39 ಪತ್ನಿಯರು.. 94 ಮಕ್ಕಳು.. 33 ಮೊಮ್ಮಕ್ಕಳು! – ಒಂದೇ ಮನೆಯಲ್ಲಿ 167 ಮಂದಿಗೆ ಇವನೊಬ್ಬನೇ ಯಜಮಾನ

39 ಪತ್ನಿಯರು.. 94 ಮಕ್ಕಳು.. 33 ಮೊಮ್ಮಕ್ಕಳು! – ಒಂದೇ ಮನೆಯಲ್ಲಿ 167 ಮಂದಿಗೆ ಇವನೊಬ್ಬನೇ ಯಜಮಾನ

ಈಗಂತೂ ಅವಿಭಕ್ತ ಕುಟುಂಬ ಅನ್ನೋ ಪರಿಕಲ್ಪನೆಯೇ ಹೋಗಿದೆ. ಒಂದು ಫ್ಯಾಮಿಲಿಯಲ್ಲಿ ಮೂರು ಅಥವಾ ನಾಲ್ಕು ಜನ, ಹೆಚ್ಚೆಂದ್ರೆ 10 ಜನ ಇರ್ತಾರೆ. ಇನ್ನೂ ದೊಡ್ಡ ಕುಟುಂಬ ಅಂದ್ರೆ 30, 40 ಜನ ಇರ್ಬೋದು. ಆದ್ರೆ ಒಂದೇ ಮನೆಯಲ್ಲಿ 167 ಮಂದಿ ವಾಸಿಸೋ ಕುಟುಂಬದ ಬಗ್ಗೆ ಕೇಳಿದ್ದೀರಾ. ಆಧುನಿಕ ಕಾಲದಲ್ಲೂ ಒಗ್ಗಟ್ಟಾಗಿರುವ ಅಪರೂಪದ ಫ್ಯಾಮಿಲಿ ಬಗ್ಗೆ ವಿವರ ಇಲ್ಲಿದೆ.

ಇದನ್ನೂ ಓದಿ: ₹100 ಕೋಟಿ ಲಾಟರಿ ಗೆದ್ದ ಅದೃಷ್ಟವಂತ – 4 ಸಾವಿರ ಮಹಿಳೆಯರ ಜೊತೆ ರೊಮ್ಯಾನ್ಸ್

ಒಂದಲ್ಲ ಎರಡಲ್ಲ.. ಬರೋಬ್ಬರಿ 167 ಮಂದಿ. ಎಲ್ಲರೂ ಒಂದೇ ಮನೆಯಲ್ಲೇ ವಾಸ. ಮಿಜೋರಾಂನಲ್ಲಿ ಇಂತಹದ್ದೊಂದು ದೊಡ್ಡ ಕುಟುಂಬವಿದೆ. ಈ ಕುಟುಂಬವು ತನ್ನ ಗಾತ್ರದ ಕಾರಣದಿಂದ ವಿಶ್ವ ದಾಖಲೆಯನ್ನೂ ಬರೆದಿದೆ. ಈ ಮನೆಯ ಯಜಮಾನ ಅತಿ ದೊಡ್ಡ ಕುಟುಂಬದ ಯಜಮಾನ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಅಷ್ಟಕ್ಕೂ ಈ ಕುಟುಂಬದ ಯಜಮಾನನ ಹೆಸರು ಝಿಯೋನಾ ಚಾನಾ. ಚಾನಾ ಪಾವ್ಲ್​ ಎಂಬ ಸಂಘಟನೆಯೊಂದರ ಮುಖ್ಯಸ್ಥರಾಗಿದ್ದ ಝಿಯೋನಾ ಬಹುಪತ್ನಿತ್ವವನ್ನು ಆಚರಿಸುತ್ತಿದ್ದರು. ಝಿಯೋನಾರಿಗೆ ಬರೋಬ್ಬರಿ 39 ಮಂದಿ ಪತ್ನಿಯರು ಹಾಗೂ 94 ಮಕ್ಕಳಿದ್ದಾರೆ. ಅಲ್ಲದೇ 33 ಮೊಮ್ಮಕ್ಕಳು ಹಾಗೂ ಒಂದು ಮರಿಮೊಮ್ಮಗುವೂ ಇದೆ. ಎಲ್ಲರನ್ನು ಸೇರಿಸಿದರೆ ಈ ಕುಟುಂಬದಲ್ಲಿ ಒಟ್ಟು 167 ಮಂದಿಯಿದ್ದಾರೆ. ವಿಶೇಷ ಏನೆಂದರೆ ಈ 167 ಮಂದಿ ಸದಸ್ಯರು ಒಂದೇ ಮನೆಯಲ್ಲಿ ವಾಸವಿದ್ದಾರೆ. ನಾಲ್ಕಂತಸ್ತಿನ ಮನೆಯಲ್ಲಿ ಒಟ್ಟು 100 ಕೋಣೆಗಳಿವೆ. ಈ ಮನೆ ದೊಡ್ಡ ಕುಟುಂಬದ ಕಾರಣ ಮಿಜೋರಾಂನ ಪ್ರಸಿದ್ಧ ಪ್ರವಾಸಿ ತಾಣಗಳ ಪೈಕಿ ಒಂದು ಎನಿಸಿದೆ. ತಮ್ಮ 17ನೇ ವಯಸ್ಸಿನಲ್ಲೇ ಝಿಯೋನಾ ಮೊದಲ ಮದುವೆಯಾಗಿದ್ದರು. ಅವರ ಪತ್ನಿ ಅವ್ರಿಗಿಂತ ಮೂರು ವರ್ಷ ದೊಡ್ಡವಳಾಗಿದ್ದರಂತೆ. ಇವರೇ ಈ ಕುಟುಂಬದ ಯಜಮಾನಿಯಾಗಿದ್ದು, ಮನೆಯ ಎಲ್ಲಾ ಚಟುವಟಿಕೆಗಳನ್ನು ಇವರೇ ನಿರ್ವಹಿಸುತ್ತಾರೆ. ಚಾನಾ ಪಾವ್ಲ್ ಸಂಘಟನೆ ಮುಖ್ಯಸ್ಥರಾದ ಬಳಿಕ ಝಿಯೋನಾ   ಒಂದೇ ವರ್ಷದ ಅವಧಿಯಲ್ಲಿ 10 ಮಹಿಳೆಯರನ್ನು ವಿವಾಹವಾಗಿದ್ದರು. ಕೊನೆಯದಾಗಿ 2005 ರಲ್ಲಿ ಅಂದ್ರೆ 70ನೇ ವಯಸ್ಸಿನಲ್ಲಿ 39ನೇ ವಿವಾಹವಾಗಿದ್ದರು. ಇನ್ನು ಈ ಕುಟುಂಬದ ಜೀವನಶೈಲಿ ಹೇಗಿದೆ ಎಂಬುದನ್ನು ನೋಡಲು ಸಾಕಷ್ಟು ಪ್ರವಾಸಿಗರು ಇವ್ರ ಮನೆಗೆ ಭೇಟಿ ನೀಡ್ತಾರೆ. ಈ ಕುಟುಂಬವು ಕಟ್ಟುನಿಟ್ಟಾದ ಕ್ರಮಗಳನ್ನು ಇಂದಿಗೂ ಪಾಲಿಸುತ್ತದೆ. ಝಿಯೋನಾ ಪತ್ನಿಯರು ಸರದಿ ಪ್ರಕಾರ ಅಡುಗೆಯ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಈ ಮನೆಯ ಹೆಣ್ಣುಮಕ್ಕಳಿಗೆ ಮನೆಯ ಸ್ವಚ್ಛತೆಯನ್ನು ನಿರ್ವಹಿಸುವ ಜವಾಬ್ದಾರಿ ನೀಡಲಾಗಿದೆ. ಮಾಂಸಕ್ಕಾಗಿ ಹಾಗೂ ಹಾಲಿಗಾಗಿ ಇವರೇ ಪಶು, ಪಕ್ಷಿಗಳನ್ನು ಸಾಕಿದ್ದಾರೆ. ಹಾಗೂ ತಮ್ಮದೇ ಜಮೀನಿನಲ್ಲಿ ಕೆಲವು ತರಕಾರಿ ಸೇರಿದಂತೆ ಆಹಾರ ಪದಾರ್ಥಗಳನ್ನು ಬೆಳೆದುಕೊಳ್ಳುತ್ತಾರೆ. ಆದ್ರೆ ಇಷ್ಟು ದೊಡ್ಡ ಕುಟುಂಬದ ಯಜಮಾನ ಝಿಯೋನಾ ಈಗ ಬದುಕಿಲ್ಲ. 2021ರ ಜೂನ್​ ತಿಂಗಳಲ್ಲಿ ತಮ್ಮ 76ನೇ ವರ್ಷಕ್ಕೆ ಮೃತಪಟ್ಟಿದ್ದಾರೆ. ಆದ್ರೆ ಇವರು ಬದುಕಿದ್ದಾಗಲೇ ಜಗತ್ತಿನ ಅತಿದೊಡ್ಡ ಕುಟುಂಬ ಮತ್ತು ಅತಿದೊಡ್ಡ ಕುಟುಂಬದ ಯಜಮಾನ ಎಂದು ಗಿನ್ನೆಸ್ ದಾಖಲೆಯಾಗಿದೆ.

Sulekha