ್ಗಳ ಜೊತೆಯಾಟ ನೀಡಿದರು. ಆರಂಭಿಕರಾದ ಬೆನ್ ಡಕೆಟ್ ಹಾಗೂ ಪಿಲ್ ಸಾಲ್ಟ್ ಹೊಡಿಬಡಿ ಆಟದ ಮೂಲಕ ಕೇವಲ 9 ಓವರ್ಗಳಲ್ಲಿ 75 ರನ್ಗಳ ಗಡಿ ದಾಟಿದರು. ಆದರೆ 9ನೇ ಓವರ್ನಲ್ಲಿ ದಾಳಿಗಿಳಿದ ಹಾರ್ದಿಕ್ ಪಾಂಡ್ಯ, ಪಿಲ್ ಸಾಲ್ಟ್ಗೆ ಪೆವಿಲಿಯನ್ ಹಾದಿ ತೋರಿಸಿದ್ರು. ಅದಾದ ಬಳಿಕ ಆರಂಭದಲ್ಲಿ ದುಬಾರಿಯಾಗಿದ್ದ ಹರ್ಷಿತ್ ರಾಣಾ ಇನ್ನಿಂಗ್ಸ್ನ 10ನೇ ಓವರ್ನಲ್ಲಿ ಪ್ರಮುಖ 2 ವಿಕೆಟ್ ಉರುಳಿಸಿ ಇಂಗ್ಲೆಂಡ್ಗೆ ಬ್ಯಾಕ್ ಟು ಬ್ಯಾಕ್ ಆಘಾತ ನೀಡಿದರು.
ಆರಂಭದಲ್ಲಿ ದಾರಾಳವಾಗಿ ರನ್ ಬಿಟ್ಟುಕೊಟ್ಟಿದ್ದ ರಾಣಾ ಆ ಬಳಿಕ ಲಯ ಕಂಡುಕೊಂಡ್ರು. ಇನ್ನಿಂಗ್ಸ್ನ 10ನೇ ಓವರ್ ಮಾಡಲು ಬಂದ ರಾಣಾ ಮೂರನೇ ಎಸೆತದಲ್ಲಿ ಬೆನ್ ಡಕೆಟ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ರಾಣಾ ಎಸೆದ ಶಾರ್ಟ್ ಬಾಲ್ ಅನ್ನು ಡಕೆಟ್ ಮಿಡ್ ವಿಕೆಟ್ ಮೇಲೆ ಆಡಿದರು. ಈ ವೇಳೆ ಅಲ್ಲೇ ನಿಂತಿದ್ದ ಯಶಸ್ವಿ ಜೈಸ್ವಾಲ್ ಹಿಂದಕ್ಕೆ ಓಡಿ ಗಾಳಿಯಲ್ಲಿ ಜಿಗಿದು ಅದ್ಭುತವಾಗಿ ಕ್ಯಾಚ್ ಹಿಡಿದರು. ಜೈಸ್ವಾಲ್ ಹಿಡಿದ ಈ ಕ್ಯಾಚ್ಗೆ ನಾಯಕ ರೋಹಿತ್ರಿಂದ ಹಿಡಿದು ಎಲ್ಲಾ ಆಟಗಾರರು ಎಲ್ರೂ ಶಹಬ್ಬಾಸ್ ಹೇಳಿದ್ರು. ಇನ್ನ ಇದೇ ಓವರ್ನ ಕೊನೆಯ ಎಸೆತದಲ್ಲಿ ರಾಣಾ, ನಾಲ್ಕನೇ ಕ್ರಮಾಂಕದಲ್ಲಿ ಬಂದಿದ್ದ ಹ್ಯಾರಿ ಬ್ರೂಕ್ರನ್ನು ಶೂನ್ಯಕ್ಕೆ ಔಟ್ ಮಾಡಿ, ಇಂಗ್ಲೆಂಡ್ಗೆ ಒಂದೇ ಓವರ್ನಲ್ಲಿ 2 ಶಾಕ್ ಕೊಟ್ರು.