ಬೆಂಗಳೂರಲ್ಲಿ ಶುದ್ಧ ಗಾಳಿಗಾಗಿ 140 ಕೋಟಿ ರೂಪಾಯಿಗಳ ಯೋಜನೆ- ಸರ್ಕಾರದಿಂದ ಸಿಕ್ತು ಅನುಮೋದನೆ

ಬೆಂಗಳೂರಲ್ಲಿ ಶುದ್ಧ ಗಾಳಿಗಾಗಿ 140 ಕೋಟಿ ರೂಪಾಯಿಗಳ ಯೋಜನೆ- ಸರ್ಕಾರದಿಂದ ಸಿಕ್ತು ಅನುಮೋದನೆ

ಬೆಂಗಳೂರು : ಬೆಂಗಳೂರು ಬೆಳೆಯುತ್ತಾ ಹೋದಂತೆ ಜನರಿಗೆ ಉಸಿರಾಡಲು ಶುದ್ಧ ಗಾಳಿ ಸಿಗುವುದು ಕೂಡಾ ಕಷ್ಟವಾಗುತ್ತಿದೆ. ರಾಜಧಾನಿಯಲ್ಲಿ ಶುದ್ಧ ನೀರಿಗೂ ಹೇಗೂ ದುಡ್ಡು ಕೊಡಲೇಬೇಕು. ಇನ್ನು ಒಳ್ಳೇ ಗಾಳಿ ಸೇವಿಸಬೇಕಂದರೂ ಕೂಡಾ ದುಡ್ಡು ಖರ್ಚು ಮಾಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬೆಂಗಳೂರಿನ ವಾಯು ಗುಣಮಟ್ಟವನ್ನು ಸುಧಾರಿಸಲು ಕರ್ನಾಟಕ ಸರ್ಕಾರವು 140 ಕೋಟಿ ರೂಪಾಯಿಗಳ 11 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಈ ಯೋಜನೆಗಳಿಗೆ 15 ನೇ ಹಣಕಾಸು ಆಯೋಗದಿಂದ ಹಣ ನೀಡಲಾಗಿದೆ. ಈಗಾಗಲೇ ರಾಜ್ಯ ಮಟ್ಟದ ಸಮಿತಿಯಿಂದ ಅನುಮತಿ ನೀಡಿದೆ.

ಇದನ್ನೂ ಓದಿ:  ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ – ಮುಷ್ಕರ ಅಂತ್ಯಗೊಳಿಸಿದ ಅಂಗನವಾಡಿ ಕಾರ್ಯಕರ್ತೆಯರು

11 ಕಾಮಗಾರಿಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ತೋಟಗಾರಿಕೆ ಇಲಾಖೆ ಮತ್ತು ನಗರ ಭೂ ಸಾರಿಗೆ ನಿರ್ದೇಶನಾಲಯ ನಡುವೆ ವಿಂಗಡಿಸಲಾಗಿದೆ. ಬಸ್ ಡಿಪೋಗಳನ್ನು ವಿದ್ಯುದ್ದೀಕರಣಗೊಳಿಸುವುದು, ಐದು ಡಬಲ್ ಡೆಕ್ಕರ್ ಬಸ್‌ಗಳು, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವುದು, ಮತ್ತು 100 ಎಲೆಕ್ಟ್ರಿಕ್ ಫೀಡರ್ ಬಸ್‌ಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಕೆಲಸಗಳನ್ನು ಬಿಎಂಟಿಸಿಗೆ ವಹಿಸಲಾಗಿದೆ.

ಬಿಬಿಎಂಪಿಗೆ ರಸ್ತೆ ಗುಡಿಸುವ ಯಂತ್ರಗಳನ್ನು ಖರೀದಿಸಲು, ಸುಸಜ್ಜಿತ ಫುಟ್‌ಪಾತ್‌ಗಳನ್ನು ನಿರ್ಮಿಸಲು, ವರ್ಟಿಕಲ್ ಗಾರ್ಡನ್‌ಗಳನ್ನು ನಿರ್ಮಿಸಲು, ನಿರ್ಮಾಣ ತ್ಯಾಜ್ಯವನ್ನು ಸಂಗ್ರಹಿಸಿ ಸಾಗಿಸಲು  ಮತ್ತು ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಯೋಜನೆಗಳನ್ನು ನೀಡಲಾಗಿದೆ.

suddiyaana