ಕೀವ್‌ನಲ್ಲಿ ಹೆಲಿಕಾಪ್ಟರ್ ಪತನ- ಉಕ್ರೇನ್ ಸಚಿವ ಸೇರಿ 18 ಮಂದಿ ಬಲಿ

ಕೀವ್‌ನಲ್ಲಿ ಹೆಲಿಕಾಪ್ಟರ್ ಪತನ-  ಉಕ್ರೇನ್ ಸಚಿವ ಸೇರಿ 18 ಮಂದಿ ಬಲಿ

ಉಕ್ರೇನ್ ರಾಜಧಾನಿ ಕೀವ್​​ನಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು, ಗೃಹ ಸಚಿವರು ಸೇರಿದಂತೆ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. ಎಮರ್ಜೆನ್ಸಿ ಸರ್ವಿಸ್ ಹೆಲಿಕಾಪ್ಟರ್​​​ನಲ್ಲಿ ಪ್ರಯಾಣ ಮಾಡ್ತಿದ್ದ ವೇಳೆ ಇದ್ದಕ್ಕಿದ್ದಂತೆ ಹೆಲಿಪಾಕ್ಟರ್ ಪತನಗೊಂಡು ಹೊತ್ತಿ ಉರಿದಿದೆ. ಪೈಲಟ್ ಎಡವಟ್ಟಿನಿಂದ್ಲೇ ದುರಂತ ಸಂಭವಿಸಿದೆ ಎನ್ನಲಾಗ್ತಿದ್ದು, ನಿಖರ ಕಾರಣ ಇನ್ನಷ್ಟೇ ತಿಳಿದುಬರಬೇಕಿದೆ. ಈ ದುರಂತದಲ್ಲಿ ಇಬ್ಬರು ಮಕ್ಕಳು ಕೂಡ ಜೀವ ಕಳೆದುಕೊಂಡಿದ್ದಾರೆ. ಗಾಯಗೊಂಡಿರೋ 22 ಮಂದಿಯನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:  ಪೈಲಟ್ ಆಗಿದ್ದ ಗಂಡ ವಿಮಾನ ದುರಂತಕ್ಕೆ ಬಲಿಯಾಗಿದ್ದ – ಈಗ ಪತ್ನಿಯದ್ದೂ ಅದೇ ದುರಂತ ಸಾವು..!

ಪತನಗೊಂಡ ಹೆಲಿಕಾಪ್ಟರ್‌ ಶಿಶುವಿಹಾರ ಕೇಂದ್ರದ ಮೇಲೆ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ. ಇದರ ಪರಿಣಾಮ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಉಕ್ರೇನ್‌ ಸಚಿವರ ಜೊತೆ ಹಲವು ಹಿರಿಯ ಅಧಿಕಾರಿಗಳು ಕೂಡಾ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು. ಕಟ್ಟಡದ ಮೇಲೆ ಹೆಲಿಕಾಪ್ಟರ್‌ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಹಲವು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. 10 ಮಕ್ಕಳು ಸೇರಿದಂತೆ 22 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

suddiyaana