ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಸಿಎಂ ಘೋಷಣೆ – ಮುಷ್ಕರ ನಿಲ್ಲಲ್ಲ ಎಂದಿದ್ದೇಕೆ ಷಡಕ್ಷರಿ? 

ಸರ್ಕಾರಿ ನೌಕರರಿಗೆ ಶೇ.17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಸಿಎಂ ಘೋಷಣೆ – ಮುಷ್ಕರ ನಿಲ್ಲಲ್ಲ ಎಂದಿದ್ದೇಕೆ ಷಡಕ್ಷರಿ? 

7ನೇ ವೇತನ ಆಯೋಗ ವರದಿ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ಇವತ್ತು ಸರ್ಕಾರಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆಯೇ ಸರ್ಕಾರಿ ನೌಕರರಿಗೆ ಸರ್ಕಾರ ಭರ್ಜರಿ ಗಿಫ್ಟ್ ನೀಡಿದೆ. ಶೇಕಡಾ 17ರಷ್ಟು ವೇತನ ಹೆಚ್ಚಳ ಮಾಡೋದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಶೇ.17ರಷ್ಟು ವೇತನ ಹೆಚ್ಚಳ ಮಾಡಿದ್ದು ಕೂಡಲೇ ಮುಷ್ಕರ ಕೈ ಬಿಡುವಂತೆ ನೌಕರರಿಗೆ ಮನವಿ ಮಾಡಿದ್ದಾರೆ. ಹಾಗೇ ಎನ್​ಪಿಎಸ್ ವಿಚಾರವಾಗಿ ಸಮಿತಿ ರಚನೆ ಮಾಡಲಾಗಿದೆ. ಬೇರೆ ರಾಜ್ಯಗಳಲ್ಲಿ ಎನ್​ಪಿಎಸ್ ಜಾರಿಯಾಗಿದೆಯಾ ಎಂಬ ಬಗ್ಗೆ ಅಧ್ಯಯನ ನಡೆಸಿ ತೀರ್ಮಾನ ಕೈಗೊಳ್ಳೋದಾಗಿ ಹೇಳಿದ್ದಾರೆ.

ಇದನ್ನೂ ಓದಿ : ಅದೃಷ್ಟ ಬರುತ್ತದೆಂದು ನಂಬಿ ನರಿ ಸಾಕಿದ – ಬೆಳಗೆದ್ದು ಮುಖ ನೋಡ್ತಿದ್ದವನು ಅದೇ ನರಿಯಿಂದ ಜೈಲುಪಾಲಾದ!

ಮುಖ್ಯಮಂತ್ರಿ ಬೊಮ್ಮಾಯಿಯವರ ಘೋಷಣೆಗೆ ಸಕಾರಿ ನೌಕರರು ಒಪ್ಪಿಗೆ ನೀಡಿಲ್ಲ. ಘೋಷಣೆ ಬಗ್ಗೆ ಅಧಿಕೃತವಾಗಿ ಆದೇಶ ಹೊರಡಿಸುವವರೆಗೂ ನಾವು ಮುಷ್ಕರ ಕೈಬಿಡಲ್ಲ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿದ್ದಾರೆ. ಸರ್ಕಾರ ಶೀಘ್ರವೇ ವೇತನ ಹೆಚ್ಚಳ ಮಾಡೋದಾಗಿ ಹೇಳಿದೆ. ಆದ್ರೆ ಯಾವಾಗ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ. ಕೇವಲ ಬಾಯಿ ಮಾತಿನ ಭರವಸೆ ಬೇಕಾಗಿಲ್ಲ. ಶೀಘ್ರವೇ ಜಾರಿ ಎಂದಷ್ಟೇ ಹೇಳಿದ್ದಾರೆ ಆದ್ರೆ ಡೆಡ್ ಲೈನ್ ಕೊಟ್ಟಿಲ್ಲ. ಸರ್ಕಾರದ ಭರವಸೆ ಮಾತಿಗೆ ಒಪ್ಪಲ್ಲ. ಆದೇಶ ಹೊರಡಿಸುವವರೆಗೂ ಮುಷ್ಕರ ವಾಪಸ್ ಪಡೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರಿ ನೌಕರರ ಮುಷ್ಕರದಿಂದಾಗಿ ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಸರ್ಕಾರಿ ಸೇವೆಗಳು ಬಂದ್ ಆಗಿವೆ. ಇದ್ರಿಂದಾಗಿ ಸಾರ್ವಜನಿಕರು ಪರದಾಡುತ್ತಿದ್ದಾರೆ.

 

suddiyaana