ಐಪಿಎಲ್ ಟ್ರೋಫಿಗಾಗಿ ಕೊಹ್ಲಿ 18 ವರ್ಷಗಳ ಮಹಾತಪಸ್ಸು – ವಿರಾಟ್ ಗಾಗಿಯಾದ್ರೂ ಕಪ್ ಗೆಲ್ಲಲೇಬೇಕು!

ಐಪಿಎಲ್ ಟ್ರೋಫಿಗಾಗಿ ಕೊಹ್ಲಿ 18 ವರ್ಷಗಳ ಮಹಾತಪಸ್ಸು – ವಿರಾಟ್ ಗಾಗಿಯಾದ್ರೂ ಕಪ್ ಗೆಲ್ಲಲೇಬೇಕು!
New Chandigarh: Royal Challengers Bengaluru's batter Virat Kohli celebrates his half century during the Indian Premier League (IPL) 2025 match between Punjab Kings and Royal Challengers Bengaluru, at Maharaja Yadavindra Singh International Cricket Stadium, in New Chandigarh, Sunday, April 20, 2025. (PTI Photo/Arun Sharma) (PTI04_20_2025_000408A)

ಆರ್​ಸಿಬಿ ಕಪ್ ಗೆಲ್ಲಲಿ ಅಂತಾ ಬರೀ ಕರ್ನಾಟಕ ಮಾತ್ರವಲ್ಲ. ದೇಶ, ಭಾಷೆ, ಗಡಿಗಳ ಎಲ್ಲೆ ಮೀರಿ ಆರ್​ಸಿಬಿ  ಬೆಂಬಲಿಸೋ ಕೋಟ್ಯಂತರ ಫ್ಯಾನ್ಸ್ ಬೇಡಿಕೊಳ್ತಿದ್ದಾರೆ. ಹಾಗಂತ ಇದು ಬರೀ ತಂಡಕ್ಕಾಗಿ ಅಲ್ಲ.. ಜೀವವೇ ಆಗಿರುವ ಅಭಿಮಾನಿಗಳಿಗಾಗಿ ಅಲ್ಲ. ಅಥವಾ ಒಂದು ಫ್ರಾಂಚೈಸಿಗಾಗಿಯೂ ಅಲ್ಲ. 18 ವರ್ಷಗಳಿಂದ ಒಂದೇ ಜೆರ್ಸಿ ತೊಟ್ಟು ಸರ್ವತ್ಯಾಗಿಯಾದ ರಾಜನಿಗಾಗಿ. ಐಪಿಎಲ್ ಟ್ರೋಫಿಗಾಗಿ ಮಹಾತಪಸ್ಸನಲ್ಲೇ ಮಾಡ್ತಿರೋ ವಿರಾಟ್ ಕೊಹ್ಲಿ ಎಂಬ ಅಪ್ರತಿಮ ವೀರನಿಗಾಗಿ. ಜಗಮೆಚ್ಚಿನ ಈ ಸರ್ವಶ್ರೇಷ್ಠ ದಿಗ್ಗಜನಿಗೆ ಗೆಲುವಿನ ಕಿರೀಟ ತೊಡಿಸಲೇಬೇಕಿದೆ. ಐಸಿಸಿ ಕಪ್ ಗಳನ್ನ ಎತ್ತಿ ಮೆರೆದ ಕೈಗಳಿಗೆ ಐಪಿಎಲ್​ ಟ್ರೋಫಿ ಕೊಟ್ಟು ಮಿನುಗೋ ಆ ಕಂಗಳಲ್ಲಿ ಸಾರ್ಥಕಥೆಯ ಭಾವವನ್ನ ಕಣ್ತುಂಬಿಕೊಳ್ಬೇಕಿದೆ.

ಇದನ್ನೂ ಓದಿ : IPL ಟ್ರೋಫಿ RCBಗೋ.. PBKSಗೋ – ಮೋದಿ ಸ್ಟೇಡಿಯಂ ಪಿಚ್ ಯಾರಿಗೆ ಪ್ಲಸ್?

ಸಚಿನ್ ತೆಂಡೂಲ್ಕರ್. ವಿಶ್ವಕ್ರಿಕೆಟ್​ನ ಗ್ರೇಟೆಸ್ಟ್ ಕ್ರಿಕೆಟರ್ ಆಫ್ ಆಲ್ ಟೈಂ. ಬಟ್ ವಿಪರ್ಯಾಸ ಏನ್ ಗೊತ್ತಾ ಇಂಥಾ ಕ್ರಿಕೆಟ್ ದೇವರೇ ವಿಶ್ವಕಪ್ ಎತ್ತಿ ಹಿಡಿಯೋಕೆ ಬರೋಬ್ಬರಿ 22 ವರ್ಷಗಳು ಬೇಕಾಯ್ತು. ಇನ್ನು ಪ್ರಪಂಚದಾದ್ಯಂತ ಅಭಿಮಾನಿಗಳನ್ನ ಬೆರಗುಗೊಳಿಸಿರೋ ಕ್ರಿಸ್ಟಿಯಾನೋ ರೊನಾಲ್ಡೋ ಅಲ್ಟಿಮೇಟ್ ಸಿಲ್ವರ್ ಮೆಡಲ್ ಪದಕ ಪಡೆಯೋಕೆ ಸಾಧ್ಯವಾಗ್ಲಿಲ್ಲ. ಟೆಸ್ಟ್ ಕ್ರಿಕೆಟ್​ನ ದಂತಕತೆ ಬ್ರಿಯಾನ್ ಲಾರಾ ಯಾವತ್ತಿಗೂ ವಿಶ್ವಕಪ್ ಎತ್ತಿ ಹಿಡಿಯಲೇ ಇಲ್ಲ. ಜಿಯಾನ್ಲುಯಿಗಿ ಬಫನ್ ಎಂದಿಗೂ ಚಾಂಪಿಯನ್ಸ್ ಲೀಗ್ ಗೆದ್ದಿಲ್ಲ. ಕಹಿ ಸತ್ಯ ಅಂದ್ರೆ ಕ್ರೀಡೆಗಳಲ್ಲಿ ಬ್ರೈಟೆಸ್ಟ್ ಸ್ಟಾರ್ಸ್ ಅಂತಾ ಕರೆಸಿಕೊಳ್ಳೋ ಪ್ಲೇಯರ್​ಗಳಿಗೆ ಕ್ರೀಡಾಲೋಕ ಒಮ್ಮೊಮ್ಮೆ ದಯೆ ತೋರೋದಿಲ್ಲ. ಸಾಮರ್ಥ್ಯ ಇದ್ರೂ ಟ್ರೋಫಿಗಳು ಸಿಗೋಗಿಲ್ಲ. ಒನ್ ಮ್ಯಾನ್ ಆರ್ಮಿಯಂತೆ ಅಬ್ಬರಿಸಿದ್ರೂ ಯಶಸ್ಸು ಧಕ್ಕೋದಿಲ್ಲ. ಇದೇ ಸಾಲಿಗೆ ಸೇರಿದವ್ರು ನಮ್ಮ ಕಿಂಗ್ ವಿರಾಟ್ ಕೊಹ್ಲಿ.

ಜಗತ್ತಿನ ಶ್ರೇಷ್ಠ ಬ್ಯಾಟ್ಸ್​ಮನ್ ಅಂತಾನೇ ಕರೆಸಿಕೊಳ್ತಿರೋ ವಿರಾಟ್ ಕೊಹ್ಲಿಗೆ ಐಪಿಎಲ್​​ನ ಟ್ರೋಫಿ ಗೆಲ್ಲೋದು ಕನಸಾಗೇ ಉಳಿದಿದೆ. ವಿರಾಟ್ ಕೊಹ್ಲಿ ತಮ್ಮ 22 ನೇ ವಯಸ್ಸಿನಲ್ಲೇ ODI ವಿಶ್ವಕಪ್ ಗೆದ್ದಿದ್ರು. ನಂತರ 24 ನೇ ವಯಸ್ಸಿನಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದರು. ವೃತ್ತಿಜೀವನದ ಉತ್ತುಂಗದಲ್ಲಿರೋ ವಿರಾಟ್ ಈಗ 12 ತಿಂಗಳುಗಳ ಅವಧಿಯಲ್ಲೇ T20 ವಿಶ್ವಕಪ್ ಮತ್ತು ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿದ್ರು. ಬಟ್ ಐಪಿಎಲ್ ಟೈಟಲ್ ಅನ್ನೋದು ಇನ್ನೂ ಕೈ ಸೇರ್ತಿಲ್ಲ.  ಕಳೆದ 18 ವರ್ಷಗಳಿಂದ ಆರ್​ಸಿಬಿ ಮಾತ್ರವಲ್ಲದೆ ಇಡೀ ಐಪಿಎಲ್​ನ ಹಾರ್ಟ್​ಬೀಟ್​ನಂತಿರೋ ವಿರಾಟ್ ಐಕಾನಿಕ್ ಪ್ಲೇಯರ್ ಆಗಿದ್ದಾರೆ. ಆರ್​ಸಿಬಿ ತಂಡದಲ್ಲಿ ಮೂರು ಸಲ ಫೈನಲ್ ಮೆಟ್ಟಿಲೇರಿ ಕೂದಲೆಳೆಯಲ್ಲೇ ಕಪ್ ಅನ್ನೋ ಮಾಯಾಜಿಂಕೆಯನ್ನ ಮಿಸ್ ಮಾಡ್ಕೊಂಡಿದ್ದಾರೆ. ವಿರಾಟ್ ಐಪಿಎಲ್ನಲ್ಲಿ ಅದೆಷ್ಟು ಡೆಪ್ತ್ ಆಗಿ ಆಡಿದ್ದಾರೆ, ಆರ್​ಸಿಬಿಗಾಗಿ ಅದೆಷ್ಟು ಡೆಡಿಕೇಟೆಡ್ ಆಗಿ ಇದ್ದಾರೆ ಅನ್ನೋದಕ್ಕೆ ನಂಬರ್​ಗಳೇ ಸಾಕ್ಷಿಯಾಗಿದೆ. ವಿರಾಟ್ ಐಪಿಎಲ್​ನಲ್ಲಿ 9 ಸಾವಿರಕ್ಕೂ ಹೆಚ್ಚು ರನ್ಸ್ ಗಳಿಸಿದ್ದಾರೆ. ಅದ್ರಲ್ಲೂ 2016ರ ಒಂದೇ ಸೀಸನ್​ನಲ್ಲಿ ಬರೋಬ್ಬರಿ 973 ರನ್ ಕಲೆ ಹಾಕಿದ್ರು. ಈ ದಾಖಲೆಯನ್ನ ಯಾರಿಂದಲೂ ಕೂಡ ಬ್ರೇಕ್ ಮಾಡೋಕೆ ಆಗಿಲ್ಲ. 8 ಶತಕಗಳು, 63 ಅರ್ಧಶತಕಗಳು. ಸದ್ಯಕ್ಕಂತೂ ಈ ದಾಖಲೆಯಗಳನ್ನ ಯಾರಿಂದಲೂ ಬ್ರೇಕ್ ಮಾಡೋದು ಕನಸಿನ ಮಾತು.

18 ವರ್ಷಗಳ ಐಪಿಎಲ್ ಇತಿಹಾಸದಲ್ಲಿ ಒಂದೇ ಒಂದು ಕಪ್ ಗೆಲ್ಲದೆಯೂ ಜಗತ್ತಿನೆಲ್ಲೆಡೆ ಅಭಿಮಾನಿಗಳನ್ನ ಸಂಪಾದಿಸೋದಂದ್ರೆ ಅದು ತಮಾಷೆಯ ಮಾತಲ್ಲ. ಆರ್​ಸಿಬಿ ಪರ ಜಗತ್ತಿನ ಬೇರೆ ಬೇರೆ  ಸ್ಟಾರ್ಟ್ ಪ್ಲೇಯರ್ಸ್ ಕಣಕ್ಕಿಳಿದಿದ್ದಾರೆ. ಅಭಿಮಾನಿ ಬಳಗ ಜಗದಗಲವೂ ಇದೆ. ಲಾಯಲ್ಟಿ ಇದೆ, ಎಮೋಷನ್ಸ್ ಇದೆ. ಆದರೆ ಪರಂಪರೆ ಅಂತಾ ಬಂದ್ರೆ ಇದು ಭಾವನೆಗಳ ಮೇಲೆಯೇ ಕಟ್ಟಿರೋ ಫ್ರಾಂಚೈಸಿ. ಹಾಗಾದ್ರೆ ಒಂದು ಸಲವೂ ಯಾಕೆ ಕಪ್ ಗೆದ್ದಿಲ್ಲ. ಆರ್​ಸಿಬಿ ವೀಕ್ ಟೀಮಾ ಅಂದ್ರೆ ಖಂಡಿತ ಇಲ್ಲ. ಬಟ್ ಕೆಲವು ಸಲ ಲಕ್ ಕೂಡ ಕೈ ಹಿಡೀಬೇಕಾಗುತ್ತೆ. 2016ರ ಸೀಸನ್ನೇ ತಗೊಂಡ್ರೆ ಎಬಿಡಿ, ಕ್ರಿಸ್ ಗೇಲ್, ವಿರಾಟ್ ಕೊಹ್ಲಿಯಂತಹ ಗ್ರೇಟ್ ಪ್ಲೇಯರ್ಸ್ ಇದ್ರೂ ಫೈನಲ್ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. ಆ ಸೀಸನ್ ಒಂದ್ರಲ್ಲೇ ಕೊಹ್ಲಿ 4 ಶತಕ ಬಾರಿಸಿದ್ರು. ನಾಯಕನಾಗಿ ತಂಡವನ್ನ ಫೈನಲ್​ಗೂ ಕೊಂಡೊಯ್ದಿದ್ರು. ಬಟ್ ಮತ್ತದೇ ನಿರಾಸೆ. 2009, 2011ರ ಫೈನಲ್​ನಲ್ಲೂ ಇದೇ ಕಥೆ. ಇನ್ನು 2020ರ ಸೀನನ್​ನಿಂದ ಈಚೆಗೆ ಕನ್ಸಿಸ್ಟೆನ್ಸಿ ಟೀಂ ಅಂದ್ರೆ ಅದು ಆರ್​ಸಿಬಿಯೇ. ಬ್ಯಾಕ್ ಟು ಬ್ಯಾಕ್ ಪ್ಲೇಆಫ್​ಗೆ ಬರ್ತಾನೇ ಇದೆ. ಬಟ್ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಅಂತಸ್ತಿನ ಕಪಾಟಿನಲ್ಲಿ ಮಿನುಗುವ ಟ್ರೋಫಿ ಒಂದಿಲ್ಲ ಅನ್ನೋ ಕೊರತೆ ಕಾಡ್ತಾನೇ ಇದೆ.

ವಿರಾಟ್ ಕೊಹ್ಲಿ ಐಪಿಎಲ್ ಕಪ್ ಗೆಲ್ಲೋಕೆ ಎಷ್ಟು ಡಿಸರ್ವಿಂಗ್ ಇದ್ದಾರೋ ಐಪಿಎಲ್​ ಟ್ರೋಫಿಗೂ ಕೂಡ ವಿರಾಟ್​ನಂಥ ಪ್ಲೇಯರ್ ಕೈಯಲ್ಲಿ ಇರೋದೇ ದೊಡ್ಡ ತೂಕ. ಈ ಸೀಸನ್​ನಲ್ಲೂ ಆರ್​ಸಿಬಿ ಪರ ಕೊಹ್ಲಿ ಒನ್ ಮ್ಯಾಚ್ ಶೋ ಕಂಟಿನ್ಯೂ ಆಗಿದೆ. ಈವರೆಗೂ 614 ರನ್‌ಗಳನ್ನ ಕಲೆ ಹಾಕಿದ್ದಾರೆ. ಐದು ವಿಭಿನ್ನ ಐಪಿಎಲ್ ಆವೃತ್ತಿಗಳಲ್ಲಿ 600ಕ್ಕೂ ಹೆಚ್ಚು ರನ್‌ಗಳನ್ನು ದಾಟಿದ ಏಕೈಕ ಬ್ಯಾಟ್ಸ್‌ಮನ್. ಇಂಟ್ರೆಸ್ಟಿಂಗ್ ಅಂದ್ರೆ ಈ ಸೀಸನ್​ನಲ್ಲಿ ಕೊಹ್ಲಿ ಜೊತೆಗೆ ಟೀಂ ಸಪೋರ್ಟ್ ಕೂಡ ಸಿಗ್ತಿದೆ. ಸಾಲ್ಟ್ 12 ಪಂದ್ಯಗಳಲ್ಲಿ 175 ರ ಸ್ಟ್ರೈಕ್ ರೇಟ್‌ನಲ್ಲಿ 387 ರನ್ ಗಳಿಸಿದ್ದಾರೆ. ಮಿಡಲ್ ಆರ್ಡರ್ ಕೂಡ ಪಂದ್ಯ ಗೆಲ್ಲಿಸುವಂಥ ಸಾಮರ್ಥ್ಯ ಇದೆ. ಮೊದ್ಲೆಲ್ಲಾ ಟಾಪ್ 3 ಮೇಲೆ ಡಿಪೆಂಡ್ ಆಗಿದ್ದ ಟೀ ಈ ಸಲ ಮಿಡಲ್ ಆರ್ಡರ್​ನಲ್ಲೂ ಗೆದ್ದು ತೋರಿಸಿದೆ. ಇತರ ನಾಲ್ವರು ಬ್ಯಾಟ್ಸ್‌ಮನ್‌ಗಳು ಕೂಡ 200+ ರನ್‌ಗಳನ್ನು ದಾಟಿದ್ದಾರೆ. ಜೋಶ್ ಹೇಜಲ್​ವುಡ್, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಸುಯಾಶ್ ಶರ್ಮಾ, ಕೃನಾಲ್ ಪಾಂಡ್ಯ ಹೀಗೆ ಬೌಲಿಂಗ್ ಸ್ಕ್ವಾಡ್ ಕೂಡ ಅಲ್ಟಿಮೇಟ್ ಆಗಿದೆ.

ವಿರಾಟ್ ಕೊಹ್ಲಿ ಈಗಾಗ್ಲೇ ತಮ್ಮ ಕ್ರಿಕೆಟ್ ಕರಿಯರ್​ನ ಉತ್ತುಂಗದಲ್ಲಿದ್ದಾರೆ. ಶಾಕಿಂಗ್ ವಿಚಾರ ಅಂದ್ರೆ ಮೈದಾನದಿಂದ ಮರೆಯಾಗೋದು ತುಂಬಾ ದೂರ ಏನಿಲ್ಲ. ಈಗಾಗ್ಲೇ ಟೆಸ್ಟ್ ಮತ್ತು ಟಿ20ಐ ಪಂದ್ಯಗಳಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಕ್ರಿಕೆಟ್​ ಇನ್ನೆಷ್ಟು ದಿನ ಹೇಳೋಕಾಗಲ್ಲ. ಐಪಿಎಲ್​ನಲ್ಲಿ ಇನ್ನೂ ಮೂರ್ನಾಲ್ಕು ವರ್ಷಗಳಲ್ಲಿ ಇದೇ ಎನರ್ಜಿಯಲ್ಲಿ ಆಡುವಷ್ಟು ಸ್ಪಿರಿಟ್ ಅವ್ರಲ್ಲಿದೆ. ಬಟ್ ಯಶಸ್ಸಿನ ಉತ್ತುಂಗದಲ್ಲಿ ಇದ್ದಾಗಲೇ ತೆರೆಮರೆಗೆ ಸರಿದು ಬಿಡ್ಬೋಕು ಅನ್ನೋ ಪಾಲಿಸಿ ಅವ್ರದ್ದು. ಸೋ ಈ ಸೀಸನ್ ಕಿಂಗ್​ಗೆ ಐಪಿಎಲ್​ನ ಕಿರೀಟ ತೊಡಿಸೋಕೆ ಬಹುಶಃ ಇದಕ್ಕಿಂತ ಇನ್ನೊಂದು ಸುವರ್ಣಾವಕಾಶ ಖಂಡಿತ ಸಿಗಲ್ಲ. ತಂಡದ ಫಾರ್ಮ್, ಫಿಟ್‌ನೆಸ್, ಡೆಪ್ತ್, ಕ್ಯಾಪ್ಟನ್ಸಿ ಎಲ್ಲವೂ ಹೊಸ ಅಧ್ಯಾಯದಂತೆಯೇ ಇದೆ. ಸೋ ವಿರಾಟ್ 12 ತಿಂಗಳುಗಳ ಅವಧಿಯಲ್ಲೇ 2 ಐಸಿಸಿ ಟ್ರೋಫಿ ಗೆದ್ದಿದ್ದಾರೆ. ಈಗ ಉಳಿದಿರುವುದು ಐಪಿಎಲ್ ಕಿರೀಟವೊಂದೇ. ಯಾಕಂದ್ರೆ ವಿರಾಟ್ ಯಾವತ್ತೂ ಕೂಡ ನಿವೃತ್ತಿ ತಗೊಳ್ಳಿ ಅಂತಾ ಹೇಳಿಸಿಕೊಳ್ಳೋರಲ್ಲ. ಇನ್ನೂ ಎರಡ್ಮೂರು ವರ್ಷ ಆಡಬಹುದಿತ್ತು ಅನ್ನುವಾಗ್ಲೇ ವಿದಾಯ ಹೇಳಿ ಹೊರಟುಬಿಡುತ್ತಾರೆ.

Shantha Kumari

Leave a Reply

Your email address will not be published. Required fields are marked *