LPG ಗ್ಯಾಸ್ ಸಿಲಿಂಡರ್ ಬಿಕ್ಕಟ್ಟು! – ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 3,600ರೂ.!

ಇರಾನ್ – ಇಸ್ರೇಲ್ ನಡುವಿನ ಯುದ್ಧದಿಂದಾಗಿ ಸರಿಯಾದ ಪ್ರಮಾಣದಲ್ಲಿ ಅಡುಗೆ ಅನಿಲ ಪೂರೈಕೆಯಾಗುತ್ತಿಲ್ಲ. ಇದ್ರಿಂದಾಗಿ ಹೋಟೆಲ್ ಸೇರಿದಂತೆ ಹಲವು ವಲಯಗಳ ಮೇಲೆ ಇದರ ಬಿಸಿ ತಟ್ಟಿದೆ. ಹೋಟೆಲ್ ಮಾಲೀಕರು ಗ್ಯಾಸ್ ಸಿಲಿಂಡರ್ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಂದ್ಕಡೆ ಖಾಸಗಿ ಏಜೆನ್ಸಿಗಳು ಸಿಲಿಂಡರ್ ದರ ದುಪ್ಪಟ್ಟು ಮಾಡಿದ್ದು, ಹೋಟೆಲ್ ಮಾಲೀಕರು ದರ ಕೇಳಿ ಕಂಗಾಲಾಗಿದ್ದಾರೆ. ಏಜೆನ್ಸಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಮುಂದಿನ ವಾರ ಗ್ಯಾಸ್ ಪೂರೈಕೆಯಲ್ಲಿ ಹೆಚ್ಚಳ ಆಗುತ್ತಾ ಎಂಬ ನಿರೀಕ್ಷೆಯಲ್ಲಿ ಕಾಯುತ್ತಿದ್ದಾರೆ.
ಇದನ್ನೂ ಓದಿ: ದೇಶದ ಜನತೆಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ! – ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕ ಭಾರೀ ಇಳಿಕೆ!
ಗ್ಯಾಸ್ ಅಭಾವದಿಂದ ಹೋಟೆಲ್‌ಗಳಿಗೆ ಭಾರೀ ಹೊಡೆತ ಆಗಿದ್ದು, ಸರ್ಕಾರ ನಿರೀಕ್ಷಿಸಿದಷ್ಟು ಗ್ಯಾಸ್‌ಗಳನ್ನ ಪೂರೈಕೆ ಮಾಡ್ತಿಲ್ಲ. ಕಮರ್ಷಿಯಲ್ ಗ್ಯಾಸ್‌ಗಾಗಿ ಹೋಟೆಲ್ ಮಾಲೀಕರು ಪರದಾಡುತ್ತಾ ಇದ್ದಾರೆ. ಖಾಸಗಿಯಲ್ಲಿ 17 ಕೆಜಿ ಸಿಲಿಂಡರ್‌ಗೆ ಯುದ್ದಕ್ಕೂ ಮುನ್ನ 1,700 ರೂ. ಇತ್ತು ಯುದ್ಧ ಶುರುವಾದ ಮೇಲೆ ಅದೇ 17 ಕೆಜಿ ಸಿಲಿಂಡರ್‌ಗೆ ಬರೋಬ್ಬರಿ 3,600 ರೂ. ಆಗಿದೆ. ಖಾಸಗಿ ಏಜೆನ್ಸಿಗಳ ದರಕ್ಕೆ ಹೋಟೆಲ್ ಮಾಲೀಕರು ಅಸಮಾಧಾನ ಹೊರ ಹಾಕ್ತಾ ಇದ್ದಾರೆ. ಸರ್ಕಾರದಿಂದ 33% ಸಿಲಿಂಡರ್ ಸಿಗ್ತಾ ಇದೆ ಅಂತಾರೆ ಆದರೆ ಸರಿಯಾಗಿ ಸಿಗ್ತಿಲ್ಲ ಮುಂದಿನ ವಾರ ಆದರೂ ಹೆಚ್ಚು ಕಮರ್ಷಿಯಲ್ ಗ್ಯಾಸ್ ಕೊಡ್ತಾರೆ ಅಂತಾ ಹೋಟೆಲ್ ಮಾಲೀಕರು ನಿರೀಕ್ಷೆಯನ್ನ ಇಡುತ್ತಿದ್ದಾರೆ.
ಇನ್ನು ಇರಾನ್-ಇಸ್ರೇಲ್ ಯುದ್ಧದ ಪರಿಣಾಮ ಗ್ಯಾಸ್ ಸಮಸ್ಯೆ. ಪೆಟ್ರೋಲ್ ಅಭಾವದ ವದಂತಿಗೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಈ ಮಧ್ಯೆ ಪೆಟ್ರೋಲಿಯಂ ಉಪಉತ್ಪನ್ನವಾದ ರಬ್ಬರ್ ಬೆಲೆ ಏರಿಕೆಯಿಂದಾಗಿ ಟಯರ್‌ಗಳ ಬೆಲೆಯಲ್ಲಿ ಶೇ.2 ರಷ್ಟು ಏರಿಕೆ ಕಂಡಿದೆ. ವಾಹನಗಳಿಗೆ ಅಗತ್ಯವಾಗಿ ಬೇಕಾಗಿರೋದೇ ಟೈಯರ್‌ಗಳು. ಮೊನ್ನೆಯಿಂದ ಎಲ್ಲಾ ವಾಹನಗಳ ಬ್ರಾಂಡ್ ಗಳ ಟೈಯರ್ ರೇಟ್ ಚೇಂಜ್ ಆಗಿದೆ.
ಟೈಯರ್‌ಗಳ ಬೆಲೆ ಏರಿಕೆ – ಯಾವುದಕ್ಕೆ ಎಷ್ಟು?
- ಬಸ್:- 30 ಸಾವಿರದಿಂದ 31 ಸಾವಿರಕ್ಕೆ ಏರಿಕೆ
- ಲಾರಿ:- 25 ಸಾವಿರದಿಂದ 26 ಸಾವಿರಕ್ಕೆ ಏರಿಕೆ
- ಕಾರು:- 3,500 ದಿಂದ 3,700ಕ್ಕೆ ಏರಿಕೆ
- ದ್ವಿ ಚಕ್ರ:- 1,200ದಿಂದ 1,300ಕ್ಕೆ ಏರಿಕೆ
ಒಟ್ಟಾರೆ ಯುದ್ಧದ ಎಫೆಕ್ಟ್‌ನಿಂದ ರಾಜ್ಯದಲ್ಲಿ ಒಂದಿಲ್ಲೊಂದು ವಸ್ತುಗಳ ಬೆಲೆ ಏರಿಕೆ ಕಾಣ್ತಿದೆ. ಸಾರ್ವಜನಿಕರು ಮಾತ್ರ ಇಲ್ಲ ಎನ್ನದಂತೆ ದುಪ್ಪಟ್ಟು ದುಡ್ಡು ಕೊಡಲೇಬೇಕಾಗಿದೆ.

ನೋಡಿರಿ

