TEST ಗೆಲ್ಲಲು ಸಿಕ್ತು ಉತ್ತರ – 15 ದಿನಗಳ ಕ್ಯಾಂಪ್ ವರ್ಕ್ ಆಗುತ್ತಾ?
ರೆಸ್ಟ್ ಇಲ್ಲದೇ ಆಡಿದ್ದಕ್ಕೇ ಸೋತ್ರಾ?

TEST ಗೆಲ್ಲಲು ಸಿಕ್ತು ಉತ್ತರ – 15 ದಿನಗಳ ಕ್ಯಾಂಪ್ ವರ್ಕ್ ಆಗುತ್ತಾ?ರೆಸ್ಟ್ ಇಲ್ಲದೇ ಆಡಿದ್ದಕ್ಕೇ ಸೋತ್ರಾ?

ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ಕಂಪ್ಲೀಟ್ ಆಗಿ ಹಳ್ಳ ಹಿಡ್ದಿದೆ ಅನ್ನೋದು ನಿಮ್ಗೆಲ್ಲಾ ಗೊತ್ತೇ ಇದೆ. ಜಸ್ಟ್ 13 ತಿಂಗಳಲ್ಲೇ ತವರಿನಲ್ಲಿ ಎರಡು ಸರಣಿಗಳಲ್ಲಿ ವೈಟ್ ವಾಶ್ ಅವಮಾನ ಅನುಭವಿಸಿದೆ. ಡಬ್ಲ್ಯೂಟಿಸಿಯಲ್ಲಿ 6ನೇ ಸ್ಥಾನದಲ್ಲಿದೆ. ಮುಂದಿನ ಪ್ರತಿಯೊಂದು ಪಂದ್ಯದಲ್ಲೂ ಡು ಆರ್ ಡೈನಂತೆ ಪರ್ಫಾಮ್ ಮಾಡಿದ್ರೆ ಮಾತ್ರವೇ 2027ರ ಡಬ್ಲ್ಯೂಟಿಸಿ ಫೈನಲ್​ನಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳೋಕೆ ಸಾಧ್ಯ. ಜಸ್ಟ್ 13 ತಿಂಗಳ ಅವಧಿಯಲ್ಲಿ ತವರಿನಲ್ಲಿ ನಡೆದ 3 ಟೆಸ್ಟ್ ಸರಣಿಗಳ ಪೈಕಿ ಭಾರತ ಎರಡು ಸರಣಿಗಳಲ್ಲಿ ಕ್ಲೀನ್ ಸ್ವೀಪ್ ಆಗಿದೆ. ಈ ಸೋಲುಗಳಿಗೆ ಕಾರಣ ಏನು ಮತ್ತು ಮುಂದಿನ ದಿನಗಳಲ್ಲಿ ಹೇಗೆ ಕಂ ಬ್ಯಾಕ್ ಮಾಡ್ಬೇಕು ಅನ್ನೋ ಬಗ್ಗೆ ಬಿಸಿಸಿಐ ಆಯ್ಕೆದಾರರು ಮತ್ತು ತಂಡದ ನಾಯಕ ಶುಭ್​ಮನ್ ಗಿಲ್ ಜೊತೆ ಅನೌಪಚಾರಿಕ ಸಭೆಗಳನ್ನು ನಡೆಸಿದೆ. ಸಭೆಯಲ್ಲಿ ಮಾತ್ನಾಡಿರೋ ಗಿಲ್ ಕೆಲ ಕ್ಲಾರಿಫಿಕೇಷನ್ಸ್ ನೀಡಿದ್ದಾರೆ. ಜೊತೆಗೆ ಕ್ಯಾಂಪ್ ಆಯೋಜನೆ ಬಗ್ಗೆಯೂ ಸಲಹೆ ನೀಡಿದ್ದಾರೆ.

 ಇದನ್ನೂ ಓದಿ : 24 ಎಸೆತಗಳಲ್ಲಿ 10 ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ – ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಟೆಸ್ಟ್ ಸರಣಿಗೂ ಮುನ್ನ 15 ದಿನ ಕ್ಯಾಂಪ್ ಆಯೋಜನೆ!

ಟೆಸ್ಟ್ ಸರಣಿಗಳಲ್ಲಿ ಗೆಲುವು ಸಾಧಿಸಬೇಕು ಅಂದ್ರೆ ಸರಣಿ ಆರಂಭಕ್ಕೂ 15 ದಿನಗಳು ಮೊದಲೇ ಆಟಗಾರರಿಗೆ ಅಭ್ಯಾಸ ಶಿಬಿರ ಆಯೋಜನೆ ಮಾಡ್ಬೇಕು ಮತ್ತು ಆಟಗಾರರು ಅದ್ರಲ್ಲಿ ಪಾಲ್ಗೊಳ್ಳಬೇಕು ಅಂತಾ ನಾಯಕ ಶುಭ್​ಮನ್ ಗಿಲ್ ಸಲಹೆ ನೀಡಿದ್ದಾರೆ. ಇತ್ತೀಚೆಗೆ ತವರಿನಲ್ಲೇ ನಡೆದ ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು 2-0 ಅಂತರದಿಂದ ಸೋಲನುಭವಿಸಿತ್ತು. ಇದಕ್ಕೂ ಮುನ್ನ ಕಳೆದ ವರ್ಷ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ಹೀನಾಯವಾಗಿ ಭಾರತ ಕ್ಲೀನ್ ಸ್ವೀಪ್ ಆಗಿತ್ತು. 93 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಭಾರತ ತಂಡವು ತವರಿನಲ್ಲಿ ಮೂರು ಪಂದ್ಯಗಳ ಸರಣಿಯನ್ನು 3-0 ಅಂತರದಿಂದ ಸೋತೇ ಇರಲಿಲ್ಲ. ಗಂಭೀರ್ ಕೋಚ್ ಆದ ಬಳಿಕ ಟೀಮ್ ಇಂಡಿಯಾ ನ್ಯೂಝಿಲೆಂಡ್ ವಿರುದ್ಧ 3-0 ಅಂತರದಿಂದ ತವರಿನಲ್ಲಿ ಹೀನಾಯ ಸೋಲು ಕಂಡಿತ್ತು. ಅದೂ ಅಲ್ದೇ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋತಿರುವುದು ಬರೋಬ್ಬರಿ 408 ರನ್​ಗಳ ಅಂತರದಿಂದ. ಇದು ಭಾರತದ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಹೀನಾಯ ಸೋಲು. ಇದಕ್ಕೂ ಮುನ್ನ ಭಾರತ 400ಪ್ಲಸ್ ರನ್​ಗಳಿಂದ ಸೋತೇ ಇರಲಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಕ್ಯಾಂಪ್ ಆಯೋಜನೆಗೆ ಗಿಲ್ ಸಜೇಷನ್ ಕೊಟ್ಟಿದ್ದಾರೆ.

ಬಿಡುವಿಲ್ಲದೆ ಶೆಡ್ಯೂಲ್ ಸೋಲಿಗೆ ಕಾರಣನಾ?

ಇನ್ನು ಗಿಲ್ ಅವ್ರ ಮತ್ತೊಂದು ಸಮಸ್ಯೆ ಅಂದ್ರೆ ಟೆಸ್ಟ್ ಸರಣಿಗಳ ಆರಂಭಕ್ಕೂ ಮುನ್ನ ಸ್ವಲ್ಪ ಟೈಂ ಬೇಕು ಅನ್ನೋದು. ಏಷ್ಯಾಕಪ್ ಗೆದ್ದ 4 ದಿನಗಳ ನಂತರ ಭಾರತ ತವರಿನಲ್ಲಿ ಟೆಸ್ಟ್ ಸೀಸನ್‌ಗೆ ಕಾಲಿಟ್ಟಿತು. ಅಕ್ಟೋಬರ್ 2 ರಂದು ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಿತು. ಸೆಪ್ಟೆಂಬರ್ 29 ರಂದು ದುಬೈನಿಂದ ಆಟಗಾರರು ಆಗಮಿಸಿದರು. ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ಗೆ 4 ದಿನಗಳ ಮೊದಲು ಆಸ್ಟ್ರೇಲಿಯಾದ ವೈಟ್‌ಬಾಲ್ ಪ್ರವಾಸದ ನಂತರ ಗಿಲ್ ಮತ್ತು ತಂಡದ ಹಲವು ಆಟಗಾರರು ಟೀಂ ಸೇರಿಕೊಂಡಿದ್ರು. ಹೀಗೆ ಮಾಡಿದ್ರೆ ಪಂದ್ಯಗಳಿಗೆ ರೆಡಿ ಆಗೋಕೆ ಟೈಂ ಸಿಗಲ್ಲ. ತಂಡದ ಸೋಲಿಗೆ ಇದೇ ಕಾರಣ ಆಗ್ತಿದೆ ಅನ್ನೋದು ಗಿಲ್ ವಾದ. ಹೀಗಾಗಿ ಇನ್ಮುಂದೆ ಟೆಸ್ಟ್ ಸರಣಿಗಳು ಆರಂಭವಾಗೋ ಮುನ್ನ 15 ದಿನಗಳ ಕ್ಯಾಂಪ್ ಆಯೋಜನೆ ಮಾಡಿದ್ರೆ ಪ್ರಾಕ್ಟೀಸ್​ಗೆ ಹೆಚ್ಚಿನ ಅವಕಾಶ ಸಿಗುತ್ತೆ. ಬೆಟರ್ ಪರ್ಫಾಮೆನ್ಸ್ ಕೊಡ್ಬೋದು ಅನ್ನೋದು ಗಿಲ್ ಅವರ ಲೆಕ್ಕಾಚಾರವಾಗಿದೆ. ಬಿಸಿಸಿಐ ಕೂಡ ಇದಕ್ಕೆ ಸಕಾರಾತ್ಮಕವಾಗಿ ರಿಯಾಕ್ಟ್ ಮಾಡಿದ್ದು ಮುಂದಿನ ದಿನಗಳಲ್ಲಿ ಇದು ಕಾರ್ಯರೂಪಕ್ಕೆ ಬರಲಿದೆ.

Shantha Kumari