ಇಂಡೋ – ಪಾಕ್ ಹೈವೋಲ್ಟೇಜ್ ಕದನ ನೋಡಲು ಪ್ರೇಕ್ಷಕರು ಬರಲೇ ಇಲ್ಲ – 15,000 ಟಿಕೆಟ್‌ಗಳು ಮಾರಾಟವಾಗಲೇ ಇಲ್ಲ..!

ಇಂಡೋ – ಪಾಕ್ ಹೈವೋಲ್ಟೇಜ್ ಕದನ ನೋಡಲು ಪ್ರೇಕ್ಷಕರು ಬರಲೇ ಇಲ್ಲ – 15,000 ಟಿಕೆಟ್‌ಗಳು ಮಾರಾಟವಾಗಲೇ ಇಲ್ಲ..!

ಭಾರತ ಪಾಕಿಸ್ತಾನ ನಡುವಿನ ಪಂದ್ಯ ಯಾವಾಗಲೂ ಹೈವೋಲ್ಟೇಜ್‌ನಲ್ಲಿಯೇ ಇರುತ್ತದೆ. ಇಂಡೋ ಪಾಕ್ ಕ್ರಿಕೆಟ್ ಕದನ ಕ್ರಿಕೆಟ್ ಅಭಿಮಾನಿಗಳಿಗೂ ಕೂಡಾ ಅದೊಂಥರಾ ಕ್ರೇಜ್. ಹೀಗಾಗಿ ಭಾರತ ಪಾಕಿಸ್ತಾನ ಕ್ರಿಕೆಟ್ ಆಟ ನೋಡಲು ಮೈದಾನಕ್ಕೆ ಹೋಗುವವರೇ ಹೆಚ್ಚು. ಇದೀಗ ವಿಶ್ವಕಪ್ ಕದನಕ್ಕೆ ಒಂದು ತಿಂಗಳು ಬಾಕಿ ಇರುವಾಗಲೇ ಪಂದ್ಯದ ಟಿಕೆಟ್‌ಗಳು ಸೋಲ್ಡ್ ಔಟ್ ಆಗಿವೆ. ಆದರೆ, ಏಷ್ಯಾಕಪ್​ನಲ್ಲಿ ಮಾತ್ರ ಎಲ್ಲವೂ ಉಲ್ಟಾ. ಬದ್ಧವೈರಿಗಳ ಕದನ ನೋಡಲು ಲಂಕಾದ ಕ್ರಿಕೆಟ್​ ಅಭಿಮಾನಿಗಳು ಮನಸು ಮಾಡಿಲ್ಲ. ಹೀಗಾಗಿ ಸೂಪರ್ 4 ಸುತ್ತಿನಲ್ಲಿ ಭಾರತ- ಪಾಕ್ ಕದನ ನಡೆಯುವಾಗ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಇರಬೇಕಾದ ಜಾಗ ಖಾಲಿ ಖಾಲಿ.

ಇದನ್ನೂ ಓದಿ: ಕ್ರಿಕೆಟ್ ದೇವರು ಅಂತಾನೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಅವರ ಬದುಕಿನ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿದ್ದು, ಪಂದ್ಯ ನಡೆಯಲು ಇನ್ನೊಂದು ತಿಂಗಳು ಬಾಕಿ ಇದೆ. ಈಗಾಗಲೇ ಅಹಮದಾಬಾದ್ ಸುತ್ತಮುತ್ತಲಿನ ಹೋಟೆಲ್‌ಗಳನ್ನು ಬುಕ್ ಮಾಡಲಾಗಿದೆ. ಇನ್ನು ಪಂದ್ಯದ ಟಿಕೆಟ್‌ಗಳು ಕೂಡ ಸೋಲ್ಡ್ ಔಟ್ ಆಗಿವೆ. ಆದರೆ ಏಷ್ಯಾಕಪ್‌ನಲ್ಲಿ ಮಾತ್ರ ಈ ಬದ್ಧವೈರಿಗಳ ಕದನ ನೋಡಲು ಅಭಿಮಾನಿಗಳು ಆಸಕ್ತಿ ತೋರಿಲ್ಲ. ಸೂಪರ್ 4 ಸುತ್ತಿನಲ್ಲಿ ಭಾರತ- ಪಾಕ್ ಕದನಕ್ಕೆ ಟಿಕೆಟ್‌ಗಳು ಮಾರಾಟವೇ ಆಗಿಲ್ಲ. ಇಂಡೋ ಪಾಕ್ ಕದನ ನೋಡಲು ಅಭಿಮಾನಿಗಳು ಹಿಂದೇಟು ಹಾಕಲು ಕಾರಣ ಹವಾಮಾನ ವರದಿ ಕೂಡಾ ಆಗಿರಬಹುದು. ಸೆ.10 ರಂದು ಶೇ. 90 ರಷ್ಟು ಮಳೆಯಾಗಲಿದೆ ಎಂದು ವರದಿಯಾಗಿತ್ತು. ಹೀಗಾಗಿ ಮಳೆಯ ಮುನ್ಸೂಚನೆ ಮೊದಲೇ ಸಿಕ್ಕಿದ್ದರಿಂದ ಅಭಿಮಾನಿಗಳು ಕ್ರೀಡಾಂಗಣದತ್ತ ಮುಖ ಮಾಡಿಲ್ಲ ಅಂತಾನೂ ಹೇಳಲಾಗುತ್ತಿದೆ. ಆದರೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಲು ಇನ್ನೊಂದು ಕಾರಣವಿದೆ ಎಂತಲೂ ಹೇಳಲಾಗುತ್ತಿದೆ. ಅದೇನೇ ಇದ್ದರೂ ಬರೋಬ್ಬರಿ 15, 000 ಟಿಕೆಟ್‌ಗಳು ಮಾರಾಟವಾಗಲೇ ಇಲ್ಲ.

suddiyaana