ಬಿಗ್‌ಬಾಸ್ ಮನೆಯಲ್ಲಿ 17 ಸ್ಪರ್ಧಿಗಳ ಆಟ – ದೊಡ್ಮನೆ ಎಂಟ್ರಿ ದಿನವೇ ಸ್ಪರ್ಧಿಗಳಿಗೆ ಬಿಗ್ ಟ್ವಿಸ್ಟ್

ಬಿಗ್‌ಬಾಸ್ ಮನೆಯಲ್ಲಿ 17 ಸ್ಪರ್ಧಿಗಳ ಆಟ – ದೊಡ್ಮನೆ ಎಂಟ್ರಿ ದಿನವೇ ಸ್ಪರ್ಧಿಗಳಿಗೆ ಬಿಗ್ ಟ್ವಿಸ್ಟ್

ಬಿಗ್ ಬಾಸ್ ಕನ್ನಡ ಸೀಸನ್ -10ಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ದೊಡ್ಮನೆಯೊಳಗೆ 17 ಸ್ಪರ್ಧಿಗಳು ಕಾಲಿಟ್ಟಿದ್ದಾರೆ. ಈ ಬಾರಿ ಬಿಗ್‌ಬಾಸ್‌ನಲ್ಲಿ ಸಣ್ಣ ಟ್ವಿಸ್ಟ್ ಸೇರಿಸಲಾಗಿದೆ. ಆಯ್ಕೆ ಆಗಿ ಬಿಗ್​ಬಾಸ್ ವೇದಿಕೆಗೆ ಬರುವ ಸ್ಪರ್ಧಿಗಳನ್ನು ಬಿಗ್​ಬಾಸ್ ಮನೆಯ ಒಳಗೆ ಕಳಿಸುವ ಅಧಿಕಾರ ಕಾರ್ಯಕ್ರಮದಲ್ಲಿ ಹಾಜರಿದ್ದ ವೀಕ್ಷಕರಿಗೆ ನೀಡಲಾಗಿತ್ತು. ವೀಕ್ಷಕರು ಮತ ಹಾಕಿದ ಸ್ಪರ್ಧಿಗಳಷ್ಟೆ ಬಿಗ್​ಬಾಸ್ ಮನೆಯೊಳಗೆ ಎಂಟ್ರಿ ಪಡೆದರು.

ಇದನ್ನೂ ಓದಿ: ಭಾನುವಾರದಿಂದ ಬಿಗ್ ಬಾಸ್ ಸೀಸನ್ 10 ಶುರು – ಕಲರ್ಸ್ ಕನ್ನಡದ ಲಕ್ಷಣ ಮತ್ತು ತ್ರಿಪುರ ಸುಂದರಿ ಮುಕ್ತಾಯ

ಬಿಗ್ ಬಾಸ್ ಗೆ ಎಂಟ್ರಿ ಆಗಬೇಕಾದರೆ 80 ಪರ್ಸೆಂಟ್ ವೋಟು ಬೇಕಾಗಿತ್ತು. 40 ಪರ್ಸೆಂಟ್ ಗಿಂತ ಹೆಚ್ಚು ಬಂದು, 80 ಪರ್ಸೆಂಟ್ ವೋಟ್‌ಗಿಂತ ಕಡಿಮೆ ಬಂದವರು ಇದೀಗ ಡೇಂಜರ್ ಝೋನ್‌ನಲ್ಲಿದ್ದಾರೆ. ಇನ್ನು ಈ ಬಾರಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟವರು ಒಟ್ಟು 17 ಮಂದಿ. ಅವರ ಬಗ್ಗೆ ವಿವರ ಇಲ್ಲಿದೆ.

ಕಿರುತೆರೆ ಮೂಲಕ ಫೇಮಸ್ ಆಗಿರುವ ನಮ್ರತಾ ಗೌಡ ಅವರು ಬಿಗ್‌ಬಾಸ್ ಪ್ರವೇಶಿಸಿದ್ದಾರೆ. ಇವರು ‘ಪುಟ್ಟಗೌರಿ ಮದುವೆ’, ‘ನಾಗಿಣಿ 2’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದರು. ಇನ್ನು ನಮ್ಮನೆ ಯುವರಾಣಿ ಧಾರಾವಾಹಿಯ ಪ್ರಣಮ್ ಖ್ಯಾತಿಯ ಸ್ನೇಹಿತ್ ಗೌಡ ಅವರು ದೊಡ್ಮನೆ ಪ್ರವೇಶ ಮಾಡಿದ್ದಾರೆ. ವೃತ್ತಿಯಲ್ಲಿ ಅವರು ರ‍್ಯಾಪರ್ ಆಗಿರುವ ಈಶಾನಿ ಅವರು ಬಿಗ್‌ಬಾಸ್‌ಗೆ ಎಂಟ್ರಿಕೊಟ್ಟಿದ್ದಾರೆ. ವಿನಯ್ ಗೌಡ ಅವರು ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇವರು ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ. ಕಾಮಿಡಿ ಕಿಲಾಡಿಗಳು ಮೂಲಕ ಫೇಮಸ್ ಆದವರು ತುಕಾಲಿ ಸಂತೋಷ್. ಇವರು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ನೀತು ವನಜಾಕ್ಷಿ ಅವರು ತೃತೀಯಲಿಂಗಿ. ಅವರು ಜೀವನದಲ್ಲಿ ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಕೆಲವು ಚಿತ್ರಗಳಲ್ಲಿ ನಟಿಸಿರುವ ಅವರು ಬ್ಯೂಟಿ ಪಾರ್ಲರ್ ಹಾಗೂ ಹೋಟೆಲ್ ನಡೆಸುತ್ತಿದ್ದಾರೆ. ಇವರು ದೊಡ್ಮನೆಗೆ ಎಂಟ್ರಿಕೊಟ್ಟಿದ್ದಾರೆ. ಇನ್ನು ರಂಗೋಲಿ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದ ಸಿರಿ ಕೂಡಾ ಬಿಗ್‌ಬಾಸ್ ಗೆ ಹೋಗಿದ್ದಾರೆ. 58 ಸಾವಿರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಮೈಸೂರಿನಲ್ಲಿ ಸ್ನೇಕ್ ಶ್ಯಾಮ್ ಎಂದೇ ಕರೆಸಿಕೊಳ್ಳವು ಉರಗ ರಕ್ಷಕ ಶ್ಯಾಮ್ ಈ ಬಾರಿ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಲಕ್ಷಣ ಧಾರಾವಾಹಿಯಲ್ಲಿ ಶ್ವೇತಾಳ ಅಮ್ಮನ ಪಾತ್ರದಲ್ಲಿ ಮಿಂಚಿದ್ದ ನಟಿ ಭಾಗ್ಯಶ್ರೀ ಕೂಡ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮಾಧ್ಯಮಗಳಲ್ಲಿ ಕೆಲಸ ಮಾಡಿದ ಪತ್ರಕರ್ತ ಗೌರೀಶ್ ಅಕ್ಕಿ ಬಿಗ್ ಬಾಸ್​ಗೆ ಬಂದಿದ್ದಾರೆ. ಇನ್ನೊಬ್ಬರು ಮೈಕಲ್. ಇವರ ತಾಯಿ ಭಾರತದವರು, ತಂದೆ ನೈಜೀರಿಯಾದವರು. ಇನ್ನೊಬ್ಬ ಸ್ಪರ್ಧಿ ಬುಲೆಟ್ ಪ್ರಕಾಶ್ ಮಗ ರಕ್ಷಕ್. ಇವರು ಅವರು ಬಿಗ್ ಬಾಸ್​ಗೆ ಆಗಮಿಸಿದ್ದು, ಈ ಬಾರಿಯ ಡೇಂಜರ್ ಝೋನ್‌ನಲ್ಲಿದ್ದಾರೆ. ವರ್ತೂರ್ ಸಂತೋಷ್ ಅವರು ವೃತ್ತಿಯಲ್ಲಿ ರೈತ. ಹಳ್ಳಿಕಾರ್ ದನದ ತಳಿಯ ಬಗ್ಗೆ ಜಗತ್ತಿಗೆ ತಿಳಿಸುವ ಕನಸು ಅವರದ್ದು. ಇವರು ಡೇಂಜರ್ ಜೋನ್​ನಲ್ಲಿದ್ದಾರೆ. ತನಿಷಾ ಕುಪ್ಪಂಡ ಅವರು ‘ಮಂಗಳ ಗೌರಿ’ ಧಾರಾವಾಹಿಯಲ್ಲಿ ಖಡಕ್ ವಿಲನ್ ಆಗಿ ಗಮನ ಸೆಳೆದರು. ಅವರು ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ. ಇವರು ಡೇಂಜರ್ ಜೋನ್​ನಲ್ಲಿದ್ದಾರೆ. ಚಾರ್ಲಿ 777 ಸಿನಿಮಾ ಮೂಲಕ ಮನಗೆದ್ದಿರುವ ನಟಿ ಸಂಗೀತಾ ಶೃಂಗೇರಿ. ಇವರು ಕೂಡಾ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದು ಡೇಂಜರ್ ಝೋನ್‌ನಲ್ಲಿದ್ದಾರೆ. ಜೊತೆಗೆ ನಟ ಕಾರ್ತಿಕ್ ಕೂಡಾ ಡೇಂಜರ್ ಝೋನ್‌ನಲ್ಲಿದ್ದಾರೆ.

Sulekha