ಪ್ರೀತಿಯೇ ಕಂಟಕವಾಯ್ತು ಈ ಯುವತಿಗೆ! – ವಕ್ಕರಿಸಿಕೊಳ್ತು ʼಲವ್ ಬ್ರೈನ್ʼ ಎಂಬ ವಿಚಿತ್ರ ಕಾಯಿಲೆ

ಪ್ರೀತಿಯೇ ಕಂಟಕವಾಯ್ತು ಈ ಯುವತಿಗೆ! – ವಕ್ಕರಿಸಿಕೊಳ್ತು ʼಲವ್ ಬ್ರೈನ್ʼ ಎಂಬ ವಿಚಿತ್ರ ಕಾಯಿಲೆ

ಪ್ರೀತಿ ಕುರುಡು ಎನ್ನುವ ಮಾತಿದೆ. ಯಾರಿಗೆ, ಯಾವಾಗ, ಯಾರ ಮೇಲೆ ಪ್ರೀತಿ ಹುಟ್ಟುತ್ತದೆ ಎಂದು ಹೇಳುವುದು ಕಷ್ಟದ ಕೆಲಸ. ಬದುಕು ಸುಂದರವಾಗಿರಬೇಕೆಂದರೆ ಪ್ರೀತಿಯ ಮಾಯೆ ನಮ್ಮನ್ನು ಸುತ್ತುತ್ತಿರಬೇಕು ಎಂದು ಹಲವರು ಹೇಳುತ್ತಿರುತ್ತಾರೆ. ಆದರೆ ಇಲ್ಲೊಬ್ಬಳಿಗೆ ಪ್ರೀತಿಯೇ ಕಂಟಕವಾಗಿ ಪರಿಣಮಿಸಿದೆ. ಇತ್ತ ಯುವಕನಿಗೂ ಯಾಕಾದ್ರೂ ಪ್ರೀತಿಯ ಬಲೆಗೆ ಸಿಕ್ಕಿ ಬಿದ್ದೆ ಅನ್ನಿಸಲು ಶುರುವಾಗಿದೆ.

ಪ್ರೀತಿಸುವವರು ಆಗಾಗ ಮೀಟ್‌ ಆಗುವುದು, ಫೋನ್‌ನಲ್ಲಿ ಮಾತನಾಡುವುದು ಕಾಮನ್.‌ ಕೆಲವರು ಎಷ್ಟು ಸದಾ ಫೋನ್‌ನಲ್ಲಿ ಮಾತನಾಡುತ್ತಾ ಕಾಲ ಕಳೆದ್ರೆ ಇನ್ನೂ ಕೆಲವರು ಸಮಯ ಸಿಕ್ಕಾಗ ಮಾತನಾಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬಳಿಗೆ ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುವುದೇ ಚಟವಾಗಿ ಪರಿಣಮಿಸಿದೆ. ಎಷ್ಟು ಮಟ್ಟಿಗೆ ಅಂದ್ರೆ ಈಗ ಆಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ.

ಇದನ್ನೂ ಓದಿ: ಪ್ರಧಾನಿ ಮೋದಿ, ರಾಹುಲ್‌ ಗಾಂಧಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – EC ಯಿಂದ ನಾಯಕರಿಗೆ ನೋಟಿಸ್‌

ಹೌದು, ಅಚ್ಚರಿಯಾದ್ರೂ ಸತ್ಯ. ಚೀನಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ 18 ವರ್ಷದ ಹುಡುಗಿಯೊಬ್ಬಳು ದಿನಕ್ಕೆ ನೂರಕ್ಕೂ ಹೆಚ್ಚು ಬಾರಿ ತನ್ನ ಬಾಯ್ ಫ್ರೆಂಡ್ ಗೆ ಕರೆ ಮಾಡಿ ಮಾತನಾಡುತ್ತಿದ್ದಳಂತೆ, ಏನಾದರೂ ಆತ ಆಕೆಯೆ ಕರೆಗೆ ಸ್ಪಂದಿಸದಿದ್ದರೆ ಆಕೆಯ ವರ್ತನೆ ಅತಿರೇಕಕ್ಕೆ ಹೋಗುತ್ತಿತ್ತು.  ಗೆಳತಿಯ ಈ ವರ್ತನೆ ಆ ಹುಡುಗನಿಗೂ ಉಸಿರುಗಟ್ಟಿಸುವಂತೆ ಮಾಡಿದೆ.

ಮಾಧ್ಯಮ ವರದಿಗಳ ಪ್ರಕಾರ ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿಯಾಗಿರುವ 18 ವರ್ಷ  ವಯಸ್ಸಿನ ಕ್ಸಿಯಾಯು ಎಂಬ ಹುಡುಗಿ ತನ್ನ ಕಾಲೇಜು ಸ್ನೇಹಿತನೊಂದಿಗೆ ಪ್ರೀತಿಯಲ್ಲಿ ಬೀಳುತ್ತಾಳೆ. ಇವರಿಬ್ಬರು ಪ್ರೀತಿಯಲ್ಲಿ ಬಿದ್ದ ನಂತರ ಕ್ಸಿಯಾಯು ತನ್ನ ಗೆಳೆಯನ ಮೇಲೆ ಹೆಚ್ಚು ಅವಳಂಬಿತವಾಗುತ್ತಾಳೆ. ಆಕೆಗೆ ಪ್ರತಿ ಕ್ಷಣವೂ ತನ್ನ ಬಾಯ್ ಫ್ರೆಂಡ್ ನನ್ನ ಜೊತೆಯಲ್ಲಿಯೇ ಇರಬೇಕು ಎಂದು ಅನಿಸುತ್ತಿತ್ತು. ಇದಕ್ಕಾಗಿ ಆಕೆ ಹಗಲು ರಾತ್ರಿ ಎನ್ನದೆ ದಿನಕ್ಕೆ ನೂರಕ್ಕಿಂತಲೂ ಹೆಚ್ಚು ಬಾರಿ ಗೆಳೆಯನಿಗೆ ಕರೆ ಮಾಡುತ್ತಿದ್ದಳು. ಜೊತೆಗೆ ಪ್ರತಿ ಕ್ಷಣವೂ ಆತನಿಗೆ ಮೆಸೇಜ್ ಮಾಡುತ್ತಿದ್ದಳು. ಆತನ ಏನಾದರೂ ಆಕೆಯ ಮೆಸೆಜ್ ಗೆ ಸ್ಪಂದಿಸದಿದ್ದರೆ ಆಕೆ ಕೋಪಗೊಂಡು ಮನೆಯ ವಸ್ತುಗಳನ್ನೆಲ್ಲಾ ಬಿಸಾಡುತ್ತಿದ್ದಳು. ಕ್ಸಿಯಾಯುಳ ಈ ವರ್ತನೆ ಆಕೆ ಬಾಯ್ ಫ್ರೆಂಡ್ ಗೂ  ಉಸಿರುಗಟ್ಟಿಸಿದಂತಾಗಿದ್ದು.

ಆಕೆಯ ಈ ವಿಚಿತ್ರ ವರ್ತನೆ ಅತಿರೇಕಕ್ಕೆ ಏರಿದಾಗ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತು. ನಂತರ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ʼಲವ್ ಬ್ರೈನ್ʼ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಈ ಕಾಯಿಲೆಯು ಪರಿಹರಿಸಲಾಗದ ಬಾಲ್ಯದ ಮಾನಸಿಕ ಆಘಾತಗಳಿಂದ ಉಂಟಾಗಬಹುದು ಎಂದು ವೈದ್ಯರು ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *